ಅಜಿತ್ ನ ವಿರುಧ್ಧ ಪ್ರತಿಯೊಂದು ಸಂಘಟನೆಗಳೂ, ವೈಯುಕ್ತಿಕವಾಗಿಯೂ ಕೇಸು ದಾಖಲಿಸಬೇಕು.!
ನಿನ್ನೆಯಿಂದ ಇಂತಹ ಮೆಸೇಜ್ ಗಳನ್ನು ನೋಡಿ ನೋಡಿ ಸಾಕಾಗಿಹೋಯಿತು. ಮೆಸೇಜ್ ರವಾನಿಸಲು ಸಾವಿರಾರು ಮಂದಿ ಉತ್ಸುಕತೆ ತೋರಿದರೂ, ಕೇಸು ಕೊಡಲು ಮುಂದಾದದ್ದು ಬೆರಳೆಣಿಕೆಯಷ್ಟು ಮಂದಿ ಮಾತ್ರ.
ಎಲ್ಲರೂ *ಕೇಸು ದಾಖಲಿಸಬೇಕು* ಎಂದು ಇತರರಿಗೆ ಉಪದೇಶಿಸುವಂತಹ ಮೆಸೇಜ್ ರವಾನಿಸುತ್ತಾರೆಯೇ ಹೊರತು, ತನ್ನಿಂದಲೇ ಆ ಕೆಲಸ ನಡೆಯಲಿ ಎಂದು ಮಾತ್ರ ಆಲೋಚಿಸುವುದಿಲ್ಲ.
ಅಂದರೆ, ಆ ಕೆಲಸ ತನ್ನಿಂದ ಮಾಡಲು ಸಾದ್ಯವಿಲ್ಲ, ಯಾರಾದರೂ ಮಾಡಲಿ ಎಂಬ ಭಾವನೆ ನಮ್ಮಲ್ಲಿ ಮನೆ ಮಾಡಿದೆ.
ಇಂತಹ ಭಾವನೆ ನಮ್ಮಿಂದ ಹೋಗಬೇಕು. ನಮ್ಮ ಸಂಘಟನಾ ಕಾರ್ಯಾಚರಣೆ ಬೆರಳ ತುದಿಗೆ ಮಾತ್ರ ಸೀಮಿತವಾಗಬಾರದು. ಪ್ರತಿಯೊಂದು ಕಾರ್ಯವನ್ನೂ ನಾವು ಸ್ವತಃ ಮಾಡಿ, ಇತರರಿಗೆ ಪ್ರೇರಣೆಯಾಗಬೇಕು.
ಕೇಸು ಕೊಡಿಸುವ ಮೂಲಕ ಪ್ರವಾದಿ ﷺ ರ ಮೇಲಿನ ಪ್ರೀತಿ ಪ್ರೇಮವನ್ನು ವ್ಯಕ್ತಪಡಿಸುವುದಾದರೆ, ಅಂತಹ ಪ್ರೇಮ ವ್ಯಕ್ತಪಡಿಸುವ ಜವಾಬ್ದಾರಿ ನಮಗಿಲ್ಲವೇ.? ಇನ್ನೊಬ್ಬರಿಗೆ ಕೇಸು ಕೊಡಲು ಒತ್ತಡ ಹಾಕಿ ನಾವು ಪ್ರವಾದಿ ﷺ ಪ್ರೇಮಿಗಳೆನಿಸಬೇಕಾ?
ಇನ್ನೊಬ್ಬರಿಂದ ಹೇಗೆ ಮಾಡಿಸಲು ಸಾದ್ಯ ಎಂದು ಆಲೋಚಿಸುವುದಕ್ಕೆ ಬದಲಾಗಿ,
ತನ್ನಿಂದ ಏನು ಮಾಡಲು ಸಾಧ್ಯ ಎಂದು ಚಿಂತಿಸಿ, ಕಾರ್ಯಾಚರಿಸುವವರು ನಾವಾಗಬೇಕು.
ಹೀಗೆ ಪ್ರತಿಯೊಬ್ಬರೂ ಮಾಡಿದರೆ, ನಮ್ಮ ಯೋಜನೆಗಳು ನಾವೆನಿಸಿದಕ್ಕಿಂತಲೂ ಯಶಸ್ವಿಯಾಗಿ ನೆರವೇರುವುದರಲ್ಲಿ ಸಂಶಯವಿಲ್ಲ.
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
No comments:
Post a Comment