*ಪ್ರವಾದಿ ﷺ ನಿಂದಕರ ವಿರುದ್ಧ ಜಾತಿ ಧರ್ಮ ನೋಡದೆ* (ಕಾನೂನಿನ ಚೌಕಟ್ಟಿನಲ್ಲಿ) *ಹೋರಾಡಬೇಕು.*
ನಮಗೆ ಯಾವ ರೀತಿಯಲ್ಲೆಲ್ಲಾ ಹೋರಾಡಲು ಸಾದ್ಯ, ಆ ರೀತಿಯಲ್ಲೆಲ್ಲಾ ಹೋರಾಡಬೇಕು. ಅದು ನಮ್ಮ ಪ್ರವಾದಿ ﷺ ಪ್ರೇಮದ ಕನಿಷ್ಠ ಭಾಗವಾಗಿದೆ.
ಪ್ರವಾದಿ ﷺ ನಿಂದನೆ ಮಾಡಿದ ಅಜಿತ್ ನ ಚಾನೆಲ್ ನನ್ನು ಕಟ್ ಮಾಡಬೇಕು ಎಂದು ಕೆಲವರು ಮೆಸೇಜ್ ಮಾಡುತ್ತಿದ್ದರು.
ಖಂಡಿತಾ, ಎಲ್ಲಾ ಮುಸ್ಲಿಮರೂ ಈ ಕೆಲಸವನ್ನು ತಕ್ಷಣವೇ ಮಾಡಿದರೆ, ಅಂತಹವರಿಗೆ ತಕ್ಕ ಪಾಠ ಕಲಿಸಬಹುದು. ನಾನಂತೂ ಆ ಚಾನೆಲ್ ನನ್ನು ಕಣ್ಣೆತ್ತಿಯೂ ನೋಡದೆ ಹಲವಾರು ವರ್ಷಗಳೇ ಕಳೆದಿದೆ.
ಪ್ರವಾದಿ ﷺ ನಿಂದಕರ ವಿರುದ್ಧ ವಿರೋಧ ವ್ಯಕ್ತಪಡಿಸುವಾಗ, ಆತನ ಜಾತಿ ಧರ್ಮ ಪರಿಗಣಿಸಬಾರದು.
ಅನ್ಯ ಧರ್ಮೀಯನಾದರೆ ಒಂದು ಕಾನೂನು, ಸ್ವಧರ್ಮೀಯನಾದರೆ ಇನ್ನೊಂದು ಕಾನೂನು ಇದು ಕಪಟತೆಯ ಲಕ್ಷಣವಾಗಿದೆ.
ಯಾವ ಪ್ರವಾದಿ ﷺ ನಿಂದಕರನ್ನೂ ಸಹೋದರರಾಗಿ ಕಾಣಬಾರದು. ಅವರೊಂದಿಗೆ ಸ್ನೇಹತ್ವವನ್ನು ಕೂಡಾ ಬೆಳೆಸಬಾರದು.
ನಾನಂತೂ ಯಾವ ಪ್ರವಾದಿ ﷺ ನಿಂದಕರನ್ನೂ ಸಹೋದರರಾಗಿ ಕಾಣಲಾರೆ. ಅವರೊಂದಿಗೆ ಸ್ನೇಹತ್ವವನ್ನು ಕೂಡಾ ಬೆಳೆಸಲಾರೆ, in sha Allah.
ಅಲ್ಲಾಹು ಅನುಗ್ರಹಿಸಲಿ, ಆಮೀನ್.
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
No comments:
Post a Comment