Saturday, October 14, 2017

ಇತರ ಧರ್ಮದವರೊಂದಿಗೆ ಒಬ್ಬ ಮುಸ್ಲಿಮನ ವರ್ತನೆ ಹೇಗಿರಬೇಕು❓
----—-----—-----—----—--
(05/02/2016 )

UAE ಅವ್'ಖಾಫ್ ಅಧೀನದಲ್ಲಿ ನಡೆಯುವ ಜುಮುಅ ಖುತುಬಾದ ಕನ್ನಡನುವಾದ ಇಲ್ಲಿ ಕೊಡುತ್ತಿದ್ದೇನೆ
ಅಲ್ಲಾಹು ಸ್ವೀಕರಿಸಲಿ ಆಮೀನ್

الحمد لله
حثنا علي حسن التواصل ،ورغبنا في جميل التعامل

ಅಲ್'ಹಂದು ಲಿಲ್ಲಾ... 

ಎಲ್ಲರೊಂದಿಗೂ
ಅತ್ಯಂತ ಉನ್ನತ ಮಟ್ಟದ ಸಂಸ್ಕೃತಿ ಮತ್ತು ಒಡನಾಟವನ್ನು ಪಾಲಿಸುವಂತೆ ಇಸ್ಲಾಂ ನಮಗೆ ಪ್ರೋತ್ಸಾಹ ನೀಡುತ್ತದೆ.
ಕುರಾನಿನಲ್ಲಿ ಅಲ್ಲಾಹು ಹೇಳುತ್ತಾನೆ

ان الله مع الذين اتقوا والذين هم  محسنون (النحل ١٢٨)

"ಖಂಡಿತವಾಗಿಯೂ ಅಲ್ಲಾಹನು ಧರ್ಮ ನಿಷ್ಠೆ ಹಾಗೂ ಸಜ್ಜನರ ಜೊತೆಗಿದ್ದಾನೆ"

ಹೌದು ಮಾನವರೆಲ್ಲರೂ ಒಂದೇ ಶರೀರದಿಂದ ಸೃಷ್ಟಿಸಲ್ಪಟ್ಟವರು. ಅವರು ಪರಸ್ಪರ ಅರಿತು ಬಾಳಬೇಕಾದವರು. ಪರಸ್ಪರ ನಾಗರಿತೆ ಮತ್ತು ಸಂಸ್ಕೃತಿಯನ್ನು ಗೌರವಿಸಿ ಬಾಳಬೇಕಾದವರು.ಪರಸ್ಪರ ಗುರುತಿಸಲ್ಪಡಲಿಕ್ಕಾಗಿ ಮಾತ್ರ ಮಾನವನನ್ನು ಅಲ್ಲಾಹು ವಿವಿಧ ಪಂಗಡ ಮತ್ತು ಜನಾಂಗಗಳಾಗಿ ವಿಭಜಿಸಿದ್ದಾನೆಯೇ ಹೊರತು ಪರಸ್ಪರ ವೈರಿಗಳಾಗಿ ಶತ್ರುಗಳಾಗಿ ಜಗಳವಾಡಲಿಕ್ಕಾಗಿ ಅಲ್ಲ ಎಂಬ ಸ್ಪಷ್ಟ ಸಂದೇಶ ಅಲ್ಲಾಹು ನೀಡುತ್ತಾನೆ.

ಕುರಾನಿನ ಹುಜುರಾತ್ ನ 13 ನೇ ವಚನದಲ್ಲಿ ಅಲ್ಲಾಹು ಈ ರೀತಿ ಹೇಳುತ್ತಾನೆ.👇🏻👇🏻

يا ايها الناس انا خلقناكم من ذكر وانثي وجعلناكم شعوبا وقبائل لتعارفوا ان اكرمكم عند الله اتقاكم ان الله عليم خبير
(حجرات ١٣)

ಓ.. ಮಾನವರೆ.. ನಿಶ್ಚಯವಾಗಿಯೂ ನಾವು ನಿಮ್ಮೆಲ್ಲರನ್ನು ಒಬ್ಬ ಪುರುಷ ಹಾಗೂ ಒಬ್ಬ ಸ್ತ್ರೀಯಿಂದ ಸೃಷ್ಟಿಸಿರುವೆವು .ಹಾಗಾಗಿ ನೀವು ಪರಸ್ಪರ ಗುರುತಿಸುವಂತಾಗಲು,ನಿಮ್ಮನ್ನು (ವಿವಿಧ) ಜನಾಂಗಗಳಾಗಿ ಹಾಗೂ ಪಂಗಡಗಳಾಗಿ ರೂಪಿಸಿರುವೆವು.ಅಲ್ಲಾಹನ ದೃಷ್ಟಿಯಲ್ಲಿ ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನಾಗಿರುವವನೇ ನಿಮ್ಮಲ್ಲಿನ ಅತ್ಯುತ್ತಮನಾಗಿರುವನು ಖಂಡಿತವಾಗಿಯೂ ಅಲ್ಲಾಹನು ಬಲ್ಲವನು ಹಾಗೂ ಅರಿವು ಉಳ್ಳವನಾಗಿದ್ದಾನೆ.
(ಹುಜುರಾತ್ 13)

ದೀನುಲ್ ಇಸ್ಲಾಮಿನ ವೀಕ್ಷಣೆ ಎಲ್ಲಾ ಧರ್ಮದವರೊಂದಿಗೆ ಹಾಗೂ ಎಲ್ಲಾ ಸಂಸ್ಕೃತಿಯೊಂದಿಗೆ ಮತ್ತು ಎಲ್ಲಾ ನಾಗರಿಕತೆಯೊಂದಿಗೆ ಉತ್ತಮವಾದ ನಿಲುವು ತಾಳಬೇಕೆಂದಾಗಿದೆ.
ನಮ್ಮೊಂದಿಗೆ ಕೆಟ್ಟರೀತಿಯಲ್ಲಿ ವರ್ತಿಸಿದವನೊಂದಿಗೆ ಕೂಡಾ ಅತ್ಯಂತ ಮೃದುವಾದ ಶೈಲಿಯಲ್ಲಿ ಪ್ರತಿಕ್ರಯಿಸಬೇಕೆಂದಾಗಿದೆ ಇಸ್ಲಾಮಿನ ಆಜ್ಞೆ.
ಕುರಾನಿನಲ್ಲಿ ಅಲ್ಲಾಹು ಈ ರೀತಿ ಆಜ್ಞಾಪಿಸುವುದನ್ನು ಕಾಣಬಹುದು.👇🏻👇🏻

ادفع بالتي هي احسن فاذا الذي بينك وبينه عداوة كانه ولي حميم
(فصلت ٣٤)

ಒಳಿತು ಮತ್ತು ಕೆಡುಕುಗಳು ಸಮಾನವಲ್ಲ
ನೀವು ಕೆಡುಕನ್ನು ಒಳಿತಿನಿಂದ ಎದುರಿಸಿರಿ ಆಗ ನಿಮ್ಮ ವಿರುದ್ಧ ಹಗೆತನ ಉಳ್ಳವನೂ ನಿಮ್ನ ಆಪ್ತ ಮಿತ್ರನಾಗಿ ಬಿಡುವನು.

ಮತ್ತೊಂದು ಕಡೆ ಅಲ್'ಬಕರ ದ 83 ನೇ ವಚನದಲ್ಲಿ ಅಲ್ಲಾಹು ಈ ರೀತಿ ಹೇಳುತ್ತಾನೆ

وقولوا للناس حسنا (البقرة ٨٣)

ಜನರೊಡನೆ ಸೌಜನ್ಯದ ಮಾತನ್ನಾಡಬೇಕು

'ಅನ್ನಾಸ್' ಎಂದರೆ ಮನುಷ್ಯ ಸಮೂಹ ಅದರಲ್ಲಿ ಧರ್ಮದ ವ್ಯತ್ಯಾಸ ಇಲ್ಲ,ಸಂಸ್ಕೃತಿ ಗಳ ವ್ಯತಿರಿಕ್ತ ಇಲ್ಲ,ನಾಗರಿಕತೆಯ ಭಿನ್ನತೆ ಇಲ್ಲ.ವರ್ಣ ವರ್ಗ ಜಾತಿಮತ ಪಂಥ ಪಂಗಡಗಳ ವ್ಯತ್ಯಾಸ ಇಲ್ಲದೆ ಎಲ್ಲರೊಂದಿಗೂ ಸೌಜನ್ಯ ಪಾಲಿಸಬೇಕೆಂದಾಗಿದೆ ಕುರಾನಿನ ಆಜ್ಞಾಪನೆ.
ಮುಸ್ಲಿಮರಾದ ನಮ್ಮ ವರ್ತನೆ, ಸಂಸ್ಕೃತಿ, ಸ್ವಭಾವಗುಣ ಇತರರಲ್ಲಿ ಪ್ರಭಾವ ಬೀರುವಂತಿರಬೇಕು.
ಅನ್ಯಧರ್ಮದವರೊಂದಿಗೆ ಅನೀತಿ, ಅನ್ಯಾಯ ಅಕ್ರಮ ತೋರಿಸುವುದನ್ನು ಇಸ್ಲಾಂ ಕಟುವಾಗಿ ವಿರೋಧಿಸಿದೆ.ಅವರೊಂದಿಗೆ ಸತ್ಯ ಸಂಧತೆ ಮತ್ತು ನೀತಿಯುಕ್ತವಾಗಿ ವರ್ತಿಸಬೇಕೆಂದು ಇಸ್ಲಾಂ ಹೇಳುತ್ತದೆ.
ಅವರೊಂದಿಗಿರುವ ನಮ್ಮ ಒಡನಾಟ ಇಸ್ಲಾಂ ನ್ನು ಕಲಿಯಲು ಅವರಿಗೆ ಪ್ರಚೋದನೆ ನೀಡುವಂತಿರಬೇಕು.

ಅಲ್ಲಾಹು ಕುರಾನಿನಲ್ಲಿ ಮತ್ತೊಂದು ಕಡೆ ಈ ರೀತಿ ಹೇಳುತ್ತಾನೆ.👇🏻👇🏻

لا ينهاكم الله عن الذين لم يقاتلوكم في الدين ولم يخرجوكم من دياركم ان تبروهم وتقسطوا اليهم ان الله  يحب المقسطين
(الممتحنة ٨)

ಧರ್ಮದ ವಿಷಯದಲ್ಲಿ ನಿಮ್ಮ ವಿರುದ್ಧ ಯುದ್ಧ ಮಾಡಿಲ್ಲದ ಮತ್ತು ನಿಮ್ಮನ್ನು ನಿಮ್ಮ ನಾಡಿನಿಂದ ಹೊರಹಾಕಿಲ್ಲದ ಜನರೊಡನೆ ನೀವು ಸೌಜನ್ಯ ತೋರುವುದನ್ನು ಮತ್ತು ಅವರ ಜೊತೆ ನ್ಯಾಯವಾಗಿ ವ್ಯವಹರಿಸುವುದನ್ನು ಅಲ್ಲಾಹನು ತಡೆಯುವುದಿಲ್ಲ.ನ್ಯಾಯ ಪಾಲಿಸುವವರನ್ನು ಅಲ್ಲಾಹನು ಖಂಡಿತ ಪ್ರೀತಿಸುತ್ತಾನೆ.
(ಅಲ್ ಮುಮ್'ತಹಿನ 08)

ಈ ವಿಶುದ್ಧ ವಚನದ ವ್ಯಾಖ್ಯೆ ವಿವರಿಸುತ್ತಾ ಮುಫಸ್ಸಿರುಗಳು ಹೇಳುತ್ತಾರೆ.

ಮುಸ್ಲಿಮರಾದ ನಾವು ಇತರ ಧರ್ಮದವರೊಂದಿಗೆ ಯಾವ ರೀತಿ ವರ್ತಿಸಬೇಕೆಂದು ಉಲಮಾಗಳು ವಿವರಿಸುವುದನ್ನು ನೋಡಿ👇🏻👇🏻

⚡ ಅವರೊಂದಿಗೆ ಅತ್ಯಂತ ಸೌಜನ್ಯದಿಂದ ವರ್ತಿಸಬೇಕು.!
⚡ಅವರ ದಾರಿದ್ರ್ಯ ನೀಗಿಸುವಲ್ಲಿ ಸಹಕರಿಸಬೇಕು!
⚡ಅವರು ಹಸಿದಿದ್ದರೆ ಆಹಾರ ಕೊಡಬೇಕು!
⚡ಅವರಿಗೆ ಧರಿಸಲು ಉಡುಪುಗಳನ್ನು ನೀಡಬೇಕು!
⚡ಅವರೊಂದಿಗೆ ಅತ್ಯಂತ ಮೃದುವಾದ ಭಾಷೆಯಲ್ಲಿ ಮಾತನಾಡಬೇಕು.!
⚡ಅವರಲ್ಲಿ ಕರುಣೆ ತೋರಬೇಕು!
⚡ಅವರ ಹಿದಾಯತ್ ಮತ್ತು ವಿಜಯಕ್ಕಾಗಿ 'ದುಆ' ಮಾಡಬೇಕು!
⚡ಅವರ ಸಂಪತ್ತು,ಮತ್ತು ಅಭಿಮಾನಕ್ಕೆ ಪ್ರೊಟಕ್ಷನ್ ನೀಡ ಬೇಕು!
⚡ಅವರ ಎಲ್ಲಾ ಅವಕಾಶಗಳಿಗೆ ಸಂರಕ್ಷಣೆ ನೀಡಬೇಕು!
⚡ಅವರನ್ನು ಯಾರೂ ಕೂಡಾ ಆಕ್ರಮಿಸಲು ಮುಂದಾಗದಂತೆ ಸಂಪೂರ್ಣ ನಿರ್ಭಯತೆ ನೀಡಬೇಕು
⚡ವಿಶುದ್ದ ಇಸ್ಲಾಂ ಸ್ವೀಕರಿಸುವಂತೆ ಅವರ ಮೇಲೆ ಒತ್ತಡ ಹಾಕಬಾರದು!

ಕಾರಣ ಕುರಾನಿನಲ್ಲಿ ಅಲ್ಲಾಹು ಸ್ಪಷ್ಟವಾಗಿ ಹೇಳಿದ್ದಾನೆ.👇🏻👇🏻

لا اكراه في الدين.....

ಧರ್ಮದಲ್ಲಿ ಬಲವಂತವಿಲ್ಲ. ನಿಶ್ಚಯವಾಗಿಯೂ ಸರಿದಾರಿಯು ತಪ್ಪು ದಾರಿಗಳಿಂದ ಪ್ರತೇಕವಾಗಿದೆ.
(ಅಲ್'ಬಕರ 256)

ಮತ್ತೊಂದು ಕಡೆ ಅಲ್ಲಾಹು ಹೇಳುತ್ತಾನೆ

لكم دينكم ولي دين

"ನಿಮ್ಮ ಧರ್ಮ ನಿಮಗೆ ಮತ್ತು ನನ್ನ ಧರ್ಮ ನನಗೆ"

ಅದೇ ರೀತಿ ಇತರ ಧರ್ಮದವರು ಆರಾಧಿಸುವ ಆರಾಧ್ಯ ವಸ್ತುವನ್ನು ಅವರು ಗೌರವಿಸುವ ಚಿಹ್ನೆಗಳನ್ನು ನಿಂದಿಸಬಾರದು.ಅವಹೇಳನ ಮಾಡಬಾರದು.ಅಪಹಾಸ್ಯಗೆಯ್ಯಕೂಡದು
ಸೂರತುಲ್ ಅನ್'ಆಮ್ ನ 108ನೇ ವಚನದಲ್ಲಿ ಅಲ್ಲಾಹು ತಾಕೀತು ನೀಡಿದ್ದು ನೀವು ಗಮನಿಸಿದ್ದೀರಾ❓👇🏻👇🏻

ولا تسبوا الذين يدعون من دون الله  فيسبوا الله عدوا بغير علم (الانعام ١٠٨)

(ಓ. ಸತ್ಯ ವಿಶ್ವಾಸಿಗಳೇ) ಜನರು ಅಲ್ಲಾಹನ ಹೊರತು ಇತರ ಯಾರನ್ನೆಲ್ಲಾ ಆರಾಧಿಸುತ್ತಾರೋ ಅವರನ್ನು ಮೂದಲಿಸಬೇಡಿ.
 (ನೀವು ಅಪಹಾಸ್ಯಗೈದರೆ)
ಅವರು ಹಗೆತನದಿಂದ ಅರಿವಿಲ್ಲದೆ ಅಲ್ಲಾಹನನ್ನು ಮೂದಲಿಸುವರು
(ಅಲ್'ಅನ್'ಹಾಮ್ 108)

ಸತ್ಯವಿಶ್ವಾಸಿಗಳು ಇತರ ಧರ್ಮದವರೊಂದಿಗೆ ಯಾವ ರೀತಿ ವರ್ತಿಸಬೇಕೆಂಬುದಕ್ಕೆ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹವಸಲ್ಲಮರ ಜೀವನ ಶೈಲಿಯಲ್ಲಿ ಮಾದರಿ ಇದೆ.
ಇಮಾಮ್ ಬುಖಾರಿ ಮತ್ತು ಮುಸ್ಲಿಂ ವರದಿ ಮಾಡಿದ ಹದೀಸ್ ನಲ್ಲಿ ಈ ರೀತಿ ಇದೆ.

ಒಂದು ದಿನ ಅಬೂಕರ್ (ರ) ರವರ ಪುತ್ರಿ ಅಸ್ಮ (ರ) ರವರನ್ನು ಬೇಟಿಯಾಗಲು ತಾಯಿ ಆಗ್ರಹ ಪ್ರಕಟಿಸಿದರು.ತಾಯಿ ಅಮುಸ್ಲಿಮರಾಗಿದ್ದರು ಹಾಗಾಗಿ ಅಸ್ಮ (ರ) ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಹತ್ತಿರ ಅದರ ಕುರಿತು ಫತ್ವ ಕೇಳಿದರು.
" ನನ್ನ ತಾಯಿ ಮುಶ್ರಿಕ್ ಆಗಿದ್ದಾರೆ ಅವರೀಗ ನನ್ನನ್ನು ಬೇಟಿಯಾಗಲು ಬಂದಿದ್ದಾರೆ ಅವರೊಂದಿಗೆ ನಾನು ಸಂಪರ್ಕವಿಡಬಹುದೇ❓
ತಟ್ಟನೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಉತ್ತರಿಸಿದರು 'ನಹಂ'
ದಾರಾಳವಾಗಿ ಸಂಪರ್ಕಿಸಬಹುದು
(ಮುತ್ತಫಕುನ್ ಅಲೈಹಿ)

ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರು ಅನ್ಯ ಧರ್ಮದ ಅನುಯಾಯಿಗಳೊಂದಿಗೆ ವ್ಯಾಪಾರ ವಹಿವಾಟು ನಡೆಸುತ್ತಿದ್ದರು.ಅವರನ್ನು ಯಾರೂ ಕೂಡಾ ವಂಚಿಸಬಾರದೆಂದು ತಾಕೀತು ನೀಡಿದ್ದರು.ಅವರಿಗೆ ಮುತ್ತು ನೆಬಿ ಪೂರ್ಣ ನಿರ್ಭಯತೆ ನೀಡಿದ್ದರು.

ಅಮುಸ್ಲಿಮರು ವಾಸಿಸುವ 'ನಜ್ರಾನ್' ಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು
ಪೂರ್ಣ ಸಂರಕ್ಷಣೆ ನೀಡಿದ್ದಾಗಿ ಇಮಾಮ್ ಬೈಹಕಿ ವರದಿ ಮಾಡಿದ ಹದೀಸ್ ನಲ್ಲಿ ಈ ರೀತಿ ಇದೆ👇🏻👇🏻

فقال صلي الله عليه وسلم عن اهل نجران
((ولنجران وحاشيتها جوار الله وذمة محمد   النبي علي انفسهم وملتهم وارضهم واموالهم وغائبهم وشاهدهم وعشيرتهم وبيعهم ( دلائل النبوة للبيهقي(٥/٣٨٩)

ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು 'ನಜ್'ರಾನ್ ದೇಶದಲ್ಲಿ ವಾಸಿಸುವ ಅಮುಸ್ಲಿಮರೊಂದಿಗೆ ಹೇಳುತ್ತಾರೆ.

"ಅವರ ಶರೀರ ಸಂಪತ್ತು ಅಭಿಮಾನ ಅವರ ಪೈಕಿ ಇಲ್ಲಿ ಹಾಜರಿರುವವರಿಗೆ ಇಲ್ಲದವರಿಗೆ,ಅವರ ವ್ಯಾಪಾರ ವಹಿವಾಟುಗಳಿಗೆ ಅಲ್ಲಾಹನ ಪೂರ್ಣ ಸಂರಕ್ಷಣೆ ಇದೆ.ಪ್ರವಾದಿಯಾದ ಮುಹಮ್ಮದ್ (ಸ)ರ ಪ್ರೋಟಕ್ಷನ್ ಇದೆ.

(ದಲಾಈಲುನ್ನುಬುವ್ವ. 5/389)

ಇಮಾಮ್ ಬುಖಾರಿ (ರ) ವರದಿ ಮಾಡುವ ಹದೀಸ್'ನಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ.

من قتل نفسا معاهدا لم يرح رائحة الجنة وان ريحها ليوجد من مسيرة اربعين عاما

(البخاري ٦٩١٤)

ಮುಸ್ಲಿಮರೊಂದಿಗೆ ಒಳ್ಳೆಯ ರೀತಿಯಲ್ಲಿ ಒಡನಾಟವಿರುವಂತೆ ಒಪ್ಪಂದ ಮಾಡಿದ ಅಮುಸ್ಲಿಮನನ್ನು ಯಾರಾದರೂ ಕೊಂದರೆ ಅವನಿಗೆ ಸ್ವರ್ಗದ ಸುಗಂಧ ಕೂಡಾ ಲಭಿಸಲ್ಲ!
ನಿಶ್ಚಯವಾಗಿಯೂ ಸ್ವರ್ಗದ ಪರಿಮಳ ನಲ್ವತ್ತು ವರ್ಷ ಕ್ರಮಿಸುವಷ್ಟು ದೂರದಿಂದ ಬಡಿಯುತ್ತದೆ.

(ಬುಖಾರಿ ಹದೀಸ್ ನಂ ೨೯೧೪)

ಅಬೂದಾವೂದು ವರದಿ ಮಾಡುವ ಮತ್ತೊಂದು ಹದೀಸ್ ನಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ.

الا من ظلم معاهدا او انتقصه او كلفه فوق طاقته او اخذ منه شيئا بغير طيب نفس فانا حجيجه يوم القيامة
(ابو داود ٣٠٥٤)

ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ 👇🏻

"ತಿಳಿಯಿರಿ... ! ನಮ್ಮೊಂದಿಗೆ ಒಪ್ಪಂದವಿರುವವರೊಂದಿಗೆ ಯಾರಾದರೂ ಅನೀತಿ ಅನ್ಯಾಯ ಮಾಡಿದರೆ,ಅಥವಾ ಅವನ ಅವಕಾಶವನ್ನು ನಿರಾಕರಿಸಿದರೆ, ಸಾಧ್ಯವಿಲ್ಲದ ಭಾರವನ್ನು ಅವನಮೇಲೆ ಹೇರಿದರೆ,ಅನಧಿಕೃತವಾಗಿ ಅವನ ಸೊತ್ತನ್ನು ಕೈವಶ ಪಡಿಸಿದರೆ ನಾನು ಅವನೊಂದಿಗೆ ಕೋಪಿಸುವೆನು"

(ಅಬೂದಾವೂದ್ ಹದೀಸ್ ನಂ 3054)

ಉಲಮಾಗಳು ಹೇಳುತ್ತಾರೆ 👇🏻👇🏻

ನಮ್ಮೊಂದಿಗೆ ಒಪ್ಪಂದವಿರುವವನ ಕುರಿತು ಕೆಟ್ಟದ್ದಾಗಿ ಹೇಳಿದರೆ ಅಥವಾ ಅವನ ಅಭಿಮಾನಕ್ಕೆ ಚ್ಯುತಿ ಬರುವಂತಹ ಕಾರ್ಯ ಮಾಡಿದರೆ, ಅದಲ್ಲದಿದ್ದರೆ ಬೇರೆ ಯಾವುದಾದರೂ ರೀತಿಯಲ್ಲಿ ಉಪದ್ರವ ಕೊಟ್ಟರೆ ಅವನು ಅಲ್ಲಾಹನ ಹಾಗೂ ರಸೂಲರ ಮತ್ತು ಇಸ್ಲಾಂ ದೀನಿನ 'ಝಿಮ್ಮತ್' ನ್ನು ಉಲ್ಲಂಘಿಸಿದವಮಾಗಿದ್ದಾನೆ!

ಆದ್ದರಿಂದಲೇ ಓ...ಸತ್ಯವಿಶ್ವಾಸಿಗಳೆ..
ನೀವು ನೀವು ಎಲ್ಲರ ಅವಕಾಶವನ್ನು ಸಮರ್ಥವಾಗಿ ನೀಡಿರಿ.

ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ.
"ಮುಸ್ಲಿಂ ಎಂದರೆ ಸರ್ವ ಮಾನವರು ಅವನ ನಾಲಗೆ ಮತ್ತು ಕೈಯಿಂದ ರಕ್ಷಣೆ ಹೊಂದಿದ್ದಾರೆ.
ಮುಅ್'ಮಿನ್  ಎಂದರೆ ಜನರ ಅಭಿಮಾನ ಮತ್ತು ಸಂಪತ್ತಿಗೆ ಅವನಿಂದ ನಿರ್ಭಯತೆ ಲಭಿಸಿದೆ.

ಎಲ್ಲಾ ವರ್ಗ ವರ್ಣ ಜಾತಿ ಮತ ಪಂಥ ಪಂಗಡ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಒಳಿತು ಅಗ್ರಹಿಸುವವನು ಅವನೇ ನಿಜವಾದ ಮುಸ್ಲಿಮ್!
ಅಲ್ಲಾಹು ಆ ಕೂಟದಲ್ಲಿ ನಮ್ಮನ್ನು ಸೇರ್ಪಡಿಸಲಿ ಆಮೀನ್

المغفور له الشيخ زائد بن سلطان آل نهيان
ಅಲ್ಲಾಹು ಅವರ ಕಬರ್ ಸ್ವರ್ಗೋಧ್ಯಾನಗೊಳಿಸಲಿ ಆಮೀನ್

صاحب السمو الشيخ خليفة بن زائد آل نهيان حفظه الله
 ( رئيس دولة الامارات العربية المتحدة)

وصاحب السمو الشيخ  محمد بن راشد آل مكتوم
(نائب رئيس الدولة رئيس مجلس الوزراء حاكم دبي رعاه الله )

 ಅಲ್ಲಾಹು ಅವರಿಗೆ ಹಿಮ್ಮತ್ ನೀಡಲಿ ಆಮೀನ್...

✒ ಅಬೂಶಝ

No comments:

Post a Comment