Saturday, October 14, 2017

*ಸಮಸ್ತ ಯಾಕೆ ವಿಭಜನೆಯಾಯ್ತು? ಎಂದರಿಯದವರು ಇದನ್ನು ಝರೂರಿ ಓದಬೇಕು.*

       🖋 *ಅಬ್ದುಲ್  ರಶೀದ್ ಪದ್ಮುಂಜ*

ಸಮಸ್ತ ವಿಭಜನೆ:
ಸನ್ನಿವೇಶ ಹಾಗೂ ಕಾರಣಾಂತರಗಳಿಂದ ಕೇರಳ ಮುಸ್ಲಿಮರಿಗೆ ಆತ್ಮೀಯವಾಗಿ ಹಾಗೂ ಭೌತಿಕವಾಗಿ ಸಾರಥ್ಯ ನೀಡುವ ಅಧಿಕೃತ ಪಂಡಿತ ಸಭೆಯಾದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಐತಿಹಾಸಿಕ ಚರಿತ್ರೆಯ ಅದ್ಭುತ ಅಧ್ಯಾಯವಾಗಿದೆ 1989ರ ಸಮಸ್ತ ವಿಭಜನೆ ಹಾಗೂ ಸಂಬಂಧಪಟ್ಟವುಗಳು.

ಆಕಸ್ಮಿಕವಾಗಿ ಉಧ್ಬವಿಸಿದ ತಾರ್ಕಿಕ ಕಾರಣದಿಂದಲೋ ಅನಿರೀಕ್ಷಿತವಾಗಿ ಬಂದೊದಗಿದ ಸನ್ನಿವೇಶದಿಂದಲೋ ಆಗಿರಲಿಲ್ಲ ಈ ಸಮಸ್ತ ವಿಭಜನೆ ಬದಲಾಗಿ ಸುದೀರ್ಘವಾದ ಮೂರು ದಶಕಗಳಿಂದಾಚೆಗೆ ನೆಲೆಯೂರಿದ ಚರಿತ್ರೆಯ ಕ್ಲೈಮಾಕ್ಸ್  ಆಗಿದೆ ಈ ವಿಭಜನೆ.

1947ರಲ್ಲಿ ದೇಶವೂ ಬ್ರೀಟೀಷರ ಗುಲಾಮಗಿರಿಯಿಂದ ಸ್ವತಂತ್ರಗೊಂಡು ಆಡಳಿತದ ಅನುಕೂಲಕ್ಕಾಗಿ ಭಾಷೆಗಳನ್ನನುಕರಿಸಿ ರಾಜ್ಯಗಳನ್ನು ರೂಪೀಕರಿಸಲಾಯಿತು. ಕೇರಳ ರಾಜ್ಯ ರೂಪೀಕರಿಸಿದ ನಂತರ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧೀನದಲ್ಲಿ ಕೇರಳ ಮುಸ್ಲಿಮರಿಗೆ ಭೌತಿಕ ಪ್ರಗತಿಗಾಗಿ ಸನ್ನಿವೇಶ ಒದಗಿತು. ಇಸ್ಲಾಮಿನ ಪರಂಪರಾಗತ ಆದರ್ಶಗಳನ್ನು ತೇಜೋವಧೆ ಮಾಡುತ್ತ ಅಕ್ರಮ ಪ್ರವೇಶಿಸಿದ ನವೀನವಾದಿಗಳನ್ನು ಮುಸ್ಲಿಂ ಸಮೂಹದಿಂದಲೇ ಸಂಪೂರ್ಣ ನಿರ್ಮೂಲನೆ ಮಾಡಲು (ತರ್ಕುಲ್ ಮುವಾಲಾತ್) ಸಮಸ್ತಕ್ಕೆ ಸಾಧ್ಯವಾಯಿತು.     
        ಈ ಸನ್ನಿವೇಶದಲ್ಲಿ ನೆಲೆಯೂರಲು ಅಡಿಪಾಯವಿಲ್ಲದ ಕೇರಳದ ನವೀನವಾದಿಗಳಾದ ವಹ್ಹಾಬಿ ಮೌದೂದಿಗಳ ಚಳುವಳಿಗೆ ಸ್ವಂತಸ್ಥಿಕೆಯ ಪ್ಲಾಟ್ ಫಾರ್ಮ್ ಅನಿವಾರ್ಯವಾಯಿತು. ನವೀನ ವಾದಿಗಳ ಮೇಧಾವಿಗಳಾದ ಕೆ.ಎಂ ಮೌಲವಿ ಹಾಗೂ ಸೀದಿಶಾಹಿ ಸಹಿತವಿರುವ ನೇತಾರರು ಈ ವಿಷಯವನ್ನು ಚರ್ಚಿಸಿ 1948ರಲ್ಲಿ ರೂಪೀಕೃತವಾದ ಭಾಲರಿಷ್ಟ ಸಹಿತ ಮುಸ್ಲಿಂ ಲೀಗನ್ನು ತಂತ್ರಪೂರ್ವ ವಶೀಕರಿಸಲು ಅದೊಂದು ಸಾರ್ವಜನಿಕ ವೇದಿಕೆಯಾಗಿ ಸುನ್ನತ್ ಜಮಾಅತ್ತಿನ ಕಾರ್ಯಾಚರಣೆಗೆ ತಡೆಯಿಡಲು ಯೋಜನೆ ಹಾಕಿದರು. ಈ ತೀರ್ಮಾನದ ಭಾಗವಾಗಿ ಸೌಕರ್ಯ ಒದಗಿದಲ್ಲೆಲ್ಲಾ ಲೀಗಿನ ಯುನಿಟ್ ರೂಪೀಕರಿಸಿದರು. ಆದರೆ ಮುಸ್ಲಿಮರ ಸಾಮಾನ್ಯ ಅರಿವನ್ನು ಕಬಳಿಸಲು ಇದು ಸಾಕಾಗಿಲ್ಲ. ಆಗ ಅಹ್ಲ್ ಬೈತಿನೊಂದಿಗಿರುವ ಪ್ರೀತಿ ಗೌರವಗಳನ್ನು ಶೋಷಿಸಿದರೆ ಈ ಉದ್ದೇಶ ಗುರಿತಲುಪೀತೆಂಬ ಕೆ.ಎಂ ಮೌಲವಿಯ ದುಷ್ಚಿಂತೆಯ ಪರಿಣಾಮ ಅಬ್ದುಲ್ ರಹಿಮಾನ್ ಭಾಫಖಿ ತಂಙಳರನ್ನು ಡಿಸಿಪ್ಲೇನ್ ಮಾಡಿ ಲೀಗನ್ನು ಭದ್ರಪಡಿಸಿದರು.

ಪರಿಣಾಮವಾಗಿ 1960ರ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಅಭೂತಪೂರ್ವ ವಿಜಯ ಸಾಧಿಸಿತು.
ಲೀಗಿನ ಈ ದ್ವಿಮುಖ 1960ರ ಚುನಾವಣೆ ವಿಜಯದೊಂದಿಗೆ ರಾಜಕೀಯದಲ್ಲಿ ಬಲಿಷ್ಠವಾಯಿತು. ಮಂತ್ರಿಮಂಡಲದಲ್ಲಿ ಸದಸ್ಯತನ ಬೇಡಿದರೂ ಕೇವಲ ಸ್ಪೀಕರ್ ಸ್ಥಾನದೊಂದಿಗೆ ಲೀಗ್ ತೃಪ್ತಿ ಪಡಬೇಕಾಗಿ ಬಂತು. ಹೀಗಾಗಿ ಲೀಗ್ ಪ್ರತಿನಿಧಿಯಾಗಿ ಸೀದಿ ವಕೀಲರೆಂಬ ವಹ್ಹಾಬಿಯನ್ನು ಕೇರಳ  ಸ್ಪೀಕರನ್ನಾಗಿ ಆರಿಸಿದರು. ಇದರೊಂದಿಗೆ ಲೀಗಿನ ನೈಜ ಮುಖ ಬಹಿರಂಗವಾಗತೊಡಗಿತು. ಬಾಫಖಿ ತಂಙಳರನ್ನು ಡಿಸಿಪ್ಲೇನ್ ಮಾಡಿ ಹಿಡಿದ ವಹ್ಹಾಬಿಗಳು ವಂಚಿಸಲು ಆರಂಭಿಸಿದರು. ಇದು ರಾಜಕೀಯ ಪ್ರಭಾವವನ್ನುಪಯೋಗಿಸುತ್ತಾ ಸುನ್ನತ್ ಜಮಾಅತಿನ ನಿರ್ಮೂಲನೆಯ ಪ್ರಥಮ ಹಂತವಾಗಿತ್ತು. ಮುಂದುವರಿದ ರಾಜಕೀಯ ಪ್ರಭಾವವೂ ವಕ್ಫ್ ಬೋರ್ಡಿನಲ್ಲಿ ನೂರು ಶತಮಾನ ವಹ್ಹಾಬಿಗಳನ್ನು ತುರುಕಿ ವಹ್ಹಾಬಿ ವೃದ್ದ ಕಾರ್ಯಗಳು ಸುಖಕರವಾಗಿಸಿ 99% ಸುನ್ನಿಗಳ ಪ್ರಾತಿನಿಧ್ಯವಿರುವ ಪಾರ್ಟಿಯ ಕೀಗೊಂಚಲನ್ನು ವಶೀಕರಿಸುತ್ತಲಾಗಿದೆ ಅವರ ಕಾರ್ಯಾಚರಣೆ ಮುಂದುವರಿದದ್ದು. ಇದರ ಪರಿಣಾಮವಾಗಿ ಪಟ್ಟಾಳಂಪಳ್ಳಿ, ಮುಹಿಯಿದ್ದೀನ್ ಪಳ್ಳಿ ಯೊಂದಿಗೆ ಹತ್ತಾರು ಮಸೀದಿಗಳನ್ನು ಮಲಬಾರಿನ ಹೃದಯ ಭಾಗವಾದ ಕೋಯಿಕ್ಕೋಡಿನಲ್ಲಿ ಮಾತ್ರ ವಹ್ಹಾಬಿಗಳು ವಶೀಕರಿಸಿದ್ದು.
 ಈ ರಹಸ್ಯ ಕಾರ್ಯಾಚರಣೆ ಮನದಟ್ಟುಮಾಡಿದ ಸಮಸ್ತ ಇದರ ವಿರುದ್ಧ ಘೋರವಾದ ಪ್ರತಿಭಟನೆ ನಡೆಸಿತಾದರೂ ಲೀಗ್ ಆದನ್ನು ಪರಿಗಣಿಸಲೇ ಇಲ್ಲ.
1967ರ ಚುನಾವಣೆಯಲ್ಲಿ ಲೀಗಿಗೆ 2 ಮಂತ್ರಿಸ್ಥಾನ ದಕ್ಕಿತ್ತು. ಸಿ.ಎಚ್ ಮತ್ತು ಕುರಿಕ್ಕಳಂ ಮಂತ್ರಿಗಳಾಗಿ ಪ್ರತಿಜ್ಞೆ ಸ್ವೀಕರಿಸಿದರು. ಈ ಸಂಧರ್ಭ 'ತಿರುವಿತಾಂ' ಕೂರಿನ ಮುಸ್ಲಿಮರ ಪ್ರತಿಭಟನೆಯ ಪರಿಣಾಮ ಸ್ವಾತಂತ್ರ್ಯದ ನಂತರ ಶಾಲೆಗಳಲ್ಲಿ ವಿರೋಧಿಸಿದ ಮದರಸ ತರಗತಿಯ ಬದಲಾಗಿ ಅರಭಿ ಭಾಷೆ ತರಗತಿಗೆ ಅಂಗೀಕಾರ ಲಭಿಸಿತು. [ಇಂದು ಇದನ್ನು ಲೀಗಿನವರು ತಮ್ಮ ಕ್ರೆಡಿಟ್ ಎಂದು ಜಂಬಿಸುತ್ತಾರೆ] ಈ ವೆಕೇನ್ಸಿಗೆ ವಹ್ಹಾಬಿ ಅಧ್ಯಾಪಕರನ್ನು ಸಂಪೂರ್ಣವಾಗಿ ಭಡ್ತಿ ಮಾಡೂದರಲ್ಲಿ ಅಂದಿನ ಮುಸ್ಲಿಂ ಲೀಗಿನ ವಹ್ಹಾಬಿ ನೇತೃತ್ವವೂ ಯಶಸ್ವಿಯಾಗಿತ್ತು. ಆ ಮುಖಾಂತರ ಕೇರಳದಲ್ಲಿ ವಿಧ್ಯಾವಂತರು ವಹ್ಹಾಬಿಗಳು ಮಾತ್ರವೆಂಬ ತಪ್ಪುಕಲ್ಪನೆ ಅಚ್ಚಳಿಯಿತು. ಇದು ನವೀನವಾದಿಗಳು ಇಸ್ಲಾಮಿನ ಅಭಿವೃದ್ಧಿಕಾರರನ್ನಾಗಿಯೂ ಪರಂಪರಾಗತ ಸುನ್ನಿಗಳನ್ನು ನವೀನವಾದಿಗಳನ್ನಾಗಿ ಮುದ್ರೆಯೊತ್ತಲು ಕಾರಣವಾಯಿತು.

ಈ ಕುತಂತ್ರದ ವಿರುದ್ಧ ಪ್ರತಿಭಟಿಸಲು ಅಂದು ಇದ್ದದ್ದು ಚಂದ್ರಿಕಾ ಪತ್ರಿಕೆ ಮಾತ್ರವಾಗಿತ್ತು. ಆದರೆ ಪತ್ರಿಕೆಯ ಪಬ್ಲಿಷಿಂಗ್ ಕಮಿಟಿಯಲ್ಲಿ ಮೇಲ್ವಿಚಾರಕರು ವಹ್ಹಾಬಿಗಳಾದ್ದರಿಂದ ಬಹಳಷ್ಟು ಪರಿಣಾಮ ಬೀರಲಿಲ್ಲ.

ಸುನ್ನೀ ಜಾಗರಣಾ ವಹ್ಹಾಬಿ ಅತಿಕ್ರಮಣದಲ್ಲಿ ಮುಸ್ಲಿಂ ಲೀಗಿನ ರಹಸ್ಯ ಬೆಂಬಲವನ್ನು ಅರ್ಥೈಸಲು ಸಮಸ್ತಕ್ಕೆ ಸಾಧ್ಯವಾಯಿತು. ಹೀಗಾಗಿ  ಸಂಘಟನೆಯ ಬಲಿಷ್ಠಾನದ ಭಾಗವಾಗಿ ದೀರ್ಘ ದೃಷ್ಟಿಯ ವ್ಯಕ್ತಿತ್ವ ವಾದ ಮಹಾನರಾದ ಚಾಪನಂಙಾಡಿ ಬಾಪು ಮುಸ್ಲಿಯಾರ್ SYS ನ ಸಾರಥ್ಯ ವಹಿಸುತ್ತಾ ವಿಷಯದ ಗೌರವವನ್ನು, ಅನಿವಾರ್ಯತೆಯನ್ನು ಸಂಘಟನೆಗೆ ಮನವರಿಕೆ ಮಾಡಿ 1976 ರಲ್ಲಿ SYS ನ್ನು ಪುನರೂಪೀಕರಿಸಲಾಯಿತು.
EK ಹಸನ್ ಮುಸ್ಲಿಯಾರ್ AP ಅಬೂಬಕ್ಕರ್ ಮುಸ್ಲಿಯಾರ್ ರವರ ಸಾರಥ್ಯದಲ್ಲಿ ಹೊಸ ಸಂಘಟನೆ ರೂಪೀಕರಿಸಿ ಕ್ರಾಂತಿಕಾರಿ ಬೆಳವಣಿಗೆಗೆ ಹಸಿರು ನಿಶಾನೆ ತೋರಿಸಲಾಯಿತು. ರಾಜಕೀಯ ಶಕ್ತಿಯೊಂದಿಗೆ ಸುನ್ನತ್ ಜಮಾಅತನ್ನು ನಿರ್ಮೂಲನೆ ಮಾಡಲು ಹೊರಟವರಿಗೆ ತೊಡೆ ತಟ್ಟುತ್ತಾ ಸಂಘಟನೆ ಶಕ್ತೀಕರಿಸಿ ಶೈಕ್ಷಣಿಕ ಕ್ರಾಂತಿಯತ್ತಾ ದೃಷ್ಟಿ ಹರಿಸಿದರು. ಉದ್ದೇಶಿತ ಕಾರ್ಯಾಚರಣೆಯ ಫಲವಾಗಿ 107 ಯುನಿಟ್ ಗಳಿದ್ದ SYS  5000 ಕ್ಕಿಂತಲೂ ಅಧಿಕ ಯುನಿಟ್ ಗಳನ್ನು ರಚಿಸಿ ಕ್ರಾಂತಿಕಾರಿ ಸಂಘಟನೆಯಾಗಿ ಯಶಸ್ವಿ ಸಾಧಿಸಿತು. 25  ವರ್ಷಗಳ ಕಾಲ ಕಾರ್ಯಾಚರಿಸಿ ಸಾಧಿಸಲಾಗದ ಜನಬೆಂಬಲವಾಗಿದೆ ಈ ಬಾರಿ SYSಗೆ ಲಭಿಸಿದ್ದು. ಸಂಘಟನೆಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಒಂದು ಸಮ್ಮೇಳನ ನಡೆಸುವುದಾಗಿ ತೀರ್ಮಾನಿಸಲಾಯಿತು.1978 ಎಪ್ರಿಲ್ ನಲ್ಲಿ SYS ನ 25 ನೇ ವಾರ್ಷಿಕವೂ ಕೋಯಿಕ್ಕೋಡಿನ ಮಾನಾಂಜರಿಯಲ್ಲಿ ನಡೆಸುವ ಯೋಜನೆಗಳನ್ನು ಹಾಕಲಾಯಿತು. ಪಟ್ಟಿಕ್ಕಾಡ್ ಜಾಮಿಅ ನೂರಿಯಾದ ಸಮ್ಮೇಳನ ವೇದಿಕೆಯಲ್ಲಿ ಉಲಮಾಗಳನ್ನು ಕತ್ತೆಗಳೆಂದು ಕರೆದ ಸಿ.ಎಚ್ ನ ಭಾಷಣವೂ, ಇದನ್ನು ಆಘೋಷಿಸಿದ ಚಂದ್ರಿಕಾ ಪತ್ರಿಕೆಯ ನಿಲುವನ್ನು ಮನದಟ್ಟು ಮಾಡಿದ ಮಹೋನ್ನತರು ಸಮ್ಮೇಳನದಲ್ಲಿ ರಾಜಕೀಯ ಪುಡಾರಿಗಳನ್ನು ದೂರವಿರಿಸಲು ತೀರ್ಮಾನಿಸಿದರು. ಇದರಿಂದ ಆಕ್ರೋಶಭರಿತರಾದ ರಾಜಕಾರಣಿಗಳು ಸಮ್ಮೇಳನ ತಡೆಯುವಲ್ಲಿ ವಿಫಲ ಯತ್ನ ನಡೆಸಿದರಾದರೂ ಸಮ್ಮೇಳನ ಅದ್ದೂರಿ ವಿಜಯ ಸಾಧಿಸಿತು. ನಂತರ ಮುಂದುವರಿದ ಸಂಘಟಕರು ತಮ್ಮ ಪ್ರಮೇಯದಂತೆ 1978 ಎಪ್ರಿಲ್ 14 ರಂದು  ವಿಧ್ಯಾಭ್ಯಾಸ ಕ್ರಾಂತಿಗಾಗಿ ಮರ್ಕಝ್ ಗೆ ಶಿಲಾನ್ಯಾಸ ಮಾಡಲಾಯಿತು. ಸಮಸ್ತದ ಅಧೀನದಲ್ಲಿರುವ SYS ನ ಮಿಂಚಿನ ಸಂಚಾರ ವಹ್ಹಾಬಿಗಳಿಗೆ ಅಚ್ಚರಿಪಡಿಸಿತು. ಅವರು ಕೆ.ಎನ್.ಎಮ್ ನ ಸಾರಥ್ಯದಲ್ಲಿ 1979 ಜೂನ್ 16 ರಂದು ಐಕ್ಯ ವೇದಿ ರೂಪೀಕರಿಸಲು ಸಮಸ್ತಕ್ಕೆ ಪತ್ರ ಬರೆದು ಹೊಸತೊಂದು ದಾರಿಯನ್ನು ಕಂಡುಹಿಡಿಯಲು ಪ್ರಯತ್ನಿಸಿದರು. ಆದರೆ ಪ್ರಸ್ತುತ ಪತ್ರಕ್ಕೆ ಸಮಸ್ತ ಕೊಟ್ಟ ಉತ್ತರ ಮೂಗು ಮುಚ್ಚುವ ರೂಪದಲ್ಲಾಗಿತ್ತು. ಮುಸ್ಲಿಮರನ್ನು ಐಕ್ಯ ವೇದಿಗೆ ಕರೆಯುವ ಮುನ್ನ ನೀವು ಮುಶ್ರಿಕ್ ಮಾಡಿದ ಸುನ್ನಿಗಳನ್ನು ಮುಸ್ಲಿಮರಾಗಿ ಅಂಗೀಕರಿಸಬೇಕು ಎಂದಾಗಿತ್ತು ಮುಶಾವರ ನಿಯಮಿಸಿದ ಕೆ.ವಿ.ಮುಹಮ್ಮದ್ ಮುಸ್ಲಿಯಾರ್ ಉತ್ತರ ಬರೆದದ್ದು.  ಆದರೆ ಸ್ಥಂಭಿಸದ ವಹ್ಹಾಬಿಗಳು ಹಿಂದಿನಿಂದ ರಹಸ್ಯ ಕಾರ್ಯಾಚರಣೆಗೆ ಇಳಿದರು. ಮುಸ್ಲಿಂ ಯೂತ್ ಲೀಗಿಗೆ ಐಕ್ಯವೇದಿ ರೂಪೀಕರಿಸಲು SYS ಗೆ ಪತ್ರ ಬರೆಯುವಂತೆ ಒತ್ತಡ ಹಾಕಿದರು. ಪತ್ರ ಸ್ವೀಕರಿಸಿದ ಸಮಸ್ತ ಪ್ರತ್ಯುತ್ತರದಲ್ಲಿ ಯಾವುದೇ ಬದಲಾವಣೆ ಮಾಡದೆ ಉತ್ತರಿಸಿದರು. ಈ ಅವಕಾಶವನ್ನು ಸದುಪಯೋಗ ಪಡಿಸಿದ ವಹ್ಹಾಬಿಗಳು ಲೀಗ್ ಮತ್ತು ಸಮಸ್ತವನ್ನು ಪರಸ್ಪರ ಎತ್ತಿಕಟ್ಟಿ ಬಿರುಕು ಉಂಟು ಮಾಡಲು ಕಠಿಣ ಪರಿಶ್ರಮ ನಡೆಸಿದರು.1985 ರಲ್ಲಿ ನಡೆದ ಸಮಸ್ತ 60ನೇ ವಾರ್ಷಿಕ ಮಹಾ ಸಮ್ಮೇಳನವೂ ಸಮಸ್ತದ ಇತಿಹಾಸದಲ್ಲೊಂದು ಸ್ವರ್ಣ ಲಿಪಿಯಾಗಿತ್ತು. ವಹ್ಹಾಬಿ ಚೇಳಾಗಳು ಮೂಗುದಾರ ಹಿಡಿಯುವ ಸಮುದಾಯ ಪಾರ್ಟಿಯ ಹೈಜಾಕ್ ಕಾರಣ ಸುದೀರ್ಘ 25 ವರ್ಷಗಳ ಕಾಲ ಸಮಸ್ತಕ್ಕೆ ಸಮ್ಮೇಳನ ನಡೆಸಲು ಸಾಧ್ಯವಾಗಿಲ್ಲವೆಂಬ ಕಟು ಸತ್ಯವನ್ನು ಮನಃಗಂಡ ಸಾರಥಿಗಳು ಸಮಸ್ತದ 60 ನೇ ವಾರ್ಷಿಕವೂ ಅತೀ ವಿಜೃಂಭಣೆಯಿಂದ ನಡೆಸುವುದಾಗಿ ತೀರ್ಮಾನಿಸಿದರು. 1981 ರಲ್ಲಿ ಸಮ್ಮೇಳನದ ತಾರೀಕು ಘೋಷಿಸಿದರೂ ಕೂಡ ಇಂದಿರಾಗಾಂಧಿ ಹತ್ಯೆ, 1982 ಆಗಸ್ಟ್ ನಲ್ಲಿ ಗರ್ಜಿಸುವ ಸಿಂಹ E.K ಹಸನ್ ಮುಸ್ಲಿಯಾರರ ವಿಯೋಗ  (ಚಂದ್ರಿಕಾ ಪತ್ರಿಕೆ ಇ.ಕೆ.ಉಸ್ತಾದರ ವಿಯೋಗವನ್ನು ಆಚರಿಸಿತ್ತು) ಇತ್ಯಾದಿ ಕಾರಣಗಳಿಂದ ಸಮ್ಮೇಳನವೂ ಮುಂದೂಡಿಕೆಯಾಗಿತ್ತು. 60 ನೇ ವಾರ್ಷಿಕವನ್ನು ತಡೆಯಲು ಲೀಗ್ ಶಕ್ತವಾದ ವಿಫಲ ಶ್ರಮವನ್ನು ನಡೆಸಿತ್ತು. ಕಾರ್ಯಕ್ರಮ ಅತೀ ವಿಜೃಂಭಣೆಯಿಂದ ನಡೆಯುವುದೆಂದು ಖಾತರಿಯಾದಾಗ ರಾಜಕಾರಣಿಗಳ ಸಮಕ್ಷಮದಲ್ಲಿ ನಡೆಯಬೇಕೆಂಬ ಅನಗತ್ಯವಾದ ವಾದವನ್ನು ಮಂಡಿಸಿದರಾದರೂ ಕಣ್ಣಿಯತ್ ಉಸ್ತಾದರ ಮುಂದೆ ಅದೆಲ್ಲವೂ ಮಂಡಿಯೂರಿತು. ಕಾರ್ಯಕ್ರಮ ಯಶಸ್ವಿಯಾಗಿ ಜಯಭೇರಿತು. ಕೇರಳದ ಮುಸ್ಲಿಂ ಸಮೂಹವೂ ಸಮಸ್ತ ಎಂಬ ಪಂಡಿತಸಭೆಯೊಂದಿಗಿರುವುದು ಎಂದು ಸಾರಿ ಹೇಳುತ್ತಿತ್ತು 60 ನೇ ವಾರ್ಷಿಕ ಸಮ್ಮೇಳನ. ಸಮಸ್ತವನ್ನು ಮುಸ್ಲಿಂ ಲೀಗಿನ ನಿಯಂತ್ರಣಕ್ಕೆ ತರುವುದೆಂದು ರಾಜಕಾರಣಿಗಳನ್ನು ವಿರೋದಿಸುವವರನ್ನು ಸಮಸ್ತದಿಂದ ಕಿತ್ತೊಗೆಯವುದೆಂದೂ ಲೀಗ್ ಮತ್ತು ವಹ್ಹಾಬಿ ಪಾದ್ರಿಗಳು ಚರ್ಚಿಸಿದರು. ಈ ಪ್ಲೇನಿಂಗ್ ಸೆಕ್ಸಸ್ಸಿಗೆ ಎರಡರಲ್ಲೊಂದು ಅಬೂಬಕ್ಕರ (A.P & E.K) ರಿಗೆ ಬಲೆ ಬೀಸಬೇಕೆಂದಾಗಿತ್ತು ಅವರ ಉದ್ದೇಶ. ಈರ್ವರಲ್ಲಿ ತೀಕ್ಷ್ಣವಾದ ವ್ಯಕ್ತಿ ಕಾಂತಪುರಂಮೆಂದರಿತ ಅವರು E.K ಉಸ್ತಾದರನ್ನು ಸಮೀಪಿಸಿದರು. ಇದಕ್ಕಾಗಿ ಸೇಟ್ ಸಾಹಿಬ್, K.E ಸಾಹಿಬ್, P. ಅಬೂಬಕ್ಕರ್ ಎಂಬ ಮೂವರನ್ನು ಆರಿಸಿದರು. ಇವರು EK ಉಸ್ತಾದರನ್ನು ಕಣ್ಣೂರಲ್ಲಿ  KE ಸಾಹಿಬರ ನಿವಾಸದಲ್ಲಿ ಬ್ರೈನ್ ವಾಷ್ ಮಾಡಿ ಸಮಸ್ತದ ಬಿರುಕಿನ ಪ್ರಥಮ ಹಂತದ ಯೋಜನೆ ಹಾಕಿದರು. 60 ನೇ ವಾರ್ಷಿಕದಲ್ಲಿ ರಾಜಕಾರಣಿಗಳ ವಿರುದ್ಧ ಕೆಚ್ಛೆದೆಯಿಂದ ಘರ್ಜಿಸಿದ್ದ   E.K ಉಸ್ತಾದರ ನಿಲುವು ಆದರ್ಶದಲ್ಲಿ ಚಂಚಲವುಂಟಾದ ಕೆಲವೊಂದು ಕಾರ್ಯ ವೈಕರಿಗಳಾಗಿತ್ತು 1985 ರ ನಂತರದ ಬೆಳವಣಿಗೆಯಲ್ಲಿ ಕಂಡು
ಬಂದದ್ದು. ರಾಜಕಾರಣಿಗಳಿಗೆ ಸ್ವಾಗತ ಹಾಡಿದ ಖೇದಕರವಾದ ಘಟನೆಗಳು ಉಂಟಾಯಿತು. [ಈ ವೇಳೆ ಎ.ಪಿ.ಉಸ್ತಾದರಿಗೆ ಎದುರಾಗಿ ಕಾರ್ಯಾಚರಿಸುವ ಒಂದು ಗುಂಪೇ ಈ.ಕೆ.ಉಸ್ತಾದರ ಬಳಿಯಿತ್ತು] ಸಮಸ್ತದ ಪೂರ್ವಕಾಲದ ತೀರ್ಮಾನಕ್ಕೆ ವಿರುದ್ಧವಾದರು E. K ಉಸ್ತಾದ್.
1. 1985 ರಲ್ಲಿ ಶಾಬಾನ ಪ್ರಕರಣಕ್ಕೆ ಸಂಬಂಧಪಟ್ಟ ಕಾರ್ಯಗಳು.
2. ಐಕ್ಯವೇದಿಕೆಯ ಬಲೆಗೆ ಬಿದ್ದರು.  3. ಐಕ್ಯವೇದಿಗೆ ಬೆಂಬಲಿಸದವರನ್ನು ಮುನಾಫಿಕರನ್ನಾಗಿ ಚಿತ್ರೀಕರಿಸಿದರು. 4. ಸಂವಾದಗಳನ್ನು ಕಡೆಗಣಿಸಿದರು.
5. ನವೀನವಾದಿಗಳೊಂದಿಗೆ ನಯವಾಗಿ ವರ್ತಿಸಿದರು. (ಮದರಸ ಪಠ್ಯ ಪುಸ್ತಕ ವಿವದ)
6. ಜನರಲ್ ಬೋಡಿ ಕರೆಯದೇ ದಶ ವರ್ಷಗಳಷ್ಟು ಕಾಲ ಮುಂದುವರಿದರು. ಮುಂತಾದ ಬಹುತೇಕ ನಯಪರವಾದ ವೈಕಲ್ಯತೆಗಳು E.K ಉಸ್ತಾದರಲ್ಲಿ ಉಂಟಾಯಿತು. ನಂತರ ಕೊನೆಯ ಕ್ಷಣದಲ್ಲಿ ಅವರು ಖೇದ ಪ್ರಕಟಿಸಿದರು. *ಸಮಸ್ತಯುಡೆ ಯೋಜಿಪ್ಪು ಶಂಸುಲ್ ಉಲಮಯುಡೆ ಅಂದ್ಯಾಭಿಲಾಷಂ* ಎಂಬ ಶೀರ್ಷಿಕೆಯಲ್ಲಿ ಚಂದ್ರಿಕಾದಲ್ಲಿ ಬಂದ ಲೇಖನ ಇದರ ಕುರಿತಾಗಿತ್ತು. ಅಲ್ಲಾಹು ಅವರಿಗೆ ಮಗ್ಫಿರತ್ ಮರ್ಹಮತ್ ಕರುಣಿಸಲಿ, ಪದವಿ ಉನ್ನತಿಗೇರಿಸಲಿ.

ಯೂ ಟರ್ನ್  ಹೊಡೆದ ಸಮ್ಮೇಳನ 1985 ರಿಂದ 1989 ರ ತನಕ ಸಮಸ್ತದಲ್ಲಿ ಕೋಲಾಹಲ ನಿತ್ಯವಾಗಿತ್ತು.  1989 ಜನವರಿಯಲ್ಲಿ SYS  ಸಮ್ಮೇಳನ ಎರ್ನಾಕುಳಂನಲ್ಲಿ ನಡೆಸುವುದಾಗಿ ತೀರ್ಮಾನಿಸಿದ್ದು ಇದೇ ಸಮಸ್ತವಾಗಿತ್ತು. ಸಮ್ಮೇಳನ ನಡೆದರೆ ದೊಡ್ಡ ಹೊಡೆತ ನಮಗಿದೆಯೆಂದರಿತ ವಹ್ಹಾಬಿಗಳು ಜೀವ ತೆತ್ತಾದರೂ ಸಮ್ಮೇಳನವನ್ನು ತಡೆಯಬೇಕೆಂದು ಆಗ್ರಹಿಸಿ ಅದಕ್ಕಾಗಿ E.K ಉಸ್ತಾದರನ್ನು ಭೇಟಿಯಾದರು (ಆ ಸಮಯ ಈ.ಕೆ ಉಸ್ತಾದ್ ಅವರತ್ತ ವಾಲಿದ್ದರು). ಪರಿಣಾಮವಾಗಿ ನಾಟಿಗ ಮೂಸ ಮೌಲವಿಯ ನೇತೃತ್ವದಲ್ಲಿ ಮಧ್ಯ ಕೇರಳದಲ್ಲಿ ಸಮಾಂತರ ಸಮ್ಮೇಳನ ನಡೆಸಲು ಆಗ್ರಹಿಸಿ ಇದರಿಂದ ಅಧಿಕೃತ ಸಂಘಟನೆ SYS  ನಡೆಸುವ ಸಮ್ಮೇಳನವನ್ನು ತಡೆಯಲು E.K ಉಸ್ತಾದ್ ಶ್ರಮಿಸಿದರು. ಇದನ್ನು SYS  ಪ್ರಶ್ನಿಸಿ ಎದುರಾಳಿಗಳನ್ನು ಸದೆಬಡಿಯುತ್ತಾ ವ್ಯತ್ಯಸ್ಥ ಪ್ರಚಾರದೊಂದಿಗೆ SYS  ಮುಂದಡಿಯಿಟ್ಟಿತು.
        ಲೀಗಿಗೆ ತಲೆನೋವು ಶುರುವಾಗಿ ಯಾವುದೇ ಬೆಲೆ ತೆತ್ತಾದರೂ SYS  ಸಮ್ಮೇಳನವನ್ನು ತಡೆಯಲು ಯೋಜನೆ ಹಾಕಿದರು.ಇದಕ್ಕಾಗಿ  E.K ಉಸ್ತಾದರನ್ನು ಲೀಗ್ ಆಫೀಸಿಗೆ ಕರೆತಂದು ಸಯ್ಯಿದ್ ಉಮರ್ ಬಾಫಖಿ ತಂಙಳರವರ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯಲ್ಲಿ E.K ಉಸ್ತಾದರ ಮುಂದೆ ಎರಡು ನಿಭಂದನೆಗಳನ್ನಿಟ್ಟರು.
1. SYS ನ್ನು ಅಧಿಕೃತವಾಗಿ ವಿಸರ್ಜಿಸಬೇಕು.
2. AP ಉಸ್ತಾದರನ್ನು ಅವರ ಅನುಯಾಯಿಗಳನ್ನು ಸಮಸ್ತದಿಂದಲೇ ಕಿತ್ತೊಗೆಯಬೇಕು. ಈ ಎರಡು ನಿಭಂದನೆಗಳನ್ನೂ E.K ಉಸ್ತಾದ್ ಸ್ವೀಕರಿಸಿದರು. (ಇದರ ಮುಂದುವರಿದ ಭಾಗವಾಗಿ) ತುರ್ತು ಸಭೆಯನ್ನು ಕರೆಯುವುದಾಗಿ ತೀರ್ಮಾನಿಸಲಾಯಿತು. ಸದಸ್ಯರಲ್ಲಿ ತನ್ನ ಇಂಗಿತವನ್ನು ಸ್ವೀಕರಿಸುವವರನ್ನು ಮಾತ್ರ ಕರೆದು ಗುಪ್ತವಾಗಿ ಸೇರಲುದ್ದೇಶಿಸಿದ ಸಭೆಯ ಪಲಿತಾಂಶವನ್ನು ಮುಂಚಿತವಾಗಿಯೇ ಅರಿತ ಬಹು TC ಉಸ್ತಾದ್ ನ್ಯಾಯಾಲಯದಲ್ಲಿ ಸ್ಟೇ ಹಾಕಿದರು [ಎ.ಪಿ ಗಳು ಕಣ್ಣಿಯತ್ ಉಸ್ತಾದರಿಗೆ ವಿರುದ್ಧ ಕೇಸು ದಾಖಲಿಸಿದವರು ಎಂದು ಹೇಳುವುದು ಇದನ್ನೇ]. ಇದರಿಂದಾಗಿ ಮುಶಾವರ ಸೇರಲು ಅಸಾಧ್ಯಯವಾಯಿತು. ಸ್ಟೇ ಮುಗಿಯಿತು. ಜನರಲ್ ಬೋಡಿ ಕರೆಯಬೇಕೆಂಬ ನೆಪದೊಂದಿಗೆ ಸಮ್ಮೇಳನದ ಎರಡು ದಿವಸ ಮುಂಚೆ ಮುಶಾವರ ಸೇರಲಾಯಿತು. ಅದೇನೋ ಒಂದು ಅದ್ಭುತ ವರ್ತನೆಯಾಗಿತ್ತು EK ಉಸ್ತಾದರದ್ದು. ಜನರಲ್ ಬೋಡಿ ನಡೆಸಬೇಕೆಂಬ ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ಅಂದಿನ ತನಕ ವಿರೋಧಿಸುತ್ತಿದ್ದ ಮಹಲ್ಲ್ ಫೆಡರೇಶನ್ ರೂಪೀಕರಣ ತೀರ್ಮಾನವನ್ನು ಸೆಕ್ರೆಟರಿ EK ಉಸ್ತಾದ್ರವರೆ ಘೋಷಿಸಿದರು. [SYS ನ್ನು ವಿಸರ್ಜಿಸುವ ಮೊದಲ ಮೆಟ್ಟಿಲಾಗಿತ್ತು ಇದು] ಮುಂದಿನ ಭಾಗವಾಗಿ ಮಿನಿಟ್ಸ್ ಪುಸ್ತಕದಲ್ಲಿ ಬರೆದದ್ದಕ್ಕೂ, ಬರೆಯಲಿರುವುದಕ್ಕೂ ಎನಗೆ ಸಮ್ಮತ ಕೊಡಬೇಕೆಂದು ಆಗ್ರಹಿಸಿದರು. ಆದರೆ ಈ ಅಭಿಪ್ರಾಯವನ್ನು ಜೊತೆ ಕಾರ್ಯದರ್ಶಿ ಕಾಂತಪುರಂAP ಉಸ್ತಾದ್ ಪ್ರಶ್ನಿಸಿದರು. ಸಮಸ್ತ ಅಧಿಕೃತ ಪಂಡಿತ ಸಭೆಯಾಗಿರುವಾಗ ಮಿನಿಟ್ಸಲ್ಲಿರುವುದನ್ನು ಸಭೆಗೆ ಕಾಣಿಸಿ, ಮಿನಿಟ್ಸ್ ಕಾರ್ಯಾಚರಣೆಗಳು ಪೂರ್ಣಗೊಳಿಸಿ ಎಲ್ಲಾ ಸದಸ್ಯರ ಅಂಗೀಕಾರ ಪಡೆಯಬೇಕೆಂಬ ನ್ಯಾಯವನ್ನು ಆಗ್ರಹಿಸಿದರು. ಹಾಗಾದರೆ ನಾನು ಹೇಳಿದ ಅಭಿಪ್ರಾಯವನ್ನು ಅಂಗೀಕರಿಸಬೇಕು ಅದಕ್ಕೆ ಸದಸ್ಯರ ಬಹುಮತವಿದೆಯೆಂದು EK ಉಸ್ತಾದ್ ವಾದಿಸಿದರು. ತಕ್ಷಣ ತಾಜುಲ್ ಉಲಮಾ (ಪದವಿ ಉನ್ನತಿಗೇರಿಸಲಿ) ಸತ್ಯಕ್ಕೆ ಎದುರಾಗಿ 99% ಜನರು ವಾದಿಸಿದರೆ ಸತ್ಯ ಅಸತ್ಯವಾಗುತ್ತದೆಯೇ ಎಂದು ಕೇಳುತ್ತಾ ಸಭಾತ್ಯಾಗ ಮಾಡಿ ಹೊರಗಿಳಿದು ಬಂದರು. ಬಹುಮಾನ್ಯರೊಂದಿಗೆ ಕಾಂತಪುರಂ ಸಹಿತ 10 ಜನ ಇಳಿದು ಬಂದರು [ಅವತ್ತು ಸಭೆಯಲ್ಲಿ ಇದ್ದದ್ದು ಕೇವಲ ಕೇವಲ 23 ಜನ ಸದಸ್ಯರು]. ನಂತರ SYS ಸಮ್ಮೇಳನ ನಡೆಸಬಾರದೆಂದು ಸಮಸ್ತ ಘೋಷಿಸಿ ಲೀಗಿನ ಕರೆಯೊಂದಿಗೆ ಚಂದ್ರಿಕಾ ಈ ವಾರ್ತೆ ರಿಪೋರ್ಟ್ ಮಾಡಿತು. ಆದರೆ ಇದಕ್ಕೆ ಸೊಪ್ಪು ಹಾಕದ ಸುನ್ನಿ ಮಕ್ಕಳ ಜನ ಸಾಗರ ಎರ್ನಾಕುಳಂ ಸಮ್ಮೇಳನ ನಗರಿಯತ್ತ ಹರಿಯ ತೊಡಗಿತು. ಮುಂದುವರಿದು 1989 ಮಾರ್ಚ್ 5 ರಂದು ಸಮಸ್ತದ ಅಧಿಕೃತ ಜನರಲ್ ಬೋಡಿ ಹಾಗೂ ಪುನರ್ ರೂಪೀಕರಣ [ಸಮಸ್ತ ಬೇರೆ ಹೊಸದಾಗಿ ಮಾಡಿದ್ದಲ್ಲ] ನಡೆಯಿತು.

      ತಾಜುಲ್ ಉಲಮಾ ಸಯ್ಯಿದ್ ಅಬ್ದುಲ್ ರಹಿಮಾನ್ ಅಲ್ ಬುಖಾರಿ ಉಳ್ಳಾಲ ತಂಙಳ್ ಅಧ್ಯಕ್ಷರಾಗಿ ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಜನರಲ್ ಸೆಕ್ರೆಟರಿಯಾಗಿ ಹೊಸ ಸಮಿತಿ ರಚಿಸಲಾಯಿತು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ವಿಭಜನೆಯ ಸಂದರ್ಭ ಇದ್ದ ಎಲ್ಲಾ ಅಂಗ ಸಂಘಟನೆಗಳು [SYS  SSF  SMA  ಮುಂತಾದವುಗಳು], ಸಿರಾಜ್, ಸುನ್ನೀ ವೋಯಿಸ್, ಸುನ್ನತ್ತ್, ರಿಸಾಲ ಸಹಿತವಿರುವ ಎಲ್ಲಾ ಮುಖವಾಣಿಗಳು ಸಮಸ್ತದೊಂದಿಗಾಯ್ತು [ಸಮಸ್ತದ ಹಸಿರು ಗುಂಬಝ್ ಇರುವ ಫ್ಲಾಗ್ ಕೂಡ ಈ ಸಮಸ್ತಕ್ಕೆ ಸೇರಿತು].

ವಿಭಜನೆಯ ನಂತರ: ಪುಣ್ಯ ಸಮಸ್ತವನ್ನು ಎರಡು ತುಂಡಾಗಿ ಮಾಡಿದರೂ ರಾಜಕೀಯ ವಹ್ಹಾಬಿ ಪಾದ್ರಿಗಳು ಸುಮ್ಮನಿರಲಿಲ್ಲ. ಒಂದು ತುಂಡಿ[EK]ಗೆ ಹೂ ಹಾರ ಹಾಕಿ ಲಾಲಿಸಿದರೆ ಮತ್ತೊಂದು[AP]ತುಂಡನ್ನು, ಅದರ ನೇತಾರನನ್ನು ವಿಮರ್ಶನೆಯ ಹಿಮಾಲಯವನ್ನೇ ಪ್ರಯೋಗಿಸುತ್ತಾ ವಿರೋಧಿಸಿದರು.
1. "ಅರಿವಾಳ್ ಸುನ್ನಿ" ಎಂಬ ಆಕ್ಷೇಪ.
2. ಚೇಗನ್ನೂರ್ ಕೇಸ್.
3. ಓ ರಾಜಗೋಪಾಲ ಮತ್ತು 1 ಕೋಟಿ ರೂಪಾಯಿ.
4. ಸುನ್ನಿ ಕಾರ್ಯಕರ್ತರ ಕೊಲೆ.
5. ಮದರಸ ಮಸೀದಿಗಳನ್ನು ಕಬಳಿಸುವಂತಹಾ ಬಹುತೇಕ ಅಗ್ನಿ ಪರೀಕ್ಷೆಯನ್ನು ಎದುರಿಸಿಯಾಗಿದೆ ಪುಣ್ಯ ಸಮಸ್ತ ಗಜಗಾತ್ರವಾಗಿ ನಮಗೆ ತಲುಪಿದ್ದು. ವಿಭಜನೆಯ ನಂತರದ ಲಾಭಗಳು:
1. ರಾಜಕೀಯದ ಕುರಿತು ಅರಿವು ಇರುವ ಸನ್ನದ್ದ ಪಡೆಯಾದರು ಸುನ್ನಿಗಳು.
2. ದಿಕ್ಕು ತೋರಿಸುವ, ನಿಯಂತ್ರಿಸಲರ್ಹವಾದ ಒಂದು ಲೀಡರ್ ಸಿಕ್ಕಿತು.
3. ಇತಿಹಾಸದ ಅರಿವಿನಲ್ಲಿ ಹಿನ್ನಡೆಯಿದ್ದ ಸುನ್ನಿಗಳು ಶೈಕ್ಷಣಿಕ ಕ್ರಾಂತಿ ಮಾಡಿದರು.
4. ಧಾರ್ಮಿಕ ಪಂಡಿತರಿಗೆ ಸಮೂಹದೆಡೆಯಲ್ಲಿ ಪ್ರಾಧಾನ್ಯತೆ ಕಲ್ಪಿಸಲ್ಪಟ್ಟಿತು.
5. ಸಂಘಟನೆ ಸಂವಿಧಾನ ಬಲಿಷ್ಠವಾಯಿತು.
6. ಆದರ್ಶ [ಸುನ್ನೀಸಂ] ಧೈರ್ಯದಿಂದ ಹೇಳಲು ಅನುಕೂಲವಾಯಿತು.
7. ಈ ಅದ್ಭುತ ಬೆಳವಣಿಗೆ ಶತ್ರುಪಾಳಯಕ್ಕೆ ನಿರಾಶೆಯುಂಟಾಯಿತು.
8. ಕಳಂಕವಿಲ್ಲದ ನೈಜ ಸುನ್ನಿ ಎನ್ನುವ ಅವಕಾಶ ಒದಗಿತು.

●ಮಲಯಾಳಂ
■ಅಬ್ದುಲ್ ಮಜೀದ್ ಇರ್ಫಾನಿ

No comments:

Post a Comment