Saturday, October 14, 2017

*ಮರಣಸ್ಮರಣೆ*

*ಎಲ್ಲವೂ ರೆಡಿಯಾಗಿದೆ....ಎಲ್ಲವೂ....*

*ನನ್ನ ಸ್ನಾನ ಮಾಡಿಸಲಿಕ್ಕಿರುವ ನೀರು ಬಾವಿಯ ಆಳದಲ್ಲಿ ಕಾಯುತ್ತಾ ಇದೆ!*

*ಮಲಗಲಿಕ್ಕಿರುವ  ಮಂಚ ಮಸೀದಿ ವರಾಂಡದಲ್ಲಿ  ಹಗ್ಗದಿಂದ  ತೂಗು ಹಾಕಲಾಗಿದೆ.ಅದರ ಕರ್ಪೂರದ ವಾಸನೆ ಇನ್ನೂ ಮಾಸಿಲ್ಲ.*

*ನನ್ನನ್ನು ಸ್ನಾನ ಮಾಡಿಸುವ ವ್ಯಕ್ತಿಗಳು ನನ್ನ ಜೊತೆಗೆ ಓಡಾಡುತ್ತಾ ಇದ್ದಾರೆ!*

*ನನ್ನ ಕಫನ್ ವಸ್ತ್ರ ಸಮೀಪದ ಅಂಗಡಿಯಲ್ಲಿ ನನಗಿಂತ ಮೊದಲೇ ರೆಡಿಯಾಗಿ ನನ್ನನ್ನು ಕಾಯುತ್ತಾ ಇದೆ!*

*ನನ್ನನ್ನು ಹೊತ್ತೊಯ್ಯುವ ಯುವಕರು ನನ್ನ ಮುಂದೆಯೇ ಹಾದು ಹೋಗುತ್ತಿದ್ದಾರೆ!*

*ಹುಟ್ಟಿದಾಗಲೇ ಬಾಂಗ್ ಇಕಾಮತ್ ಕೊಟ್ಟು ನನ್ನ ಜನಾಝ ನಮಾಜ್ ಮಾಡಲಿಕ್ಕಾಗಿ ಜನರು ರೆಡಿಯಾಗಿ ನಿಂತಿದ್ದಾರೆ!*

*ಶಾಶ್ವತವಾಗಿ ಮಲಗಲಿಕ್ಕಿರುವ ಮಣ್ಣು ಆರಡಿ ಆಳದಲ್ಲಿ ನನ್ನ ಕಾಯುತ್ತಾ ಇದೆ !*

*ನನ್ನ ಮೇಲೆ ಮಣ್ಣು ಹಾಕುವ  ಊರಿನವರು,ಕುಟುಂಬಿಕರು ನನ್ನ ಜೊತೆಯಲ್ಲೇ ಇದ್ದಾರೆ!*

*ನೀರು ಚಿಮುಕಿಸಿ ಒದ್ದೆ ಮಾಡಿ  ನನ್ನ ಗಲ್ಲದಡಿ ಇಡಲಿಕ್ಕಿರುವ ಮಣ್ಣು ನನ್ನ ಕಾಲಿನಡಿಯಲ್ಲೇ ಹೊರಳಾಡುತ್ತಿದೆ !*

*ಕೊನೆಗೆ ಕಬರಿನ ಮೇಲೆ ನಾಟಲಿಕ್ಕಿರುವ ಮದರಂಗಿಯ ಕೊಂಬೆ ನನ್ನ ಮನೆ ಮುಂದೆಯೇ ಬೆಳೆಯುತ್ತಲಿದೆ!*

*ಎಲ್ಲವೂ ಎಲ್ಲರೂ ರೆಡಿಯಾಗಿದ್ದಾರೆ !......ನನಗಾಗಿ....!!*

*ನಾನು ಮಾತ್ರ ಇನ್ನೂ ರೆಡಿಯಾಗಲೇ ಇಲ್ಲ!*

*ಎಲ್ಲವೂ  ತಿಳಿದಿದೆ... ಆದರೆ ನಾನು ಇದ್ಯಾವುದೂ ಗೊತ್ತೇ ಇಲ್ಲದಂತೆ ನಟಿಸುತ್ತಿದ್ದೇನೆ!!*

*ನನ್ನನ್ನು  ನಾನು ವಂಚಿಸುತ್ತಿದ್ದೇನೆ!!*

*ಎಷ್ಟು ದಿವಸ ಈ ವಂಚನೆಯ ಆಯುಷ್ಯಾ!?*

*ಅಲ್ಲಾಹು ಈಮಾನ್ ಸಲಾಮತ್ ಮಾಡಲಿ ಆಮೀನ್*
-ಅಬೂಶಝ

ಪ್ರೇರಣೆ ಮಲಯಾಳ.

No comments:

Post a Comment