Saturday, October 14, 2017

*ಮಹಾತ್ಮರುಗಳನ್ನು ನಿಂದಿಸಿದವರನ್ನು ನಾಯಿಗೆ ಉಪಮಿಸಿದ ಪವಿತ್ರ ಕುರ್ ಆನ್*
🍾🍾🍾🍾🍾🍾🍾🍾
ಮೂಸಾ ನಬಿಯವರ ಕಾಲದಲ್ಲಿ ಜೀವಿಸಿದ್ದ ದೊಡ್ಡ ವಿದ್ವಾಂಸನಾಗಿದ್ದನು ಬಲ್ ಅಮ್ ಬಿನ್ ಬಾಊರಾ.
ಆತ ಮೂಸಾ ನಬಿಯವರಿಗೆ ವಿರುದ್ಧವಾಗಿ ಕಾರ್ಯಾಚರಣೆಗೆ ಇಳಿದಾಗ ಕುರ್ ಆನ್ ಆತನ ಬಗ್ಗೆ ಹೇಳಿತು
*مثله كمثل الكلب*
*ಆತನ ಉಪಮೆಯು ನಾಯಿಯ ಉಪಮೆಯಂತಾಗಿದೆ*.

ಬಲ್ ಅಮನನ್ನು ಕುರ್ ಆನ್ ನಾಯಿಗೆ ಹೋಲಿಸಿದೆ.

ಅದೇ ರೀತಿ ಬೀದಿ ನಿಂದಕರನ್ನು ಇಮಾಂ ಶಾಫೀ (ರ)ರವರು ನಾಯಿಗೆ ಉಪಮಿಸಿದ್ದಾರೆ.
قل بما شئت في مسبة عرضي
فسكوتي عن اللئيم جواب

ما انا عادم الجواب ولكن
ما من الاسد ان تجيب الكلاب
*ನೀನು ನನ್ನ ಮಾನ ಹಾನಿ ಮಾಡುವುದರಲ್ಲಿ ಏನು ಬೇಕಾದರೂ ಹೇಳು, ನೀಚರಿಗೆ ಉತ್ತರ ಹೇಳದೆ ಮೌನ ವಹಿಸುವುದೇ ನಾನು ನೀಡುವ ಉತ್ತರ.*
*ನಿನ್ನ ಆಕ್ಷೇಪಗಳಿಗೆ ಉತ್ತರ ಇಲ್ಲದವನಲ್ಲ ನಾನು. ಆದರೆ ಬೊಗಳುವ ನಾಯಿಗಳಿಗೆ ಸಿಂಹ ಉತ್ತರಿಸುವುದಿಲ್ಲ ತಾನೆ?*

ಇಲ್ಲಿ ಬೀದಿ ನಿಂದಕರನ್ನು  ಇಮಾಂ ಶಾಫೀ (ರ) ರವರು ನಾಯಿಗಳಿಗೆ ಹೋಲಿಸಿದ್ದಾರೆ.

ಇದೇ ರೀತಿ ನಮ್ಮ ಉಲಮಾಗಳನ್ನು ಬೀದಿ ಬದಿಯಲ್ಲಿ ಅವಹೇಳಿಸುವ ಮತ್ತು ನಿಂದಿಸುವ ಬೀದಿಭಾಷಣಗಾರರನ್ನು  ತೋಕೆ ಉಸ್ತಾದರು ನಾಯಿಗಳಿಗೆ ಹೋಲಿಸಿದ್ದಾರೆ.

ತೋಕೆ ಉಸ್ತಾದರು ಯಾರ ಹೆಸರೆತ್ತದೆಯೇ ಬೀದಿ ನಿಂದಕರನ್ನು ನಾಯಿಗೆ ಹೋಲಿಸಿದಾಗ ಕೆಲವರು ನಾವೇ ಆ ನಾಯಿಗಳೆಂಬ ರೀತಿಯಲ್ಲಿ ಈಗ ಬೊಗಳುತ್ತಿರುವುದು ಸ್ವತಹ ಅವರೇ ನಾಯಿಗಳೆಂದು ಸಮ್ಮತಿಸಿರುವುದಕ್ಕೆ ಸಮಾನವಾಗಿದೆ.

ಇನ್ನು ಉಸ್ತಾದರು *ತಂದ ಇಲ್ಲಾತವರ್* ಎಂದು ಹೇಳಿದ್ದು ಯಾವುದೇ ಅಧಿಕೃತ ಸಂಘಟನೆಯಲ್ಲಿ ಇಲ್ಲದವರು ಎಂಬ ಅರ್ಥದಲ್ಲಾಗಿದೆಯೆಂದು ಚಿಕ್ಕ ಮಕ್ಕಳಿಗೂ ತಿಳಿದ ವಿಚಾರವಾಗಿದ್ದರೂ ಕೆಲವು ಕಳ್ಳ ತರೀಕತ್ ನವರಿಗೆ ಅದರರ್ಥ ತಿಳಿಯದೇ ಹೋದದ್ದು  ಇವರಿಗೆ ಮಕ್ಕಳ ಅರಿವು ಕೂಡಾ ಇಲ್ಲ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.

ಒಟ್ಟಿನಲ್ಲಿ ತೋಕೆ ಉಸ್ತಾದರ ನಿನ್ನೆಯ ಭಾಷಣ ಕಳ್ಳ ತರೀಕತ್ ಗಾರರಿಗೆ ಮರ್ಮಾಘಾತವನ್ನು ನೀಡಿದೆ ಎಂಬುದಂತೂ ಸತ್ಯ.

*ರಿಪೋರ್ಟ್*

No comments:

Post a Comment