೭.ಸಲಫಿ ಪ್ರಸ್ಥಾನದ ಭೀಕರ ರೂಪ
ಒಂದು ದಿನ ಪ್ರವಾದಿ(ಸ.ಅ)ರು ಶ್ಯಾಮಿಗೂ ಯಮನಿಗೂ ಬರಕತ್ತಿಗಾಗಿ ಪ್ರಾರ್ಥಿಸುತ್ತಾರೆ. ಆಗ ನಜ್ದ್ ಪ್ರದೇಶದವರು ಬಂದು ತಮ್ಮ ಪ್ರದೇಶಕ್ಕೆ ಪ್ರಾರ್ಥಿಸುವಂತೆ ವಿನಂತಿಸುತ್ತಾರೆ. ಆಗ ಪ್ರವಾದಿ(ಸ.ಅ)ರು ಹೇಳುತ್ತಾರೆ, ಆ ಪ್ರದೇಶದಲ್ಲಾಗಿದೆ ಶೈತಾನನ ಕೊಂಬು ಉದಯಿಸುವುದು. ಅಲ್ಲಿ ಫಿತ್ನಗಳು ನಾಶಗಳು ಉಂಟಾಗಲಿವೆ (ಬುಖಾರಿ 6681). ನಜ್ದ್ ನಲ್ಲಿ ಜನಿಸಲಿರುವ ವ್ಯಕ್ತಿಯ ಭೀಕರತೆಯನ್ನು ಸೂಚಿಸಲಿಕ್ಕಾಗಿತ್ತು ಪ್ರವಾದಿ(ಸ.ಅ)ರು ಕೊಂಬು ಎನ್ನುವ ಪ್ರಯೋಗವನ್ನು ನಡೆಸಿರುವುದು. ಚರಿತ್ರೆಯನ್ನು ಪರಿಶೋಧಿಸಿದಾಗ ಸಲಫಿ ಪಂಗಡದ ಸ್ಥಾಪಕನಾದ ಮಹಮ್ಮದ್ ಇಬ್ನು ಅಬ್ದುಲ್ ವಹ್ಹಾಬ್ ಕ್ರಿ.ಶ.1703 ಹಿ.1115ರಲ್ಲಿ ನಜ್ದ್ ನಲ್ಲಿ ಜನಿಸಿದರು. ಈ ವಿಷಯವನ್ನು ಕೇರಳ ಜಮಾಅತೇ ಇಸ್ಲಾಮಿ ಪ್ರಸಿದ್ದೀಕರಿಸಿದ ಶೈಖ್ ಇಬ್ನು ಅಬ್ದುಲ್ ವಹ್ಹಾಬ್ ಎಂಬ ಪುಸ್ತಕದ ೪ನೇ ಪುಟದಲ್ಲಿ ವಿವರಿಸಲಾಗಿದೆ.
ಒಮ್ಮೆ ನಬಿ(ಸ.ಅ)ರು ಗನೀಮತ್ ಸಂಪತ್ತನ್ನು ಅರ್ಹರಿಗೆ ನ್ಯಾಯಯುತವಾಗಿ ಹಂಚುತ್ತಿದ್ದಾಗ ದುಲ್-ಖುವೈಶಿರತ್ ಎಂಬ ವ್ಯಕ್ತಿಯು ನಬಿ(ಸ.ಅ)ರಿಗೆ ಹೇಳುತ್ತಾರೆ ಓ ಮುಹಮ್ಮದರೇ ನೀವು ನ್ಯಾಯ ಪಾಲಿಸಬೇಕು. ನೀತಿಯ ಪರ್ಯಾಯವಾದ ನಬಿ(ಸ.ಅ)ರೊಂದಿಗೆನೆ ನ್ಯಾಯ ಪಾಲಿಸಬೇಕೆಂದು ಹೇಳಿದ ಆ ವ್ಯಕ್ತಿಯನ್ನು ವಧಿಸಲು ಉಮರ್(ರ.ಅ) ಪ್ರವಾದಿ(ಸ.ಅ)ರೊಂದಿಗೆ ಸಮ್ಮತಿಯನ್ನು ಕೇಳಿದಾಗ, ಪ್ರವಾದಿ(ಸ.ಅ) ಹೇಳುತ್ತಾರೆ ಉಮರೇ, ಅವರಿಗೆ ತುಂಬಾ ಅನುಯಾಯಿಗಳು ಬರಲಿದ್ದಾರೆ. ಅವರಿಗೆ ಕುರಾನ್ ಮುಖ್ಯ ವಿಷಯವಾಗಿರುತ್ತದೆ. ಅವರು ನಮಾಜ್ ನಿರ್ವಹಿಸುತ್ತಾರೆ, ಅವರು ಗಡ್ಡ ಬೆಳೆಸುತ್ತಾರೆ, ಅವರು ವೃತ ಆಚರಿಸುತ್ತಾರೆ ಆದರೆ ಅವರ ವಿಶ್ವಾಸವು ಅವರ ಗಂಟಲಿನಾಚೆಗೆ ತಲುಪುವುದಿಲ್ಲ(ಬುಖಾರಿ 6534).
ಪ್ರವಾದಿ(ಸ.ಅ)ರ ಮುನ್ನೆಚ್ಚರಿಕೆಯಂತೆ ಇದೇ ದುಲ್-ಖುವೈಶಿರತ್ ಎಂಬ ವ್ಯಕ್ತಿಯ ಸಂತಾನ ಪರಂಪರೆಯ ೧೬ನೇ ವ್ಯಕ್ತಿಯಾಗಿದ್ದಾನೆ ಸಲಫಿ ಪ್ರಸ್ಥಾನದ ಸ್ಥಾಪಕ ಇಬ್ನು ಅಬ್ದುಲ್ ವಹ್ಹಾಬ್. ಈತನ ಜನನವು ಪ್ರವಾದಿ(ಸ.ಅ)ರು ಶೈತಾನನ ಕೊಂಬು ಉದಯಿಸಲಿದೆ ಎಂದು ಎಚ್ಚರಿಕೆ ನೀಡಿದ ನಜ್ದ್ ನ ಸಬೇದ್ ಎಂಬ ಪ್ರದೇಶದಲ್ಲಾಗಿತ್ತು.
ಇನ್ನು ಭಾರತದಲ್ಲಿ ಪ್ರಥಮ ಬಾರಿಗೆ ಮಾಲಿಕುದೀನಾರ್(ರ.ಅ)ರವರ ನೇತೃತ್ವದಲ್ಲಿ ಹತ್ತು ಸ್ವಹಾಬಿಗಳು ಕೇರಳದ ವಿವಿಧ ಭಾಗಗಳಲ್ಲಿ ಹತ್ತು ಮಸೀದಿಗಳನ್ನು ನಿರ್ಮಿಸಿ ಇಸ್ಲಾಂ ಧರ್ಮಕ್ಕೆ ಚಾಲನೆ ನೀಡಿದ್ದರು. ಪ್ರವಾದಿ(ಸ.ಅ)ರ ಕಾಲದಲ್ಲಾಗಿತ್ತು ಅದು. ಪ್ರವಾದಿ(ಸ.ಅ)ರ ಜೀವನ ಶೈಲಿಯನ್ನು ಅನುಕರಿಸಿದವರಾಗಿದ್ದರು ಆ ಸ್ವಹಾಬಿಗಳು. ನಾವು ಗಮನಿಸಬೇಕಾದ ಅಂಶವೇನೆಂದರೆ ಆ ಸ್ವಹಾಬಿಗಳು ತಾವು ನಿರ್ಮಿಸಿದ ಮಸೀದಿಗಳಲ್ಲಿ ಮಳಯಾಲದಲ್ಲಿ ಖುತುಬಾ ನಿರ್ವಹಿಸಲೋ, ಸ್ತ್ರೀಯರು ಜುಮಾ ನಮಾಜ್ಗೆ ಬರಬೇಕೆಂದೊ ಕರೆ ನೀಡಲಿಲ್ಲ.
ಇನ್ನು ಸಲಫಿ ಪ್ರಸ್ಥಾನದ ನೇತಾರರು ಜನಿಸಿದ್ದು ಪ್ರವಾದಿ(ಸ.ಅ)ರು ಜನಿಸಿ ಸುಮಾರು ಸಾವಿರ ವರ್ಷಕ್ಕಿಂತಲೂ ಹೆಚ್ಚು ಕಾಲದ ನಂತರವಾಗಿತ್ತು. ಆದರೆ ಸುನ್ನಿಗಳು ಅಂಗೀಕರಿಸುವ ೪ ಮದ್ಸ್ಹಬ್ನ ಇಮಾಮರುಗಳು ಪ್ರವಾದಿ(ಸ.ಅ)ರು ಪ್ರಥಮ ಮೂರು ಶತಮಾನಗಳು ಉತ್ತಮ ಶತಮಾನಗಳೆಂದು ವಿಶ್ಲೇಷಿಸಿದ ಶತಮಾನಗಳಲ್ಲಿ ಜನಿಸಿ ಜೀವಿಸಿ ಮರಣಹೊಂದಿದವರಾಗಿದ್ದಾರೆ. ಇಮಾಂ ಶಾಫೀ(ರ.ಅ) ಯಮನಿನಲ್ಲಿ ಮುದರ್ರಿಸರಾಗಿದ್ದರು. ಯಮನ್ ದೇಶದ ವಿಶೇಷತೆಯಾಗಿ ಪ್ರವಾದಿ(ಸ.ಅ)ರು ಹೇಳುತ್ತಾರೆ "ಈಮಾನ್" ಯಮನಿನಲ್ಲಾಗಿದೆ (ಬುಖಾರಿ ೪೧೨೮). ಇಮಾಂ ಅಬೂಹನೀಫಾ(ರ.ಅ) ತಮ್ ಜೀವನದಲ್ಲಿ ಕೆಲವೊಂದು ಸ್ವಹಾಬಿಗಳನ್ನು ದರ್ಶಿಸಿದವರಾಗಿದ್ದರು.
ತಮ್ಮ ಪೈಶಾಚಿಕವಾದ ಆಶಯಗಳನ್ನು ಭಿತ್ತರಿಸಿ ಲೋಕ ಮುಸಲ್ಮಾನರ ವಿಶ್ವಾಸವನ್ನು ನಾಶಪಡಿಸಲು ಹೊರಟಿರುವ ಸಲಫಿ ಪ್ರಸ್ಥಾನವನ್ನು ಬೇರು ಸಮೇತ ಕಿತ್ತೊಗೆಯಲು ನಾವು ಪಣತೊಡಬೇಕಾಗಿದೆ. ಪ್ರವಾದಿ(ಸ.ಅ)ರು ಕಲಿಸಿದ ಆಶಯ ಆದರ್ಶಗಳೊಂದಿಗೆ, ಸ್ವಹಾಬಿಗಳನ್ನು, ಮದ್ಸ್ಹಬ್ ಇಮಾಮರುಗಳನ್ನು ಅಂಗೀಕರಿಸಿ, ಸುನ್ನತ್ ಜಮಾಅತಿನ ಆಲಿಮ್ ಗಳೊಂದಿಗೆ ಕೈಜೋಡಿಸಿ ನೈಜ ಮುಸ್ಲಿಮರಾಗಿ ಜೀವಿಸಿ ಈಮಾನಿನೊಂದಿಗೆ ಮರಣ ಹೊಂದಲು ಅಲ್ಲಾಹು ನಮಗೆ ತೌಫೀಕ್ ನೋಡಲು... ಆಮೀನ್...
No comments:
Post a Comment