*ಪ್ರವಾದಿ(ಸ)ರನ್ನು ನಿಂದಿಸಿದ ಆಧುನಿಕ ಅಬೂಜಹಲರಿಗೆ ಬೀಳುತ್ತಿದೆ ಚಪ್ಪಲಿಯೇಟು*
ಒಂದು ಕಾಲಕ್ಕೆ ಔಲಿಯಾಗಳನ್ನು ವೇದಿಕೆ ಕಟ್ಟಿ ಬಹಿರಂಗವಾಗಿ ಅವಹೇಳನ ಮಾಡಿದ, ಪ್ರವಾದಿಯವರನ್ನು ಸಾಮಾನ್ಯ ವ್ಯಕ್ತಿಯೆಂದು ಹೇಳಿ ನಿಂದಿಸಿದ ಪೆದಂಬು ವಹಾಬಿಗಳಿಗೆ ಈಗ ಮಾದ್ಯಮಗಳಿಂದ ಹಾಗೂ ಪ್ರಜ್ಞಾವಂತ ನಾಗರಿಕರಿಂದ ಚಪ್ಪಲಿಯೇಟು ಬೀಳುತ್ತಿದೆ. ಸಮುದಾಯದ ಯುವಕರಿಗೆ ಧರ್ಮದ ನಶೆಯೇರಿಸಿ ಅವರಿಗೆ ಉಗ್ರವಾದವನ್ನು ಕಲಿಸಿದ ವಹಾಬಿಗಳ ಮರ್ಮಕ್ಕೆ ಈಗ ಭಯಂಕರ ಪೆಟ್ಟು ಬೀಳುತ್ತಿದೆ. ಒಂದೆಡೆ ಇದೇ ಸಲಫಿಗಳಂತೆ ಕೋಮುವಾದವನ್ನು ಬಿತ್ತುವ ಸಂಘಿಗಳ ವಿರುದ್ದ ಹೋರಾಡುವವರು ನಾವು ಎನ್ನುವ ಈ ಘನಂದಾರಿಗಳು ಸಂಘಿಗಳಿಗಿಂತಲೂ ಅಪಾಯಕಾರಿ. ಸಮಾಜದಲ್ಲಿ ನಡೆಯುವ ಎಲ್ಲಾ ಅಹಿತಕರ ಘಟನೆಗಳ ಹಿಂದೆಯೂ ಇವರ ಕಾಣದ ಕೈ ಕೆಲಸ ಮಾಡಿರುವುದು ಖಚಿತ. ಮುಸ್ಲಿಂ ಸಮುದಾಯಕ್ಕೆ ಶಾಪವಾಗಿ ಪರಿಣಮಿಸಿರುವ ಈ ಖಟ್ಟರ್ ಧರ್ಮಾಂಧರ ವಿರುದ್ದ ಹಲವು ಕಾಲದಿಂದ ಮುಸ್ಲಿಮ್ ವಿದ್ವಾಂಸರು ಕಠಿಣವಾದ ನಿಲುವನ್ನು ತೆಳೆಯುತ್ತಾ ಬಂದಿದ್ದಾರೆ. ಆದರೆ ಕೆಲವು ಸಮುದಾಯ ಸುಧಾರಕರೆನಿಸಿಕೊಂಡ ಕೆಲವು ಪಟ್ಟಭಧ್ರಹಿತಾಸಕ್ತಿಗಳು ಮಾತ್ರ ಈ ಸಲಫಿಸಂಗೆ ಎಲ್ಲಾ ರೀತಿಯ ನಿಷ್ಠೆಯನ್ನು ತೋರಿಸಿ ಇದನ್ನು ಬೆಳೆಸುತ್ತಿದ್ದಾರೆ.
ಇಂದು ಜಾಗತಿಕವಾಗಿ ನೋಡುವುದಾದರೆ ಈ ವಹ್ಹಾಬಿಗಳು ನಡೆಸಿದ, ಮತ್ತು ನಡೆಸುತ್ತಿರುವ ರಾದ್ದಾಂತಗಳೇನು ಕಮ್ಮಿಯದ್ದಲ್ಲ. ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಇವರು ಐಸಿಸ್, ಇಖ್ವಾನ್, ಅಲ್ ಖೈದಾ, ಬೋಕೋಹರಂ ಮುಂತಾದ ವಿವಿಧ ಹೆಸರುಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರಾದರೂ ಇವರೊಳಗೆ ಬೇಯುತ್ತಿರುವುದು ಮಾತ್ರ ಕಟ್ಟಾ ವಹ್ಹಾಬಿಸಂ..
ಭಾರತದಲ್ಲಿ ಇಸ್ಲಾಮಿಗೆ ಸಾವಿರದ ನಾನೂರಕ್ಕಿಂತಲೂ ಅಧಿಕ ಕಾಲದ ಹಿನ್ನಲೆಯಿದೆ. ಆದರೆ ಇಬ್ನು ಅಬ್ದುಲ್ ವಹಾಬನ ಶನಿ ಸಂತಾನವಾದ ವಹಾಬಿಸಂ ಹಾದು ಬಂದದ್ದು 1921ರಲ್ಲಿ. ಈ ವಹ್ಹಾಬಿಸಂ ದೇಶದಲ್ಲಿ ನಡೆಸಿದ ರಾದ್ದಾಂತಗಳು ಸಣ್ಣದ್ದಲ್ಲ. ಆದರೆ ಅಂದೇ ಉಲಮಾಗಳು ಇವರ ವಿರುದ್ದ ಚಳುವಳಿಯನ್ನು ನಡೆಸಿದ್ದರಲ್ಲದೆ ಸಮಸ್ತವೆಂಬ ಉಲಮಾ ಸಂಘಟನೆಯನ್ನೂ ಸ್ಥಾಪಿಸಿ ಇವರ ಉಗ್ರವಾದ, ನಶೀಕರಣವಾದವನ್ನು ಸಮುದಾಯಕ್ಕೆ ಮನದಟ್ಟು ಮಾಡಲು ಪ್ರಯತ್ನಿಸಿದರು. ಆದರೆ ಸಮುದಾಯವು ಉಲಮಾಗಳ ಮಾತನ್ನು ಎಲ್ಲಿ ಗಾಳಿಗೆ ತೂರಿತೋ ಅದರ ಪರಿಣಾಮವನ್ನು ಇಂದು ಚೆನ್ನಾಗಿಯೇ ಅನುಭವಿಸುತ್ತಿದೆ. ಈ ವಹ್ಹಾಬಿಗಳ ವಿರುದ್ದ ಇನ್ನಾದರೂ ಧರ್ಮ, ಪಂಥ, ನಂಬಿಕೆ ಮರೆತು ನಾವೆಲ್ಲರೂ ಹೋರಾಡಬೇಕಾಗಿದೆ. ಸಿಡಿದೇಳಬೇಕಾಗಿದೆ.
*-ಹಿತಾಕಾಂಕ್ಷಿ*
No comments:
Post a Comment