Saturday, October 14, 2017

*ಮುಸ್ಲಿಮರು ಶವಗಳೆಂದು ತಿಳಿಯಬೇಡಿ*

*ಮಂಗಳೂರುSEDC ಶರೀಅತ್ ಸಮ್ಮೇಳನದಲ್ಲಿ   ಶಾಫಿ ಸಹದಿ ಗುಡುಗು*

ಮುಸ್ಲಿಮರ ವಿರುದ್ದ ರಾಜ್ಯದ ವ್ಯವಸ್ಥೆಯು ಮೂಕ ಮೌನ ಪಾಲಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದ್ದು,ಮುಸ್ಲಿಂ ಸಮೂಹವು ಬಹಳ ಭಯಭೀತಿಯ ವಾತವರಣದಲ್ಲಿ ಜೀವಿಸುತ್ತಿದೆಯೆಂದು ಶಾಪಿ ಸಹದಿ ಅಭಿಪ್ರಾಯಪಟ್ಟರು.
ಅಮಾಯಕರ ಕೊಲೆಗಳು ಮುಸಲ್ಮಾನರನ್ನೇ ಗುರುಯಾಗಿಸಿ,ನೀತಿ ನ್ಯಾಯ ಒದಗಿಸಬೇಕಾದ ನ್ಯಾಯಾಲಯದ ತೀರ್ಪುಗಳು ಹೊರಬರುವ ಮೊದಲೇ ಅವರಿಗೆ ಗತಿತೋರಿಸುವ ಷಡ್ಯಂತ್ರಗಳನ್ನು ನಮ್ಮಿಂದ ನೋಡುತ್ತಾ ಇರಲು ಸಾದ್ಯವಿಲ್ಲ.
ಮುಸಲ್ಮಾನರೂ ಕೇವಲ ಶವಗಳೆಂದು ಗ್ರಹಿಸಬೇಡಿ.ಮುಸ್ಲಿಂ ಸಮುದಾಯ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದು ಯಾರನ್ನು ಅಧಿಕಾರದಲ್ಲಿ ಏರಿಸಬೇಕು ಕೆಳಗಿಸಬೇಕೆಂದು ಮುಸಲ್ಮಾನರು ತೀರ್ಮಾನಿಸುವಷ್ಟು ಶಕ್ತರೆಂದು ಗುಡುಗಿದ ಶಾಫಿಸಹದಿಯವರು ಮುಸಲ್ಮಾನರನ್ನು ತುಳಿಯುವ ಕಾರ್ಯಕ್ಕೆ ಯಾರೂ ಕೈಹಾಕಬೇಡಿ ಎಂದು ಎಚ್ಚರಿಕೆ ಕೊಟ್ಟರು.
ನಾಸರ್ ಮದನಿಯವರಿಗೆ ಜಾಮೀನು ಲಭಿಸಿದ್ದರೂ ಅವರ ಸ್ವಂತ ನಾಡನ್ನು ಕಾಣಲು ಅಡ್ಡಿಯಾಗುವಂತಹ ಇಲ್ಲಿನ ವ್ವವಸ್ಥೆ ಬದಲಾವಣೆಯಾಗಲೇ ಬೇಕೆಂದು ಆಗ್ರಹಿಸಿದ ಶಾಫಿ ಸಹದಿ ಉಸ್ತಾದ್ ನಾವು ಯಾವುದೇ ರಾಜಕೀಯದ ಪರವಿರೋಧ ನಿಲ್ಲುವವರಲ್ಲವೆಂದು ನೆನಪಿಸಿದರು.
ಆದರೆ ಮುಸ್ಲಿಮರ ವಿರುದ್ದ ನಡೆಯುವ ಷಡ್ಯಂತ್ರಗಳನ್ನು ಕಂಡುಕಾಣದಂತೆ ನಟಿಸುವವರಿಗೆ ತಕ್ಕ ಪಾಠ ಮುಸ್ಲಿಂ ಸಮುದಾಯ ಕಲಿಸಿಯೇ ತೀರುತ್ತದೆ ಎಂದು ಅವರು ಕಿವಿಮಾತು ಹೇಳಿದರು.
- ಅಬೂಶಝ

No comments:

Post a Comment