*ಮತ್ತೊಮ್ಮೆ ಬೆತ್ತಲೆಯಾದ ಸಳಪಿ!!*
*ಪರಂಗಿಪೇಟೆಯಲ್ಲಿ ಮುಖಾಮುಖಿ ನಡೆಯಲಿಲ್ಲ ನಡೆದಿದ್ದರೆ ಏನಾಗುತಿತ್ತು?*
*ಏಟು ----- ತಿರುಗೇಟು*
*--------------------------*
ಮುಖಾಮುಖಿ ಆರಂಭವಾಯಿತು ಬೆಳಿಗ್ಗೆಯಿಂದಲೇ ರೆಡಿಯಾಗಿ ಬಂದ ಮಲ್ಲಿ ಸಖಾಫಿ 🎤ಮೈಕ್ ಕೈಗೆತ್ತಿ ಹೇಳಿದರು.
ಸತ್ಯನ್ವೇಷಿ ಸಳಪಿ ಸಹೋದರರೆ ಇಸ್ಲಾಂ ಎಂಬುದು ಅಲ್ಲಾಹು ಅವನ ಪ್ರವಾದಿ ಯಾದ ಮುಹಮ್ಮದ್ ಮುಸ್ತಫ(ಸ)ರವರ ಮೂಲಕ ಕಲಿಸಿದ 1400ವರ್ಷಗಳಷ್ಟು ಹಳೆಯ ಧರ್ಮವಾಗಿದೆ. ಆದರೆ ಇಂದು ಈ ವಹ್ಹಾಬಿ ಮೌಲವಿಗಳೆಂದು ಕರೆಯುವ 👺ಗಳು ಕಲಿಸುವ ಇಸ್ಲಾಂ ಧರ್ಮವನ್ನೊಮ್ಮೆ ಪರೀಕ್ಶಿಸಿ ನೋಡೊಣ ಇನ್ಷಾಅಲ್ಲಾ....
ನೆರೆದವರಲ್ಲಿ ಅನೇಕರು 'ಆಗಲಿ' ಎಂದು ದ್ವನಿಗೂಡಿಸಿದರು. ಅವರ ಆವೇಶ ಕಂಡು ಮಲ್ಲಿ ಸಖಾಫಿ ಮಾತು ಮುಂದುವರೆಸಿ ಹೇಳಿದರು.
ಈಗ ನಾವು ನೊಡೊಣ ಇಂದು ನಮ್ಮ ಸಳಪಿ ಮೌಲವಿಗಳು👺 ಕಲಿಸುವ ಇಸ್ಲಾಂ ಅದು ಪ್ರವಾದಿಗಳು ಹೇಳಿದಂತ ಸತ್ಯ ಮಾರ್ಗದಲ್ಲಿದೆಯೇ ಎಂದು ಒಂದೊಂದಾಗಿ ಪರಿಕ್ಶಿಸೋಣ ಇನ್ಷಾ ಅಲ್ಲಾ...👇
*⏩ನಂ1,ಮಲಯಾಳ ಖುತುಬಾ*
ತುರ್ಕಿಯ ಕಮಾಲ್ ಪಾಷಾ ಎಂಬ ಯಹೂದಿ ಏಜೆಂಟ್ ಪ್ರಪಥಮವಾಗಿ ಅನರಬಿ ಖುತುಬಕ್ಕೆ ಚಾಲನೆ ಕೊಡುತ್ತಾನೆ.
ನೆಬಿ ಮತ್ತು ಸಹಾಬಿಗಳು ಅರಬಿಯಲ್ಲೇ ಖುತುಬಾ ನಿರ್ವಹಿಸಿದ್ದು ಕೇರಳಕ್ಕೆ ಬಂದು ಹತ್ತು ಮಸೀದಿ ನಿರ್ಮಿಸಿದ ಸಹಾಬಿಗಳು ಕೂಡಾ ಅರಬಿಯಲ್ಲೇ ಖುತುಬಾ ನಿರ್ಹಿಸಿದ್ದು,ಅವರು ಯಾರೂ ಅನರಬಿ ಖುತುಬಾ ನಡೆಸಲಿಲ್ಲ.
ಇಷ್ಟು ಹೇಳುವಾಗಲೇ ಮೈಕ್ ಕಸಿದುಕೊಳ್ಳಲಾಯಿತು!
ತಟ್ಟನೆ ಝೀರೋ ಸಳಪಿ ಮೈಕ್ ಪೋಯಿಂಟ್ ಗೆ ಬಂದು ಹೇಳಿದ
🎨📝ಶಾಫಿಈ ಮದ್ ಹಬ್ ನ ಗ್ರಂಥವಾದ ಮಹಲ್ಲಿಯಲ್ಲಿ ಹೀಗಿದೆ:
"ಖುತುಬಾ ಜನರಿಗೆ ತಿಳಿಯುವಂತೆ ಸುಂದರವೂ, ಮಾನ್ಯವೂ ಹಾಗೂ ಅದರ ವಾಕ್ಯಗಳು ಮತ್ತು ಆಶಯಗಳು ಸ್ಫುಟವಾಗಿ ಇರಬೇಕಾದುದು ಸುನ್ನತ್ತಾಗಿದೆ. ಹಾಗಾದರೆ ಮಾತ್ರ ಅದು ಹೃದಯಗಳೊಳಗೆ ತಾಗುವುದು. ಸರಳವೂ, ಆಲಸ್ಯತೆಯುಂಟು ಮಾಡುವ ಅತೀ ಕಠಿಣವಾದ ಶಬ್ದಗಳಿಲ್ಲದೂ ಆಗಿರಬೇಕು. ಹಾಗಾದರೆ ಮಾತ್ರವೇ ಹೆಚ್ಚಿನ ಜನರಿಗೆ ಅದು ತಿಳಿಯುವುದು."
[ಮಹಲ್ಲಿ: 1/282]
ಮೈಕ್ ಮಲ್ಲಿ ಸಖಾಪಿಯ ಕೈಗೆ ಸಿಕ್ಕಿದ್ದೇ ತಡ ಅವರು ಜೋರಾಗಿ ನಗುತ್ತಾ ಹೇಳಿದರು👇
☝☝☝😀😀😂
ಸಳಪಿಯ ಗತಿಗೇಡು ನೋಡಿ ಯಾವುದೇ ವಿಷಯ ಕೇಳಿದರೂ ಅದು ಹದೀಸಿನಲ್ಲಿ ಉಂಟಾ? ಆಯತ್ ಉಂಟಾ? ಕೇಳುವ ಸಳಪಿ ತನ್ನ ಮಲಯಾಳ ಖುತುಬಾ ಕ್ಕೆ ಪುರಾವೆಯಾಗಿ ಒಂದೇ ಒಂದು ಹದೀಸ್ ಅವನ ಬಳಿ ಇಲ್ಲ. ಅಂದರೆ ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಅನರಬಿ ಭಾಷೆಯಲ್ಲಿ ಖುತುಬಾ ನಿರ್ವಹಿಸಿದ ಒಂದೇ ಒಂದು ಆಧಾರ ಇಲ್ಲ.ಜಗತ್ತಿನ ವಿವಿಧ ಕಡೆ ಇಸ್ಲಾಮಿನ ಪ್ರಚಾರಕರಾಗಿ ಹೋದ ಸಹಾಬಿಗಳು ಆಯಾ ಪ್ರದೇಶದ ಭಾಷೆಯಲ್ಲಿ ಖುತುಬಾ ನಿರ್ವಹಿಸಿದ ಒಂದೇ ಒಂದು ಚರಿತ್ರೆ ಇಲ್ಲ.even ಕೇರಳಕ್ಕೆ ಬಂದು ಹತ್ತು ಮಸೀದಿ ಕಟ್ಟಿ ಇಸ್ಲಾಂ ಪ್ರಚಾರ ಮಾಡಿದ ಸಹಾಬಿಗಳು ಕೂಡಾ...
ಕಾರಣವೇನು?
ಜುಮಾ ಖುತುಬಾ ಆರಾದನೆಯಾಗಿದೆ.ಆರಾದನೆಯ ಭಾಷೆ ಅರಬಿಯಾಗಿರಲು ಕಡ್ಡಾಯವಾಗಿದೆ.
ನೆಬಿ ಕಲಿಸಿದ ನಮಾಜು ಬಾಂಗ್ ನಂತಹ ಎಲ್ಲಾ ಕರ್ಮಗಳು ಅರಬಿಯಲ್ಲೇ ಆಗಬೇಕು.
ಮಲ್ಲಿ ಸಖಾಫಿಯ ಪಟಪಟನೆಯ ಉತ್ತರ ಕೇಳಿ ಸೇರಿದ ಸಳಪಿಗಳು ದಂಗಾದರು.
ಮೈಕ್ ಕಸಿಯಲು ನೋಡಿದರು ಆದರೆ ಸಖಾಫಿ ಮೈಕ್ ಬಿಟ್ಟು ಕೊಡದೆ ಮತ್ತೂ ಮುಂದುವರೆಸಿದರು...
ಓ ನನ್ನ ಮಿತ್ರರೇ... ಇಲ್ಲಿ ಗಮನಿಸಿ..
*ಜುಮಾ ಖುತುಬಾ ಸುಂದರವೂ ತಿಳಿಯುವಂತಾಗಿರಬೇಕೆಂಬುದು ಸುನ್ನತ್. but ಖುತುಬಾದಲ್ಲಿ ಅರಬಿ ಭಾಷೆ ಕಡ್ಡಾಯ! ಕಡ್ಡಾಯ!! ಕಡ್ಡಾಯ!!*
ಕಾರಣ👇
*لانها عبادة*
*ಜುಮುಅ ಖುತುಬಾ ಆರಾದನೆಯಾಗಿದೆ.*
(ಕೇವಲ ಲೋಕಲ್ ಪ್ರಭಾಷಣ ಅಲ್ಲ.)
*افتقرت الي ذكر الله تعالي فافتقرت الي ذكر رسوله صلى الله عليه وسلم كالاذات والصلاة*
(تحفة 2/446)
ನಮಾಜು ಮತ್ತು ಅಝಾನ್ ನಂತೆ ಅಲ್ಲಾಹನ ನಾಮ ಮತ್ತು ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹಿವಸಲ್ಲಮರ ನಾಮವೆತ್ತುವ ಅಗತ್ಯ ಇದ್ದಂತೆ ಖುತುಬಾದಲ್ಲಿಯೂ ಅದು ಅಗತ್ಯವಾಯಿತು.
(ಸಂಕ್ಷಿಪ್ತವಾಗಿ ಹೇಳುವುದಾದರೆ ನಮಾಜು ಅಝಾನ್ ಇಬಾದತ್ ಆದಂತೆ ಜುಮಾ ಖುತುಬಾ ಕೂಡಾ ಆರಾದನೆಯಾಗಿದೆ.ಆರಾದನೆಗಳಲ್ಲಿ ಅರಬಿ ಕಡ್ಡಾಯ.)
*ಪ್ರವಾದಿ (ಸ.ಅ) ರಿಗೆ ಎರಡು ಖುತ್ಬಗಳಿದ್ದವು.(ಅವು ಅರಬಿಯಲ್ಲಾಗಿದ್ದವು) ಅವುಗಳ ಮಧ್ಯೆ ಅವರು ಕುಳಿತುಕೊಳ್ಳುವರು, ಕುರ್ ಆನ್ ಪಾರಾಯಣಗೈಯ್ಯುವರು ಮತ್ತು ಜನರಿಗೆ ಉಪದೇಶ ನೀಡುವರು."*
(ಎಲ್ಲದರಲ್ಲೂ ಅರಬಿ ಭಾಷೆ ಯ್ಯೂಝ್ ಮಾಡುತ್ತಿದ್ದರು)
[ಸಹೀಹ್ ಮುಸ್ಲಿಮ್ ಹದೀಸ್ ನಂ: 862]
ಮಲ್ಲಿ ಸಖಾಫಿಯ ದಿಟ್ಟ ಉತ್ತರದಿಂದ ಕಂಗೆಟ್ಟ ಝೀರೊ ಸಳಪಿ ಉತ್ತರವಿಲ್ಲದೆ ಪರದಾಡಿದ.
ಅವನು ಶಬ್ದವೆತ್ತದೆ ಸುಮ್ಮನೆ ನಿಂತು ನೋಡುವುದನ್ನು ಗಮನಿಸಿದ ಸಖಾಫಿ ಎರಡನೇ ವಿಷಯ ಮಂಡಿಸಿದರು👇👇
*⏩ ನಂ2,ತರಾವೀಹ್ ಎಂಟು ರಕಾತ್*
👉73 ಪಾರ್ಟಿಯಲ್ಲಿ ಒಂದು ಪಾರ್ಟಿ ಮಾತ್ರ ಸ್ವರ್ಗಕ್ಕೆ ಅದು ನೆಬಿ ಮತ್ತು ಸಹಾಬಿಗಳನ್ನು ಅನುಸರಿಸಿದವರು.
ಹಾಗಾಗಿ ಮುತ್ತು ನೆಬಿಯವರ ಸಹಾಬಿ ಉಮರ್ ಬಿನ್ ಖತ್ತಾಬ್ 20 ರಕಾತ್ ನಿರ್ವಹಿಸಿ ನಮಗೆ ತೋರಿಸಿ ಕೊಟ್ಟಿದ್ದಾರೆ.
ಆದರೆ ಸಳಪಿಗಳು ಉಮರ್ (ರ) ದಾರಿಯನ್ನು ಈ ವಿಷಯದಲ್ಲಿ ತಳ್ಳಿದ್ದಾರೆ.
ವಹ್ಹಾಬಿಸಂ ನರಕದ ಪಾರ್ಟಿ ತಾನೇ?
ಅದನ್ನು ಎಲ್ಲಾ ಮುಸ್ಲಿಮರು ತಳ್ಳಬೇಕು.ಎಂದು ಸಖಾಫಿ ಘರ್ಜಿಸಿದಾಗ ಝೀರೋ ಸಳಪಿಯ ಪಿತ್ತ ನೆತ್ತಿಗೇರಿತ್ತು.ಕೂಡಲೇ ಮೈಕ್ ತೆಗೆದು ಬೊಬ್ಬಿಟ್ಟ..
ಏ ಕುರಾಫಿ ಮುಸ್ಲಿಯಾರೇ..
?ಅಬೂಸಲಮತ್ತ್(ರ)ನಿವೇದನೆ: ಹದೀಸ್ ಇಲ್ಲವೇ?
ಅವರು ಆಯಿಶಾ(ರ)ರವರೊಂದಿಗೆ ಕೇಳಿದರು:
ಪ್ರವಾದಿ(ಸ)ರವರ ರಮಾದಾನ್ ನ ರಾತ್ರಿ (ತರಾವಿ)ಹೇಗಿತ್ತು ? ಆಗ ಆಯಿಶಾ (ರ)ಹೇಳಿದರು :ಪ್ರವಾದಿ(ಸ)ರವರು ರಮದಾನಿನಲ್ಲು ಅಲ್ಲದ ಕಾಲದಲ್ಲೂ ಹನ್ನೊಂದು ರಕಾತ್ತಿಗಿಂತ ಹೆಚ್ಚು ವರ್ದಿಸುತ್ತಿರಲಿಲ್ಲ;(ಸ್ವಹೀಹುಲ್ ಬುಖಾರಿ 2013,ಸ್ವಹೀಹ್ ಮುಸ್ಲಿ 738)
ಸಳಪಿ ಈ ಹದೀಸನ್ನು ಓದಿದಾಗ ಸಖಾಫಿಗೆ ನಗು ತಡೆಯಲಾಗಲಿಲ್ಲ..
ತಟ್ಟನೆ ಮೈಕ್ ತೆಗೆದು ಹೇಳಿದರು👇
☝ಸಳಪಿಯ ಮೆದುಳಿನಲ್ಲಿ ಸೆಗಣಿ ಮಾತ್ರ ಇದೆ ಎಂಬುದಕ್ಕೆ ಮೇಲೆ ಅವನು ತರಾವೀಹ್ 8 ಎಂಬುದಕ್ಕೆ ಕೊಟ್ಟ ಹದೀಸೇ ದಾರಾಳ.ಕಾರಣ ಅದರಲ್ಲಿ ರಮಾಳಾನಿನಲ್ಲೂ ಅಲ್ಲದ ಕಾಲದಲ್ಲೂ ಹನ್ನೊಂದು ರಕಾತಿಗಿಂತ ಹೆಚ್ಚು ವರ್ದಿಸುತ್ತಿರಲಿಲ್ಲ ಎಂದಿದೆ. (ಬುಖಾರಿ ಹದೀಸ್)
ನಿಜವಾಗಿಯೂ ಇದು ವಿತ್ರ್ ನಮಾಜಿನ ಕುರಿತು ಕೇಳಿದ ಪ್ರಶ್ನೆಯಾಗಿತ್ತು.ಕಾರಣ ರಮಳಾನ್ ಮಾಸ ಮತ್ತು ಇತರ ಮಾಸಗಳಲ್ಲಿ ಎಂದು ಕೇಳುವಾಗಲೇ ಅದು ತರಾವೀಹ್ ಅಲ್ಲ ಎಂದು ಸ್ಪಷ್ಟ ತಾನೇ? ಕಾರಣ ತರಾವೀಹ್ ಎಂಬುದು ರಮಳಾನ್ ನ ಸ್ಪೆಷಲ್ ನಮಾಜು. ಆದರೆ ಸಳಪಿ ಅದನ್ನು ತರಾವೀಹ್ ಎಂದು ದುರ್ವ್ಯಖ್ಯಾನ ಮಾಡಿ ವಂಚಿಸುತ್ತಾನೆ.
*ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಎಷ್ಟು ರಕಾತ್ ತರಾವೀಹ್ ನಿರ್ವಹಿಸಿದರೆಂದು ಸಹಾಬಿಗಳ ನಡುವಳಿಕೆಯಿಂದ ಅರಿತು ಕೊಳ್ಳಬೇಕು.ಅವರು ಇಪ್ಪತ್ತು ರಕಾತ್ ನಿರ್ವಹಿಸಿದರೆಂದು ಸಾಬೀತಾದರೆ ಅದುವೇ ತರಾವೀಹ್ ನ ಸಂಖ್ಯೆಯಾಗುತ್ತದೆ.ಸಹಾಬಿಗಳು ನಿರ್ವಹಿಸಿದ ಮೇಲೆ ಪ್ರವಾದಿಗಳು ಕೂಡಾ ಅಷ್ಟೇ ಸಂಖ್ಯೆಯ ತರಾವೀಹ್ ನಿರ್ವಹಿಸಿದ್ದಾರೆಂದು ದೃಢಪಡುತ್ತದೆ.ಕಾರಣವೇನಂದರೆ ಸಹಾಬಿಗಳು ಖುದ್ದಾಗಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರಿಂದಲೇ ಧರ್ಮವನ್ನು ಕಲಿತ ವ್ಯಕ್ತಿಗಳಾಗಿದ್ದಾರೆ.ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು 8ರಕಾತ್ ಮಾಡಿದರು ಅದಕ್ಕೆ ವಿರುದ್ದವಾಗಿ ಸಹಾಬಿಗಳು 20 ರಕಾತ್ ಮಾಡಿ ಸಡ್ಡು ಹೊಡೆದರು ಎಂದು ನಂಬಲಿಕ್ಕೆ ಯಹೂದಿ ಎಜೆಂಟ್ ಗಳಾದ ಸಳಪಿಗೆ ಮಾತ್ರ ಸಾದ್ಯ.* ಕಾರಣ👇
*ان عمر رضي الله عنه لما جمع الناس علي ابي بن كعب كان يصلي لهم عشرين ركعة*
(مغني لابن قدامة ١/٤٣٨)
*ಉಮರ್ (ರ) ರವರು ತರಾವೀಹ್ ನಮಾಝನ್ನು ಓರ್ವ ಇಮಾಮರ ನೇತೃತ್ವದಲ್ಲಿ ಜಮಾಅತ್ತಾಗಿ ನಿರ್ವಹಿಸುವ ವ್ಯವಸ್ಥೆಯನ್ನು ಜಾರಿಗೆ ತಂದಾಗಲೂ 20 ರಕಾತ್ ಗಳನ್ನೇ ನಿರ್ವಹಿಸಲಾಗಿತ್ತು.*
ಆದ್ದರಿಂದಲೇ ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಪದೇ ಪದೇ ಎಚ್ಚರಿಕೆ ಕೊಡುತ್ತಿದ್ದರು ನನ್ನನ್ನು ನನ್ನ ಸಹಾಬಿಗಳನ್ನು ಅನುಸರಿಸಿರಿ.ಅವರನ್ನು ಹಿಂಬಾಲಿಸಿದರೆ ಮಾತ್ರ ನಿಮಗೆ ಸನ್ಮಾರ್ಗದಲ್ಲಿ ಚಲಿಸಲು ಸಾದ್ಯ.ನನ್ನ ಸಮುದಾಯ 73 ಪಾರ್ಟಿಯಾಗಿ ಎಲ್ಲವೂ ನರಕಕ್ಕೆ ಹೋಗುವಾಗ ನನ್ನನ್ನು ಮತ್ತು ನನ್ನ ಸಹಾಬಿಗಳನ್ನು ಹಿಂಬಾಲಿಸಿದವರು ಮಾತ್ರ ಸ್ವರ್ಗಕ್ಕೆ ಹೋಗುವರು ಎಂದು ರಸೂಲುಲ್ಲಾ ಡಿಕ್ಲೆರ್ ಮಾಡಿರುವಾಗ. 20ರಕಾತ್ ನಿರ್ವಹಿಸಿದ ಉಮರ್ (ರ) ಸಹಿತ ಲಕ್ಷಾಂತರ ಸಹಾಬಿಗಳನ್ನು ತಳ್ಳಿ ಎಂಟಕ್ಕೆ ಗಂಟು ಬಿದ್ದ ಸಳಪಿ ಪಾರ್ಟಿಯನ್ನು ಅಪ್ಪಿ ಹಿಡಿದವರು ನರಕಕ್ಕೆ ಎಂಬುದರಲ್ಲಿ ಸಂಶಯ ಇದೆಯಾ?
ಎಂದು ಸಖಾಫಿ ಏರಿದ ದ್ವನಿಯಲ್ಲಿ ಕೇಳಿದಾಗ
ಸೇರಿದವರಲ್ಲಿ ಅನೇಕ ಜನರು ಇಲ್ಲ ಇಲ್ಲ ಎಂದು ಹೇಳುತ್ತಾ ಸಖಾಫಿಯ ಬೆಂಬಲಕ್ಕೆ ನಿಂತರು ಝೀರೋ ಸಳಪಿ ಏನೂ ಹೇಳುವಂತಿರಲಿಲ್ಲ.ಅಷ್ಡೊಂದು ಕರಾರುವಕ್ಕಾಗಿತ್ತು ಸಖಾಫಿಯ ವಿವರಣೆ.
ಇದಕ್ಕೂ ಉತ್ತರವಿಲ್ಲದೆ ಸಳಪಿ ಆಕಾಶ ದಿಟ್ಟಿಸಿವುದನ್ನು ಗಮನಿಸಿದ ಸಖಾಫಿ ಮುಂದುವರೆದು ಹೇಳಿದರು.👇
*⏩ನಂ3,ಮಹಿಳೆಯರ ಮಸೀದಿ ಪ್ರವೇಶ*
ಕೇವಲ 50ವರ್ಷದ ಮುಂಚೆ ಆರಂಭಿಸಿದ ಬಿದ್'ಅತ್.
ಕೇರಳದ ಗದಾಯಿ ಎಂಬ ಪ್ರದೇಶದಲ್ಲಿ ಪ್ರಪಥವಾಗಿ ಆಯಿಶ್ಶು ತಾತ ಫಾತಿಮ ತಾತ ಪಳ್ಳಿಗೆ ಹೋಗುವ ಈ ಅನಾಚಾರಕ್ಕೆ ಚಾಲನೆ ನೀಡಿದರು.
ನೆಬಿ ಕಲಿಸಿದ್ದು ಮಹಿಳೆಯರಿಗೆ ಅವರ ಮನೆ ಉತ್ತಮ.ಆದರೆ ಸಳಪಿಗೆ ಮಸೀದಿ ಉತ್ತಮ
ಎಲ್ಲವೂ ಉಲ್ಟಾ!
ಇವಾಗ ಸಳಪಿಯ ಮುಖದಲ್ಲಿ ಕಿರುನಗೆ ಮಿಂಚಿ ಮಾಯವಾಯಿತು.ಕಾರಣ ಈ ವಿಷಯದಲ್ಲಿ ನುಬುವ್ವತಿನ ಆರಂಭ ಘಟ್ಟದಲ್ಲಿ ಬಂದ ನೂರಾರು ಹದೀಸುಗಳು ಇದೆ ತಾನೇ? ಹಾಗೆಯೇ ಸಳಪಿ ಒಂದು ಹದೀಸ್ ಹೇಳಿದ👇
🎨📝عن سالم عن ابيه عن النبي صلا لله عليه وسلم(إذااستأذنت امرآت آحدكم الئ المسجد فلائمنعها) (صحيح البخاري رقم-٥٢٣٨
ಸಾಲಿಂ (ರ)ರವರಿಂದ :ಅವರು ತನ್ನ ತಂದೆ ಯಿಂದ ವರದಿ:ಪ್ರವಾದಿ(ಸ ಅ)ರವರು ಹೇಳುವೂದನ್ನು ನಾನು ಆಲಿಸಿದ್ದೇನೆ "ನಿಮ್ಮ ಪೈಕಿ ಯಾರಾದರೊಬ್ಬರ ಪತ್ನಿ ಮಸೀದಿ ಗೆ ತೆರಳಲು ಅನುಮತಿ ಕೇಳಿದರೆ ಅವನು ಆಕೆಯನ್ನು ತಡೆಯ ಕೂಡದು !"(ಸಹೀಹುಲ್ ಬುಖಾರಿ ನ೦ ,5238 )
ಇದು ಕೇಳಿದ ಕೂಡಲೇ ಸಖಾಫಿ ಇದನ್ನು ಸೂಪರಾಗಿ ಖಂಡಿಸುತ್ತಾ ಹೇಳಿದರು👇
☝ಇಂತಹ ಡಜನ್ ಗಟ್ಟಲೆ ಹದೀಸುಗಳನ್ನು ಕಂಡ ಇಮಾಂಗಳ ಫತ್ವಾ ಹೀಗಿದೆ.
لا يتوقف في منعهن الا غبي جاهل قليل البضاعة في معرفة اسرار الشريعة......................... اخ
*" ಶರೀಅತ್ತಿನ ಬಾಹ್ಯಾರ್ಥವನ್ನು ಮಾತ್ರ ಮೈಗೂಡಿಸಿಕೊಂಡು ಅದರ ರಹಸ್ಯಗಳನ್ನು ಅರಿತುಕೊಳ್ಳುವಷ್ಟು ಜ್ಞಾನವಿಲ್ಲದ ಮೂರ್ಖ(ಸಳಪಿಗಳು) ಅಲ್ಲದೆ ಬೇರೆ ಯಾರೂ ಮಹಿಳೆಯರನ್ನು ತಡೆಯಬೇಕೆಂಬ ಕಾರ್ಯದಲ್ಲಿ ಸಂಶಯಪಡಲಾರರು.ಆದುದರಿಂದ ಸ್ತ್ರೀಯರ ರಂಗಪ್ರವೇಶ ಹರಾಂ ಎಂದು ಖಚಿತವಾಗಿ ಘೋಷಿಸಿ ಆ ಪ್ರಕಾರ ಫತ್ವಾ ನೀಡುವುದೇ ಸರಿಯಾದ ಮಾರ್ಗವಾಗಿದೆ."*
(ಕಿಫಾಯತುಲ್ ಅಖ್'ಯಾರ್ 1/195)
ಪುಣ್ಯ ಲಭಿಸಲು ಮಸೀದಿ ಪ್ರವೇಶಕ್ಕೆ ಅನುಮತಿ ಕೇಳಿದ ಸಹಾಬಿ ವನಿತೆಯೊಂದಿಗೆ ಪ್ರವಾದಿ ಸಲ್ಲಲಾಹು ಅಲೈಹಿವಸಲ್ಲಮರು ಪುಣ್ಯ ಸಂಪಾದನೆ ನಿನ್ನ ಉದ್ದೇಶವಾಗಿದ್ದರೆ *ಮಸೀದಿಗಿಂತ ಮನೆಯೇ ಶ್ರೇಷ್ಟವೆಂದು ಉಪದೇಶಿಸುತ್ತಾರೆ* ಈ ಉಪದೇಶವನ್ನು ಸಹಾಬಿ ವನಿತೆಯರು ಅಕ್ಷರಶಃ ಪಾಲಿಸಿದರು.ಹದೀಸ್ ನಿವೇದಕರು ಹೀಗೆ ಸ್ಪಷ್ಟ ಪಡಿಸುತ್ತಾರೆ.
*فامرت فبني لها مسجد في اقصي شيء من بيتها واظلمه فكانت تصلي فيه حتي لقيت عزوجل. /احمد ٦/٣٧١*
*ಅವರು ಮನೆಯಲ್ಲಿ ಒಂದು ಮಸೀದಿ ನಿರ್ಮಿಸಲು ಸೂಚಿಸಿದರು.ಹೀಗೆ ಮನೆಯ ಒಳಭಾಗದಲ್ಲಿ ಅತ್ಯಂತ ಕತ್ತಲೆ ಆವರಿಸಿದ ಜಾಗದಲ್ಲಿ ಅವರಿಗಾಗಿ ಮಸೀದಿ ನಿರ್ಮಿಸಲ್ಪಟ್ಟಿತು.ಮರಣದ ತನಕ ಅವರು ಅಲ್ಲಿಯೇ ನಮಾಝ್ ನಿರ್ವಹಿಸುತ್ತಿದ್ದರು.*
(ಮುಸ್ನದ್ ಅಹ್ಮದ್ 6/371)
*ಮಸೀದಿಯ ಅತ್ಯಂತ ಹತ್ತಿರ ಮನೆಗಳಿದ್ದೂ ಕೂಡಾ ನೆಬಿಯವರ ಪತ್ನಿಯರು ಮತ್ತು ಪುತ್ರಿಯರು ಜುಮಾ ಜಮಾತಿಗೆ ಮಸೀದಿಗೆ ಹಾಜರಾಗುತ್ತಿರಲಿಲ್ಲ ಎಂದು ಇಮಾಮ್ ಶಾಫಿ (ರ) ಸ್ಪಷ್ಟಪಡಿಸುವಾಗ ಸಳಪಿಗಳಿಗೆ ಮಾತ್ರ ಮಸೀದಿಯಲ್ಲಿ ಮಹಿಳೆಯರು ಒಟ್ಟಿಗೆ ಬೇಕೆಂದರೆ ಅದು ಅವರ ಸ್ತ್ರೀ ಮೋಹದ ಪರಕಾಷ್ಟೇ ಅಷ್ಟೇ. ಸ್ತ್ರೀ ಲಂಪಟರು ಎಂದೂ ಹೇಳಬಹುದು.*
ಇಲ್ಲಿಯೂ ಸಳಪಿಗೆ ಉಳಿಗಾಲ ಇರಲಿಲ್ಲ.
ಸಖಾಫಿ ಫೆರ್ಫಕ್ಟಾಗಿ ಎಲ್ಲದಕ್ಕೂ ಸೂಕ್ತ ಉತ್ತರ ಕೊಡುತ್ತಿದ್ದರು.ನಂತರ ಸಖಾಫಿ ಸಳಪಿಯನ್ನು ಉದ್ದೇಶಿಸಿ ಹೇಳಿದರು👇
*⏩ನಂ4ಎದೆಯ ಮೇಲೆ ಕೈಕಟ್ಟುವುದು🙅🏿*
ನಾಲ್ಕು ಮಝ್'ಹಬಿಗೂ ಪರಿಚಯವಿಲ್ಲದ ನೂತನ ಆಚಾರ.
ಏಳ್ನೂರು ವರ್ಷಗಳ ಮುಂಚೆ ಶೌಕಾನಿ ಚಾಲನೆ ಕೊಟ್ಟ ಬಿದ್'ಅತ್.
ಮಕ್ಕಾ ಮದೀನಾ ಹರಂ ಇಮಾಂಗಳು ಸಹಿತ ಜಗತ್ತಿನ ಎಲ್ಲಾ ಮುಸ್ಲಿಮರಿಗೆ ಪರಿಚಯವಿಲ್ಲದ ಅನಾಚಾರ..
ಸಖಾಫಿ ಹೇಳುತ್ತಿದ್ದಂತೆ ಮೈಕ್ ಪೋಯಿಂಟ್ ಗೆ ಬಂದ ಸಳಪಿ ಕೆಳಗಿನ ಹದೀಸ್ ಉದ್ದರಿಸಿ, ತಾನು ಗೆದ್ದೇ ಬಿಟ್ಟೆನು ಎಂಬ ರೀತಿಯಲ್ಲಿ ತನ್ನ ಹಾವಾಭಾವವನ್ನು ಗಂಭೀರ ಗೊಳಿಸಿ ಹೇಳಿದ👇
ಸಳಪಿ👉🎨📝ತ್ವಾಊಸ್(ರ)ಅವರಿಂದ ನಿವೇದನೆ:ಪ್ರವಾದಿ(ಸ)ರವರು ನಮಾಝಿನಲ್ಲಿ ತಮ್ಮ ಬಲಗೈಯನ್ನು ಎಡಗೈಯ ಮೇಲಿಟ್ಟು ಒತ್ತಿ ಹಿಡಿದು ಕೊಂಡು ತಮ್ಮ ಎದೆಯ ಮೇಲಿಡುತ್ತಿದ್ದರು."(ಅಬೂದಾವೂದ್759)
ಸಖಾಫಿಯ ಮುಖದಲ್ಲಿ ನಗು ಬಿರಿಯುತ್ತಿತ್ತು.
ಕಾರಣ ಸಖಾಫಿಗೆ ಮೊದಲೇ ಗೊತ್ತಿರುವಂತಿತ್ತು .ಸಳಪಿ ಇದೇ ಹದೀಸ್ ಉದ್ದರಿಸುವನೆಂದು...
ಮೈಕ್ ಕೈಗೆತ್ತಿಕೊಂಡ ಸಖಾಫಿ ಹೇಳಿದರು..👇
☝ಸಳಪಿ 'ಅಲಾ' ಎಂಬ ಅರಬಿ ಪದ ಕಂಡಾಗ ಅದಕ್ಕೆ 'ಮೇಲೆ' ಎಂದು ಅಪಾರ್ಥ ಕೊಟ್ಟು ಈ ಎಡವಟ್ಟು ಮಾಡಿದ.
ನಾಲ್ಕು ಮದ್'ಹಬ್ ನಿಂದ ಹೊರತಾದ ಈ ವಾದದ ಕುರಿತು ಇಮಾಂಗಳ ಅಭಿಪ್ರಾಯ ಹೀಗಿದೆ.
فقول الوضع علي الصدر قول خارج من مذاهب، المسلمين وخارق لاجماعهم المركب -- بذل المجهود ٤٨٥/٢
ನಮಾಜಿನಲ್ಲಿ ಕೈಗಳನ್ನು ಎದೆಯ ಮೇಲೆ ಕಟ್ಟಬೇಕೆಂಬ ವಾದವು ಮುಸ್ಲಿಮರ ಎಲ್ಲಾ ಮದ್'ಹಬ್'ಗಳಿಗೆ ಹೊರತಾದ ವಾದವಾಗಿದೆ.ಇದು ಅವರ ಇಜ್ಮಾಅನ್ನು ಮೂಲೊತ್ತಾಟನೆಗೊಳಿಸುವ ಅಭಿಪ್ರಾಯವಾಗಿದೆ.
(ಬದ್ಸುಲುಲ್ ಮಜ್ಹೂದ್ ಬಿಶರಹಿ ಅಬೂದಾವೂದು 4/485)
والسنة ان يجعلهما تحت صدره
*ಸುನ್ನತ್ತಾದ ಕ್ರಮ ಎರಡು ಕೈಗಳನ್ನು ಎದೆಯ ಕೆಳಗಿಡುವುದಾಗಿದೆ.ಅದಕ್ಕೆ ಪುರಾವೆಯಾಗಿ ಇಬ್ನ್ ಖುಝೈಮ (ರ)ರವರ ಈ ಹದೀಸ್ ಇದೆ.👇*
انه صلي الله عليه وسلم وضعهما تحت صدره لان القلب موضع النية——قسطلاني ٤٣٤ /٢
*ನಿಶ್ಚಯವಾಗಿಯೂ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಎರಡು ಕೈಗಳನ್ನು ಎದೆಯ ಕೆಳಗಿಟ್ಟಿದ್ದರು*
ಇಲ್ಲಿಯೂ ಸಳಪಿಗೆ ಉತ್ತರವಿಲ್ಲದ್ದು ಕಂಡಾಗ ಸಖಾಫಿ ಮುಂದಿನ ವಿಷಯಕ್ಕೆ ಬಂದರು👇
*⏩ನಂ5ಜುಮಾದ ಎರಡನೇ ಬಾಂಗ್ ಗುಳುಂ!*
ಸಿದ್ದೀಕ್ ತಂಙಳ್,ಉಸ್ಮಾನ್ ಬಿನ್ ಅಫ್ಫಾನ್ (ರ) ಮೌಲೂದ್ ನಡೆಸಿದ್ದಾರಾ ಅಂತ ಸಳಪಿ ಕೇಳುತ್ತಾನೆ.ಆದರೆ ಸಹಾಬಿಯಾದ ಉಸ್ಮಾನ್ (ರ) ರೂಡಿ ಮಾಡಿದ ಎರಡನೇ ಬಾಂಗ್ ನ್ನು ಗುಳುಂ ಮಾಡಿ ಸಹಾಬಿಗಳ ಚರ್ಯೆಗೆ ವಿರುದ್ದವಾಗಿ ಕಾರ್ಯಚರಿಸುತ್ತಾನೆ.
ನನ್ನ ಸಹಾಬಿಗಳನ್ನು ಅಂಗೀಕರಿಸದವರ ಪಾರ್ಟಿ ನರಕಕ್ಕೆ ಎಂದು ನೆಬಿ ಹೇಳಿದ್ದಾರೆ ತಾನೇ ಆ ಪಾರ್ಟಿಯಲ್ಲಿ ಮೆಂಬರ್ ಶಿಪ್ ಪಡೆಯುವಂತೆ ಅನುಯಾಯಿಗಳಿಗೆ ಪ್ರಚೋದನೆ ನೀಡುತ್ತಾರೆಂದು ಸಖಾಫಿ ಹೇಳಿದಾಗ..... ಇದಕ್ಕೆ ಪೂರಕವಾದ ಹದೀಸೊಂದನ್ನು ಸಳಪಿ ಹೇಳಿದ 👇
"ಸಾಇಬುಬಿನ್ ಯಝೀದ್(ರ)ಅವರಿಂದ ನಿವೇದನೆ :ಪ್ರವಾದಿ(ಸ)ರವರ ಕಾಲ ಅಬೂಬಕ್ಕರ್(ರ)ರವರ ಕಾಲ ಹಾಗು ಖುಮರ್(ರ)ರವರ ಕಾಲದಲ್ಲಿ ಶುಕ್ರವಾರದ ಬಾಂಗ್ ಇಮಾಮ್ ಮಿಂಬರಿನಲ್ಲಿ ಕುಳಿತ ನಂತರ ಹೇಳಲಾಗುತ್ತಿತ್ತು.ಉಸ್ಮಾನ್ (ರ)ರವರ ಕಾಲದಲ್ಲಿ ಜನಸಂಖ್ಯೆ ಹೆಚ್ಚಾದಾಗ ಸೌರಾದಲ್ಲಿರುವ ಮದೀನಾದ ಒಂದು ಪೇಟೆಯಲ್ಲಿ ಕೊಡುತ್ತಿದ್ದರು(ಸ್ವಹೀಹುಲ್ ಬುಖಾರಿ)
ಇದಕ್ಕೆ ಸಖಾಫಿ ಉಸ್ತಾದರ ಉತ್ತರ ಹೀಗಿತ್ತು👇
*ಜುಮುಅದ ಎರಡನೇ ಬಾಂಗನ್ನು ವಿರೋಧಿಸುವವರು ಜಾಗತಿಕ ಮುಸ್ಲಿಮರ ಒಗ್ಗಟ್ಟನ್ನು ಪ್ರಶ್ನಿಸುತ್ತಿದ್ದಾರೆ.ಉಸ್ಮಾನ್ (ರ) ಜಾರಿಗೆಗೊಳಿಸಿದ ಈ ಬಾಂಗ್ ಸ್ವಹಾಬಿಗಳೆಲ್ಲರೂ ಅಂಗೀಕರಿಸಿದ್ದರು.*
*ಸಾಈಬ್ ಬಿನ್ ಯಝೀದ್(ರ) ಹಾಗೂ ಇಮಾಂ ಬುಖಾರಿ (ರ)ಉಸ್ಮಾನ್ (ರ) ರ ಈ ಪ್ರವೃತ್ತಿಯನ್ನು ಇಸ್ಲಾಮಿಕ್ ನಿಯಮವಾಗಿ ಅಂಗೀಕರಿಸಿದ್ದಾರೆ.ಅಲ್ಲವೆಂದಾದರೆ ಈ ಹೇಳಿಕೆಯ ನಂತರ ಇದು 'ಬಿದ್'ಅತ್ ಎಂದು ಹೇಳುತ್ತಿದ್ದರು.ಅವರು ಹಾಗೆ ಮಾಡಲಿಲ್ಲ.*
*ಫತುಹುಲ್ ಬಾರಿಗೆ ಅನುಬಂಧವಾಗಿ ಸ್ವಂತ ಅಭಿಪ್ರಾಯ ಸೇರಿಸುತ್ತಿದ್ದ ಲಹೀಫ್ ಸ್ಪಷಲಿಸ್ಟ್ ಸಳಪಿ ಪಂಡಿತ ಇಬ್ನ್ ಬಾಝ್ ಕೂಡಾ ಎರಡನೇ ಬಾಂಗನ್ನು ನವೀನಾಚರವೆಂದು ಹೇಳಲಿಲ್ಲ!*
ಎರಡನೇ ಬಾಂಗ್ ನಿಷೇಧಿಸುವ ಸಳಪಿಗಳು ಸಹಾಬತ್ತಿನ ಇಜ್'ಮಾಅನ್ನು ಅಲ್ಲಗೆಳೆಯುವ ಕೆಟ್ಟ ಕೆಲಸಕ್ಕೆ ಕೈಹಾಕಿ ಉಮ್ಮತ್ತನ್ನು ನರಕಕ್ಕೆ ಕೊಂಡೊಯ್ಯುವ ನೀಚ ಕೆಲಸ ಮಾಡುತ್ತಿದ್ದಾರೆ.ಇಂತವರಿಗೆ ಮಾಪ್ ಇದೆಯೇ?
ಸಖಾಫಿಯ ಪ್ರಶ್ನೆಗೆ ಜನರು ಆವೇಶದಿಂದ " ಇಲ್ಲ" "ಇಲ್ಲ" ಎಂದು ಹೇಳುತ್ತಿದ್ದರು.
ನಂತರ ಸಖಾಫಿ ಇದರ👇ಕುರಿತು ವಿಷಯ ಹೇಳಿದರು
*⏩6,ಹಿಲಾಲ್ ಕಮಿಟಿ*
👉ಪ್ರವಾದಿ(ಸ)ರವರು ಇಸ್ಲಾಂ ಪೂರ್ತಿ ಮಾಡಿದ ಸುಮಾರು 1350ವರ್ಷಗಳ ನಂತರ ಸಳಪಿ ಮೌಲವಿಗಳು ರೂಡಿ ಮಾಡಿದ ಬಿದ್'ಅತ್.
ಮುತ್ತು ನೆಬಿ ನಮಗೆ ಉಪವಾಸ ಹಿಡಿಯಲಿಕ್ಕೂ ಪೆರ್ನಾಳ್ ಡಿಕ್ಲೆರ್ ಮಾಡಲಿಕ್ಕೂ ಹೇಳಿದ ಮಾಪನ ಚಂದ್ರದರ್ಶನವಾಗಿದೆ.ಆದರೆ ಮೌಲವಿಗಳು ದಿನಗಳನ್ನು ಲೆಕ್ಕ ಹಾಕಿ ಪುಣ್ಯ ರಸೂಲರ ಮಾತಿಗೆ ಉಲ್ಟಾ ಹೊಡೆಯುತ್ತಾರೆ!
ಎಲ್ಲವೂ ಸ್ವಂತ ಕಂಡು ಹಿಡಿತ!!
ಏನೂ ಕೇಳಿದರೂ ಡಜನ್ ಗಟ್ಟಲೆ ಹದೀಸ್ ಆಯತ್ ಓದುತ್ತಿದ್ದ ಝೀರೋ ಸಳಪಿಗೆ ಈ ವಿಷಯದಲ್ಲಿ ಶಬ್ದವೇ ಇರಲಿಲ್ಲ.ಸಖಾಫಿಯ ತೀಕ್ಷ್ಣ ಪ್ರಶ್ನೆಗಳ ಮುಂದೆ ಝೀರೋ ಸಳಪಿಯ ಜಂಘಾಬಲವೇ ಹುದುಗಿ ಹೋಗಿತ್ತು.!!
ನಂತರ. ಸಖಾಫಿ ಈದ್ಗಾ ವಿಷಹೇಳಿದರು👇
*⏩ನಂ7,ದನಗಳು ಸೆಗಣಿ ಮಾಡುವ ಜಾಗದಲ್ಲಿ ಈದ್ಗಾ ಮತ್ತು ಪೆರ್ನಾಳ್ ನಮಾಜು*
ಎಲ್ಲವೂ ಹೊಸ ಹೊಸ ಕಂಡುಹಿಡಿತ!
ಪರಿಶುದ್ದವಾದ ಈದ್ಗಾ ಕ್ಕೆ ಬದಲಾಗಿ ದನಗಳು ನಾಯಿಗಳು ಅಡ್ಡಾದಿಡ್ಡವಾಗಿ ಅಂಡೆಲೆಯುವ ಸ್ಥಳಗಳನ್ನು ಈದ್ಗಾ ಎಂದು ಬೋರ್ಡ್ ಹಾಕಿ ಶುಚುತ್ವದ ಸಂಕೇತವಾದ ಮಸೀದಿಯಿಂದ ಹೊರಹೋಗುತ್ತಿದ್ದಾರೆ.
ಇಸ್ಲಾಮಿನಲ್ಲಿ ಈದ್ಗಾಹ್ ಇದೆ. ಆ ಕುರಿತು ಹದೀಸು ಕೂಡಾ ಇದೆ.ಆದರೆ ಅದು ಇಂತಹ ನಜಸ್ ಮಯ ರೆಡಿಮೆಡ್ ಈದ್ಗಾ ಆಗಿರಲಿಲ್ಲವೆಂದು ಸಖಾಫಿ ಹೇಳಿದಾಗ ಸಳಪಿ ಕೆಳಗಿನ ಹದೀಸ್ ಹೇಳಿದ👇
🎨📝ಅಬೂಸಹೀದ್ ಖುದ್ರೀ(ರ)ಹೇಳುತ್ತಾರೆ.ಪ್ರವಾದಿ(ಸ)ರವರು ಈ ದುಲ್ ಅಝ್ಹಾ ಮತ್ತು ಈದುಲ್ ಫಿತ್ರಿನಂದು ಈದ್ಗಾಕ್ಕೆ ಹೋಗಿ ನಮಾಝ್ ಮಾಡುತ್ತಿದ್ದರು.ತರುವಾಯ ಬಂದು ಜನರ ಮುಂದೆ ನಿಲ್ಲುತ್ತಿದ್ದರು. ಜನರು ಪಂಕ್ತಿಬದ್ದವಾಗಿ ಕುಳಿತಿರುತ್ತಿದ್ದರು ನಂತರ ಉಪದೇಶ ನೀಡುತ್ತಿದ್ದರು.(ಸ್ವಹೀಹುಲ್ ಬುಖಾರಿ)
ಕೂಡಲೇ ಸಖಾಫಿ ಹೇಳಿದರು
(ಅದು ದನ ನಾಯಿಗಳು ಮೇಯುವ ಈದ್ಗಾ ಆಗಿರಲಿಲ್ಲ.ಈದ್ಗಾ ನಮ್ಮ ಮಂಗಳೂರಿನ ಬಾವುಟಗುಡ್ಡೆಯಲ್ಲಿಯೂ ಇದೆ.ಅದಾಗಿದೆ ಸರಿಯಾದ ಈದ್ಗಾ.
ಅಲ್ಲಿಯೂ ಸಳಪಿಗೆ ಏನೂ ಹೇಳಲಿಕ್ಕೆ ಇಲ್ಲದೆ ಚಡಪಡಿಸಿದಾಗ ಸಖಾಫಿ ಹೇಳಿದರು
*✳ಸಳಪಿ ಮುಲ್ಲಾಗಳು ಇತ್ತೀಚೆಗೆ ಸೇರ್ಪಡೆ ಗೊಳಿಸಿದ ನೂತನವಾದ*👇
*⏩8,ಸ್ವಾಲವೇಶನ್,'ದಿ ಲೈಟ್'*
ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಸ್ವಾಲ್ವೇಶನ್ ನಡೆಸಿದ್ದಾರಾ? ಇದು ಬಿದ್'ಅತ್ ಅಲ್ಲವೇ ಎಂದು ಕೇಳಿದರೆ ಸಳಪಿ ಕೆಪ್ಪನಂತೆ ಮೇಲೆ ನೋಡುತ್ತಾನೆ.
ಸಖಾಫಿ ಹೇಳಿದಂತೆಯೇ ಝೀರೋ ಸಳಪಿ ಉತ್ತರವಿಲ್ಲದೆ ಆಕಾಶ ದಿಟ್ಟಿಸುತ್ತಿದ್ದ.!
*⏩ಇದೀಗ ಮಂತ್ರ ಹಲಾಲ್!*
ಮಂತ್ರದ ಹೆಸರಿನಲ್ಲಿ ಸುನ್ನಿಗಳನ್ನು ಅಪಹಾಸ್ಯ ಮಾಡುತ್ತಿದ್ದ ಸಳಪಿ ಇದೀಗ ಮಂತ್ರ ಮಾಡುವುದರಲ್ಕೂ ಶೈತಾನ್ ಬಿಡಿಸುವುದರಲ್ಲೂ ಪೈಪೋಟಿ ನಡೆಸುತ್ತಿದ್ದಾನೆ!
ನೂತನ ಸಂಶೋದನೆ ಕುರಾನಿನ CD ಹಾಕಿ ಶರೀರಕ್ಕೆ ಹತ್ತಿದ ಶೈತಾನನ್ನು👺 ಓಡಿಸುವುದು!😀😂
ಇದಕ್ಕೆ ಸಳಪಿ ಈ ರೀತಿ ಹದೀಸ್ ಹೇಳಿದ👇
"ನಿಶ್ಚಯವಾಗಿಯೂ ಯಾವನಾದರೂ ಉರ್ಕು (ತಾಇತ)ಕಟ್ಟಿದರೆ ಅವನು ಶಿರ್ಕ್ ಎಸಗಿದನು.(ಆಹ್ಮದ್,ಹದೀಸ್ 17427)
ಅದರೆ ಅಲ್ಲಾಹುವುವಿನ ರಸೂಲ್(ಸ)ರವರು ಕಲಿಸಿದ ಆಯತುಲ್ ಕುರ್ಸಿ ಯಂತ ಇನ್ನಿತರ ಕುರುಆನ್ ಹದೀಸ್ ಆದಾರವಾಗಿರುದನ್ನು ಯಾರು ನಿಷೇದಿಸುದಿಲ್ಲಾ
ಅದರೆ ಮಂತ್ರ ತಾಯಿತ್. ಇಸ್ಮು ಗಳಿಗೆ ಇಸ್ಲಾಮಿನಲ್ಲಿ ಅವಕಾಶವಿಲ್ಲ.
ಅವನ ಈ ಜಹಾಲತಿಗೆ ಉತ್ತರವಾಗಿ ಸಖಾಫಿ ಹೇಳಿದರು.ಇಸ್ಮ್ ತಲ್ಸಮಾತ್ ಎಲ್ಲವೂ ಮಂತ್ರವೇ ಪಾಪ ಈ ಝೀರೋ ಸಳಪಿಗೆ ಏನೂ ಗೊತ್ತಿಲ್ಲ.ಸಳಫಿಸಂ ನ ಆರಂಭದಲ್ಲಿ ಮಂತ್ರ ಗಿಂತ್ರ ಎಂದೆಲ್ಲಾ ಮೂದಲಿಸುತ್ತಾ ಇದ್ದ ಸಳಪಿ ಈ ಅದೆಲ್ಲಾ ಇದೆ ಎಂದು ಹೇಳುವಾಗಲೂ ತನ್ನ ಹಳೇಯ ಚಾಳಿ ಬಿಡುವುದಿಲ್ಲ.
ಇಸ್ಮ್ ಮಂತ್ರ ತಾಯಿತ ಎಲ್ಲವೂ ಇದೆ.ಎಂದು ಹೇಳುತ್ತಾ ಸಖಾಫಿ ಹದೀಸ್ ಉದ್ದರಿಸಿದರು👇👇
*ಇಬ್ನ್ ಉಮರ್ (ರ) ತಾಯಿತ ಬರೆದು ತನ್ನ ಮಗುವಿನ ಕುತ್ತಿಗೆಗೆ ಕಟ್ಟಿದ್ದರು.*
(ರಾಝಿ 1/82)
ಇಬ್ನ್ ಖಯ್ಯುಮ್ ಬರೆಯುತ್ತಾರೆ. ಶುಚಿಯಾದ ಒಂದು ಬಟ್ಟಲಲ್ಲಿ ಸೂರತುಲ್ ಇನ್ಶಿಖಾಕ್ ಒಂದರಿಂದ ನಾಲ್ಕರ ತನಕದ ಆಯತುಗಳನ್ನು ಬರೆದು ಅದನ್ನು ಕಲಸಿದ ನೀರನ್ನು ಗರ್ಭಿಣಿಗೆ ಕುಡಿಸಬೇಕಲ್ಲದೆ,ಹೊಟ್ಟೆಯ ಮೇಲೆ ಸಿಂಪಡಿಸಬೇಕು.
(ಝಾದುಲ್ ಮ'ಆದ್ 4/292)
ಸಳಪಿ ಆರಂಭದಲ್ಲಿ ಇದನ್ನೆಲ್ಲಾ ಕುರಾಫತ್ ಶಿರ್ಕ್ ಎಂದು ಬಡಬಡಿಸುತ್ತಿದ್ದ.ಈಗ ಇದೆಲ್ಲಾ ಇದೆ ಎಂದು ಸಮ್ಮತಿಸುತ್ತಾನೆ.😂😂
ಜಾಹಿಲ್ ತಾನೇ?😀
ನಂತರ ಸಖಾಫಿ ಝೀರೋ ಸಳಪಿಯ ಮರ್ಮಕ್ಕೆ ಪೆಟ್ಟು ಬೀಳುವ ಜಿನ್ನ್ ವಿಷಯ ಕೈಗೆತ್ತಿಕೊಂಡು ಹೀಗಹೇಳಿದರು👇
*⏩10,ಜಿನ್ನ್ ವಿವಾದ*
'ಜಿನ್ನ್' ಅಂತ ಕೇಳುವಾಗಲೇ ಸಳಪಿ ಬೆಚ್ಚಿಬೀಳುತ್ತಾನೆ.ಸಳಪಿಗಳಿಗೆ
ಜಿನ್ನ್ ಭಾದೆ ಹಿಡಿದದ್ದೇ ತಡ ಸಳಪಿಗಳು ಎಂಟು ಹೋಳಾಗಿ ಛಿದ್ರ ಛಿದ್ರವಾಗಿ ಹರಿಹಂಚಾಗಿ ಹೋದರು.
ಇದೀಗ ಪರಸ್ಪರ ಶಿರ್ಕ್ ಆರೋಪಿಸುತ್ತಾ ಇದ್ದಾರೆ.
ಐಕ್ಯ ಸಂಘ ಎಂಬ ಹೆಸರಲ್ಲಿ ಪ್ರತ್ಯಕ್ಷರಾದ ಈ ಜಾಹಿಳ್ ಗಳು ಇದೀಗ ಅನೈಕವಾಗಿ ಮಡವೂರಿ,ಜಿನ್ನೂರಿ,ಆಡ್ ಮುಜಾಹಿದ್,ಕೋಕಸ್,ಪಂಕಸ್ ಅಂತ ಪರಸ್ಪರ ಪರಿಹಾಸ ಮಾಡಿ ಬಡಿದಾಡುತ್ತಾ ಇದ್ದಾರೆ.ಇದೀಗ ಹೊಸ ಮಾಲೆ ಮೌಲಿದ್ ರಚಿಸಿದ್ದಾರೆ ಅಹೆಸರು👇
⏩ *ಉಮರ್ ಮೌಲವಿ ಮಾಲ ಮೌಲಿದ್!*
ಸುನ್ನಿಗಳ ಮಾಲೆ ಮೌಲೂದುಗಳನ್ನು ಪರಿಹಾಸ್ಯ ಮಾಡಿದ ಸಳಪಿ ಮೌಲವಿಗಳು ತಮ್ಮ ನಾಯಕ ಕೆಎಂ ಉಮರ್ ಮೌಲವಿಯ ಜೀವ ಹೋದ ನಂತರ ಅವರ ಮೇಲೆ ಮಾಲ ಮೌಲಿದ್ ರಚಿಸಿದ್ದಾರೆ!
ಈ ಉಮರ್ ಮಾಲೆಗೆ ಎಷ್ಟು ವರ್ಷದ ಹಿನ್ನೆಲೆ ಇದೆ?
ಸಳಪಿ ಉತ್ತರಿಸಬೇಕೆಂದು ಸಖಾಫಿ ಹೇಳಿದಾಗ,ಝೀರೋ ಸಳಪಿ ಸಖತ್ತ್ ಗರಂ ಆಗಿ ಹೇಳಿದ👇
🎨📝ಯಾವುದಾದರು ಸಲಫಿ ಮನೆಯಲ್ಲಿ ಅಥವಾ ಮಸ್ಜಿದ್ನಲ್ಲಿ ಉಮರ್ ಮೌಲವಿ ಮಾಲೆ ಮಾಡಿರುವುದನ್ನು ಸಾಬೀತು ಪಡಿಸಿ ಕುರಾಫಿಗಳೆ?
ಇದು ಕೇಳಿದ ಸಖಾಫಿ ನಗುತ್ತಾ ಕೇಳಿದರು
*ಹಾಗಾದರೆ ಮಾಲ ಮೌಲೀದ್ ರಚಿಸಬಹುದು.ಓದಬಾರದೆಂದು ಮಾತ್ರ! ಹಾಗಾದರೆ ಸಹಾಬತ್ತ್ ಗಳು ನೆಬಿಯವರ ಮಾಲೆ ಮೌಲಿದ್ ರಚಿಸಿದ್ದಾರಾ? ಖುದ್ದು ನೆಬಿತಂಙಳ್ ತನ್ನ ತಾತ ಹಝ್ರತ್ ಇಬ್ರಾಹೀಂ ನೆಬಿ ಇಸ್ಮಾಈಲ್ ನೆಬಿಯ ಮಾಲ ಮೌಲಿದ್ ರಚಿಸಿದ್ದಾರಾ? ನಿಮಗೆ ಎಲ್ಲದಕ್ಕೂ ಆಯತ್ ಹದೀಸು ಬೇಕು ತಾನೇ ಉಮರ್ ಮಾಲೆ ರಚಿಸಲು ನಿಮಗೆ ಎಲ್ಲಿಯ ಆದಾರ?*
ಸಖಾಫಿಯ ತೀಕ್ಷ್ಣವಾದ ಪ್ರಶ್ನೆಗಳ ಮುಂದೆ ಝೀರೋ ಸಳಪಿ ಉತ್ತರವಿಲ್ಲದೆ ಮಂಡಿಯೂರುವುದನ್ನು ಕಂಡ ಮರಿ ಸಳಪಿಗಳು ಕಾರ್ಯಕ್ರಮಕ್ಕೆ ತಡಯಾಜ್ಞೆ ತರುತ್ತಾರೆ.
ಪೋಲೀಸರು ಎಂಟ್ರಿ ಕೊಡುತ್ತಾರೆ ಕೊನೆಯದಾಗಿ ಸಖಾಫಿ ಹೇಳುತ್ತಾರೆ👇
📚کل محدثة بدعةوکل
بدعةضلالة(بيهقى.صحيح)
*(ಧರ್ಮದಲ್ಲಿ)ಏಲ್ಲಾ ಹೊಸ ಕಾರ್ಯಗಳು (ಮಲಯಾಳ ಕುತುಬಾ ವಗೈರ)ಬಿದ್ ಅತ್ ಗಳಾಗಿವೆ.ಎಲ್ಲಾ ಬಿದ್ ಅತ್ ಪಥಭ್ರಷ್ಟತೆಗಳಾಗಿವೆ.*
*ಓ ನನ್ನ ಸಳಪಿ ಸಹೋದರರೇ... ನಿಮ್ಮ ಮೌಲವಿಗಳು ನಿಮ್ಮನ್ನು ನರಕಕ್ಕೆ ಕೊಂಡಿಯ್ಯತ್ತಿದ್ದಾರೆ.ಮುತ್ತು ನೆಬಿಯವರು ಹೇಳಿದ್ದು,73 ಪಾರ್ಟಿಯಲ್ಲಿ ಸ್ವರ್ಗಕ್ಕೆ ಹೋಗುವುದು ನಾನು ಮತ್ತು ನನ್ನ ಸಹಾಬಿಗಳನ್ನು ಅನುಸರಿಸಿದವರು ಮಾತ್ರ.ಎಂದಾಗಿದೆ.ಆದ್ದರಿಂದ ಸಹಾಬಿಗಳನ್ನು ತಳ್ಳಿದ ಈ ವಹ್ಹಾಬಿಸಂ ಸಳಪಿಸಂ ನರಕ್ಕಕ್ಕಾಗಿದೆ.ಇವರ ಮೇಲೇ ಜಗತ್ತಿನಾದ್ಯಂತ ಭಯೋತ್ಪಾದನೆಯ ಕರಿನೆರಳು ಬಿದ್ದಿದೆ.ಎಲ್ಲಾ ಫಿತ್ನ ಫಸಾದುಗಳು ಇವರ ಮೂಲಕ ಹರಡಿದೆ.ನಮ್ಮ ಉಲಮಾಗಳು ಇವರಿಗೆ ಸಲಾಂ ಕೂಡಾ ಹೇಳಬಾರದೆಂದು ಫತ್ವಾ ಕೊಟ್ಟಿರುವುದರ ಹಿಂದೆ ಇವರು ಇಂತಹ ಭೀಕರ ಡೇಂಜರ್ ವಿಭಾಗವಾಗಿದ್ದಾರೆಂದು ಜನಸಾಮಾನ್ಯರಿಗೆ ಮನದಟ್ಟು ಮಾಡಲಿಕ್ಕಾಗಿತ್ತು.ಜಾಗ್ರತೆ....ಜಾಗ್ರತೆ ಸಳಪಿಸಂ ನ್ನು ಹತ್ತಿರ ಮಾಡಬೇಡಿ..*
ಸಖಾಫಿ ಉಸ್ತಾದರ ಆವೇಶಭರಿತ ಉಪದೇಶಕ್ಕೆ ಜನರು ಹೀರೋ ತಕ್ಬೀರ್ ಮೊಳಗಿಸುತ್ತಾ ಇದ್ದರು.
ಅಂತೂ ಇಂತೂ ಮಲ್ಲಿ ಸಖಾಫಿ ಝೀರೋ ಸಳಪಿಯ ಮುಂದೆ ಹೀರೋ ಆದದ್ದು ಸುಳ್ಳಲ್ಲ.
(ನಿನ್ನೆ ಪರಂಗಿಪೇಟೆಯಲ್ಲಿ ನಡೆಯಬೇಕಾಗಿದ್ದ ಮುಖಾಮುಖಿ ರದ್ದುಗೊಂಡದ್ದರಲ್ಲಿ ಹಲವಾರು ಸುನ್ನೀ ಕಾರ್ಯಕರ್ತರಿಗೆ ನಿರಾಶೆ ಇತ್ತು.ಹಾಗಾಗಿ ಅಲ್ಲಿ ಪ್ರಸ್ತುತ ಮುಖಾಮುಖಿ ನಡೆದಿದ್ದರೆ ಈ ರೀತಿ ನಡೆಯುತ್ತಿತ್ತು ಎಂದು ಕಾಲ್ಪನಿಕವಾಗಿ ಬರೆದಿದ್ದೇನೆ.ಜೊತೆಗೆ ಕೆಲವೊಂದು ಸುನ್ನೀ ಆಶಯಗಳನ್ನು ಕಾರ್ಯಕರ್ತರಿಗೆ ಮನದಟ್ಟುಮಾಡಲು ಸಹಾಯಕವಾಗಬಹುದು.ನಿಮ್ಮ ದುಆ ನಿರೀಕ್ಷೆಯಲ್ಲಿ...)
-ಅಬೂಶಝ
No comments:
Post a Comment