Saturday, October 14, 2017

ಹೌದು...
ಸೈದ್ಧಾಂತಿಕ ವಾಗಿ ರಾಜಿ ಇಲ್ಲದೆ ...
ಆ ಒಂದು ವಿಷಯದಲ್ಲಿ ಕಟ್ಟುನಿಟ್ಟಾದ ನಿಲುವು ಸ್ವೀಕರಿಸುವ ಎಸ್ಸೆಸ್ಸೆಫ್ ಎಂಬ ಸಂಘಟನೆ ಯ
ನಿಲುವು ನನ್ನನ್ನು ತುಂಬಾ ಆಕರ್ಷಿಸಿದೆ...
 ಡಾ: ಎ ಪಿ ಜೆ  ಕಲಾಂ ರವರು ಯಾವಾಗಲೂ ಹೇಳುವ ಒಂದು  ವಿಷಯ
"ನೀವು ಕನಸು ಕಾಣಿರಿ"
ಮುಸಲ್ಮಾನನ ಕನಸು ಏನಿದ್ದರೂ ಅದು ಸ್ವರ್ಗ ಪ್ರವೇಶ ಮಾತ್ರ ತಾನೆ...
ಆ ಕನಸು ನನಸಾಗ ಬೇಕಾದರೆ ಸೈದ್ಧಾಂತಿಕವಾಗಿ ನಾವು ಅಚಲರಾಗಿರಬೇಕು
ಸುನ್ನಿ ಸಲಪಿ ಬೇಡ ನಾವು ಮುಸ್ಲಿಮರಾಗೋಣ ಎಂದು ಹೇಳುವ ಮಂದಿ
ನಿಜವಾಗಿಯೂ ಅವರು ಸೈದ್ಧಾಂತಿಕವಾಗಿ ಚಂಚಲರು...
ಇಂತಹ ಚಂಚಲ ವಿಶ್ವಾಸ ವಿಟ್ಟು ಸ್ವರ್ಗದ
ಕನಸು ಕಾಣುವುದು ಮೂರ್ಖತನ
ಸೈಧ್ದಾಂತಿಕ ಬದ್ಧತೆ ಇಲ್ಲದೆ ಖಾಲಿ ಬಾಬರಿ ಮಸೀದಿ ಕಟ್ಟಿಸಿದರೆ ಸ್ವರ್ಗ ಸಿಗುತ್ತದೆ ಎಂಬ ಕನಸು ಯಾರಾದರು ಕಂಡರೆ ಅದು ಅವನ ಹೆಡ್ಡತನದ ಪರಮಾವಧಿ ಮಾತ್ರ ...!
ಸೈಧ್ದಾಂತವಾಗಿ ರಾಜಿ ಮಾಡಿ ಕೊಂಡು
ಮುಸ್ಲಿಮ್ ಸಬಲೀಕರಣ ಮಾಡಿದರೆ ಸ್ವರ್ಗ ಖಂಡಿತ ಎಂದು ಕನಸು ಕಂಡರೆ ಆ ಕನಸು
ಸೂಜಿಯ ರಂಧ್ರ ದೊಳಗೆ ಆನೆ ಪ್ರವೇಶಿಸುವ ತನಕ ನನಸಾಗದು ಅದು ಖಂಡಿತ....
ಅಂದರೆ ಯಾವನೇ ಒಬ್ಬ ಮುಸ್ಲಿಮ್
ಅವನು ತನ್ನ ಆದರ್ಶ ಸಿದ್ಧಾಂತಗಳನ್ನು ಮೊದಲು ಭದ್ರ ಪಡಿಸಿಕೊಳ್ಳಬೇಕು
ಅದು ಪೌಂಡೇಶನ್ ...
ನಂತರದ್ದು ಬಿಲ್ಡಿಂಗ್....
ಇಲ್ಲಿ ಪೌಂಡೇಶನ್ ಅದು ಸುನ್ನಿಯ್ಯತ್
ಬಾಬರಿ ಪಳ್ಳಿ ನಿರ್ಮಾಣ,ಮುಸ್ಲಿಮ್ ಸಬಲೀಕರಣ ದಂತಹ ಒಳ್ಳೆಳ್ಳೆಯ ಕಾರ್ಯಗಳು ಬಿಲ್ಡಿಂಗ್ ಅಥವಾ ಕಟ್ಟಡಗಳು
ಆದರೆ ಇಲ್ಲಿ ಸುನ್ನಿಯ್ಯತ್ ಎಂಬ ಪೌಂಡೇಶನ್ ಅದುವೇ ಸರಿ ಇಲ್ಲದಿದ್ದರೆ ..
ಆ ದುರ್ಬಲ ಪೌಂಡೇಶನ್ ಮೇಲೆ ಕಟ್ಟುವ
ಕಟ್ಟಡಗಳು ಕೂಡಾ ದುರ್ಬಲ ತಾನೇ...?
ನಾವು ಯಾವುದೇ ಗುರಿ ಇಟ್ಟುಕೊಂಡು
ಕೆಲಸ ಮಾಡುವಾಗ ಅದರ ಹಿಂದೆ ಪರಲೋಕ ಮೋಕ್ಷ ಇರಬೇಕು
ಕಾರಣ ನಾವು ಮುಸ್ಲಿಮರು ತಾನೇ...??
ಪರಲೋಕ ಮೋಕ್ಷ ಸಿಗಬೇಕಾದರೆ
ನಮ್ಮ ಆದರ್ಶ ಸಿದ್ಧಾಂತಗಳಲ್ಲಿ ಬಧ್ದತೆ ನಮಗೆ ಬೇಕೇ ಬೇಕು
ಇಲ್ಲಿಯೇ ಎಸ್ಸೆಸ್ಸೆಫ್ ನ ಪಾತ್ರ ತುಂಬಾ ಗಮನಾರ್ಹ ವಾಗಿ ಕಾಣುವುದು..
ನಾನು ಗಮನಿಸಿದ್ದೇನೆ ..
ಎಸ್ಸೆಸ್ಸೆಫ್ ಒಂದು ಧಾರ್ಮಿಕ ಸಂಘಟನೆ ಯಾದರೂ ..
ಇತರ ಸಾಮಾಜಿಕ ಸಂಘಟನೆಗಳು ಕೂಡಾ
ಮೂಗಿಗೆ ಬೆರಳಿಟ್ಟು ಆಶ್ಚರ್ಯ ಪಡುವಂತಹ
ಸಾಮಾಜಿಕ ಕಾರ್ಯಗಳನ್ನು ಮಾಡಿ ಮಾದರಿಯಾಗುತ್ತದೆ..
ಅದಕ್ಕೇ ತಾಜಾ ಉದಾಹರಣೆ ಇತ್ತೀಚೆಗಿನ
ಯಶಸ್ವಿಯಾಗಿ ನಡೆದು ಎಲ್ಲರ ಮನದಲ್ಲಿ ಅಚ್ಚೊತ್ತಿ ನಿಂತ ಕರ್ನಾಟಕ ಯಾತ್ರೆ ...!
ಸುಮಾರು ಒಂಬತ್ತು ಹತ್ತು ದಿನಗಳ ಕಾಲ ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ಅತೀ ತ್ರಾಸದಾಯಕ ವಾಗಿ ಸಭೆ ಸಮಾರಂಭ ಸಂಘಟಿಸಿ ಕರ್ನಾಟಕದಲ್ಲಿ ಬೇರೂರಿ ನಿಂತಿದ್ದ
ಕೋಮುವಾದವನ್ನು ಕಿತ್ತೊಗೆಯುವ ನಿಟ್ಟಿನಲ್ಲಿ
ಇಸ್ಲಾಮಿನ ನೈಜ ಆಶಯಗಳನ್ನು ಕಲಿಸಿ ಕೊಡುವ ಸಂದರ್ಭಗಳಲ್ಲಯೂ ಕೂಡಾ
ಎಲ್ಲಯೂ ಸೈದ್ಧಾಂತಿಕವಾಗಿ ರಾಜಿ ಮಾಡಲು
ಎಸ್ಸೆಸ್ಸೆಫ್ ತಯಾರಿರಲಿಲ್ಲ...!!!
ಅದುವೇ ಎಸ್ಸೆಸ್ಸೆಫ್ ನ್ನು ಇತರ ಸಂಘಟನೆಗಳಿಗಿಂತ ಭಿನ್ನವಾಗಿ ಮಾಡುವುದು.
ಕಾರಣ ಎಸ್ಸೆಸ್ಸೆಫ್ ನವರು ಯಾವುದೇ
ಕಾರ್ಯಗಳನ್ನು ಕೈ ಗೊಂಡರು ಅದರ ಹಿಂದೆ
ಅವರು ಕನಸು ಕಾಣುವುದು ಅಲ್ಲಾಹನ ಸ್ವರ್ಗ ಮತ್ತು ತ್ರಪ್ತಿ ಮಾತ್ರ
ಬದಲಾಗಿ ಈ ದುನಿಯಾದ ರಟ್ಟೆ ಬಲ, ತಾತ್ಕಾಲಿಕ ಆವೇಶ,ಕೋಮುವೈರಾಗ್ಯ ಅಲ್ಲ..
ನಾನೊಬ್ಬ ಸುನ್ನಿ..
ಅದೇ ರೀತಿ ಸುನ್ನಿಗಳಾದ ಅನೇಕ ಯುವಕರಲ್ಲಿ ನನಗೆ ಹೇಳಲಿಕ್ಕೆ ಇರುವುದು
ತಾತ್ಕಾಲಿಕ ಕೋಮು ಆವೇಶದ ಹಿಂದೆ ಹೋಗಿ ನಮ್ಮ ಸಿದ್ದಾಂತ ವನ್ನು ಬಲಿ ಕೊಟ್ಟರೆ
ನಮ್ಮ ಯಾವುದೇ ಕಾರ್ಯಗಳಲ್ಲಿ ಅಲ್ಲಾಹನ ಸಹಾಯ ಇರಲ್ಲ ಅದು ಗ್ಯಾರಂಟಿ...
ಸೈಧ್ದಾಂತಿಕವಾಗಿ ಅಚಲರಾಗಿರಿ......
ಯಾವುದೇ ಕಾರ್ಯ ಮಾಡುವಾಗಲೂ ಅದರ ಹಿಂದೆ ಸ್ವರ್ಗ ಮತ್ತು ಅಲ್ಲಾಹನ ತ್ರಪ್ತಿ ಕನಸು ಕಾಣಿರಿ....
ಬೇರೆ ದುನಿಯಾದ ಕ್ಷಣಿಕ ರಟ್ಟೆಬಲ, ಹಣಬಲ,
ಕೋಮು ಆವೇಶದಿಂದ ದೂರವಿರಿ...
ಅಚಲವಾದ ಸುನ್ನಿ ವಿಶ್ವಾಸದೊಂದಿಗೆ ಅಲ್ಲಾಹನ ತ್ರಪ್ತಿಗಾಗಿ ಕೆಲಸ ಮಾಡಿ..
ಆವಾಗ ನೀವು ಅಲ್ಪ ಸಂಖ್ಯಾತರಾದರೂ ಕೂಡಾ ಅಲ್ಲಾಹು ಅವನ ಮಲಕ್ ಗಳ ಮೂಲಕ ನಿಮಗೆ ಸಹಾಯ ದೊರಕಿಸುವನು
ಎಸ್ಸೆಸ್ಸೆಫ್ ನ ವಿಜಯದ ರಹಸ್ಯ ಕೂಡಾ ಅದುವೇ ಆಗಿರಬಹುದು ಅದುವೇ ನನ್ನ ಅಚಲ ವಿಶ್ವಾಸ ....
ಹೌದು....
ಇಡೀ ಲೋಕವೇ ಎದುರು ನಿಂತರು ತಾನು ನಂಬಿದ ಆಶಯ ಆದರ್ಶ ವನ್ನು ತಬ್ಬಿಹಿಡಿದು
ಸಧೈರ್ಯದಿಂದ ಸೆಟೆದೆದ್ದು ನಿಂತು ಕಾರ್ಯಚರಣೆ ನಡೆಸಲು ಅದು ಎಸ್ಸೆಸ್ಸೆಫ್ ಗೆ ಮಾತ್ರ ಸಾಧ್ಯ ........
ನಮಗೆ ಯಾವುದು ಬೇಡ ಅಂತ ಯಾರೂ ಒಬ್ಬಂಟಿಗರಾಗ ಬೇಡಿ ..!!
"ಅಲೈಕುಮ್ ಬಿಲ್ ಜಮಾಅ:"
ನೀವು ಸಂಘಟಿತರಾಗಿ
"ಮನ್ ಶಝ್ಝ ಶುಝ್ಝ ಫಿ ನ್ನಾರ್"
ಯಾರಾದರೂ ಒಂಟಿಯಾದರೆ ಅವನು ನರಕದಲ್ಲಿಯೂ ಒಂಟಿ
ಎಂಬ ನೆಬಿ ವಚನ ನೆನಪಿಸುತ್ತಾ...
ನೀವು ಸೈದ್ಧಾಂತಿಕ ಭದ್ರತೆ ಇರುವ ಎಸ್ಸೆಸ್ಸೆಫ್ ನೊಂದಿಗೆ ಸಂಘ ಸೇರಿರಿ
ಇನ್ಶಾಅಲ್ಲಾ ಇದೇ ಡಿಸೆಂಬರ್ 5ರಿಂದ14ರ ತನಕ ಹತ್ತು ದಿವಸ ಎಸ್ಸೆಸ್ಸೆಫ್ ನ ಮೆಂಬರ್ ಶಿಫ್ ಅಭಿಯಾನ ನಡೆಯುತ್ತದೆ
ತಡಮಾಡಬೇಡಿ
ಅಲ್ಲಾಹನ ತ್ರಪ್ತಿ ಮತ್ತು
ಪರಲೋಕ ಮೋಕ್ಷ ಹಾಗೂ ಸ್ವರ್ಗದ ಕನಸಿನೊಂದಿಗೆ ಸದಸ್ಯರಾಗಿ...
ನನಗೆ ಇಷ್ಟರ ತನಕ ಎಸ್ಸೆಸ್ಸೆಫ್ ನ
ಮೆಂಬರ್ ಶಿಪ್ ಇಲ್ಲ
ಇನ್ಶಾಅಲ್ಲಾ ನಾನು ಈ ಸಂಘ ಶಕ್ತಿಯೊಂದಿಗೆ
ಸೇರಲು ತೀರ್ಮಾನ ಮಾಡಿದ್ದೇನೆ
ನೀವೂ ರೆಡಿ ತಾನೇ..
ನೀವು ನನಗಾಗಿ ದುಆ ಮಾಡಿ...
ನಿಮಗಾಗಿ ನಾನು ಸದಾ ದುಆ ಮಾಡುವೆ
ಇತೀ ನಿಮ್ಮವ ಅಬೂ ಶಝ ಪುತ್ತೂರು

No comments:

Post a Comment