Saturday, October 14, 2017

ನಿರ್ಜೀವ 'ದೀನ್' ಗೆ ಜೀವ ತುಂಬಿದ 'ಮುಹಿಯದ್ದೀನ್' ಗಳು..
————————————

ಮುಹಿಯದ್ದೀನ್!
ದೀನ್ ಗೆ ಹಯಾತ್ ತುಂಬಿದವರು!

ರಬೀವುಲ್ ಅವ್ವಲ್ ತಿಂಗಳ ಸ್ಮರಣೆಗೆ ಪ್ರಸಿದ್ಧರಾದ ಶೈಖ್ ಅಬ್ದುಲ್ ಖಾದರ್ ಜೀಲಾನಿ (ಖ ಅ).
ಅವರ ಕಾಲದಲ್ಲಿ ದೀನ್ ಸಂಪೂರ್ಣ ಅಧಪತನದ ಅಂಚಿನಲ್ಲಿತ್ತು!
ಹಾಗಾಗಿ 'ದೀನ್'ಗೆ ಹೊಸ ಚೈತನ್ಯ ನೀಡಿದ ಶೈಖ್ ರವರು 'ಮುಹಿಯದ್ದೀನ್'
ಎಂಬ ನಾಮದಲ್ಲಿ ಪ್ರಸಿದ್ಧರಾದರು.

ಅದೇ ರೀತಿ ದೀನನ್ನು ಕೊಲ್ಲುವ ವೈರಸ್ ನೂತನವಾದ ಹರಡಿದಾಗ ಅದನ್ನು ನಿರ್ಜೀವಗೊಳಿಸಲು ನಿರ್ಮಿಸಿದ ಸಂಘಟನೆಯಾಗಿದೆ ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ.
ನೂತನವಾದ ವೈರಸನ್ನು ಹಿಮ್ಮೆಟ್ಟಿ ಸಮಸ್ತ ಅಜೇಯವಾಗಿ ಮುನ್ನೇರುತ್ತಾ ಇತ್ತು.
ದೀನ್ ದೀನಾಗಿ ಜನರಲ್ಲಿ ಉಳಿಯುವಂತೆ ಅದು ಮಾಡಿತು.
ನೂತನವಾದ ತನ್ನ ಬಾಲಮಡಚಿ ಕುಳಿತುಕೊಂಡಿತು.

ಆದರೆ ಕಾಲಕ್ರಮೇಣ 'ದೀನ್' ರಾಜಕೀಯ ದಬ್ಬಾಳಿಕೆ ನಿಮಿತ್ತ ನೂತನವಾದದ ಹಿಡಿತದಲ್ಲಿ ನಲುಗತೊಡಗಿತು.
ಒಂದರ್ಥದಲ್ಲಿ ನೂತನವಾದ 'ದೀನ್'ನ್ನು ಹೈಜಾಕ್ ಮಾಡಿಯಾಗಿತ್ತು.!
ಹಾಗಾಗಿಯೇ ದೀನ್ ಅಧಪತನದ ಅಪಾಯ ಎದುರಿಸುತ್ತಿತ್ತು.!
 ದೀನ್  ನಷ್ಟ ಹೊಂದುವ ಎಲ್ಲಾ ಲಕ್ಣಣಗಳು ಗೋಚರಿಸಿದವು!

ಸುನ್ನಿಗಳ ಅಧೀನದಲ್ಲಿರುವ ಮಸೀದಿಗಳು ನೂತನವಾದಿಗಳ ಕೈಪಾಲಾಗುತ್ತಿತ್ತು.!

ತನ್ನ ಕೊನೆಯ ರಕ್ತ ಬಾಕಿಯಿರುವ ತನಕ ಸುನ್ನಿಗಳ ವಿರುದ್ಧ ಹೋರಾಡುವೆನು ಎಂದು ಒಬ್ಬ ರಾಜಕೀಯ ಪುಡಾರಿ ಅರಚುವಷ್ಟು ಕೀಳಾಗಿತ್ತು ದೀನ್!

ರಸ್ತೆ ಬದಿಯ ದೀನೀ ಪ್ರಚಾರಕ್ಕೂ ನಿರ್ಬಂಧ ಹೇರಳಾಗಿತ್ತು!

ದೀನೀ ಪ್ರಚಾರ ವೇದಿಕೆಗಳು ರಾಜಕೀಯ ವೇದಿಕೆಗಳಾಗುತ್ತಿತ್ತು.!

ಪಂಡಿತ ಸಭೆಯಲ್ಲಿ ರಾಜಕೀಯ ಹಿನ್ನಲೆಯುಳ್ಳವರು ಹತ್ತಿ ದರ್ಪ ತೋರಿಸತೊಡಗಿದ್ದರು!

ಅಂತೂ ಇಂತೂ ದೀನ್ ಹೇಳಲು ಸಾದ್ಯವಾಗದ ರೀತಿಯಲ್ಲಿ ಬಾಯಿ ಕಟ್ಟಲಾಗಿತ್ತು!

ಮದರಸ ಪಾಠ ಪುಸ್ತಕದಲ್ಲಿರುವ 'ನೂತನವಾದಿಗಳಿಗೆ ಸಲಾಂ ಹೇಳಕೂಡದು'
ಎಂಬ ಗೆರೆ ಯನ್ನೇ ಅಳಿಸಿ ಹಾಕಲು ಸಂಚು ಹೂಡಲಾಯಿತು.
ಕೆಲವರು ಆ ಅಧ್ಯಾಯವನ್ನೇ ಕಿತ್ತೆಸೆಯಲು ಫರ್ಮಾನು ಹೊರಡಿಸಿದರು!
ಮತ್ತೆ ಕೆಲವರು ಆ ಪುಸ್ತಕವನ್ನೇ ಹಿಂಪಡೆಯಲು ಸೂಚಿಸಿದರು!
ಅಂತೂ ಇಂತೂ ದೀನಿನ ಅವಸಾನ ಸಂಜಾತವಾಗಿತ್ತು!
ಆವಾಗಲೇ ಒಂದು ಘರ್ಜನೆ ಹೊರಬಂತು

"ದೀನ್ ಆಶಯದ ಒಂದಕ್ಷರವನ್ನು ಅಳಿಸಿ ಹಾಕುವಂತಿಲ್ಲ!"
"ಅದನ್ನು ಮುಟ್ಟುಲು ಅನುಮತಿ ಇಲ್ಲ!"

ಆ ಧೀರ ಶಬ್ದ ಕೇಳಿ ಎಲ್ಲರಿಗೂ ಸಿಡಿಲೆರಗಿದಂತಾಯಿತು!
ಸಭೆ ನಿಶ್ಚಲವಾಯಿತು!

ಅದು ತಾಜುಲ್ ಉಲಮಾ ರ ಘರ್ಜನೆಯಾಗಿತ್ತು!

ಕೊನೆಗೆ ಬಹುಮತದ ಅಭಿಪ್ರಾಯ ಮನ್ನಿಸುವಂತೆ ಕೋರಲಾಯಿತು..
ಆಗ ತಾಜುಲ್ ಉಲಮಾ ಪುನ ಘರ್ಜಿಸಿದರು

 "ಇಸ್ಲಾಮಿನ ನಿಯಮ ಬಹುಮತದಿಂದ ನಿರ್ಣಯುಸುವಂತಿಲ್ಲ"
"ಹಾಗೆ ನಿರ್ಣಯಿಸುವ ಸಭೆಯಲ್ಲಿ ನಾನಿಲ್ಲ"

 ಎಂದು ಹೇಳುತ್ತಾ ಸಧೈರ್ಯದಿಂದ ಎದ್ದು ಹೊರನಡೆದರು.

ಅದು ಎರಡನೇ 'ಮುಹಿಯದ್ದೀನ್' ಚಳುವಳಿ ಯಾಗಿತ್ತು.

(ಇದೇ ವಿಷಯವನ್ನು ಎಪಿ ಉಸ್ತಾದ್ ನಿನ್ನೆ ಕುತ್ತಾರ್ ನಲ್ಲಿ ನಡೆದ SYS ಸಮ್ಮೇಳನದಲ್ಲಿ ಸ್ಮರಿಸಿದರು)

ಖಲೀಫಾ ಅಬೂಬಕರ್ ಸಿದ್ದೀಕ್ (ರ) ರವರು ಖಿಲಾಫತ್ ವಹಿಸಿದಾಗ ಝಕಾತ್ ನಿಷೇಧಿಗಳು, ಕಳ್ಳ ಪ್ರವಾದಿಗಳು ರಂಗಪ್ರವೇಶಿಸಿ ಕಗ್ಗಂಟು ಸೃಷ್ಟಿಸಿದಾಗ ಅವರ ವಿರುದ್ಧ ಹೋರಾಡಲು ಕೆಲವರು ಹಿಂಜರಿದಾಗ
'ವಲವ್ ಕಾನ ವಹ್ದೀ'
ನಾನು ಒಬ್ಬಂಟಿಯಾಗಿ ಹೋರಾಡುವೆ ಎಂದು ಘರ್ಜಿಸಿದ್ದರು!

ಅದೇ ಘರ್ಜನೆ ಬಹು ತಾಜುಲ್ ಉಲಮಾ ಅಂದು ಹೊರನಡೆದಾಗ ಹೇಳಿದ್ದರು
'ವಲವ್ ಕಾನ ವಹ್ದೀ'
ಆ ಒಂದು ಘರ್ಜನೆ ದಿಟ್ಟವಾಗಿತ್ತು!

ನಂತರ ನಡೆದ ಕ್ರಾಂತಿ ಏನೆಂದು ಹೇಳಬೇಕಾಗಿಲ್ಲ ತಾನೇ?

ಹಾಗಾಗಿಯೇ ತಾಜುಲ್ ಉಲಮಾ ಎರಡನೇ 'ಮುಹಿಯದ್ದೀನ್' ಅಂದರೆ ನಿರ್ಜೀವವಾಗುತ್ತಿದ್ದ ದೀನ್ ಗೆ ಜೀವ ತುಂಬಿದವರು ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.

ಇಂದು ಸುನ್ನತ್ ಜಮಾತಗೆ ಇಝ್ಜತ್ ಇದೆ.
ಅದಕ್ಕೆ ಕಾರಣ ತಾಜುಲ್ ಉಲಮಾ ರವರ 'ವಲವ್ ಕಾನ ವಹ್'ದೀ' ಎಂಬ ಘರ್ಜನೆಯಾಗಿತ್ತು ಎಂಬುದನ್ನು ಯಾರೂ ಮೆರೆಯಬಾರದು.

ಅದೇ ರೀತಿ ಇಂದು ಘಟಾನುಘಟಿ ರಾಜಕೀಯ ನಾಯಕರು ಪಕ್ಷ ಭೇದ ಮೆರೆತು ನಮ್ಮ ಉಲಮಾಗಳ ಭೇಟಿಗಾಗಿ ಗಂಟೆಗಟ್ಟಲೆ ಕಾದು ಕುಳಿತು ಕೊಳ್ಳುವ ಪರಿಸ್ಥಿತಿ ಸಂಜಾತವಾಗಿದೆ.
 ಈ ಬದಲಾವಣೆಗೂ ಕಾರಣ ತಾಜುಲ್ ಉಲಮಾ ರವರ ದಿಟ್ಟ ಹೆಜ್ಜೆಯಾಗಿತ್ತು.

ಇಂದು ಸಳಪಿಯಾದಿ ಒಬ್ಬನೇ ಒಬ್ಬನಿಗೆ ಸುನ್ನಿ ಮಸೀದಿಗಳನ್ನು ಕಬಳಿಸಲು ಧೈರ್ಯ ಇಲ್ಲ. ಅದಕ್ಕೆ ಕಾರಣ ತಾಜುಲ್ ಉಲಮಾ ಅಂದು ತೆಗೆದ ದಿಟ್ಟ ನಿರ್ಧಾರವಾಗಿತ್ತು!

ಇಂದು ಸ್ವತಂತ್ರವಾಗಿ ಸುನ್ನತ್ ಜಮಾತ್ ಹೇಳಬಹುದು ಯಾರದೇ ಅಡ್ಡಿ ಆತಂಕಗಳು ಇಲ್ಲ ಅದಕ್ಕೆ ಕಾರಣ ತಾಜುಲ್ ಉಲಮಾರವರು ಅಂದಿನ ಗಟ್ಟಿ ತೀರ್ಮಾನವಾಗಿತ್ತು.

ಇಂದು ಸುನ್ನತ್ ಜಮಾತ್ ನ ಲೇಬಲಲ್ಲಿ ನಾವು ಮಾಡುವ ಸಾಮಾಜಿಕ, ಶೈಕ್ಷಣಿಕ ಧಾರ್ಮಿಕ ಎಲ್ಲಾ ಕಾರ್ಯಗಳಿಗೆ ಸ್ಪೂರ್ತಿ ತಾಜುಲ್ ಉಲಮಾರಾಗಿದ್ದರು.
ಆದ್ದರಿಂದಲೇ ಅವರು ಕಾಲಘಟ್ಟದ ಮುಜದ್ದಿದ್ ಎಂದರೆ ಅತಿಶಯೋಕ್ತಿಯೆಂದು ನನಗನಿಸಲ್ಲ.

ಈ ರಬೀಉಲ್ ಆಖರ್ ತಿಂಗಳು ಅಂತಹ ಕ್ರಾಂತಿ ಪುರುಷರಾದ ಶೈಖ್ ಮುಹಿಯದ್ದೀನ್ ಜೀಲಾನಿ,ಕಣ್ಣಿಯತ್ ಉಸ್ತಾದ್,ಸಂಶುಲ್ ಉಲಮಾ ಈಕೆ ಉಸ್ತಾದ್  ತಾಜುಲ್ ಉಲಮಾ ಉಳ್ಳಾಲ ತಂಙಳ್ ಮುಂತಾದವರನ್ನು ಸ್ಮರಿಸುವ ತಿಂಗಳಾಗಿದೆ
ಎಲ್ಲರೂ ಫಾತಿಹ ಯಾಸೀನ್ ಓದಿ ಅವರ ಪದವಿಯ ಉನ್ನತಿಗಾಗಿ ಪ್ರಾರ್ಥಿಸಿರಿ.
ಅಲ್ಲಾಹು ಅವರೊಂದಿಗೆ ನಮ್ಮನ್ನು ಸ್ವರ್ಗದಲ್ಲಿ.ಒಟ್ಟು ಸೇರಿಸಲಿ ಆಮೀನ್

✒ ಅಬೂಶಝ

No comments:

Post a Comment