*ವಿನಯದ ಮತ್ತೊಂದು ಹೆಸರು ಬಾಳೆಪುಣಿ ಉಸ್ತಾದ್*
*------------------------------*
ಅಂದು ನಾನು ಕಾಸರಗೋಡು ಕುಂಬ್ಳೆ ಸಮೀಪದ ನದಿದಡದ ಪ್ರಶಾಂತ ನಯನಮನೋಹರ ಪ್ರದೇಶವಾದ ವಳಯಂ ಎಂಬಲ್ಲಿ ದರ್ಸ್ ವಿದ್ಯಾರ್ಥಿಯಾಗಿದ್ದೆ.
*ಬಾಳೆಪುಣಿ ಉಸ್ತಾದ್* ಎಂಬ ಹೆಸರಲ್ಲಿ ಪ್ರಸಿದ್ದಿ ಹೊಂದಿದ ಶೈಖುನಾ ಮುಹಮ್ಮದಲಿ ಫೈಝಿ ಉಸ್ತಾದರ ಪ್ರೌಢವಾದ ದರ್ಸ್ ವಳಯಂ ಊರಿನ ಅಭಿಮಾನವಾಗಿತ್ತು.
ಬಾನೆತ್ತರಕ್ಕೆ ತಲೆ ಎತ್ತಿ ನಿಂತ ಏಕ ಮಿನಾರದ ಬೃಹತ್ತಾದ ಮಸೀದಿಯ ಮುಕುಟಕ್ಕೆ ಗರಿಯೆಂಬಂತಿತ್ತು ಸದರಿ ಪ್ರೌಢ ದರ್ಸ್.
ಉಸ್ತಾದರ ದರ್ಸ್ ನ ಪ್ಲಸ್ ಏನೆಂದರೆ ಉಸ್ತಾದರ ಅನುಪಸ್ಥಿತಿಯಲ್ಲಿಯೂ ದರ್ಸ್ ಸರಾಗವಾಗಿ ನಡೆಯುತ್ತಿತ್ತು.
ಸಾಮಾನ್ಯವಾಗಿ ಅಂದಿನ ಕೆಲವೊಂದು ದರ್ಸ್ ಗಳ ಅವಸ್ಥೆ ಮುದರ್ರಿಸ್ ಉಸ್ತಾದರು ಊರಿಗೆ ಹೊರಟರೆ ಅಷ್ಟೂ ದಿನ ವಿಶ್ರಮವಿಲ್ಲದೆ ಕಿತಾಬ್ ಕಲಿಕೆಯಲ್ಲಿ ತಲ್ಲೀನರಾದ ಮುತಅಲ್ಲಿಮರಿಗೆ ಅಲ್ಪಾವಧಿಯ ಫ್ರೀಡಮ್ ಸಿಕ್ಕಿದ ಅನುಭವವಾಗುತ್ತಿತ್ತು.
ಆದರೆ ಶೈಖುನಾ ಬಾಳೆಪುಣಿ ಉಸ್ತಾದರ ದರ್ಸ್ ಇದಕ್ಕೆ ತದ್ವಿರುದ್ಧವಾಗಿತ್ತು.
ಉಸ್ತಾದರ ಉಪಸ್ಥಿತಿಯಲ್ಲಿ ಮತ್ತು ಅನುಪಸ್ಥಿತಿಯಲ್ಲಿ ಮುತಅಲ್ಲಿಂಗಳು ಯಾವುದೇ ಮೊಟಕಿಲ್ಲದೆ ಕಿತಾಬ್ ಕಲಿಕೆಯಲ್ಲಿ ಮಗ್ನರಾಗುತ್ತಿದ್ದರು!
ಹಾಗೆ ಇರಲು ಒಂದು ದಿನ ನಾನು ಟೋಯ್ಲೇಟ್ ನಿಂದ ಹೊರಬಂದು ಹೌಳಿನ ಕಡೆ ವುಝೂ ಕರ್ಮಕ್ಕಾಗಿ ಹೋಗುತ್ತಿರಲು ಒಬ್ಬ ಶುಭ್ರವಸ್ತ್ರದಾರಿ ಉಸ್ತಾದರ ಆಗಮನವಾಯಿತು.ಸಲಾಂ ಹೇಳಿ ಮಾತನಾಡಿಸಿದಾಗ ಅವರು ಇಝ್ಝುದ್ದೀನ್ ಸಖಾಫಿ ಎಂದು ಪರಿಚಯ ಕೊಟ್ಟರು.
(ಮುಹಿಮ್ಮಾತ್ ಮೇನಜರ್ ಆಗಿದ್ದ ಮರ್ಹೂಮ್ ಇಝ್ಝುದ್ದೀನ್ ಸಖಾಫಿ)
ಅವರು ಬಾಳೆಪುಣಿ ಉಸ್ತಾದರನ್ನು ಬೇಟಿಯಾಗುವ ಇರಾದೆ ಹೊಂದಿದ್ದರೋ,ಏನೋ,
ಉಸ್ತಾದ್ ಇದ್ದಾರೆ ತಾನೇ? ಎಂದು ಕೇಳಿದಾಗ ನಾ ಹೇಳಿದೆ ಊರಿಗೆ ಹೋಗಿದ್ದಾರೆ.
(ಆವಾಗಲೂ ಮಸೀದಿಯ ಮೇಲೆ ಅಂತಸ್ತಿನಿಂದ ಮುತಅಲ್ಲಿಂಗಳು ಕಿತಾಬ್ ಕಲಿಯುವ ಶಬ್ದ ಜೋರಾಗಿ ಕೇಳುತ್ತಿತ್ತು.)
ನನ್ನ ಹೇಳಿಕೆಯಿಂದ ಆಶ್ಚರ್ಯಗೊಂಡ ಸಖಾಫಿ ಉಸ್ತಾದರು ಮೂಗಿಗೆ ಬೆರಳಿಟ್ಟು
ಈ ಕಾಲದಲ್ಲಿ ಇಂತಹ ದರ್ಸ್ ಇದೆಯಾ!?
ಮಾಶಾ ಅಲ್ಲಾ ಅಂತ ಉದ್ಗರಿಸಿ ಅಲ್ಲಿಂದ ಹೊರಟುಹೋದರು.
ಶಿಷ್ಯಂದಿರನ್ನು ಅಂತಹ ಆತ್ಮೀಯ ರಿಮೋಟ್ ಮೂಲಕ ನಿಯಂತ್ರಿಸುವ ಶಕ್ತಿ ಉಸ್ತಾದರಿಗಿತ್ತು.
ಹೊಡೆದು ಬಡಿದು ಕಲಿಸುವ ಶೈಲಿಯನ್ನು ಉಸ್ತಾದ್ avoid. ಮಾಡಿದ್ದರು.
ಕೇವಲ ಮಾತು ಉಪದೇಶದಿಂದಲೇ ಶಿಷ್ಯಂದಿರನ್ನು ನಿಯಂತ್ರಿಸುತ್ತಿದ್ದರು.
ಉಸ್ತಾದರ ಉಪದೇಶವು ಅತ್ಯಂತ ಎಫಕ್ಟೀವ್ ಆಗುತ್ತಿತ್ತು.
ಬಾಳೆಪುಣಿ ಉಸ್ತಾದರ ಉಪದೇಶ ಎಷ್ಟೊಂದು ಕ್ರಿಯಾಶೀಲವಾಗಿರುತ್ತೆಂದರೆ
ಶಾಲಾ ಕಾಲೇಜು ಬಿಟ್ಟು ಹೊಸದಾಗಿ ದರ್ಸ್ ಗೆ ಸೇರ್ಪಡೆಯಾಗುವ ಹಿಪ್ಪಿ ಕೂದಲಿನ ತಲೆಯೂ ಬೋಳಾಗುತ್ತಿತ್ತು!
ಫ್ಯಾಶನ್ ಡ್ರೆಸ್ ಗಳು 'ವಲಳ್ಳಾಲೀನ್' ಗೆ ಬದಲಾಗುತ್ತಿತ್ತು!!
ಫರಳ್ ನಮಾಜನ್ನೇ ಕಳಾ ಮಾಡುತ್ತಿದ್ದ ವಿದ್ಯಾರ್ಥಿಗಳು ಳುಹಾ ದಿಂದ ಹಿಡಿದು ವಿತ್ರ್ ತನಕ ಎಲ್ಲಾ ಸುನ್ನತ್ ನಮಾಜುಗಳನ್ನು ಫರಳಿನಂತೆ ಪೋರೈಸುವಷ್ಟು ಬದಲಾಗುತ್ತಿದ್ದರು!!
ಉಸ್ತಾದರ ಎಚ್ಚರಿಕೆ ಕೂಡಾ ಅತ್ಯಂತ ಚೂಪಾಗಿರುತ್ತಿತ್ತು.
ಒಬ್ಬ ವಿದ್ಯಾರ್ಥಿಯ ತಪ್ಪನ್ನು ಕಂಡು ಉಸ್ತಾದರು ಸ್ವಲ್ಪ ದುರುಗುಟ್ಟಿ ನೋಡಿದರೆ ಸಾಕು ಮತ್ತೆಂದೂ ಅವನು ಆ ತಪ್ಪನ್ನು ಪುನರಾವರ್ತಿಸಲಾರ!
ಮಾತ್ರವಲ್ಲ
ದಿನಪೂರ್ತಿ ತನನ್ನು ಉಸ್ತಾದರು ದುರುಗುಟ್ಟಿ ನೋಡಿದರಲ್ಲ ಎಂಬ ಟೆನ್ಶನ್ ನಲ್ಲಿಯೇ ಇರುತ್ತಾನೆ.
ಗುರು ಶಿಷ್ಯರ ಮದ್ಯೆ ಅಷ್ಟೊಂದು ಭಾವನಾತ್ಮಕ ಸಂಬಂಧವನ್ನು ಉಸ್ತಾದರು ಬೆಳೆಸುತ್ತಾರೆ.
ಅದು ಉಸ್ತಾದರ ಆತ್ಮೀಯ ನಿಯಂತ್ರಣವೆಂದೇ ಹೇಳಬಹುದು.
ಉಸ್ತಾದರ ಫಿಕ್ಹ್ ತರಗತಿ ಅತ್ಯಂತ ಆವೇಶವಾಗಿರುತ್ತದೆ.
ಅದೇ ರೀತಿ ನಹ್'ವ್ ಖಾಇದೆಯ ಕಬ್ಬಿಣದ ಕಡಲೆಯನ್ನು ಉದಾಹರಣೆ ಸಹಿತ ವಿವರಿಸುವ ಮೂಲಕ ನೆಲೆಗಡಲೆ ಪುಡಿಮಾಡುವಷ್ಟು ಸಲೀಸಾಗಿ ಟೀಚಿಂಗ್ ಕೊಡುವುದು ಉಸ್ತಾದರ ವಿಶೇಷತೆಯಾಗಿದೆ.
ಎಲ್ಲಾ ಫನ್ನ್ ಗಳನ್ನು ಸಮರ್ಥವಾಗಿ ನಿಭಾಯಿಸುವ ಉಸ್ತಾದರ ತರಗತಿ ವಿಶೇಷವಾದ ಅನುಭೂತಿ ನೀಡುತ್ತದೆ.ಉಸ್ತಾದರ ವಿಷಯವತರಣೆ ರೋಮಂಚನವಾಗಿರುತ್ತದೆ.
ಅತ್ಯಂತ ವಿಶಿಷ್ಠ ವೈವಿದ್ಯ ಪ್ರತಿಭೆ ಮತ್ತು ಚಿಂತಕರೂ ವಿದ್ವಾಂಸರೂ ಆಗಿರುವ ಉಸ್ತಾದರು ಅಧಿಕವಾಗಿ ಖಲ್ವತ್ (ಒಂಟಿತನ) ಇಷ್ಟಪಡುವ ಸೂಫಿ ಸ್ವಭಾವವನ್ನು ಮೈಗೂಡಿಸಿಕೊಂಡಿರುವುದರಿಂದ ನಮ್ಮಲ್ಲಿ ಹಲವರಿಗೆ ಉಸ್ತಾದರ ಪೂರ್ಣಚಿತ್ರಣ ಲಭಿಸಲಿಲ್ಲ ಎಂದರೆ ತಪ್ಪಾಗಲಾರದು.
ಆದರೂ ಉಸ್ತಾದರ ವಿದ್ವತ್ಪೂರ್ಣ ಬದುಕಿಗೆ ಅರ್ಹ ಗೌರವ ಎಂಬಂತೆ ದಕ್ಷಿಣ ಕನ್ನಡ ಜಂಇಯ್ಯತುಲ್ ಉಲಮಾ ಇದರ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಕರ್ನಾಟಕ ಮಣ್ಣಲ್ಲಿ ಅದೆಷ್ಟೋ ದಿಗ್ಗಜ ಉಲಮಗಳು ಇದ್ದೂ ಕೂಡಾ ಸೌತ್ ಕೆನರಾದ ಉಲಮಾ ಒಕ್ಕೂಟದ ಅಧ್ಯಕ್ಷ ಪದವಿ ಉಸ್ತಾದರ ನ್ನು ಹುಡುಕಿ ಬಂದಿರುವುದೇ ಅವರ ಅಗಾಧ ಪಾಂಡಿತ್ಯಕ್ಕೆ ಹಿಡಿದಕೈಗನ್ನಡಿಯಾಗಿದೆ.
ಒಂದೇ ಒಂದು ಕಪ್ಪುಚುಕ್ಕೆಯನ್ನು ಮೈಮೇಲೆ ಎಳೆಯದೆ ನಿಷ್ಕಳಂಕ ಬದುಕು ಸವೆಸಿರುವ ಉಸ್ತಾದರು ದರ್ಸ್ ರಂಗಕ್ಕೆ ತನ್ನ ಬದುಕನ್ನು ಮುಡಿಪಾಗಿಟ್ಟ ಕರ್ಮಯೋಗಿಯಾಗಿದ್ದಾರೆ.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಉಪಾಧ್ಯಕ್ಷರಾದ ತಾಜುಶ್ಶರೀಅ ಶೈಖುನಾ ಅಲಿಕುಂಞ್ಞಿ ಉಸ್ತಾದರ ಗರಡಿಯಲ್ಲಿ ಪಳಗಿ, ಪೂರ್ಣರ್ಥದಲ್ಲಿ ಶೈಖುನಾ ತಾಜುಶ್ಶರೀಅ ಉಸ್ತಾದರ ಶಿಷ್ಯತ್ವ ಅಂಗೀಕರಿಸಿದ ಬಾಳೆಪುಣಿ ಉಸ್ತಾದ್ ದರ್ಸ್ ರಂಗದಲ್ಲಿ ಸರಿಸುಮಾರು 28 ವರ್ಷ ಪೂರ್ತಿ ಮಾಡಿದ್ದಾರೆ.
ಇದೀಗ ಉಸ್ತಾದರ ಶಿಷ್ಯಂದಿರ ಸಂಘಟನೆಯಾದ *ಮಜ್ಲಿಸು ಹಿಮಾಯತಿದ್ದುರೂಸ್* ಎಂಬ ಸಂಘಟನೆಯು ಬೃಹತ್ತಾದ ಅಧ್ಯಯನ ತರಗತಿಯೊಂದನ್ನು ಸಾರ್ವಜನಿಕವಾಗಿ ಹಮ್ಮಿಕೊಂಡಿದೆ.
ಉಸ್ತಾದರ ಇಲ್ಮ್ ಎಲ್ಲರಿಗೂ ತಲುಪವಂತಾಗಲಿ ಎಂಬ ಉದ್ದೇಶವಿದೆ.
ಇನ್ಶಾಅಲ್ಲಾ...
ನಾಡಿದು ಮೇ 23 ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಎಲ್ಲರೂ ಮುಡಿಪು ಎಜ್ಯು ಪಾರ್ಕಿಗೆ ಬನ್ನಿ
*ರಮಾಳಾನ್ ಪೂರ್ವ ಸಿದ್ದತೆ*
ಎಂಬ ವಿಷಯದಲ್ಲಿ ಬಾಳೆಪುಣಿ ಉಸ್ತಾದರ ಸಮಗ್ರವಾದ ತರಗತಿ ನಿಮಗೆ ಆಲಿಸಬಹುದು.
ಉಸ್ತಾದರ ಕ್ಲಾಸ್ ನಿಮಗೆ ಪೂರ್ಣರ್ಥದಲ್ಲಿ ಅತ್ಯಂತ ಎಫಕ್ಟೀವ್ ಆಗುವುದರಲ್ಲಿ ಸಂಶಯವಿಲ್ಲ.
ಎಲ್ಲರೂ ಬಂದು ಸದುಪಯೋಗಪಡೆಯಿರಿ...
ನೆನಪಿರಲಿ...
*ಮೇ 23 ಬೆಳಿಗ್ಗೆ 10 ಗಂಟೆಗೆ ಮುಡಿಪು ಎಜ್ಯು ಪಾರ್ಕ್ ನಲ್ಲಿ..*
-ಅಬೂಶಝ
No comments:
Post a Comment