Saturday, October 14, 2017

*ಮಹಬೂಬ್ ಸಖಾಫಿ ಎಲ್ಲರ ಮಹ್ಬೂಬ್ ಆಗಿದ್ದರು ಎಂದು KCF UAE ರಾಷ್ಟ್ರೀಯ ನಾಯಕ ಹಮೀದ್ ಸಅದಿ ಹೇಳಿಕೆ ಅದು ಕೇವಲ ಅಲಂಕಾರದ ಮಾತಲ್ಲ.*

ಹೌದು,
ಆ ವಾರ್ತೆ ಸಿಡಿಲಬ್ಬರದಂತೆ UAE KCF ನ್ನು ವಿಶೇಷವಾಗಿ ದುಬೈ KCF ನ ಬಡಿದಿರಬಹುದೆಂಬುದರಲ್ಲಿ ಸಂಶಯವಿಲ್ಲ.

ಮಹ್ಬೂಬ್ ಸಖಾಫಿ ಎಂಬ ಸಕ್ರಿಯ ನಾಯಕ/ಕಾರ್ಯಕರ್ತ  ದುಬೈಗೆ ವಿದಾಯ ಹೇಳಿ ಹೋಗುವುದೆಂದರೆ ಅದನ್ನು ಅಷ್ಟು ಬೇಗ ಅರಗಿಸಿಕೊಳ್ಳಲು ಕಾರ್ಯಕರ್ತರಿಗೆ ಸಾದ್ಯವಾಗಲಾರದು ಎಂಬುದು ದಿಟ.
ಕಾರಣ ಅವರು ಅಷ್ಟೊಂದು ಸಕ್ರಿಯರಾಗಿದ್ದರು.ಕೇವಲ ಸ್ವತ ಸಕ್ರಿಯರಾಗುವುದು ಮಾತ್ರವಲ್ಲ   ಇಡೀ ಕೆಸಿಎಫ್ ತಂಡವನ್ನೇ ಸಕ್ರಿಯರಾಗಿಸುತ್ತಿದ್ದರು.
ಮಹಬೂಬ್ ಸಖಾಫಿಯ ಬುಲಾವ್ ಬಂತೆಂದರೆ ಪ್ರತಿಯೊಬ್ಬ ಕಾರ್ಯಕರ್ತನಿಗೂ  ಅದೊಂದು ಹೆಮ್ಮೆ.ತಕ್ಷಣ ಸೆಟೆದೆದ್ದು ಅವರ ಕರೆಗೆ ಓಗೊಟ್ಟು ಓಡುತ್ತಿದ್ದನು.
ಅಷ್ಟೊಂದು ಪ್ರೀತಿಯ ಪ್ರಭಾವ ಕಾರ್ಯಕರ್ತರ ಮತ್ತು ನಾಯಕರ ಮದ್ಯೆ ಅವರು ಸಂವಹನಗೊಳಿಸಿದ್ದರು.

ಅದಕ್ಕಾಗಿಯೇ ಹೇಳಿದ್ದು  *ಮಹ್ಬೂಬ್ ಎಲ್ಲರ ಮಹ್'ಬೂಬ್ ಆಗಿದ್ದರು ಎಂಬುದು ಕೇವಲ ಆಲಂಕಾರದ ಮಾತಲ್ಲ! ಅಕ್ಷರಶ ಎಲ್ಲರ ಪ್ರೀತಿಯ ಮಹ್ಬೂಬ್ ಆಗಿದ್ದರು*

ಅವರು ದುಬೈ ಝೋನ್ ಅಧ್ಯಕ್ಷರಾಗಿ ಆಯ್ಕೆ ಗೊಂಡಾಗಲೇ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಯಾಗಿತ್ತು. KCF ದುಬೈ ಝೋನ್ ಅಮೂಲಾಗ್ರ ಬದಲಾವಣೆ ಕಂಡಿತು.ಸೆಕ್ಟರ್ ಗಳ ಕಾರ್ಯಚಟುವಟಿಕೆಗಳು ಚುರುಕುಗೊಂಡವು ನಂತರ ರೂಪೀಕೃತವಾದ ಯುನಿಟ್ ಗಳ ಕಾರ್ಯಚರಣೆಗಳೂ ವೇಗ ಪಡೆಯಿತು.ಅವರೊಂದಿಗೆ ಸೇರಿ ಫೀಲ್ಡ್ ವರ್ಕ್ ಮಾಡುವುದೆಂದರೆ ಬಹಳ ಖುಷಿಯ ವಿಷಯ.

ಕಾರ್ಯಕರ್ತರ ಸಣ್ಣ ಸಣ್ಣ ಸಾದನೆಗಳನ್ನು ಗುರುತಿಸಿ ಬೆನ್ನು  ತಟ್ಟಿ ಪ್ರೋತ್ಸಾಹಿಸುವ ವಿಶೇಷ ವ್ಯಕ್ತಿತ್ವ ಮಹ್ಬೂಬಿನದ್ದು.

ಸಂಘಟನೆಯ ಸಬಲೀಕರಣಕ್ಕಾಗಿ ಪ್ರತೀ ಶುಕ್ರವಾರ ರಾತ್ರಿ ಹನ್ನೆರಡು ಗಂಟೆಯಿಂದ ಸುಬಹ್ ಅಝಾನ್ ತನಕ ಮೀಟಿಂಗ್ ಮಾಡಿಸಿ,ಕಾರ್ಯಕರ್ತರಿಗೆ ನಿದ್ರೆ ಬಾರದಂತೆ ಅವರನ್ನು ನಗೆ ಚಟಾಕಿ ಹಾರಿಸಿ ಹುರಿದುಂಬಿಸುವ ಮಹ್ಬೂಬಿನ ಸಾಮರ್ಥ್ಯ ಮೆಚ್ಚುವಂತದ್ದು.
ನಾಯಕ ಸೇವಕನಾಗಿರಬೇಕೆಂಬ ತತ್ವ ಸಂಪೂರ್ಣವಾಗಿ ಅಳವಡಿಸಿಕೊಂಡವರಾಗಿದ್ದರು ಮಹ್ಬೂಬ್ ಸಖಾಫಿ.

ಅವರ ನಿಸ್ವಾರ್ಥ ಸೇವೆ ದುಬೈ ಕೆಸಿಎಫ್ ನ್ನು ಬಲಿಷ್ಠಗೊಳಿಸಿದೆ ಎಂಬುದರಲ್ಲಿ ನಾಯಕರು ಕಾರ್ಯಕರ್ತರು ಸಹಿತ ಯಾರಿಗೂ ಎರಡು ಅಭಿಪ್ರಾಯ ಇರಲ್ಲ.
ಅವರೊಬ್ಬ ಅದ್ಬುತ ವಾಗ್ಮಿ ಕೂಡಾ.
ಮಲಯಾಳ ಬಾಷೆ ಮತ್ತು ಕನ್ನಡ ಬಾಷೆಗಳಲ್ಲಿ ಗಂಟೆಗಟ್ಟಲೆ ನಿರರ್ಗಳವಾಗಿ ಭಾಷಣ ಮಾಡಬಲ್ಲರು.
ಎಸ್ಸೆಸ್ಸೆಫ್ ಮುಖ ಪತ್ರ ಇಶಾರ ಬಿಡುಗಡೆಯ ಸಂದರ್ಭದಲ್ಲಿ ಅವರು ಮಾಡಿದ ಕನ್ನಡ ಭಾಷಣವನ್ನು ಆಲಿಸಿದ ಕರ್ನಾಟಕ ಸರಕಾರದ ಸ್ಪೀಕರ್ ಆಗಿದ್ದ ಕಾಗೋಡು ತಿಮ್ಮಪ್ಪ ರವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

KCF ವತಿಯಿಂದ ನಡೆಸಲ್ಪಡುವ ಸ್ವಾತಂತ್ರೋತ್ಸವ ಕಾರ್ಯಕ್ರಮಗಳಲ್ಲಿ ಸಭಿಕರನ್ನು ಮಂತ್ರಮುಗ್ದಗೊಳಿಸುವ ರೀತಿಯಲ್ಲಿ ಕನ್ನಡ ಪ್ರಭಾಷಣ ನಡೆಸಿದ್ದು ನೆನಪಿದೆ.
ಅತಿಥಿಗಳಾಗಿ ಬಂದವರೆಲ್ಲರೂ ಅವರ ಭಾಷಣವನ್ನು ಮೆಚ್ಚಿದ್ದರು.
ಹಿರಿಯ ಕಿರಿಯ ಎಂಬ ಭೇದಭಾವವಿಲ್ಲದೆ ಎಲ್ಲರೊಂದಿಗೂ ಪ್ರೀತಿಯಿಂದ ಒಡನಾಟ ಮಾಡುವ ಮಹಬೂಬ್ ಸಖಾಫಿ ವಿದೇಶ ಬದುಕಿಗೆ ವಿದಾಯ ಹೇಳಿ ಬರುವುದರಿಂದ ದುಬೈ ಕೆಸಿಎಫ್ ಕಾರ್ಯಕರ್ತರಿಗೆ ಸ್ವಲ್ಪ ಮಟ್ಟಿನ ಅನಾಥ ಅನುಭವ ಆಗಬಹುದಾದರೂ ಅಲ್ಲಾಹನ ವಿಧಿ ಹಾಗೆಂದು ಭಾವಿಸಿ ಸಮಾದಾನ ಪಟ್ಟುಕೊಳ್ಳುವರೆಂದು ಬಾವಿಸುತ್ತೇನೆ.

ಕೆಸಿಎಫ್ ನ ಮುನ್ನಡೆಗೆ ಯಾವುದೇ ದಕ್ಕೆ ಬಾರದಂತೆ ಚುಕ್ಕಾಣಿ ಹಿಡಿಯುವ ಹಲವಾರು ಪ್ರಭಾವಿ ನಾಯಕರನ್ನು ಕೂಡಾ ಮಹಬೂಬ್ ಸಖಾಫಿ ಸೃಷ್ಟಿಸಿದ್ದರು.
ಅಲ್ಲಾಹು ಅವರ ತ್ಯಾಗಭರಿತ ಕಾರ್ಯಚಟುವಟಿಕೆಗಳನ್ನು ಸ್ವೀಕರಿಸಲಿ ಆಮೀನ್.

ಅಂದ ಹಾಗೆ ಮಹಬೂಬ್ ಸಖಾಫಿಯವರು ತನ್ನ ಚಟುವಟಿಕೆಗಳ ಕರ್ಮಭೂಮಿಯಾಗಿ ಊರನ್ನು ಆರಿಸಿದ್ದರಿಂದಲೇ ಇಲ್ಲಿನ ಸುನ್ನೀ ಕಾರ್ಯಕರ್ತರು ಬಹಳ ಸಂತೋಷದಲ್ಲಿದ್ದಾರೆ.
ಅವರ ಸೇವೆಯನ್ನು ನಿರೀಕ್ಷಿಸುತ್ತಾ ಕಾತರದಿಂದ ಕಾಯುತ್ತಿದ್ದಾರೆ.

ಊರಿಗೆ ಆಗಮಿಸುತ್ತಿರುವ ನನ್ನ ಆತ್ಮೀಯ ಮಿತ್ರ ಮಹಬೂಬ್ ಸಖಾಫಿ ಉಸ್ತಾದರಿಗೆ ಹೃದಯಾಂತರಾಳದ ಸುಸ್ವಾಗತ💐💐💐
- ಅಬೂಶಝ

No comments:

Post a Comment