Saturday, October 14, 2017

*ಮಂಗಳೂರನ್ನೇ ನಿಬ್ಬೆರಗಾಗಿಸಿದ ಧೀರ ಧ್ವನಿಯಾಗಿತ್ತು ನಿನ್ನೆ ಮಂಗಳೂರಿನಲ್ಲಿ ಸುನ್ನೀ ಒಕ್ಕೂಟ ಮೊಳಗಿಸಿದ್ದು...!!*

ಹೌದು ಏಕರೂಪನಾಗರಿಕ ಸಂಹಿತೆ ಮತ್ತು ತ್ರಿವಳಿ ತಲಾಖ್ ಎಂಬ ಬೊಮ್ಮನನ್ನು ತೋರಿಸಿ ಶರೀಅ ನಿಯಮಕ್ಕೆ ಕೈ ತೂರಿಸುವ ಕೇಂದ್ರ ಸರಕಾರದ ಉದ್ದಟತನದ ನಿಲುವನ್ನು ಸುನ್ನೀ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸಿ ನಿನ್ನೆ ಡಿ ಸಿ ಕಛೇರಿ ಮುಂದೆ ನಡೆಸಿದ ಪ್ರತಿಭಟನೆ ಅತ್ಯಂತ ಯಶಸ್ವಿಯಾಗಿ ಮುಗಿಯಿತು.
ಮುಸ್ಲಿಮರೆಡೆಯಲ್ಲಿರುವ ಸಣ್ಣ ಸಣ್ಣ ಭಿನ್ನಮತಗಳನ್ನು ಮತ್ತು ಕೆಲವೊಂದು ನಾಮದಾರಿ ಮುಸ್ಲಿಂ ಬಂಡಾಯ ಮಹಿಳಾ ನಾರಿಗಳನ್ನು ತೋರಿಸಿ ಇಸ್ಲಾಮಿನ ಶರೀಅ ಎಂಬ ಬುಡಕ್ಕೆ ಕೊಡಲಿಯೇಟು ನೀಡುವ ಸರಕಾರದ ಹುನ್ನಾರವನ್ನು *ನಾವು ಭಿನ್ನತೆಯಲ್ಲೂ ಐಕ್ಯರಾಗಿದ್ದೇವೆ* ಎಂಬ  ಮಹಾನ್ ಖಾಝಿಯವರಾದ ಬೇಕಲ್ ಉಸ್ತಾದ್ ರವರು ರವಾನಿಸಿದ ಸಂದೇಶ ಸರಕಾರದ ಕುತಂತ್ರ ನೀತಿಯ ಬುಡವನ್ನೇ ಕಿತ್ತೆಸೆಯುವಂತಿತ್ತು.
ಜೊತೆಗೆ ಮುಸ್ಲಿಮರೆಡೆಯಲ್ಲಿರುವ ಸಣ್ಣ ಸಣ್ಣ ಭಿನ್ನತೆಯನ್ನೇ ವೈಭವೀಕರಿಸಿ ಪದೇ ಪದೇ ಅದನ್ನೇ ಎಲ್ಲಾ ಕಡೆ ಡಿಸ್ಪ್'ಳೆ ಮಾಡುತ್ತಾ ಕೀಳರಿಮೆ ಸೃಷ್ಟಿಸುವ ಸಮುದಾಯ 'ಹೀರೋ'ಗಳಿಗೂ ಬೇಕಲ ಉಸ್ತಾದ್ ನಿನ್ನೆ ಚಾಟಿಯೇಟು ಬೀಸಿದರು.

*ಮುಸ್ಲಿಂ ಸಮುದಾಯ ಭಿನ್ನತೆಯಲ್ಲಿ ಹಂಚಿಹೋಗಿದ್ದಾರೆ ಎಂಬ ಕೀಳರಿಮೆ ಬೇಡ.ನಾವು ಭಿನ್ನತೆಯಲ್ಲೂ ಐಕ್ಯರಾಗಿದ್ದೇವೆ*ಎಂಬ ಖಾಝಿಯವರ ತೂಕದ ಮಾತು ಮುಸ್ಲಿಂ ಸಮುದಾಯವನ್ನು ನೆಕ್ಕಿ ತಿನ್ನಲು ಹವಣಿಸುತ್ತಿರುವ ಶತ್ರುಪಾಳಯಕ್ಕೆ ಎಚ್ಚರಿಕೆಯ ಘಂಟೆಯಾಗಿತ್ತು!

ಪ್ರೊಟಸ್ಟ್ ಸಭೆಯನ್ನು ಉದ್ಘಾಟನೆಗೈದು ಮಾತನಾಡಿದ ಮೌಲಾನಾ ಶಾಫಿ ಸಹದಿ ಉಸ್ತಾದ್ ತನ್ನ ಭಾಷಣದುದ್ದಕ್ಕೂ ತನ್ನ ಬಟ್ಟಲಲ್ಲಿ ಹೆಗ್ಗಣ ಬಿದ್ದಿದ್ದರೂ ಮತ್ತೊಬ್ಬರ ಬಟ್ಟಲಲ್ಲಿ ಬಿದ್ದಿರುವ ನೊಣವನ್ನು ತೋರಿಸುವ ವೀರ ಶೂರ ದೊರೆಗಳನ್ನು ಕೆಣಕಿಸುತ್ತಿದ್ದರು.

ಅದಕ್ಕವರು *ಅಖ್ಲಾಕ್ ಪತ್ನಿ,ಗುಜರಾತ್ ಸಂತ್ರಸ್ಥೆ ಕೌಸರ್ ಬಾನು,ಜಾರ್ಖಂಡ್ ನಲ್ಲಿ ಕೊಂದು ಹಿಸುಕಿ ಹಾಕಿದ ಇಬ್ಬರು  ಸಹೋದರರ ಕುಟುಂಬದ ಅನಾಥೆಗಳಾದ ಮುಸ್ಲಿಂ ಮಹಿಳೆಯರು,ಇಹ್ಸಾನ್ ಜಾಫ್ರಿಯ ಪತ್ನಿಯಾದ ಮುಸ್ಲಿಂ ಸಂತ್ರಸ್ಥೆ ಮಹಿಳೆ ಮುಂತಾದ ಅನೇಕ ಉದಾಹರಣೆಗಳನ್ನು ಎಳೆಎಳೆಯಾಗಿ ಬಿಡಿಸಿ ಮುಸ್ಲಿಂ ಮಹಿಳೆಯರ ಕುರಿತು ಮೊಸಳೆ ಕಣ್ಣೀರು ಸುರಿಸುವ ಆಡಳಿತರೂಡ ವೃಂದಕ್ಕೆ ಸಖತ್ತ್ ಟಾಂಗ್ ಕೊಟ್ಟರು*

ಇಷ್ಟೆಲ್ಲಾ ರಾದ್ದಾಂತ ನಡೆಯುವಾಗಲೂ ತುಟಿಕ್ ಪಿಟಿಕ್ ಎನ್ನದೆ ಗುಮ್ಮನಂತೆ ಕೂತಿರುವ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಶಾಫಿಸಹದಿ ಉಸ್ತಾದ್,ನಿಮ್ಮ ಈ ಅಸಹ್ಯ ಮೌನವನ್ನು ಕೈ ಬಿಡದಿದ್ದಲ್ಲಿ ಭವಿಷ್ಯದಲ್ಲಿ ನೀವು ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ನೇರವಾಗಿ ಎಚ್ಚರಿಕೆ ಕೊಡುವ ಮೂಲಕ ಸುನ್ನೀ ಸಮೂಹ ಯಾವುದೇ ಪಕ್ಷದ ಜೀತದಾಳುಗಳಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದರು.
ತ್ರಿವಳಿ ತಲಾಖ್ ಮತ್ತು ಏಕರೂಪ ಸಂಹಿತೆ ವಿವಾದ ವಿರುದ್ದ ನಡೆಯುವ ಪ್ರತಿಭಟನೆಯು ಬಿಜೆಪಿ ವಿರುದ್ದ ವೆಂದು ವ್ಯಾಖ್ಯಾನಿಸಿ ಅದನ್ನು ರಾಜಕೀಯಗೊಳಿಸಿ ಲಾಭ ಪಡೆಯಲು ಹುನ್ನಾರ ನಡೆಸುವವರ ಕುತಂತ್ರವನ್ನು ಅರಿತುಕೊಂಡೇ ಶಾಫಿ ಸಹದಿ ಉಸ್ತಾದ್ ಇದ್ಯಾವುದೇ ರಾಜಕೀಯ ಪಕ್ಷದ ವಿರುದ್ದ ಅಲ್ಲ 85 ರ ಕಾಲದಲ್ಲಿ ರಾಜೀವ್ ಗಾಂಧಿಯವರ ಕಾಂಗ್ರೆಸ್ ಸರಕಾರದ ಕಾಲದಲ್ಲೂ ಇದೇ ವಿಷಯ ಬಂದಾಗ ನಾವೆಲ್ಲಾ ಒಗ್ಗಟ್ಟಾಗಿ ಪ್ರತಿಭಟಿಸಿದ್ದೇವೆ ಎಂದು ಹೇಳುವ ಮೂಲಕ ಅವರ ಕುಪ್ರಚಾರಗಳಿಗೂ ಗತಿ ತೋರಿಸಿದರು.

*ಶರೀಅತ್ ಅದು ನಮ್ಮ ಉಸಿರು ಅದರ ವಿರುದ್ದ ಯಾರು ಕೈ ಹಾಕಿದರೂ ನಾವು ಪ್ರತಿಭಟಿಸಿಯೇ ತೀರುತ್ತೇವೆ* ಎಂದ ಶಾಫಿ ಸಹದಿ ಇದು ಆರಂಭ ಮಾತ್ರ ಕರ್ನಾಟಕದಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ನಾವು ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ ಎಂದರು.

ಭಾಷಣ ರತ್ನ ಝೈನಿ ಉಸ್ತಾದರು
ಮಂಗಳೂರನ್ನೇ ನಿಬ್ಬೆರಗಾಗಿಸುವ ತನ್ನ ಭಾಷಣದಲ್ಲಿ ಶಾಇರಾ ಬಾನುವಿಗೆ ಅವಳ ಪತಿ ಕೊಟ್ಟ ಎಲ್ಲಾ ಹಿಂಸೆಗಳ ವಿರುದ್ದ  ಆ ಮಹಿಳೆಯ ಜೊತೆ ಇದ್ದೇವೆ.ಅದರೆ ಶರೀಅತ್ ನಿಯಮವನ್ನೇ ಬುಡಮೇಲು ಮಾಡುವ ಅವಳ ಅಪಕ್ವ ಹೇಳಿಕೆಗೆ ಯಾವತ್ತೂ ಬೆಂಬಲವಿಲ್ಲ ಎಂದರು.
ಅಂತೂ ಇಂತೂ ಸುನ್ನೀ ಒಕ್ಕೂಟ ಹಮ್ಮಿ ಕೊಂಡ ನಿನ್ನೆಯ ಪ್ರತಿಭಟನೆ ಮಾದರಿಯುತ ಮತ್ತು ಸರಕಾರಗಳಿಗೆ ಬಿಸಿಮುಟ್ಟಿಸುವ ಎಚ್ಚರಿಕೆಯ ಧ್ವನಿಗಳಾಗಿತ್ತು.
-ಅಬೂಶಝ

No comments:

Post a Comment