'ರಬಿಅ್'ನ ಆಗಮನ ಇಬ್ಲೀಸನ
! ನಿರ್ಗಮನ !
--------------------------
ಈದ್ ಮೀಲಾದ್ ಬಂದಿತು!
ಹರುಷವ ತುಂಬಾ ತಂದಿತು!
ಕಪಟಿಗಳಿಗೆ ನೋವ ಕೊಟ್ಟಿತು!
ಅತ್ತು ಅತ್ತು ಕಣ್ಣು ಕೆಂಪಡರಿತು!
ಮೂಸಿ ನೋಡಲಿಲ್ಲ ವಿಶ್ವಾಸಿಗಳು ಅವರ ಗೋಳನ್ನು....!
ಸಡಗರ ಸಂಭ್ರಮದಿ ಆಚರಿಸಿದರು ನೆಬಿ ಜನ್ಮ ದಿನವನ್ನು...!
ಕಣ್ಣೀರ ಸುರಿಸಿ ತೋರ್ಪಡಿಸಿದರು ಜಮಮುಜ ತಮ್ಮ ನೋವನ್ನು!
ಕುರಾನ್ ಹೇಳಿತು ನೀವು ಸಂತೋಷಪಡಿರಿ...
ನೆಬಿಯೆಂಬ ರಹ್ಮತ್ ಉದಯಿಸಿದ ಆ ದಿನದಂದು...!
ವಿಶ್ವಾಸಿಗಳು ಆ ಸ್ಮರಣೆ ಹೊತ್ತು ಸಂತೋಷ ಪಡೆವರು!
ಆಡು ಕುರಿ ಒಂಟೆ ಗಳನ್ನು ಕೊಯ್ದು ಊಟ ಬಡಿಸುವರು!
ಬಡ ಬಗ್ಗರಾದಿ ಎಲ್ಲರೂ ಜತೆ ಸೇರುವರು!
ಕುರಾನ್ ಹೇಳಿದೆ ಅಂಬಿಯಾಗಳ ಮೌಲಿದ್ ಒಟ್ಟೊಟ್ಟಿಗೆ!
ಮೌಲಿದ್'ಗೆ ಮೀಸಲಾಗಿತ್ತು ಮದೀನಾ ಮಿಂಬರ್ ಹಸ್ಸಾನ್ ಬಿನ್ ಸಾಬಿತ್'ಗೆ!
ಹಾಡಿದರು 'ಹಸ್ಸಾನ್' ತಿರು ಕೀರ್ತನೆ ಪದ್ಯ ಗದ್ಯಗಳಾಗಿ..!
ಜತೆಗೂಡಿದರು ಕಹ್'ಬ್ ಬೆನ್ನಲುಬಾಗಿ!
ಹೊದಿಸಿದರು ಶಾಲನ್ನ ತಿರು ನೆಬಿಯರು
ಅಂಗೀಕಾರ ಮುದ್ರೆಯಾಗಿ...!
ರೂಹುಲ್'ಖುದುಸೆಂಬ ಶಕ್ತಿ ಪ್ರಾಪ್ತಿಯ ದುಆ ಹರಿಯಿತು ಪ್ರಾರ್ಥನೆಯಾಗಿ!
ನೆಬಿಯರ ವಫಾತ್ ರಬೀಅ್ ಹನ್ನೆರಡರಂದು!
ವಿಶ್ವಾಸಿಗಳ ಪಾಲಿನ ಕಹಿ ದಿನವಂದು!
ಎಲ್ಲರ ಕಣ್ಣ ತೆರಸಿತು ನೆಬಿ ವಚನವೊಂದು
"ನನ್ನ ಮೌತ್ ಹಯಾತ್ ಎರಡೂ ನಿಮ್ಮ ಪಾಲಿಗೆ ಖೈರೆಂದು"
'ದುಖ ಆಚರಣೆ ಅನಿಸ್ಲಾಮಿಕ'ವೆಂದೂ..!
ಎದೆ ಗುಂದದಿರಿ....!
ಹಿಂದೆ ಸರಿಯದಿರಿ ....!
ವಿತಂಡವಾದಿಗಳ ವಾದ ಕೇಳಿ...
ಮುನ್ನಡೆಯಿರಿ ಮುನ್ನೆಡಿಯಿರಿ
ವಿಜಯ ನಿಮ್ಮದೇ ಮೆರೆಯದಿರಿ!
ನೆಬಿ ಜನ್ಮ ದಿನವ ಆಚರಿಸಿ ಸಡಗರ ಸಂಭ್ರಮದಲಿ!
ಇಬ್ಲೀಸ್ ಸಂಗಡಿಗರು ಮುಳುಗಲಿ ದುಖ ಸಾಗರದಲಿ!
'ಇಶ್ಕ್'ನ ಅಲೆ ಎಲ್ಲಲ್ಲೂ ಮೊಳಗಲಿ!
ಈದ್ ಮೀಲಾದ್ ಗೆ ಜಯವಾಗಲಿ!
✒ಅಬೂಶಝ
No comments:
Post a Comment