✍🏽D.p
ಉಲಮಾಗಳ ಫೋಟೋ ಬ್ಯಾನರ್,ಬೋರ್ಡ್ ಗಳಲ್ಲಿ ಹಾಕಿ ನೇತಾಡಿಸುವುದು ಸಮಂಜಸವೇ ? !!!
➖➖➖➖➖➖➖
ಯಾವುದೇ ಜೀವಿಯ ಚಿತ್ರ ಬಿಡಿಸುವುದಾಗಲೀ, ಕಲ್ಲು,ಮರಗಳಲ್ಲಿ ಅವುಗಳನ್ನು ಕೆತ್ತಿಸುವುದಾಗಲೀ,ಮತ್ಯಾವುದೇ ರೀತಿಯಲ್ಲಿ ಅವುಗಳನ್ನು ನಿರ್ಮಿಸುವುದಾಗಲೀ ಇಸ್ಲಾಮಿಕ್ ದ್ರಷ್ಟಿಯಾನುಸಾರ ಮಹಾ ಅಪರಾಧವಾಗಿದೆ.ಜೀವಿಯನ್ನು ಸ್ರಷ್ಟಿಸುವ ಅಧಿಕಾರ ಅಲ್ಲಾಹನಿಗೆ ಮಾತ್ರವಿರುವುದು.
ಮಾತ್ರವಲ್ಲ ಮನುಷ್ಯನಾಗಲೀ ಇನ್ನಿತರ ಜೀವಿಯಾಗಲೀ ಅದರ ಪ್ರತಿರೂಪಗಳನ್ನು ಮಾಡಿ ಮನೆ,ಮಂದಿರಗಳಲ್ಲಿ ಪ್ರತಿಷ್ಟಾಪಿಸುವುದು ಮೂರ್ತಿ ಆರಾಧಕರ ಸ್ವಭಾವ.
ಆದುದರಿಂದಲೇ ಪೂರ್ವಕಾಲ ಉಲಮಾಗಳು ಪೋಟೋ ಸ್ವತಃ ತೆಗೆಸುತ್ತಿರಲಿಲ್ಲ ಮಾತ್ರವಲ್ಲ
ಅದನ್ನು ಬಲವಾಗಿ ವಿರೋದಿಸತ್ತಿದ್ದರು.ಮತ್ತೆ ಕಾನೂನು ಜಾರಿಗೊಂಡಾಗ ಅಗತ್ಯಕ್ಕಾಗಿ ಅದನ್ನು ತೆಗಿಯಬಹುದು ಎಂದು ಫತ್ವಾ ನೀಡಿದರು. ಆದರೆ ಈಗ ಎಲ್ಲವೂ ಉಲ್ಟವಾಗಿದೆ.
ಎಲ್ಲಿ ನೋಡಿದರೂ ಬೋರ್ಡ್ ಪ್ಲೆಕ್ಸ್ ಗಳಲ್ಲಿ ಕಾಣುವುದು ಉಲಮಾಗಳ ಪೋಟೋ' ಅವರ ಪ್ರತಿ ರೂಪ ಇದರ ವಿರುಧ್ದ ಯಾರೂ ಶಬ್ದವೆತ್ತುವುದಿಲ್ಲವೆಂಬುದೇ ವಿಪರ್ಯಾಸದ ಸಂಗತಿ .ಕಾಲ ಬದಲಾದಂತೆಯೇ ಇಸ್ಲಾಮಿನ ಕಾನೂನು ಕೂಡಾ ಬದಲಾಗುತ್ತದೆಯೇ? ಜನರು ಅದನ್ನು ಮಾಡುತ್ತಾರೆಂದು ಸುಮ್ಮನಿರಲು ಸಾಧ್ಯವೇ? ಇಲ್ಲ.ಎಲ್ಲಾ ಕಾಲಕ್ಕೂ ಎಲ್ಲಾ ದೇಶಕ್ಕೂ ಕಾನೂನು ಹಿಂದಿನಂತೆಯೇ ಅದರಲ್ಲಿ ಯಾವುದೇ ಬದಲಾವಣೆಯಿಲ್ಲ.ಕೆಲವೊಂದು ಅನಿವಾರ್ಯ ಘಟ್ಟಗಳಲ್ಲಿ ಕಾನೂನಿನಲ್ಲಿ ಸಡಿಲಿಕೆ ಇದೆಯೇ ಹೊರತು ಬದಲಾವಣೆಯಿರುವುದಿಲ್ಲ.ಜನರ ತಾಳಕ್ಕೆ ತಕ್ಕಂತೆ ಕುಣಿಯಲಿರುವುದಲ್ಲ ದೀನ್.
ಬೇನರ್ ಪ್ಲೆಕ್ಸ್ ಗಳು ಎತ್ತರಿಸಿ ಕಟ್ಟುವ ಕಾರಣ ಅವುಗಳಲ್ಲಿ ಫೋಟೋ ಹಾಕುವುದನ್ನು ವಿರೋದಿಸಲೇಬೇಕು.ಅರ್ಧ ಪೋಟೊ ಎಂದು ಹೇಳಿ ಪ್ರಯೋಜನವಿಲ್ಲ.ಅರ್ಧ ಫೋಟೋವಾದರೂ ಮನೆಗೋಡೆಗೆ ಅದನ್ನು ಅಳವಡಿಸಬಹುದೇ? ಹಾಗೇನೆ ಪ್ಲೆಕ್ಸ್ ಬೋರ್ಡ್ಗಳಲ್ಲಿ ಕೂಡಾ ಆ ಅರ್ಧ ಪೋಟೋಗಳನ್ನು ಹಾಕುವುದು ಔಚಿತ್ಯವಲ್ಲ.ಕೆಲವು ವರ್ಷಗಳ ಹಿಂದೆ ನೋಟೀಸ್, ಬ್ಯಾನರ್ ಬೋರ್ಡ್ಗಳಲ್ಲಿ ವ್ಯಕ್ತಿಗಳ ಹೆಸರು ಮಾತ್ರ ಕಾಣುತ್ತಿತ್ತು.ಆದರೆ ಈಗ ಎಲ್ಲಿ ನೋಡಿದರೂ ವ್ಯಕ್ತಿಗಳ ಫೋಟೋಗಳೇ ರಾರಾಜಿಸುತ್ತಿವೆ .ಭಾಷಣಗಾರರ ಫೋಟೋಗಳಿಗೆ ಮಿತಿಯೇ ಇಲ್ಲ.ಎಲ್ಲಿಂದ ಬಂತು ಈ ಒಂದು ಕೆಟ್ಟ ಪರಿಷ್ಕಾರ.?ಒಂದು ಊರಿನವರು,ಯಾ ಜಮಾತಿನವರು ಅಥವಾ ಒಂದು ಸಂಘಟಣೆಯವರು
ಒಂದು ಕಾರ್ಯವನ್ನು ಹೊಸದಾಗಿ ಎಲ್ಲಿಯಾದರೂ ಪ್ರಾರಂಭಿಸಿದರೆ ಮತ್ತೆಲ್ಲಾ ಜನರೂ ನಮಗೂ ಅವರಂತರಯೇ ಮಾಡಬೇಕು .ಅವರಿಗಿಂತ ಬ್ರಾಂಡಾಗಿಯೇ ನಾವು ಮಾಡಬೇಕು ಎಂಬ ಕೋಮಿಟೇಷನ್ ಭಾವನೆಯೇ ನಮ್ಮನ್ನು ಈ ರೀತಿ ಅತಃಪತನದ ದಾರಿ ಹಿಡಿಯಲು.ಪ್ರೇಪಿಸಿದ್ದು.
ನಾವು ಮತ್ತೊಬ್ಬರನ್ನು ಅನುಕರಣೆ ಮಾಡುವ ಬದಲು ಇಸ್ಲಾಮಿನ ಸುಂದರ ಸಂಸ್ಕ್ರತಿಯನ್ನು ಅನುಕರಣೆ ಮಾಡಬೇಕು.ಸಮುದಾಯದಲ್ಲಿ ಆವರಿಸಿರುವ ಅನಾಚಾರ, ತಪ್ಪುಗಳನ್ನು ಕಂಡು ಉಲಮಾಗಳು ಮೌನ ಪಾಲಿಸಿದರೆ ಅದಕ್ಕೆ ಬೆಂಬಲ ನೀಡಿದಂತಾಗಿತ್ತದೆ. ಮಧ್ಯಪಾನ ಇಂದು ಸಾರ್ವತ್ರಿಕವಾಗಿದೆ ಎಂದ ಕಾರಣಕ್ಕೆ ಅದರ ಕುರಿತು ಮೌನ ಪಾಲಿಸಿರಲು ಸಾಧ್ಯವೇ?ನಿರಂತರವಾಗಿ ಆದರ ಬಗ್ಗೆ ಎಚ್ಚರಿಕೆ ನೀಡದೇ ಇದ್ದರೆ ಜನ ಸಾಮಾನ್ಯರು ಅದನ್ನು ಹಲಾಲ್ ಆಗಿ ಗಣಿಸುವರು .ಹಾಗೆನೇ ಪ್ರತಿಯೊಂದು ವಿಷಯದಲ್ಲಿಯೂ. ನಿರಂತರವಾಗಿ ಅವುಗಳ ಕುರಿತು ಭೊದನೆ ಮಾಡುತ್ತಿದ್ದರೆ ಮಾತ್ರ ಸಮುದಾಯದಲ್ಲಿ ಆ ವಿಷಯದ ಬಗ್ಗೆ ಪ್ರಜ್ಞತೆ ಮೂಡಿಸಲು ಸಾಧ್ಯ.
ಇಲ್ಲದಿದ್ದರೆ ಹರಾಮ್ ಗಳು ಹಲಾಲ್ ದಾರಿ ಹಿಡಿದಾವು.ಖಂಡಿತ.
ಇನ್ನು ಜೀವಿಗಳ ಚಿತ್ರ ನಿರ್ಮಿಸಬಾರದು ಎಂಬುದಕ್ಕೆ ಕೆಲವು ಹದೀಸ್ ಮತ್ತು ಇಮಾಂಗಳ ವಿವರಣೆಯನ್ನು ನಾನು ನೀಡುತ್ತೇನೆ.
1- ನಾಯಿ ಮತ್ತು ಜೀವಿಗಳ ಚಿತ್ರವಿರುವ ಮನೆಗಳಿಗೆ ಮಲಕುಗಳು ಪ್ರವೇಶ ಮಾಡಲಾರರು.
ಸ.ಬುಖಾರಿ.5949
2- ಅಂತ್ಯ ದಿನದಲ್ಲಿ ಅತ್ಯಂತ ಕಠಿನ ಶಿಕ್ಷೆಯಿರುವವರು ಜೀವಿಗಳ ಚಿತ್ರ ನಿರ್ಮಿಸುವವರು
ಸ-ಬುಖಾರಿ-5950
3-ನೆಬಿ(ಸ ಅ) ರವರು ಒಂದು ಯಾತ್ರೆ ಮುಗಿಸಿ ಆಯಿಶಾರ ಮನೆಗೆ ಬಂದರು ಆಯಿಶಾ ಬೀವಿಯವರು ಚಿತ್ರ ಮತ್ತು ರೂಪವಿರುವ ತನ್ನ ವಸ್ತ್ರವನ್ನು ಮರೆಯಾಗಿ ಮನೆ ಹೊರಾಂಗಣ ಹಾಕಿಟ್ಟಿದ್ದರು. ಇದನ್ನು ಕಂಡ ನೆಬಿ(ಸ ಅ)ರವರು ಅದನ್ನು ನೀಗಿಸಿ ಹೀಗಂದರು ಅಂತ್ಯ ದಿನದಲ್ಲಿ ಅತ್ಯಂತ ಕಠಿನ ಶಿಕ್ಷೆಯಿರುವವರು ಅಲ್ಲಾಹನ ಸ್ರಷ್ಟಿಯೊಂದಿಗೆ ಸಾಮ್ಯತೆ ಕಲ್ಪಿಸುವವರಾಗಿದ್ದಾರೆ.
ಸ.ಬುಖಾರಿ-5954
4 -ನಿಶ್ಚಯ ಚಿತ್ರ ನಿರ್ಮಾಪಕರುಅಂತ್ಯ ದಿವಸದಲ್ಲಿ.ಶಿಕ್ಶಿಸಲ್ಪಡುವರು
ನೀವು ಸ್ರಷ್ಟಿಸಿದ್ದಕ್ಕೆ ಜೀವ ನೀಡಿ ಎಂದು ಅವರೊಂದಿಗೆ ನಿರ್ಬಂದಿಸಲಾಗುತ್ತದೆ. ಚಿತ್ರ ರೂಪವಿರುವ ಮನೆಗಳಿಗೆ ಮಲಕುಗಳು ಪ್ರವೇಶ ಮಾಡಲಾರರು.
ಸ.ಬುಖಾರಿ-5957
5-ನೆಬಿ(ಸ ಅ)ಪತ್ನಿ ಆಯಿಶಾ ಬೀವಿ ನೆಬಿಯವರೊಂದಿಗೆ ಹೇಳಿದರು.ನೆಬಿಯೇ ಜೀವಿಯ ಚಿತ್ರ ರೂಪವಿರುವ ಒಂದು ತಲೆ ದಿಂಬನ್ನು ನಿಮಗಾಗಿ ನಾನು ಕೊಂಡಿದ್ದೇನೆ.ಅದನ್ನು ಕಂಡಾಗ ನೆಬಿ(ಸ ಅ)ಮನೆಯೊಳಗೆ ಬಾರದೇ ಹೊರಗೇ ನಿಂತರು.
ಸ.ಬುಖಾರಿ-5961
ನೆಲದ ಮೇಲೆ ಹಾಕಿ ತುಳಿಯಲ್ಪಡುವುದೂ ಉಪಯೋಗಿಸಿದಂತೆ ಹಳತಾಗಿ ದ್ರವಿಸಿ ಹೋಗುವುದೂ ಆದ ವಸ್ತುಗಳಲ್ಲಿ ಜೀವಿಗಳ ರೂಪ ಮಾಡಬಹುದು.
ಇದು ಸ್ವಹಾಬತ್ ,ತಾಬಿಅ್ ಗಳಲ್ಲಿನ ಬಹು ಪಕ್ಷ ಉಲಮಾಗಳ ಅಬಿಪ್ರಾಯವಾಗಿದೆ.ಇದು ಇಮಾಂ ಸೌರಿ,ಇಮಾಂ ಮಾಲಿಕ್, ಇಮಾಂ ಅಬೂ ಹನೀಫ, ಇಮಾಂ ಶಾಫೀ ರವರ ಅಭಿಪ್ರಾಯವೂ ಆಗಿದೆ.ಈ ವಿಷಯದಲ್ಲಿ ಆಜೀವಿಗೆ ನೆರಳು ಇದ್ದರೂ ಇಲ್ಲದಿದ್ದರೂ.ಪರ್ವಾಗಿಲ್ಲ ಎಂದು ಇಮಾಂ ನವವೀ ಹೇಳಿದರು.ಆದರೆ ಆಜೀವಿಯ ರೂಪ ಗೋಡೆಯ ಮೇಲೆ ,ವಸ್ತ್ರದ ಮೇಲೆ, ಮುಂಡಾಸಿನ ಮೇಲೆ ಮುಂತಾದ ಎತ್ತರದಲ್ಲಿ ಕಾಣುವುದರ ಮೇಲೆಯಾದರೆ ಅದು ಹರಾಂ ಆಗಿದೆ.
ಫತ್ಹುಲ್ ಬಾರಿ:11-464
ಮೇಲ್ಚಾವಣಿಯಲ್ಲಿಯೋ, ಗೋಡೆಯಲ್ಲಿಯೋ,ಮರೆ
ವಸ್ತ್ರಗಳಲ್ಲಿಯೋ(ಶಾಮಿಯಾನ) ,ಧರಿಸುವ. ವಸ್ತ್ರಗಳಲ್ಲಿಯೋ ಎತ್ತರದಲ್ಲಿರುವ ತಲೆ ದಿಂಬಿನಲ್ಲಿಯೋ ಅಸ್ತಿತ್ವಕ್ಕೆ ಅನಿವಾರ್ಯವಾದ ಅಂಗಾಂಗಗಳಿರುವ ಜೀವಿಯ ಫೋಟೋಗಳನ್ನು ಸ್ಥಾಪಿಸಿದ್ದರೆ , ಆ ಸ್ಥಳಗಳಿಗೆ ನಿಮ್ಮನ್ನು ಆಮಂತ್ರಿಸಿದರೆ ಅಲ್ಲಿಗೆ ನೀವು ಹೋಗ ಕೂಡದು.
ಕಾರಣ ಅವುಗಳಿಗೆn ಮೂರ್ತಿಗಳ ಸಾಮ್ಯತೆ ಇದೆ.
ಫತ್ಹುಲ್ ಮುಈನ್. 3-411
ತಲೆ ಬೇರ್ಪಪಡಿಸಿದ ಜೀವಿಯ ರೂಪವಿರುವಲ್ಲಿಗೆ ಹೋಗಬಹುದು
ಫತ್ಹುಲ್ ಮುಈನ್.3-412
ಭೂಮಿಯಂತಿರುವುದರ ಮೇಲೆಯಾದರೂ ಜೀವಿಗಳ ರೂಪ ನಿರ್ಮಿಸುವುದು ಹರಾಂ
ಫ ಮುಈನ್ 3-412
ತಲೆಯಿಲ್ಲದೆಯೂ ಜೀವಿಗಳ ಚಿತ್ರ ಬಿಡಿಸುವುದು ಹರಾಂ.
ಇಮಾಂ ಮುತವಲ್ಲಿ
ಇಆನತ್.3-413
ಜಾಹೀರಾತು ಫಲಕಗಳಲ್ಲಿ ವ್ಯಕ್ತಿಗಳ ಪೋಟೊ ಸೇರಿಸುವುದರ ಕುರಿತು ಕೆಲವು ಉಲಮಾಗಳೊಂದಿಗೆ ನಾನು ವಿವರಣೆ ಕೇಳಿದಾಗ ಅವರು ಹೇಳಿದ್ದು ಸಮಸ್ತದ ಉಲಮಾಗಳಿಗೂ ಇದು ಇಷ್ಠವಿಲ್ಲದ ಕಾರ್ಯವಾಗಿದೆ ಎಂದರು.
ಆದುದರಿಂದ ಕಾನೂನು ಎಲ್ಲರಿಗೂ ಒಂದೇ ಆದರೂ ಕಾನೂನು ಕಾಪಾಡಬೇಕಾದ ಉಲಮಾಗಳೇ ಕಾನೂನಿನ ಮುಂದೆ ಪ್ರಶ್ನಿಸಲ್ಪಡುವಂತಾಗಬಾರದು ಎಂಬ ಕಾರಣಕ್ಕೆ ಇದನ್ನು ಬರೆದೆ .ಇಸ್ಲಾಮಿನ ಕಾನೂನು ಮತ್ತು ಉಲಮಾಗಳನ್ನು ಗೌರವಿಸೋಣ .ಆದರೆ ಗೌರವಿಸುವ ರೀತಿಯಲ್ಲಿ ಗೌರವಸೋಣ .
No comments:
Post a Comment