Saturday, October 14, 2017

ನಮ್ಮ ಪುತ್ತೂರು ಸಲಪಿ ಪಳ್ಳಿಯ ನೆರೆಯ ಅಂದ್ರುಞ್ ಕಳೆದ ರಮಳಾನಿನಲ್ಲಿ ಉಮ್ರ ನಿರ್ವಹಿಸಲು ಮಕ್ಕಾ ಗೆ ಹೋಗಿದ್ದ.....

ಮಕ್ಕಾದಲ್ಲಿ ಇರುವವರೆಲ್ಲಾ ಸಲಪಿಗಳು ಅಂತ
ಭಾವಿಸಿದ್ದ...
ಆದರೆ...
ಮಕ್ಕಾದ ಹರಮ್ ಪಳ್ಳಿಯಲ್ಲಿ ಇಪ್ಪತ್ತು
ರಕ ಅತ್ ತರಾವೀಹ್ ನಮಾಜು ಮಾಡುವುದನ್ನು ಕಂಡ ಅಂದ್ರುಞಿ ತಬ್ಬಿಬ್ಬಾದ
ಅರೆ...
ಇದೇನು..??
ನಮ್ಮ ಪುತ್ತೂರು ಸಲಪಿ ಗಳು ಎಂಟು ರಕಾತ್ ತರಾವೀಹ್ ನಮಾಜ್ ಎಂದು ಪಟ್ಟು ಹಿಡಿದು ರಮಳಾನ್ ಪೂರ್ತಿ ಭಾಷಣ ಬಿಗಿಯುತ್ತಾರೆ
ಇಲ್ಲಿ ತುಟಿಕ್ ಪಿಟಿಕ್ ಎನ್ನದೆ ಬಾಯಿ ಬಿಗಿ ಹಿಡಿದು ಇಪ್ಪತ್ತು ನಮಾಝ್ ಮಾಡುತ್ತಾರೆ...
ಆಗಲೇ ಅವನಿಗೆ ಸಲಪಿಗಳ ಕುರಿತು ವಾಕರಿಕೆ ಬರಲು ಶುರುವಾಗಿತ್ತು.....

ಅಂದ್ರುಞಿ ಮಕ್ಕಾದ ಎಲ್ಲಾ ಇಮಾಮ್ ಜಮಾಅತ್ ಗಳಲ್ಲಿ ತಪ್ಪದೆ ಹಾಜರಾಗುತ್ತಿದ್ದ..

ಸಲಪಿಗಳ ಭಾಷಣ ಕೇಳಿ
ನಮಾಝ್ ನಲ್ಲಿ ಕುನೂತ್ ಓದುವುದನ್ನು ದೊಡ್ಡ ಪಾಪ ವೆಂಬಂತೆ ಕಂಡ ಅಂದ್ರುಞಿ..
ಮಕ್ಕಾ ಹೆರಮ್ ಇಮಾಮ್ ಶೈಖ್ ಸುದೈಸಿ
ನಮಾಝ್ ನಲ್ಲಿ ಧೀರ್ಘವಾದ ಕುನೂತ್ ಓದುವುದನ್ನು ಕಂಡಾಗ ಮತ್ತಷ್ಟು ಕಂಗಲಾದ...

ನಮಾಝ್ ಮುಗಿದ ಕೂಡಲೇ ನಮ್ಮ ಊರಿನ ಸಲಪಿಗಳು ಬೆಂಕಿ ಗುಧಕ್ಕೆ ಬೆಂಕಿ ಹಿಡಿದವರಂತೆ ಎದ್ದು ಓಡುತ್ತಾರೆ
ಆದರೆ....
ಇಲ್ಲಿ ನೋಡಿ ...
ಎಲ್ಲರೂ ಅಲ್ಲೇ ಕುಳಿತು ಝಿಕ್ರ್ ತಸ್ಬೀಹ್ ಗಳಲ್ಲಿ ತಲ್ಲೀನರಾಗಿದ್ದಾರೆ...
ಅರೇ...
ಇದೇನು..??
ಇಲ್ಲಿಯ ಸಲಪಿಗಳಿಗೆ ಇದು ಬಿದ್ ಅತ್ ಅಲ್ಲವಾ...??
ಅಂದ್ರುಞಿಯ ಮನಸ್ಸು ಅಲ್ಲೋಲ ಕಲ್ಲೋಲವಾಯಿತು...

ಸೀದಾ ರೂಮಿಗೆ ಹೋಗಿ  TV ಓನ್ ಮಾಡಿದ
ಆವಾಗ ...
ಶೈಖ್ ಸುದೈಸಿಯ ನೇತ್ರತ್ವದ ಇಮಾಮ್ ಜಮಾಅತ್ ನಮಾಝ್ ಪ್ಲೇ ಆಗುತ್ತಾನೆ ಇತ್ತು

ನೋಡುವಾಗ ಸುದೈಸಿಯವರು ನಮಾಝ್ ನಲ್ಲಿ  ಎದೆಗೆ ಕೈ ಕಟ್ಟದೆ ನಮ್ಮ ಊರಿನ ಸುನ್ನಿಗಳ ಹಾಗೆ ಎದೆಯ ಕೆಳಗೆ ಕೈ ಕಟ್ಟಿದ್ದನ್ನು
ನೋಡಿ ನಮ್ಮ ಊರಿನ ಸಲಪಿಗಳ ಬಗ್ಗೆ ಅಂದ್ರುಞಿಗೆ ಕೋಪ ಉಕ್ಕಿ ಬಂತು...

ಹಾಗೆ...
ಶುಕ್ರವಾರ ಬಂತು ...
ಜುಮುಅ ದಿವಸ ಖುತುಬ ದ ಭಾಷೆ ಯಾವುದಾಗಿರಬಹುದೆಂಬ ಜಿಜ್ಞಾಸೆ ಅಂದ್ರುಞಿ ಗೆ ಮೂಡಿತು...
ನಮ್ಮ ಪುತ್ತೂರಿನ ಸಲಪಿಗಳು ಖುತುಬ ಅರ್ಥವಾಗುವ ಭಾಷೆಯಲ್ಲಿ ಆಗಿರಬೇಕು ಅಂತ ಹಠ ಮಾಡುತ್ತಿದ್ದರು
ಆದರೆ ಇಲ್ಲಿ ಪ್ಯೂರ್ ಅರಬಿ ಯಲ್ಲಿ ಖುತುಬ ನಿರ್ವಹಿಸಿದ್ದನ್ನು ಕಂಡಾಗ
ನಮ್ಮ ಪುತ್ತೂರಿನ ಸಲಪಿಗಳ ಖುತುಬ ಸಹೀಹ್ ಆಗಿರಬಹುದಾ..?? ಎಂದು ಸಂಶಯದಿಂದ ನಮಾಝ್ ಹೇಗೂ ಪೂರ್ತಿ ಮಾಡಿ ಹೊರಗೆ ಬಂದಾಗ ಅವನು ಕಂಡ ದ್ರಶ್ಯ ಅವನಿಗೆ ಅಚ್ಚರಿ ಮೂಡಿಸಿತ್ತು ..!!!

♻ ಸೌದಿ ಸರಕಾರದ ರಾಜ ಕುಟುಂಬದವರು ಸಂಚರಿಸುವ ಐಶರಾಮಿ ಕಾರು...
ಕೆಲವೊಂದು ಸರಕಾರದ ಪ್ರತಿನಿಧಿಗಳ ಮತ್ತು ಅಲ್ಲಿಯ ಕಮಾಂಡೋಗಳ ಪ್ರೊಟಕ್ಷನ್ ನೊಂದಿಗೆ ಒಬ್ಬ ಕೇರಳದ ಆಲಿಮ್ ವಿಧ್ದ್ವಾಂಸ ಆ ಕಾರು ಹತ್ತಿದರು...
ಅಂದ್ರುಞಿ..ಹತ್ತಿರ ಹೋಗಿ ನೋಡಿದಾಗ
ಅವನ ಕಣ್ಣನ್ನೇ ಅವನು ನಂಬದಾದನು
ತಾನು ಕನಸು ಕಾಣುತ್ತಿದ್ದೆನಾ...ಎಂದು ತನ್ನ
ಎರಡು ಕೈಗಳಿಂದ ಕಣ್ಣು ಒರೆಸುತ್ತಾ ನೋಡಿದಾಗ..
ಆ ವಿಧ್ವಾಂಸ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರಾಗಿದ್ದರು...
ಅಂದ್ರುಞಿ ಮನಸ್ಸಲ್ಲೇ ಗುಣಗುಣಿಸ ತೊಡಗಿದ..
ಮೊದಲೆಲ್ಲಾ ಇಲ್ಲಿ ಸಲಪಿಗಳ ಕುತಂತ್ರ ಫಿತ್ನ ನಡೆಯುತ್ತಿತ್ತು
ಈಗ ಎಲ್ಲವನ್ನು ಕಾಂತಪುರಮ್ ಫತಹ್ ಮಾಡಿದ್ದಾರೆ..

ನಂತರ ಅಂದ್ರುಞಿ ಸೀದಾ ಮದೀನಾಕ್ಕೆ
ಹೋದ
ಅಲ್ಲಿ ಅವನಿಗೆ ಮದೀನಾ ಕೆಸಿಎಫ್ ನ ಇಸುಬು ಮುಸ್ಲಿಯಾರ್ ರ ಪರಿಚಯವಾಯಿತು
ಅವರು ಅಂದ್ರುಞಿ ಯನ್ನು ರೌಳಾ ಶರೀಫ್ ಗೆ ಕರಕೊಂಡು ಹೋದರು
ಇಲ್ಲಿ ನಮ್ಮ ಊರಿನ ದರ್ಗಾ ಝಿಯಾರತ್ ಮಾಡುವಂತೆ ತುಂಬ ಹೊತ್ತು ನಿಲ್ಲಬೇಡ
ಕಾರಣ ಜನಸಾಂದ್ರತೆಯಿಂದ ನಮ್ಮ ಹಿಂದೆ ಬರುವವರಿಗೆ ಝಿಯಾರತ್ ಗೆ ಅಡಚನೆಯಾಗಬಾರದು..
ಆದ್ದರಿಂದ ಸಲಾಮ್ ಮಾತ್ರ ಹೇಳಿ
ಹೊರಗೆ ಬಂದು ಸಾವಾದಾನ ಝಿಯಾರತ್
ಮಾಡು ಎಂದು ಸಲಹೆ ನೀಡಿದರು

ಹಾಗೆ ಹೊರಗೆ ಬಂದು ಝಿಯಾರತ್ ಮಾಡುವಾಗ
ಸ್ವಲ್ಪ ದೂರದಲ್ಲಿ ಉತ್ತರ ಭಾರತದ ಉರ್ದು ಸಹೋದರರು ಯಾ ನೆಬಿ ಸಲಾಮ್ ಅಲೈಕ
ಎಂಬ ಬೈತ್ ಇಂಪಾದ ಕಂಠದಿಂದ ಹಾಡುತ್ತಿದ್ದು
ಆ ಮೌಲೂದ್ ಸಂಘದಲ್ಲಿ ಅಂದ್ರುಞಿ ಸೇರಿದ..

ನಂತರ ಇಸುಬು ಮುಸ್ಲಿಯಾರ್ ಅಂದ್ರುಞಿ ಯನ್ನು ಜನ್ನತುಲ್ ಬಖೀಅ್ ಗೆ ಝಿಯಾರತ್ ಗೆ ಕೊಂಡೈದು
ಅಲ್ಲಿ ಝಿಯಾರತ್ ಮಾಡಿಸಿ..,
ಜನ್ನತುಲ್ ಬಖೀಅದ ಚರಿತ್ರೆ ಹೇಳಿಕೊಟ್ಟರು
ಸುಮಾರು ನೂರಾರು ವರ್ಷಗಳ ಮುಂಚೆ ಇಲ್ಲಿರುವ ಮಹಾತ್ಮರ ಖಬರ್ ಗಳ ಮೇಲೆ ದರ್ಗಾ ಖುಬ್ಬಾ ಎಲ್ಲವೂ ಇತ್ತು..
ನಂತರ ಸಲಪಿ ನೇತಾರ ಇಬ್ನ್ ಅಬ್ದುಲ್ ವಹ್ಹಾಬ್ ಎಂಬಾತ ಅಂದಿನ ರಾಜ ನ ನ್ನು
ಕೈ ವಶ ಮಾಡಿ ಇಲ್ಲಿರುವ ಎಲ್ಲಾ ದರ್ಗಾ ಗಳನ್ನು ಪುಡಿಗಟ್ಟಿದ್ದು....
ರೌಳ ಶರೀಫ್ ಮಾತ್ರ ಈಗಲೂ ಹಾಗೆಯೇ
ಎತ್ತರಿಸಿ ಕಟ್ಟಿದ ದರ್ಗಾವಾಗಿಯೇ ಇದೆ..
ಎದುರಿಗೆ ಪರದೆ ಹಾಕಿದ್ದರಿಂದ ರೌಳಾ ಶರೀಫ್ ಕಾಣುವುದಿಲ್ಲ ಎಂದು
ವಿವರಣೆ ನೀಡಿದಾಗ
ಅಂದ್ರುಞಿಗೆ ಅಂದು ಊರಿನಲ್ಲಿ ಪೆರೋಡ್ ಉಸ್ತಾದ್ ರೌಳಾ ಶರೀಫ್ ನ ಫೋಟೋ ಎತ್ತಿ ತೋರಿಸಿದ್ದು ನೆನಪಾಯಿತು....

♻ಅಂತೂ ಇಂತೂ ಅಂದ್ರುಞಿಗೆ
ಈ ಸಲಪಿಗಳು ಕಳ್ಳರು ಸುಳ್ಳರು ಎಂದು ಮನದಟ್ಟಾಗಿತ್ತು..

♻ಅಂದ್ರುಞಿ ಮಗದೊಮ್ಮೆ ಹ್ರದಯ ಪೂರ್ತಿ ಸಂತೋಷ ಬರುವ ಹಾಗೆ
ರೌಳಾ ಝಿಯಾರತ್ ಮಾಡಿ
ಇನ್ನು ಪುತ್ತೂರು ಸಲಪಿ ಪಳ್ಳಿಯ ನೆರೆಯಲ್ಲಿರುವ ತನ್ನ ಮನೆಯನ್ನು ಯಾರಿಗಾದರೂ ಮಾರಿ
ಸುನ್ನಿ ಪಳ್ಳಿಯ ಹತ್ತಿರ ಮನೆ ಮಾಡಬೇಕೆಂಬ
ಧ್ರಢ ನಿಶ್ಚಯಮಾಡಿ
ಊರಿಗೆ ಬರುವ ಫ್ಲೈಟ್ ಹತ್ತಿದ

♻ ಅಬೂ ಶಝ ಪುತ್ತೂರು

No comments:

Post a Comment