Saturday, October 14, 2017

*ಮೊನ್ನೆ ಪುತ್ತೂರಿನಲ್ಲಿ ನಡೆದ ಎಸ್ಸೆಸ್ಸೆಫ್ ನ ಮೀಲಾದ್ ರಾಲಿಗೆ ಪ್ರಶಂಸೆಗಳ ಮಹಾ ಪೂರವೇ ಹರಿದು ಬರುತ್ತಿದೆ!*

*----------------------------*

ಹೌದು ನನಗೆ ನಿನ್ನೆ ಎರಡು ಸಂತೋಷವಿತ್ತು. ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ತೋಕೆ ಉಸ್ತಾದರ ಆಶೀರ್ವಾದದೊಂದಿಗೆ ಹಾಗೂ ಎಸ್ಸೆಸ್ಸೆಫ್ ನ ಜಿಲ್ಲಾ ನಾಯಕರ ಸಮ್ಮುಖದಲ್ಲಿ ರೈಟರ್ಸ್ ಕ್ಲಬ್ ನ ನನ್ನ ಆತ್ಮೀಯ ಮಿತ್ರರು ಉಡುಗೊರೆ ನೀಡಿದ ಆ ಕ್ಷಣ ನನ್ನ ಬದುಕಿನಲ್ಲಿ ಸಂತೋಷದ ನಿಮಿಷವಾಗಿತ್ತು.
ಹಾಗೆ ಸಂತೋಷಗೊಳ್ಳಲು ಎರಡು ಕಾರಣಗಳುಂಟು ಒಂದು ನಾನು ನನ್ನ ಜೀವಕ್ಕಿಂತಲೂ ಪ್ರೀತಿಸುವ ಸುನ್ನತ್ ಜಮಾತಿನ ಸಂಘಟನೆಯ ನೇತಾರರು ಖುದ್ದು ಮುಂದೆ ನಿಂತು ನನಗೆ ಪ್ರಶಸ್ತಿ ಪ್ರಧಾನ ಮಾಡಿದರು.
(ನಿಜವಾಗಿಯೂ  ನಾನು ಕನಸಿನಲ್ಲೂ ನೆನೆಸದ ಭಾಗ್ಯ!)

ಈ ಪ್ರಶಸ್ತಿ ಸ್ವೀಕರಿಸುವುದರಿಂದ ನಾನು ನನ್ನ ಸುನ್ನೀ ಮಿತ್ರರ ಹೃದಯದಲ್ಲಿ ವಿಳಾಸ ಬರೆದೆ ಎಂಬ ಸಂತೋಷವೂ ಇದೆ. ನನ್ನ ಮರಣದ ನಂತರ ನನ್ನ ಕಬರಿಗೆ ಕೋಟ್ಯಾಂತರ ತಹ್ಲೀಲ್ ಕುರಾನ್ ಸಮರ್ಪಿಸಲಿಕ್ಕೆ ಪ್ರಸ್ತುತ ವಿಳಾಸದ ಇಮೇಜ್ ನಿಮಿತ್ತವಾಗಲಿದೆ ಎಂಬುದರಲ್ಲಿ ನೋ ಡೌಟ್!

(ಅಲ್ಲಾಹು ಆ ತೌಫೀಕನ್ನು ಸ್ಥಾಯಿಯಾಗಿಸಲಿ ಆಮೀನ್)

ಯಾವುದೇ ಪ್ರಶಸ್ತಿ ಗೆ ನಾನು ಅರ್ಹನಲ್ಲವೆಂಬ ಪೂರ್ಣ ನಂಬಿಕೆ ನನಗಿದೆ.ಆದ್ದರಿಂದಲೇ ನಾನು ಮೊದಲು ಸಂಪೂರ್ಣವಾಗಿ ಹಿಂಜರಿದಿದ್ದೆ.ಮಿತ್ರಾರಾದ ನಿಝಾಂ ಮದನಿಯವರ ಮೋಟಿವೇಶನ್ ಗಫೂರು ಬಾಯಾರ್ ರವರ ನಯವಾದ ಬೇಡಿಕೆ ಮತ್ತು ಆಸಿಫ್ ಅಜಿಲಮೊಗರು ರವರ ಮಾತಿನ ಮೋಡಿಯ ಮುಂದೆ ನನಗೆ ಸೋಲೊಪ್ಪಬೇಕಾಯಿತು.
ಆದರೆ ಅದು ನನ್ನ ಸೋಲಲ್ಲ ಎಂದು  ಪ್ರಶಸ್ತಿ ಪ್ರಧಾನ ಮಾಡಿದ ನಂತರ ತಿಳಿಯಿತು.
ನನಗಾಗಿ ದುಆ ಮಾಡಿದ,ಪ್ರೋತ್ಸಾಹ ನೀಡಿದ,ಸಹಕರಿಸಿದ ಎಲ್ಲರಿಗೂ ವಿಶೇಷವಾಗಿ ಸುನ್ನೀ ರೈಟರ್ಸ್ ಕ್ಲಬ್ ನ ಎಲ್ಲಾ ಆತ್ಮೀಯ ಮಿತ್ರರಿಗೆ ನಾನು ಅಬಾರಿಯಾಗಿದ್ದೇನೆ.
ಅಲ್ಲಾಹು ಸ್ವೀಕರಿಸಲಿ ಆಮೀನ್.

ಎರಡನೆಯ ಸಂತೋಷವೆಂದರೆ ಮಾದರಿಯುತ ಮತ್ತು ಜಾತಿಮತಬೇಧವಿಲ್ಲದೆ ಎಲ್ಲರಿಂದಲೂ ಪ್ರಶಂಸಿಲ್ಪಟ್ಟ ಎಸ್ಸೆಸ್ಸೆಫ್ ನ *ಇಲಲ್ ಹಬೀಬ್ ಮೀಲಾದ್ ಜಾಥ*

ಹೌದು ಆ ರಾಲಿ ಎಷ್ಟೊಂದು ಅಚ್ಚುಕಟ್ಟಾಗಿತ್ತು ಎಂಬುದಕ್ಕೆ ಪುತ್ತೂರಿನ ನಗರ ಠಾಣೆಯ ಸರ್ಕಲ್  ಇನ್ಸ್ಪೆಕ್ಟರ್ ಇಬ್ಬರು ಕಾರ್ಯಕರ್ತರನ್ನು ಕರೆದು ಅಭಿನಂದಿಸಿದ್ದರು!

ಪೋಲಿಸರ ಮತ್ತು ನಾಗರಿಕರ ಹಣೆಯಲ್ಲಿ ಸುಳಿ ಬರುವಂತಹ ಒಂದೇ ಒಂದು  ಅನಿಷ್ಟಗಳು ಬಾರದನ್ನು ಸರ್ಕಲ್ ಸರ್ ಪ್ರತೇಕವಾಗಿ ಬೊಟ್ಟು ಮಾಡಿದ್ದರು.

*ನಿಮ್ಮ ಎಸ್ಸೆಸ್ಸೆಫ್ ನವರ ರಾಲಿ ನನಗೆ ತುಂಬಾ ಖುಷಿ ತಂದಿದೆ ಎಲ್ಲಾ ವರ್ಗದವರಿಗೂ ನೀವು ಮಾದರಿಯೆಂದು ಬೆನ್ನು ತಟ್ಟದ್ದರು*

ಅವರು ನಮ್ಮನ್ನು ಎಷ್ಟೊಂದು ಸೂಕ್ಷಮವಾಗಿ ಗಮನಿಸಿದ್ದರೆಂಬುದಕ್ಕೆ ನಾವು ಹೇಳುವ ಪ್ರತಿಯೊಂದು ಘೋಷಣಾ ವಾಕ್ಯವನ್ನು ಅವರು ಆಲಿಸಿ ಅದನ್ನು ನಮ್ಮಲ್ಲಿ ಹೇಳಿತ್ತಿದ್ದರು.ನಿಮ್ಮ ಸ್ವಂತ ಸಂಘಟನೆಯಾದ ಎಸ್ಸೆಸ್ಸೆಫ್ ಗೆ ಕೂಡಾ ಝಿಂದಾಬಾದ್ ಕರೆಯದೆ ಕೇವಲ ಪ್ರವಾದಿ ಕೀರ್ತನೆ ಮತ್ತು ಅವರ ಸಂದೇಶವನ್ನು ಮಾತ್ರ ಜಾಥದ ಉದ್ದಗಲಕ್ಕೂ ಹೇಳುತ್ತಿರುವುದನ್ನು ಕೂಡಾ ಸರ್ಕಲ್ ರವರು ಗಮನಿಸಿದ್ದಾರೆಂದರೆ ನಿಜಕ್ಕೂ ಎಸ್ಸೆಸ್ಸೆಫ್ ರಾಲಿ ಎಲ್ಲಾ ಸಮುದಾಯದವರಿಗೂ ಮಾದರಿಯುತ ಎಂಬುದು  ಮತ್ತೊಮ್ಮೆ ದಿಟವಾಯಿತು.

ಪುತ್ತೂರು ಟೌನ್ ನಲ್ಲಿ ವಾಹನಗಳನ್ನು ಸ್ಲೋ ಮಾಡುತ್ತಾ ಜಾಥದ ಆ ಚಂದಕ್ಕೆ ಎಲ್ಲಿಯೂ ಮೊಟಕು ಬಾರದಂತೆ ಪೋಲಿಸರು ನಿಗಾ ವಹಿಸಿ ಪೂರ್ಣ ಬೆಂಬಲ ನೀಡುವುದನ್ನು ಕಾಣುವಾಗ ಮನಸ್ಸು ತುಂಬಿ ಬರುತ್ತಿತ್ತು

ಪ್ರತಿ ಡಿವಿಶನ್ ನ ದಫ್ ,ಸ್ಕೌಟ್, ಮತ್ತು ಶಿಸ್ತಿನ ನಡತೆ ಅತ್ಯಂತ ಆಕರ್ಷಣೀಯವಾಗಿತ್ತು.ಅದನ್ನೇ ಹೈಲಟ್ ಮಾಡಿ ಸರ್ಕಲ್ ಸರ್ ರವರು ಹೇಳುತ್ತಾ ಈ ರೀತಿ ಹೇಳಿದರು.
ನಿಮ್ಮನ್ನು ಅಭಿನಂದಿಸಲಿಕ್ಕೂ ಮತ್ತು ನೀವು ಇದನ್ನು ಎಲ್ಲರಿಗೂ ಹೇಳಿ ಮಾದರಿ ತಿಳಿಸಲಿಕ್ಕಾಗಿ ಕರೆದಿದ್ದೇನೆಂದು ಹೇಳುವಾಗ ನಿಜವಾಗಿಯೂ ಆ ಕಾರ್ಯಕರ್ತರ ಹೃದಯ ಸಂತೋಷ ಪುಳಕಿತವಾಗಿರಬಹುದು.

ಎಸ್ಸೆಸ್ಸೆಫ್ ನ ಶಿಸ್ತು ಬದ್ದ ರಾಲಿಯ ಮೂಲಕ ಇಸ್ಲಾಮನ್ನು ಮತ್ತು ಮೀಲಾದ್ ರಾಲಿಯನ್ನು ಏನೋ ಒಂದು ಪುಂಡಾಟಿಕೆಯೆಂದು ತಪ್ಪುಧಾರಣೆ ಗ್ರಹಿಸಿದವರಿಗೆ ಇಸ್ಲಾಂ ಮತ್ತು ಮೀಲಾದ್ ಜಾಥ ಎಂದರೆ ಇದಾಗಿದೆಯೆಂದು ಪಾಠ ಹೇಳಿಕೊಟ್ಟಂತಿತ್ತು.

ಆದಾಗಿರಬಹುದು ಅನೇಕ ಹಿಂದು ಕ್ರಿಶ್ಚಿಯನ್ ಮಿತ್ರರು ಎಸ್ಸೆಸ್ಸೆಫ್ ನ ಮೀಲಾದ್ ರಾಲಿಯನ್ನು ಬೆನ್ನು ತಟ್ಟಿ ಪ್ರಶಂಸೆಗಳ ಮಹಾ ಪೂರವನ್ನೇ ಸರ್ಕಲ್ ನರವರ ಹತ್ತಿರ ಹೇಳಿದ್ದರಂತೆ!

ಎಸ್ಸೆಸ್ಸೆಫ್ ನ ಮೀಲಾದ್ ಜಾಥವನ್ನು ಖುದ್ದು ವೀಕ್ಷಸಿಲಿಕ್ಕಾಗಿಯೇ ಸರ್ಕಲ್ ಸರ್ ರವರು ತಮ್ಮ ವಾಹನದಿಂದ ಇಳಿದು ಜಾಥವನ್ನೇ ಸೂಕ್ಷಮವಾಗಿ ವೀಕ್ಷಿಸುತ್ತಿದ್ದರು.

ಅಂತೂ ಇಂತೂ ಎಸ್ಸೆಸ್ಸೆಫ್ ತನ್ನ ಪ್ರತಿಯೊಂದು ಕಾರ್ಯಕ್ರಮಗಳನ್ನು ವೈವಿಧ್ಯಮಯ ರೀತಿಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿ ತನ್ನದೇ ಆದ ವಿಶೇಷ ಛಾಪನ್ನು ಮೂಡಿಸಿ ಮಾದರಿಯಾಗುವಲ್ಲಿ ಯಶಸ್ವಿಯಾಗಿದೆ.

ಮೀಲಾದ್ ಜಾಥವೆಂದರೆ ಜೀಪಿನ ಮೇಲೆ ಕುಳಿತು ಮುತ್ತು ನೆಬಿಯವರ ಪವಿತ್ರ ಹೆಸರಿರುವ ಬ್ಯಾನರಿನ ಮೇಲೆಯೇ ಮೆಟ್ಟಿ ನಿಂತು ಅವಿವೇಕ ತೋರಿಸುವ ಪುಂಡಾಟಿಕೆಯಲ್ಲ.ಬದಲಾಗಿ ಮುತ್ತು ನೆಬಿಯವರ ಮಾದರಿಯಾದ ಶಾಂತಿ ಸಮಾಧಾನ  ಶಿಸ್ತು ಮತ್ತು ವಿವೇಕದ ಕಾರ್ಯವಾಗಿದೆ ಎಂದು ತೋರಿಸಿಕೊಟ್ಟ ಎಸ್ಸೆಸ್ಸೆಫ್ ನ ಜಿಲ್ಲಾ ನಾಯಕರು ಮತ್ತು ಸರ್ವ ಡಿವಿಶನ್ ಗಳ ನಾಯಕರು, ಕಾರ್ಯಕರ್ತರಿಗೆ ಸಹಕರಿಸಿದ ಎಲ್ಲರೂ ಅಭಿನಂದನೆಗೆ ಅರ್ಹರು.

ಅದೇ ರೀತಿ ಜಿಲ್ಲಾ ಜಾಥವನ್ನು ಬರಮಾಡಿಕೊಳ್ಳಲು ಹಗಲು ರಾತ್ರಿಯನ್ನದೆ ದುಡಿದು ಸರ್ವ ಸಿದ್ದತೆಯೊಂದಿಗೆ ಸಜ್ಜಾಗಿ ನಿಂತ ಎಸ್ಸೆಸ್ಸೆಫ್ ಶಾಖಾ,ಕ್ಯಾಂಪಸ್, ಸೆಕ್ಟರ್ ನಿಂದ ಹಿಡಿದು ಡಿವಿಶನ್ ತನಕ ಅದೇ ರೀತಿ ಬಾಕಿ ಸಂಘ ಕುಟುಂಬದ ಎಲ್ಲರೂ ವಿಶೇಷವಾಗಿ ಆಹೋರಾತ್ರಿ ದುಡಿದ ಎಸ್ಸೆಸ್ಸೆಫ್ ದಾವಾ ವಿಂಗ್ ನ ಕಾರ್ಯಕರ್ತರು ಅಲ್ಲಾಹು ಅರ್ಹ ಪ್ರತಿಫಲ ನೀಡಿ ಅನುಗ್ರಹಿಸಲಿ.

ಅಲ್ಲಾಹು ಸ್ವೀಕರಿಸಲಿ ಆಮೀನ್.

- ಅಬೂಶಝ

No comments:

Post a Comment