🍀🍀🍀🍀🍀🍀🍀🍀🍀🍀
*ಬರಾಅತ್ ರಾತ್ರಿ*
*----------------------------------------------*
ಶಅಬಾನ್ ಹದಿನೈದರ ರಾತ್ರಿ ತುಂಬಾ ಪುಣ್ಯದಾಯಕಖುರ್ವಾಗಿದೆ.
ಖುರ್ ಆನ್ ಮತ್ತು ಹದೀಸ್ ಗಳಿಂದ ಇದು ವ್ಯಕ್ತವಾಗಿದೆ.
ಪ್ರಮುಖ ಖುರ್ ಆನ್ ವ್ಯಾಖ್ಯಾನಗಾರರು ಸೂರತ್ತುದ್ದುಖಾನ್ ನ ಮೂರನೇ ಸೂಕ್ತವನ್ನು ವಿವರಿಸುತ್ತಾ ಬರೆಯುವುದನ್ನು ನೋಡಿರಿ,
قال عكرمة وجماعة :هي ليلة النصف من شعبان تسمي ليلة البراءة
" ಇಕ್ರಿಮ (ರ) ಮತ್ತು ಒಂದು ವಿಭಾಗ ವಿದ್ವಾಂಸರು ಹೇಳುತ್ತಾರೆ;ಈ ಆಯತ್ ನಲ್ಲಿ ಹೇಳಿರುವ ಬರ್ಕತ್ತಿನ ರಾತ್ರಿ ಶಅಬಾನ್ ಹದಿನೈದರ ರಾತ್ರಿಯಾಗಿದೆ.ಇದಕ್ಕೆ ಬರಾಅತ್ ಎಂಬ ಹೆಸರೂ ಇದೆ.
--------------------------------------------------------------------
ಇಮಾಮ್ ತ್ವಬ್ರೀ (ರ) ಹೇಳುತ್ತಾರೆ;
حدثنا الفضل بن الصباح والحسن بن عرفة قالا : حدثنا الحسن بن اسماعيل البجلي عن محمد بن
سوقة عن عكرمة في قول الله تبارك وتعالى: {فِيهَا يُفْرَقُ كُلُّ أَمْرٍ حَكِيمٍ} قال: "في ليلة النصف من شعبان
(جامع البيان 20/154)
ಆಯತ್ ನಲ್ಲಿ ಹೇಳಿದ ಎಲ್ಲಾ ಕಾರ್ಯಗಳನ್ನು ಆ ರಾತ್ರಿಯಲ್ಲಿ ವಿತರಿಸಲಾಗುವುದು" ಎಂದು ಹೇಳಿರುವುದು ಶಅಬಾನ್ 15 ರ ರಾತ್ರಿಯ ಕುರಿತಾಗಿದೆ ಎಂದು ಇಕ್ರಿಮ (ರ) ಅಭಿಪ್ರಾಯಪಟ್ಟಿದ್ದಾರೆ.
(ಜಾಮಿಉಲ್ ಬಯಾನ್ 25/109)
--------------------------------------------------------------------
ಇಸ್ಮಾಯಿಲ್ ಹಿಖ್ಖಿ (ರ) ಹೇಳುತ್ತಾರೆ,
وقال بعض المفسرين المراد من الليلة المباركة ليلة النصف من شعبان
(روح البيان 7/204)
"ಬರಕತ್ ಇರುವ ರಾತ್ರಿ ಎಂಬುವುದರ ಉದ್ದೇಶ ಶಅಬಾನ್ 15 ರ ರಾತ್ರಿಯಾಗಿದೆ.
----------------------------------------------------------
*ಹದೀಸ್ ನಲ್ಲಿ*
ومنها حديث معاذ بن جبل -رضي الله عنه- عن النبي -صلى الله عليه وسلم- قال : " يطلع الله إلى جميع خلقه ليلة النصف من شعبان فيغفر لجميع خلقه إلا لمشرك أو مشاحن " رواه الطبراني في الأوسط
وابن حبان في صحيحه والبيهقي ،
ورواه ابن ماجه
(الترغيب والترهيب 2/36)
ಮುಆದ್ (ರ) ವರದಿ ;ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು,
ಶ ಅಬಾನ್ ಹದಿನೈದರ ರಾತ್ರಿ ಮುಶ್ರಿಕ್ ಮತ್ತು ವೈರಾಗ್ಯತೋರುವವನಿಗೆ ಹೊರತು ಪಡಿಸಿ ಎಲ್ಲರಿಗೂ ಅಲ್ಲಾಹನು ಕ್ಷಮಿಸುವನು.
(ವರದಿ :
ತ್ವಬ್ ರಾನಿ , ಇಬ್ನ್ ಹಿಬ್ಬಾನ್,
ಬೈಹಖೀ,ಇಬ್ನ್ ಮಾಜ,
ಅತ್ತರ್ ಗೀಬ್ ವತ್ತರ್ ಹೀಬು2/35).
----------------------------------------------------------
ಆಯಿಶ(ರ) ವರದಿ;
عن عائشة رض ان رسول الله صلي الله غليه وسلم قال : " أتاني جبريل عليه السلام فقال هذه ليلة النصف من شعبان , ولله فيها عتقاء من نار بعدد شعور غنم بني كلب لا ينظر الله فيها إلى مشرك ولا إلى مشاحن ولا إلى قاطع رحم ولا إلى مسبل ولا إلى عاق لوالديه ولا إلى مدمن خمر (البيهقي )
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು ;ನನ್ನ ಬಳಿ ಜಿಬ್ರಿಲ್ (ಅ)ಬಂದು "ಈ ರಾತ್ರಿ ಶ ಅಬಾನ್ 15 ರ ರಾತ್ರಿಯಾಗಿದೆ.ಈ ದಿನ ಅಲ್ಲಾಹನು ಕಲಬ್ ಗೋತ್ರದವರ ಆಡುಗಳ ರೋಮದಷ್ಟು ಸಂಖ್ಯೆಯಲ್ಲಿ ಜನರನ್ನು ನರಕದಿಂದ ಮೋಚಿಸುವನು.
( ವರದಿ : ಬೈಹಖೀ ,
ಅತ್ತರ್ ಗೀಬು ವತ್ತರ್ ಹೀಬು2/35).
----------------------------------------------------------
ಇಮಾಮ್ ರಂಲಿ (ರ) ರೊಂದಿಗೆ ಈ ರೀತಿ ಕೇಳಲ್ಪಡಲಾಯಿತು.
وسئل عن صوم منتصف شعبان كما رواه ابن ماجه عن النبي صلى الله عليه وسلم أنه قال: "إذا كانت ليلة النصف من شعبان فقوموا ليلها وصوموا نهارها" هل هو مستحب أو لا وهل الحديث صحيح أو لا وإن كان ضعيفا فمن ضعفه؟
ಶಅಬಾನ್ 15 ರ ಉಪವಾಸ , ಇಮಾಮ್ ಇಬ್ನ್ ಮಾಜ ವರದಿ ಮಾಡಿದ ಹದೀಸಿನ ಅಧಾರದಲ್ಲಿ ಉಪವಾಸ ಸುನ್ನತ್ ಆಗಿದೆಯೇ? ಆ ಹದೀಸ್ ಸ್ವಹೀಹ್ ಆಗಿದೆಯೇ?ಅಥವಾ ಲಹೀಫ್ ಆಗಿದೆಯೇ ?
*ಅದಕ್ಕೆ ಅವರು ಈ ರೀತಿ ಉತ್ತರಿಸಿದರು,*
"ಇಬ್ನ್ ಮಾಜ (ರ)ವರದಿ ಮಾಡಿದ ಪ್ರಸ್ತುತ ಹದೀಸ್
ಮೇಲೆ ಹೇಳಿದ ಉಪವಾಸ ಆಚರಿಸುವುದಕ್ಕೆ ಅಧಾರವಾಗಿದೆ.
(ಫತಾವಾ ರಂಲೀ 2/79)
----------------------------------------------------------
ಇಮಾಮ್ ಇಬ್ನ್ ಹಜರ್(ರ) ಹೇಳುತ್ತಾರೆ;
والحاصل أن لهذه الليلة فضلا ، وأنه يقع فيها مغفرة مخصوصة واستجابة مخصوصة ، ومن ثم قال الشافعي رضي الله عنه : إن الدعاء يستجاب فيها
ಒಟ್ಟಿನಲ್ಲಿ ಶ ಅಬಾನ್ 15 ರಾತ್ರಿಗೆ ಮಹತ್ವವಿದೆ ಹಾಗೂ ಪ್ರತ್ಯೇಕವಾದ ಮಗ್ಫಿರತ್ ಮತ್ತು ದುಆ ಗೆ ಉತ್ತರ ನೀಡಲ್ಪಡುವ ದಿವಸವಾಗಿದೆ.ಆದುದರಿಂದಲೇ ಆ ರಾತ್ರಿಯಲ್ಲಿ ದುಆಗೆ ಉತ್ತರ ನೀಡಲ್ಪಡುವುದು ಎಂದು ಇಮಾಮ್ ಶಾಫಿಈ (ರ) ಹೇಳಿದ್ದಾರೆ.
(ಫತಾವ ಕುಬ್ರಾ 2/80).
----------------------------------------------------------
ವಹ್ಹಾಬಿಗಳ ಅಂಗೀಕೃತ ನಾಯಕ ಇಬ್ನ್ ತೀಮಿಯ್ಯ ಹೇಳುವುದು ನೋಡಿ,
" وأما ليلة النصف من شعبان فقد رُوي في فضلها أحاديث وآثار ، ونُقل عن طائفة من السلف أنهم كانوا يصلون فيها، فصلاة الرجل فيها وحده قد تقدمه فيه سلف وله فيه حجة فلا ينكر مثل هذا
ಶ ಅಬಾನ್ 15 ರ ರಾತ್ರಿಯ ಮಹತ್ವವನ್ನು ಪ್ರತಿಪಾದಿಸುವ ಹಲವಾರು ಹದೀಸ್ ಗಳು ವರದಿ ಮಾಡಲ್ಪಡಲಾಗಿದೆ.ಶಅಬಾನ್ 15 ರ ರಾತ್ರಿ ಸಲಫ್ ಗಳ ಒಂದು ವಿಭಾಗ ನಮಾಝ್ ನಿರ್ವಹಿಸಿದಾಗಿ ಉಲ್ಲೇಖಿಸಲ್ಪಟ್ಟಿದೆ.ಹೀಗಿರುವಾಗ ,ಒಬ್ಬನು ಈ ರಾತ್ರಿ ನಮಾಝ್ ನಿರ್ವಹಿಸುವುದಾದರೆ ಅದರಲ್ಲಿ ಸಲಫ್ ಗಳು ಮಾದರಿಯಾಗಿದ್ದಾರೆ.
ಸಲಫ್ ಗಳಿಗೆ ಅದಕ್ಕೆ ಆಧಾರವಿದೆ.ಇದನ್ನು ನಿಷೇಧಿಸಲಾಗದು.
(ಫತಾವಾ ಇಬ್ನ್ ತೀಮಿಯ್ಯ 23/80).
----------------------------------------------------------
*ಒಟ್ಟಿನಲ್ಲಿ ಬರಾಅತ್ ರಾತ್ರಿ ಎಂಬುವುದು ಅತೀ ಮಹತ್ವವಿರುವ ರಾತ್ರಿಯೆಂದು ಹದೀಸ್ ಮತ್ತು ಇಮಾಮರುಗಳ ಹೇಳಿಕೆಯಿಂದ ಬಹಳ ಸ್ಪಷ್ಟವಾಯಿತು.ವಹ್ಹಾಬಿಗಳ ನಾಯಕ ಇಬ್ನ್ ತೀಮಿಯ್ಯ ಕೂಡಾ ಇದನ್ನು ಅಂಗೀಕರಿಸಿದ್ದಾರೆ ಎನ್ನುವಾಗ ವಹ್ಹಾಬಿಗಳಿಗೂ ಇದರಲ್ಲಿ ಸಂಶಯಕ್ಕೆ ಆಸ್ಪದವಿಲ್ಲ.*
📝 *منير بن محمد الثقافي سالتور*
No comments:
Post a Comment