Saturday, October 14, 2017

✅✅ ಮರಣ ಆಸನ್ನವಾದ ಸಮಯ ಹಾಗೂ
ಮರಣಾನಂತರ ಖುರ್ಆನ್ ಓದುವುದು , ✅✅

ಹಾಗೂ ಮಯ್ಯಿತಿನ ಹೆಸರಿನಲ್ಲಿ ಧಾನ ಕೂಡುವುದು . ✅✅

ಇವೆಲ್ಲವೂ  ಮಯ್ಯಿತಿಗೆ ಉಪಕರಿಸುತ್ತದಯೇ   ? . . .✅✅

ಮರಣ ಹೂಂದಿದವರು ನಮ್ಮನ್ನು ಕಾಣುತ್ತಾರೆಯೇ   ? . . . ✅✅

📚📚📚 ಉತ್ತರಗಳು 📚📚📚

ಮರಣದೂಟ್ಟಿಗೆ ಎಲ್ಲವೂ ಅಸ್ತಮಿಸಿ ಹೋಯಿತು , ಎಂದು  ಮರಣ ಹೂಂದಿದವರು ನಮ್ಮನ್ನು ಕಾಣುವುದಿಲ್ಲ ಎಂಬ ವಿಶ್ವಾಸ ತಪ್ಪಾಗಿರುತ್ತದೆ .

ಮರಣ ಹೂಂದಿದವರು ನಮ್ಮನ್ನು ಕಾಣುತ್ತಾರೆ , ಹಾಗೂ ಅವರಿಗೆ ನಾವು ಮಾಡುವ ಎಲ್ಲಾ ಕಾರ್ಯಗಳೂ ಅವರ ಖಬರುಗಳಲ್ಲಿ  ತೋರಿಸಲಾಗುವುದು , ಎಂದು ಅಲ್ಲಾಹನು ಪರಿಶುದ್ದ ಖುರ್ಆನಲ್ಲಿ ಹೇಳಿರುತ್ತಾನೆ .

ಎಂದು ಇಬ್ನು ಕಸೀರ್ ರವರು ಅವರ ತಫ್ಸೀರು ಗಳಲ್ಲಿ ಹೇಳಿದ್ದಾರೆ .

ಇಲ್ಲಿ ನೋಡಿ .

( ಸೂರತು ತೌಬ 105 )

ಇದರ ವಿಷದೀಗರಣದಲ್ಲಿ ಇಮಾಂ ಇಬ್ನು ಕಸೀರರು ಹೇಳುತ್ತಾರೆ .

وقد ورد : أن أعمال الأحياء تعرض على الأموات والعشائر فى البرزخ ، كما قال أبو داود الطيالسي : حدثنا الصلت بن دينار ، عن الحسن عن جابر بن عبد الله قال : قال رسول الله صلعم : (( إن أعمالكم تعرض على أقربائكم وعشائركم في قبورهم ، فإن كان خيرا استبشروا به ، وإن كان غير ذلك قالوا : (( اللهم ، ألهمهم أن يعملوا بطاعتك ))

( تفسير ابن كثير  4/210 )

مسند الطيالسي( رقم 1794 )

ಜೀವಂತವಾದ ಮನುಷ್ಯರು ಮಾಡುವ ಎಲ್ಲಾ ಕಾರ್ಯಗಳೂ ಮರಣ ಹೂಂದಿದವರಿಗೆ ಅಲ್ಲಾಹನು ತೋರಿಸಿ ಕೂಡುತ್ತಾನೆ ,
( ಅದು ನಮ್ಮ ಕುಟುಂಬದಲ್ಲಿ ಮರಣ ಹೂಂದಿದ  ಸಾದಾರಣ ಮನುಷ್ಯರಿಗೂ ಕೂಡಾ ) .

ಜಾಬಿರುಬ್ನ್ ಅಬ್ದುಲ್ಲಾ ರವರು ಹೇಳುತ್ತಾರೆ .
ನೆಬಿ ( ಸ .ಅ ) ರವರು ಹೇಳಿರುತ್ತಾರೆ .

ನೀವು ಮಾಡುವ ಎಲ್ಲಾ ಪ್ರವರ್ತಿಗಲೂ ನಿಮ್ಮ ಕುಟುಂಬದವರಿಗೂ ,ಹಾಗೂ ನಿಮ್ಮ ಹತ್ತಿರದ ಬಂದುಗಳಿಗೂ ಅವರ ಖಬರುಗಳಲ್ಲಿ  ತೋರಿಸಲಾಗುವುದು .

ನಿಮ್ಮ ಪ್ರವರ್ತಿಗಳು ಒಳ್ಳೆಯದಾದರೆ ಅವರು ಸಂತೋಷಿತರಾಗುತ್ತಾರೆ ,
ಇಲ್ಲಾವಾದಲ್ಲಿ ಅವರು ಪ್ರಾರ್ಥಿಸುತ್ತಾರೆ ,
ಅಲ್ಲಾಹುವೇ ಇವರಿಗೆ ನಿನ್ನನ್ನು ಅನುಸರಿಸಲು ಬಾಗ್ಯ ಕೂಡು ನಾಧಾ ಎಂದು .

( ತಫ್ಸೀರು ಇಬ್ನು ಕಸೀರ್ 4/210 )

ನತನವಾದಿಗಳ ನೇತಾರರಾದ ಇಬ್ನು ಕಸೀರರೇ
ಈ ತರ ಹೇಳಿದ್ದಾದರೆ

ಸುನ್ನತ್ ಜಮಾಅತಿನ ವಿಶ್ವಾಸವೂ ಇದೇ  ಆಗಿರುತ್ತದೆ .

ಮರಣ ಹೂಂದಿದವರು ಕೇಳುತ್ತಾರೆ ,
ಮತ್ತು  ಕಾಣುತ್ತಾರೆ ,
ಎಂದು ಇದರಿಂದ ಸ್ಫಸ್ಟವಾಯಿತು .

ಇನ್ನೂ ಇಮಾಮ್ ಮುಸ್ಲಿಂ
ಹಾಗೂ ಮಿಶ್ಕಾತಿನ ಹದೀಸ್ ನೋಡಿ .

وعن أم سلمة ، قالت : قال رسول الله صلعم : (( إذا حضرتم المريض أو الميت فقولوا خيرا ، فإن الملائكة يؤمنون على ما تقولون )) رواه مسلم .

( مشكاةالمصابيح حديث 1617 )

ಉಮ್ಮು ಸಲಮತ್ ( ರ ) ರಿಂದ ವರದಿ .
ನೆಬಿ ( ಸ ಅ ) ಹೇಳಿದರು .
ನಿಮ್ಮಲ್ಲಿ ಯಾರದರೂ ರೋಗಿಯ ಪಕ್ಕಕ್ಕೆ ಹೋದರೆ , ಅಥವಾ ಮರಣ ಹೂಂದಿದವರತ್ತ ಹೋದರೆ ,
ನೀವು ಖೈರಾದುದನ್ನು ಹೇಳಿರಿ .

ನಮಗೆಲ್ಲರಿಗೂ ಗೂತ್ತು ಖುರ್ಆನಿಗಿಂತ ಖೈರಾದುದು ಈ ಲೋಕದಲ್ಲಿ ಏನೂ ಇಲ್ಲ  .

ಅದಕ್ಕಾಗಿ ನಾವುಗಳು ಮರಣ ಹೂಂದಿದವರತ್ತ ಖುರ್ಆನನ್ನು ಓದುತ್ತೇವೆ .

( ಮಿಸ್ಕಾತ್ ಹದೀಸ್ ನಂಬರ್ 1617 )

ಇನ್ನೂಂದು ಹದೀಸ್ ನೋಡಿ .

1622 : ಹದೀಸ್ ನಂಬರ್.

وعن معقل بن يسار ، قال : قال رسول الله صلعم : (( إقرؤوا سورة ( يس ) على موتاكم  )).

( مشكاة  : ١٦٢٢ )

ಮಅ್ ಖಲುಬುನು ಯಸಾರ್ ( ರ ) ರವರು ವರದಿ ಮಾಡಿರುತ್ತಾರೆ .

ನೆಬಿ ( ಸ. ಅ ) ರವರು ಹೇಳಿದ್ದಾರೆ .

ನಿಮ್ಮಲ್ಲಿ ಯಾರಾದರೂ ಮರಣ ಹೂಂದಿದರೆ ಅವರ ಪಕ್ಕದಲ್ಲಿ ನೀವು ( ಯಾಸೀನ್ )
ಸೂರತನ್ನು ಓದಿರಿ .

( ಮಿಶ್ಕಾತ್ : 1622 )

( ಮುಗ್ನಿ ಇಬ್ನು ಖುದಾಮ 3/364 )

ಇದರ ಹದೀಸಿನ ವಿಷದೀಕರಣವನ್ನು ಮಿರ್ಕಾತಲ್ಲಿ ಹೇಳುತ್ತಾರೆ .

ولعل الحكمة في قراءتها أن يستأنس المحتضر بما فيها من ذكر الله واحوال القيامة والبعث .

ಮರಣ ಆಸನ್ನವಾದವನತ್ರನೂ ಇದೇ ಸೂರತನ್ನು ಓದಿರಿ .
ಕಾರಣ ಈ ಸೂರತ್ ಅವನಿಗೆ ಟೈಂ ಪಾಸ್  ಮಾಡುವ
ಒಂದು ಕಾರ್ಯವಾಗಿದೆ .

ಕಾರಣ ಇದರಲ್ಲಿ ಅಲ್ಲಾಹನ ಸ್ಮರಣೆಯಿದೆ , ಅದೇ ರೀತಿ
ಅಂತ್ಯ ದಿನದ ಹಾಗೂ ಬಹ್ಸಿನ ( بعث )  ವಿಷಯಗಳಿವೆ ,

ಎಂದು ( ಮಿರ್ಕಾತ್ 4/79 )

ಇನ್ನೂ ಮಿರ್ಕಾತಲ್ಲಿ ಹೇಳುತ್ತಾರೆ .

وذهب بعض إلى أنه يقرأ عليه عند القبر ، ويؤيده خبر ابن عدي وغيره
(( من زار قبر والديه أو احدهما في كل جمعة فقرأ عندهما  يس  غفر له بعدد كل حرف منها ))

( مرقاة : 4 /80 )

ಪ್ರಾಮಾಣಿಕರು ಹೇಳುತ್ತಾರೆ .
ಯಾಸೀನ್ ಸೂರತನ್ನು ಖಬರುಗಳ ಬಲಿ ಓದಿರಿ .

ಇದಕ್ಕೆ ಇಬ್ನು ಅದಿಯ್ಯಿರವರ ಹದೀಸಾಗಿದೆ ಕಾರಣ

ಯಾರಾದರೂಬ್ಬ ಅವನ ಮಾತಪಿತರ ಖಬರುಗಳನ್ನು , ಅಥವಾ ಯಾರಾದರೂಬ್ಬರನ್ನು , ಶುಕ್ರವಾರದಂದು  ಸಂದರ್ಶಿಸಿ , ಅವರ ಬಲಿ ಯಾಸೀನ್ ಸೂರತನ್ನು ಓದಿದರೆ ,  ಯಾಸೀನ್ ಸೂರತಲ್ಲಿರುವ ಹರ್ಫುಗಳಸ್ಟು ಪಾಪಗಳನ್ನು ಅಲ್ಲಾಹು ಮನ್ನಿಸುವನು .

ಎಂದು ( ಮಿರ್ಕಾತಲ್ಲಿ 4/80 )

ಇನ್ನೂ ಕೆಳಗೆ ನೋಡಿ .

الدعاء والصدقة ينفعان الميت بلا خلاف .

( بغية المسترشدين 330 )

ಬಿಗ್ಯಾದಲ್ಲಿ :  ಮರಣ ಹೂಂದಿದವರಿಗೆ , ದುವಾ ಹಾಗೂ ಧಾನ ಧರ್ಮಗಳು , ಒಂದು ಅಬಿಪ್ರಾಯ ವ್ಯತ್ಯಾಸವಿಲ್ಲದೆ ಮಯ್ಯಿತಿಗೆ ಉಪಗರಿಸುವುದು .

( ಬಿಗ್ಯತುಲ್ ಮುಸ್ತರ್ಶಿದೀನ್ 330 )

ಇನ್ನೂ ನೋಡಿ ಬುಜೈರಿಮೀ .

ويقرأ عندهم  ما تيسر من القرأن فإن الرحمة تنزل في محل القراءة والميت كحاضر ترجى له الرحمة ويدعوا له عقب القراءة لأن الدعاء ينفع الميت وهو عقب القراءة أقرب إلي الإجابة ،

ಮರಣ ಹೂಂದಿದವರ ಬಲಿ ಖುರ್ಆನಲ್ಲಿ ನಿಮಗೆ ಗೂತ್ತಿರುವ ಸೂರತನ್ನು ಓದಿರಿ ,
ಖರ್ಆನ್ ಓದುವವರ ಬಲಿ ಅಲ್ಲಾಹನ ರಹ್ಮತ್ ಸಿಗುತ್ತದೆ ,

ಎಂದು ಹೇಳಿದ ನಂತರ ಬುಜೈರಿಮೀ ರವರು ಹೇಳುತ್ತಾರೆ .

ಮಯ್ಯಿತಿಗೆ ಬೇಕಾಗಿ ಪ್ರಾರ್ಥನೆ ಮಾಡಬೇಕು  ಕಾರಣ ದುವಾ ಅನ್ನುವುದು ಮಯ್ಯಿತಿಗೆ ಉಪಕರಿಸುತ್ತದೆ .

ಆದರೂ : ಖುರ್ಆಾನ್ ಓದಿದ ತಕ್ಷಣವಾದರೆ ಅದು ಉತ್ತರ ಸಿಗಲು ಮುಖ್ಯವಾದ ಕಾರಣವಾಗಿದೆ .

ಎಂದು ( ಬುಜೈರಿಮೀ 2/575 )

ಇದೇ ರೀತಿ ಇಮಾಂ ರಂಲೀಯವರು ಹೇಳುತ್ತಾರೆ .

( ويسلم الزائر ) لقبور المسلمين ندبا .
( ويقرأ ويدعوا ) عقب قراءته ، والدعاء ينفع الميت وهو عقب القراءة أقرب للاجابة .

( نهاية المحتاج 3/37 )

ಇದರ ಉದ್ದೇಶ ಬುಜೈರಿಮೀ ರವರು ಹೇಳಿದ ಅದೇ ಉದ್ದೇಶವಾಗಿದೆ .

ಇನ್ನೂ ನೋಡಿ ಇಮಾಂ ಖುರ್ತುಬಿಯವರು ಹೇಳುತ್ತಾರೆ .

قال علماعنا : أي القائل . .هو أبو  العباس أحمد بن عمر القرطبي .

قوله صلعم : (( إذا حضرتم المريض أو الميت فقولوا خيرا ))

ولهذا استحب العلماء أن يحضر الميت الصالحون واهل الخير حالة موته ليذكروه ، ويدعوا له ولمن يخلفه ويقولوا خيرا ، فيجتمع دعاؤهم ، وتأمين الملائكة  فينتفع بذلك الميت ، ومن يصاب به ومن يخلفه .

( تذكرة القرطبي : 183)

ಖುರ್ಆನ್ ಹಾಗೂ ದುವಾ , ಮಲಕುಗಳ ಆಮೀನ್ ಇದೆಲ್ಲವೂ , ಮಯ್ಯಿತಿಗೆ ಉಪಕರಿಸುತ್ತದೆ .

( ತಧ್ಕಿರತುಲ್ ಖುರ್ತುಬಿ : 183 )

ಇನ್ನೂ ನೋಡಿ ಇಮಾಂ ನವವೀ ರವರು ತನ್ನ ಅಝ್ಕಾರಲ್ಲಿ ಹೇಳುತ್ತಾರೆ .

أجمع العلماء على أن الدعاء للأموات ينفعهم ، ويصلهم ثوابهم .

( اذكار : 283 )

ಎಲ್ಲಾ ಉಲಮಾಅ್ ಗಳೂ ಇಜ್ಮಾಆಗಿ ಪ್ರಕ್ಯೋಪನೆ ಮಾಡಿದ್ದಾರೆ .
ಮರಣ ಹೂಂದಿದವರಿಗೆ ದುವಾ ಮಾಡಿದರೆ ಅದರ ಸವಾಬ್ ಅವರಿಗೆ ಲಬಿಸುತ್ತದೆ ಎಂದು .

( ಅಝ್ಕಾರ್ : 283 )

ಇನ್ನೂ ನೋಡಿ ಇಮಾಂ ಶಾಫಿ ( ರ ) ಹೇಳುತ್ತಾರೆ .

وأحب لجيران الميت ، أو ذي قرابته ، أن يعملوا لأهل الميت في يوم يموت وليلته طعاما يشبعهم  فإن ذلك سنة .

( كتاب الأم : 2/635 )

ಇಮಾಂ ಶಾಫಿರವರು ಹೇಳುವುದು ನೋಡಿ ,

ನನಗೆ ಇಷ್ಟವಾದುದು ಮರಣ ಹೂಂದಿದವರ ಕುಟುಂಬಸ್ತರಿಗೆ ಊಟವನ್ನ ಕೂಡುವುದಾಗಿದೆ .
ಇದು ನೆಬಿ ( ಸ ಅ ) ರವರ ಚರ್ಯೆಯಾಗಿದೆ , ಸುನ್ನತ್ತಾಗಿದೆ .

( ಕಿತಾಬುಲ್ ಉಮ್ಮಿ : 2/635 )

ಇನ್ನೂ ಇಮಾಂ ಖಸ್ತಲ್ಲಾನಿಯವರ  ಮವಾಹಿಬುಲ್ಲದುನ್ನಿಯ ನೋಡಿ .

وقد اختلف العلماء في ثواب القراءة ، وهل يصل للميت  ؟

ಉಲಮಾಅ್ ಗಳು ಅಬಿಪ್ರಾಯ ಪಟ್ಟರು ಮಯ್ಯಿತಿನ ಬಲಿ ಖುರ್ಆನ್ ಓದುದರ ವಿಷಯದಲ್ಲಿ ,
ಅದರ ಸವಾಬ್ ( ಕೂಲಿ ) ಮಯ್ಯಿತಿಗೆ ತಲುಪ್ಪುತ್ತದೆಯೇ  ?

وقال كثير من الشافعية والحنفية : يصل .

ಶಾಫೀ ಮದ್ಹಬ್ಗಳ ಬಹಳಷ್ಟು ಇಮಾಮರು   ಹಾಗೂ ಹನಫೀ ಮದ್ಹಬಿನ ಇಮಾಮರುಗಳ ಅಬಿಪ್ರಾಯ , ಖುರ್ಆನ್ ಓದಿದ ಸವಾಬ್ ಮಯ್ಯಿತಿಗೆ ಲಬಿಸುತ್ತದೆ ಎಂದಾಗಿದೆ .

ಹಂಬಲೀ ಮದ್ಹಬಿನ ಇಮಾಮರ ಅಬಿಪ್ರಾಯ ಈ ಕೆಳಗಿನಂತಿದೆ .

نقل عن الامام أحمد : يصل إلى الميت كل شيئ من صدقة وصلاة وحج واعتكاف وقراءة وذكر وغير ذلك .

( المواهب اللدنية : 2/731 )

ಅಹ್ಮದುಬುನು ಹಂಬಲೀ ( ರ ) ಹೇಳುತ್ತಾರೆ .

ಮಯ್ಯಿತಿನ ಹೆಸರಲ್ಲಿ ಧಾನ ,
 ಹಾಗೂ  ನಮಾಝು ,
ಹಾಗೂ ಹಜ್ಜು ,
ಹಾಗೂ ಮಸೀದಿಯಲ್ಲಿ ಇಅ್ ತಿಕಾಫ್  ಕೂರುವುದು ,
ಹಾಗೂ ಖುರ್ಆನ್ ಪಾರಾಯಣ ,
ಹಾಗೂ ಝಿಕ್ರ್ ,
ಹಾಗೂ ಇನ್ನಿತ್ತರ ಒಳ್ಳೆಯ ಕಾರ್ಯಗಳು ,
ಇವೆಲ್ಲವೂ ಮರಣ ಹೂಂದಿದವರಿಗೆ ಉಪಕರಿಸುತ್ತದೆ .

ಎಂದು ( ಮವಾಹಿಬ್ 2/731 )

( ಮುಗ್ನಿ ಇಬ್ನು ಖುದಾಮ )

ಇನ್ನೂ ನೋಡಿ .

وقد أفتى القاضي حسين : بأن الإستئجار لقراءة القرآن على رأس القبر ،
كالاستئجار للأذان وتعليم القرآن .

ಖಾಲಿ ಹುಸೈನ್ ರವರ ಫತ್ವಾ :

ಯಾರಾದರೂಬ್ಬ ಖಬರುಗಳ ಬಲಿ ಖುರ್ಆನ್ ಓದಿದರೆ .
ಅವನಿಗೆ ಹದಿಯಯಾಗಿ ಹಣವನ್ನು ಕೂಡಬೇಕಾಗಿದೆ .

ಮಸೀದಿಯಲ್ಲಿ ಬಾಂಗಿಗೆ ,ಹಾಗೂ ಮದ್ರಸ ಮಕ್ಕಳಿಗೆ ವಿದ್ಯೆ ಕಲಿಸಿದಕ್ಕೆ ಕೂಲಿ ಕೂಡುವಾಗನೇ  .

( ಮವಾಹಿಬ್ : 2/731 )

😄 ಇನ್ನೂ ಬಿದಈ  ಗಳ ನೇತಾರ ಇಬ್ನು ತೈಮಿಯ್ಯರವರ ಮಾತು ನೋಡಿ 😄

(( ಇದು ನೋಡಿ ಮಸ್ತ್ ಮಜಾ ಮಾಡಿ ))

وسئل رحمه الله :

ما تقول السادات الفقهاء وأئمة الدين  -  وفقهم الله لمرضاته - في القراءة للميت  ؟
هل تصل إليه أم لا   ؟

( المجموع الفتاوى : 24/175 )

ಇಬ್ನು ತೈಮಿಯ್ಯರವರು ಹೇಳುತ್ತಾರೆ ನೋಡಿ .

ಪ್ರಶ್ನೆ : ಸಾದಾತುಗಳೂ ಹಾಗೂ ಅಇಮ್ಮತುಗಳೂ
 ಮರಣ ಹೂಂದಿದವರಿಗೆ ಖುರ್ಆನ್ ಓದುವ ಬಗ್ಗೆ :

ಅದರ ಸವಾಬ್ ಮಯ್ಯಿತಿಗೆ ಉಪಕರಿಸುತ್ತದೆಯೇ  ?

جواب : الحمد لله رب العالمين ،
أما الصدقة عن الميت فإنه ينتفع بها باتفاق المسلمين ،

( المجموع الفتاوى : 24/175 )

ಉತ್ತರ : ಲೋಕದ ಎಲ್ಲಾ ಮುಸ್ಲೀಮೀಗಳ ಒಂದೇ ಒಂದು  ( ಇತ್ತಿಫಾಕಾದ ) ಅಬಿಪ್ರಾಯ .
ಮಯ್ಯಿತಿಗೆ ಉಪಕರಿಸುತ್ತದೆ ಎನ್ನುವುದು .

( ಮಜ್ಮೂಉಲ್ ಫತಾವ 24/175 )

ನಮ್ಮೂರಲ್ಲಿ ( 70,000 ) ತಹ್ಲೀಲ್ ಹೇಳಿ ,
ಮರಣ ಹೂಂದಿದವರಿಗೆ ಹದಿಯಾ ಮಾಡುವ ಸ್ವಾಬಾವವಿದೆ ,

ಇದರ ಬಗ್ಗೆ ಇಬ್ನು ತೈಮಿಯ್ಯರೂಂದಿಗೆ ,
ಒಂದು ಪ್ರಶ್ನೆ ಕೇಳಲಾಯಿತು .
ಇದು ಮರಣ ಹೂಂದಿದವರಿಗೆ ಉಪಕರಿಸುತ್ತದೆಯಾ  ?

ಈ ಹದೀಸ್ ಸ್ವಹೀಹಾದೂದಾ  ?
ಅಲ್ಲ  ಲಈಫಾದೂದಾ  ?

ಆಗ ಇಬ್ನು ತೈಮಿಯರ ಉತ್ತರ ನೋಡಿ .

إذا هلل الانسان هكذا : سبعون ألفا  ، أو أقل ، أو أكثر ،وأهديت إليه ، نفعه بذلك ، وليس هذا حديثا صحيحا ، ولا ضعيفا  . والله أعلم  .

( المجموع الفتاوى : 24/180 )

ಉತ್ತರ : ಒಬ್ಬ ( 70,000 ) ತಹ್ಹೀಲ್ ಹೇಳಿದ ,
ಅಥವಾ ಅದಕ್ಕಿಂತ ಕಮ್ಮಿ ,ಅಥವಾ ಅದಕ್ಕಿಂತ ಜಾಸ್ತಿ , ಇದನ್ನು ಮಯ್ಯಿತಿಗೆ ಹದಿಯಾ ಮಾಡಿದರೆ ಮಯ್ಯಿತಿಗೆ ಉಪಕರಿಸುತ್ತದೆ .
ಈ ಹದೀಸ್ ಲಈಫೂ ಅಲ್ಲ , ಸ್ವಹೀಹೂ ಅಲ್ಲ .

( ಮಜ್ಮೂಉಲ್ ಫತಾವಾ : 24/180 )

ನಮ್ಮ ವಿಷಯನೂ ಅಷ್ಟೇ .
ಹದೀಸ್ ಸ್ವಹೀಹೋ   ?
ಲಈಫೋ  ?
ಎಂದಲ್ಲ .
ಮಯ್ಯಿತಿಗೆ ಉಪಕರಿಸುತ್ತದೆಯಾ  ?
ಇಲ್ವಾ  ? ಎಂದಾಗಿದೆ.

ಅದರ ಉತ್ತರ ಇಬ್ನು ತೈಮಿಯರವರು ಹೇಳಿದರು ,
ಮರಣ ಹೂಂದಿದವರಿಗೆ ಉಪಕರಿಸುತ್ತದೆ ಎಂದು .

👏 ಇದೆಲ್ಲವೂ  ಸಾಕು ನಮಗೆ  👏

ಮರಣ ಹೂಂದಿದವರ ಬಲಿ ಖುರ್ಆನ್ , ಹಾಗೂ ದುವಾ ,ಹಾಗೂ ಧಿಕ್ರ್ ,ಹಾಗೂ  ಇನ್ನಿತ್ತರ ಒಳ್ಳೆಯ ಕಾರ್ಯಗಳೂ ಮಾಡಿ ತೋರಿಸಲು .

ಅಲ್ಲಾಹು ನಮ್ಮನ್ನು ಇಹಪರದಲ್ಲೂ ವಿಜಯಿಗಳೂಡನೆ ಸೇರಿಸಲಿ .

ಆಮೀನ್ .

✍� ಕೆ.ಎಚ್. ಸಿರಾಜುದ್ದೀನ್ ಝುಹ್ರಿ . . ವೇಣೂರು . . ಉಳ್ತೂರು . .

No comments:

Post a Comment