Saturday, October 14, 2017

ಸೌದಿರಾಜ ಅಮೇರಿಕಾದ ಅಧ್ಯಕ್ಷರಾದರೂ
ಅದರ ನಿಲುವು ಬದಲಾಗಲ್ಲ! So ಅದರ ನಿಯಂತ್ರಣ ಜೂದಾಯಿಸಂ ನ ಕೈಯಲ್ಲಿ.
'ಮಾತೃಭೂಮಿ'ಯ ಸ್ಥಿತಿಯೂ ತಥೈವ!
-----------------------------
ಭಾಗ 02
ಖ್ಯಾತ ಅಂಕಣಗಾರ ಓ ಎಂ ತರುವಣ 'ಸಿರಾಜ್' ದೈನಿಕದಲ್ಲಿ ಬರೆಯುತ್ತಾರೆ.
'''''''''''''''''''''''''''''''''''''''''''''''''''''''''''''''

ಸಮುದಾಯದೊಳಗಿರುವ    ಭಿನ್ನತೆ,ಗ್ರೂಫಿಸಂ ತಳ್ಳಾಟಗಳನ್ನು ವೈಭವೀಕರಿಸಿ,ಲಾಭಗೆಯ್ಯುವುದರಲ್ಲಿ ಮಾತೃಭೂಮಿ ನಿಸ್ಸೀಮ.
ಸಾವಿರಾರು ಹೆಣ್ಣುಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಮತ್ತು ವೃತ್ತಿ ಜೀವನದ ದಾರಿ ತೋರಿಸಿ,ನೂರಾರು ಕುಟುಂಬಗಳಿಗೆ ಆಸರೆಯಾದ 'ಕಾಂತಪುರಂ' ನ್ನು ಸ್ತ್ರೀ ವಿರೋಧಿಯಾಗಿ ಬಿಂಬಿಸುತ್ತಾ ,ಈದ್ ನಮಾಝ್ ನ ಹೆಸರಲ್ಲಿ ರಸ್ತೆಯುದ್ದಕ್ಕೂ ಮುಸ್ಲಿಂ ಮಹಿಳೆಯರ ಪರೇಡ್ ನಡೆಸುವ ಸಲಪಿ,ಜಮಾತ್ ಸಂಘಟನೆಗಳನ್ನು
ಪ್ರಗತಿಪರೆಂದು ಗೀಚುವ ಮುದಿ ಪತ್ರಿಕೆಯ ಒಳಗುಟ್ಟು ಏನೆಂದು ಸ್ಪಷ್ಟ ಮತ್ತು ಅಷ್ಟೇ ವ್ಯಕ್ತ.

ಬಹುಸಂಖ್ಯಾತ ಮುಖ್ಯವಾಹಿನಿಯಲ್ಲಿರುವ ಮುಸ್ಲಿಮ್ ಸಂಘಟನೆಗಳ ವಾರ್ತೆಗಳನ್ನು ಪರದೆಯ ಹಿಂದೆ ತಳ್ಳುವುದು ಅಥವಾ ತಿರುಚುವುದು ಮಾತೃಭೂಮಿಯ ಒಂದು ಹೋಭಿ!
ಸೇವಾನಿರತರಾದ ಸನ್ನದ್ಧ ಸುನ್ನೀ ಸಂಘಟನೆಗಳ ವಾರ್ತೆಯ ಪರಿಚಯವೇ ಈ ದೈನಿಕಗೆ ಸಿಗಲ್ಲ.!

ಆದರೆ ISM- MSM ಸಂಘಟನೆಗಳ ಸಣ್ಣ ಚಲನಗಳಿಗೂ ಮಾತೃಭೂಮಿಯ ಪುಟ ಸಾಕಗಾದೆ ಹೋಗುವುದು ವಿಪರ್ಯಾಸ!
ಸಮುದಾಯದೊಳಗಿನ ಗಾಯ ಕರಟಿಹೋಗದಂತೆ ನೋಡಿಕೊಳ್ಳುವಲ್ಲಿ ಮಾತೃಭೂಮಿ ಅತೀವ ಜಾಗೃತಿ ವಹಿಸುತ್ತದೆ!
ಖಾದಿಯಾನಿಗಳ ಅಧಿಕೃತ ಪತ್ರಿಕೆಯಾಗಿದೆ ತಾನೇ 'ಮಾತೃಭೂಮಿ'.
ಪಂಜಾಬಿನಲ್ಲಿ ನಡೆಯುವ ಖಾದಿಯಾನಿ ಸಮ್ಮೇಳನಗಳ ಅಪ್ಡೇಟ್  ಕ್ಯಾಲಿಕಟ್ ಆವೃತ್ತಿಯ ಮುಖ ಪುಟದಲ್ಲಿ ಅಚ್ಚಾಗಿರುತ್ತದೆ!
ಓದುವವನು ಇದೇನು ಕೋಝಿಕ್ಕೋಡ್ ಖಾದಿಯಾನಿ ಸಮ್ಮೇಳನವಾ ಎಂದು ಹುಬ್ಬೇರಿಸಿದರೂ ಆಶ್ಚರ್ಯವಿಲ್ಲ!
ಮಾತೃಭೂಮಿಗೆ ತಿದ್ದಲು ಸಾಧ್ಯವಿಲ್ಲ,...
ಸಮಯವೂ ಇಲ್ಲ..

ಭಯೋತ್ಪಾದನೆ ವಿರುದ್ಧ ಯುದ್ಧ ಸಾರಿದೆಯಂತೆ  ಮಾತೃಭೂಮಿ.
ಆದರೆ ವಿಶ್ವದಾದ್ಯಂತ ಇಸ್ಲಾಮಿನ ಹೆಸರಲ್ಲಿ ನಡೆಯುವ ಭಯೋತ್ಪಾದನೆಯ ಮೂಲ ಮತ್ತು ಬುದ್ದಿಕೇಂದ್ರ ಪ್ರಾಚೀನ ರಾಡಿಕಲ್ ಸಲಫಿಸಂ ಆಗಿದೆ.
ತಾಲಿಬಾನಿಸಂ, ಅಲ್ ಖಾಯಿದಾ, ಭೋಕೋಹರಂ ,ಹಾಗೂ ನೂತನ Isis ಎಲ್ಲದರ ಆದರ್ಶ ಸಲಫಿಸಂ!
ಅವಕಾಶ ದಕ್ಕದೆ ಇರುವುದರಿಂದಲೇ ಇಲ್ಲಿನ ದರ್ಗಾಗಳು ಅವರ ಪಾಲಿಗೆ ಬೂದಿಮುಚ್ಚಿದ ಕೆಂಡಗಳು!

ಈ ಒಕ್ಕೂಟ ಕೇರಳದಲ್ಲಿ ವಿವಿಧ ನಾಮಗಳಲ್ಲಿ ವಿಹರಿಸುತ್ತಿದಯಷ್ಟೇ.

ಭಯೋತ್ಪಾದನೆ ಹೆಸರಲ್ಲಿ ಮುಸ್ಲಿಂ ಲೋಕದಿಂದ  ದೂರವಾಗುತ್ತಿದ್ದ ಸಲಪಿಸಂ ನ್ನು 'ಪ್ರಗತಿರರು' ಎಂಬ ವಿಳಾಸ ಕೊಟ್ಟು ಮಾತೃಭೂಮಿ ತಾರೀಫು ಮಾಡುವುದರ ರಹಸ್ಯ ಏನೆಂದು ಸ್ಪಷ್ಟ.

ಈ ಸಂಘಟನೆಗಳು ಮುಸ್ಲಿಂ ಸಮುದಾದ ಮೇಲೆ ಎಳೆದ ಗಾಯ ವಾಸಿಯಾಗದೆ ನಿಲ್ಲಬೇಕು! ಮುಂದೆ ಇಲ್ಲಿ ಲಷ್ಕರೆ ಮತ್ತು Isis ನ ಬರುವುದಾದರೆ ಶತ್ರುವನ್ನು ಹುಡುಕಿಕೊಂಡು ಗಡಿದಾಟಬೇಕೆಂದಿಲ್ಲ ತಾನೇ?
ಮಾರ್ಚ್ ಒಂಬತ್ತರ ನೀಚವಾದ ಬರಹದಂತೆ ಈ ನಿಲುವು ಅನಿರೀಕ್ಷಿತವೋ ಪ್ರಮಾದವೋ ಅಲ್ಲ,ಎಲ್ಲವೂ ಪೂರ್ವಯೋಚಿತ ಸಂಚಿನ ಫಲವಾಗಿದೆ.

ಇಸ್ಲಾಂ ಮತ್ತು ಮುಸ್ಲಿಮರ ಸಮಸ್ಯೆ ಉಂಟಾದರೆ ಅದರ ಕುರಿತು ಪ್ರತಿಕ್ರಯಿಸಲು ಮಾತೃಭೂಮಿ ಕರೆಯುವ ಪ್ರತಿನಿಧಗಳು ಯಾರು?

1)MN ಕಾರಶ್ಶೇರಿ,
2) ಹಮೀದ್ ಚೇಂಙಮಂಗಲ್ಲೂರು
3) ಖದೀಜ್ ಮಮ್ತಾಝ್
4)BP. ಝುಹರಾ....   ಮುಗಿಯಿತು!

ಮಾತೃಭೂಮಿ ಅವತರಿಸುವ
ಕೇರಳ ಮುಸ್ಲಿಂ ಸಮೂಹದ ಪ್ರತಿನಿಧಿಗಳು
ಇವರು ನಾಲ್ಕು ಮಂದಿ!
ಇವರು ಯಾವ ಇಸ್ಲಾಮನ್ನು ಪ್ರತಿನಿಧಿಸುವವರು❓
ಧರ್ಮದ ಯಾವ ಪ್ರಮಾಣಗಳನ್ನು ಈ ನಾಲ್ಕು ಮಂದಿ ಅಂಗೀಕರಿಸುತ್ತಾರೆ❓
ಒಂದೇ ಒಂದು ಮತಸಂಘಟನೆಯನ್ನು ಇವರು ಅಂಗೀಕರಿಸುವುದಿಲ್ಲ.
ಕುರಾನ್ ಸಹಿತ ಇಸ್ಲಾಮಿನ ಯಾವ ಪ್ರಮಾಣವನ್ನು ಇವರು accept ಮಾಡುವುದಿಲ್ಲ.
ಧರ್ಮದ ಪಕ್ಷ ನಿಂತು ಸ್ವಂತ ಕುಟುಂಬದವರನ್ನು ಇವರು ಪ್ರತಿನಿಧಿಸುವುದಿಲ್ಲ.
ಇವರಲ್ಲಿ ಕೆಲವರು ತಮ್ಮ ಹೆಸರನ್ನು ಬದಲಾಯಿಸಲಿಲ್ಲವೆಂಬುದು ಮಾತ್ರ ಇಸ್ಲಾಮಿನೊಂದಿಗೆ ಇವರಿಗಿರುವ ನಂಟು!
ಇವರ ನಿಮಿತ್ತ ಇಸ್ಲಾಮಿನ ಸರಿಯಾದ ನಿಲುವು ಏನೆಂದು ಮಾತೃಭೂಮಿಯ ನಿತ್ಯ ವಾಚಕರಿಗೆ ತಿಳಿಯದೆ ಹೋಗಿದೆ.
ಅಂದರೆ ಇದ್ಯಾವುದೂ ಕೂಡಾ ಮಾತೃಭೂಮಿ ಗೆ ತಿಳಿಯದ ಸಂಗತಿಯೇನಲ್ಲ.
ಮತ್ತೆ ಸಮುದಾಯವನ್ನು ನೋವಿಸಲು ಈ ನಾಮಾದಾರಿ ಮುಸ್ಲಿಮರಿಗಿಂತ ಉತ್ತಮ ಅಯುಧ ಬೇರೆ ಇಲ್ಲ.
ಇವಾಗ ಯಾಕೆ ಮಾತೃಭೂಮಿ ಕ್ಷಮಾಪಣೆಯ ತುಂಡು ಪತ್ರ ಹಿಡಿದು ಮುಸ್ಲಿಂ ನಾಯಕರನ್ನು ಅರಸುತ್ತಾ ಅಂಡೆಲೆಯುವುದು❓
ಕಾರಶ್ಶೇರಿ ಮಾಸ್ಟರ್ ಮತ್ತು ಹಮೀದ್ ಚೇಂಙಮಂಗಲಂ ಜೊತೆ ಝೊರಾಬಿಯನ್ನು
ಮುಂದೆ ನಿಲ್ಲಿಸಿ ಪ್ರಸ್ತುತ ಸಮಸ್ಯೆಗೆ ಪರಿಹಾರ ಕಾಣಬಹುದಿತ್ತು. ನಿಮ್ಮ ಸಮಸ್ಯೆ ಪರಿಹಾರಕರಾದ ಮುಸ್ಲಿಂ ಪ್ರತಿನಿಧಿಗಳು ಇವರು ತಾನೇ❓

ಮುಖಪುಟ ದಲ್ಲೊಂದು ಪಾಣಕ್ಕಾಡ್ ತಂಙಳ್ ರವರ ಚಿತ್ರ ಮತ್ತೊಮ್ಮೆ ಕಾಂತಪುರಂ ಉಸ್ತಾದರ ಸ್ಟೇಟ್ ಮೆಂಟ್, ಯಾವುದೋ ಮುಸ್ಲಿಂ ಸಮ್ಮೇಳನದ ಸೂರ್ಯಸ್ತಮಾನದ ಆಕಾಶ ಚಿತ್ರ ......
ಮುಗಿಯಿತು ಸಮುದಾಯದ ನೋವು...!
ನೂರೊಂದನೇ ಆವೃತಿ ರಮಳಾನ್ ಸ್ಪಷಲ್ ಸಂಚಿಕೆ,ಕೋಟು ಧರಿಸಿದ ಖಾಝಿಯೊಬ್ಬರನ್ನು ಮುಂದೆ ನಿಲ್ಲಿಸಿ ಇಫ್ತಾರ್ ಸಂಗಮದ ಒಂದು ಫೋಟೋ
ಮುಗಿಯಿತು ಮಾತೃಭೂಮಿಯ ಸಕ್ಯೂಲರಿಸಂ!

ಕಳಂಕ ರಹಿತ ಜಾತ್ಯಾತೀತವಾದಿ ಮುಸ್ಲಿಂ ವೇದಿಕೆಗಳಲ್ಲಿ ನಿತ್ಯ ಸಾನಿಧ್ಯವಿರುವ ಶೋಷಿಯಲಿಸ್ಟ್ ಎಂ ಪಿ ವೀರೇಂದ್ರ ಕುಮಾರ್ ಮಾತೃಭೂಮಿ ದೈನಿಕದ MD ಎಂದು ನಾವು ಸಮಾದಾನಿಸುವುದು ಅಮೆರಿಕಾ ಅದ್ಯಕ್ಷರಾಗಿ ಬರಾಕ್ ಒಬಾಮ ಬರುವುದನ್ನು ಕಂಡು ಸಮಾದಾನಿಸಿದ್ದಕೆ ಸಮಾನ!
ಅಮೇರಿಕಾದ ನಿಲುವನ್ನು ನಿರ್ಣಯಿಸುವುದು ಜೂದಾಯಿಸಂ ಆಗಿದೆ.ಸೌಧಿ ರಾಜ ಅಮೇರಿಕಾದ ವೈಟ್ ಹೌಸ್ ಕುರ್ಚಿಯಲ್ಲಿ ಕುಳಿತುಕೊಂಡರೂ ಅದೇ ಜೂದಾಯಿಸಂ ನಿಯಮಗಳನ್ನೇ ಜಾರಿಗೆ ತರಬೇಕಾಗುತ್ತದೆ.
ವೀರನಾದರೂ ಶೂರನಾದರೂ ಮಾತೃಭೂಮಿ ಗೆ ಒಂದು ಪರಂಪರೆ ಮತ್ತು ನಿಲುವು ಇದೆ.
ಕುರ್ಚಿ ಬೇರೆ ನಿಲವು ಬೇರೆ...
ಹೊಡೆದು ಬಡಿದು ಅಪ್ಪಚ್ಚಿ ಮಾಡಿದ ನಂತರ ಹೊರಗೆ ಸ್ವಲ್ಪ ತೈಲದ ಲೇಪ ಹಚ್ಚಿ ಮೂಗಿಗೆ ಬೆಣ್ಣೆ ಸವರುವ ನೀಚವೃತ್ತಿಯನ್ನು
ಮಾತೃಭೂಮಿ ಕೊನೆಗೊಳಿಸಬೇಕು.
ಪಾಪ ಈ ಸಮುದಾಯವನ್ನು ಮಾತೃಭೂಮಿ ಅದರಿಷ್ಟಕ್ಕೆ ಬಿಟ್ಟುಬಿಡಲಿ.
ಮಾತೃಭೂಮಿ ಯ ನೆರಳಿಲ್ಲದೆ ಈ ಸಮುದಾಯ ಜೀವಿಸುತ್ತದಯೇ ಎಂದು ನೋಡೋಣ.

ಮುದಿದೈನಿಕ ತನಗೆ ಸಂಭವಿಸಿದ್ದು ಪ್ರಮಾದವೆಂದು,ನೋಟದ ಕೊರತೆಯೆಂದೂ ಬಿಂಬಿಸಲಿಕ್ಕೆ ಶ್ರಮಿಸುತ್ತಿದೆ.
ನಗರ ಪ್ರತಿಗಳನ್ನೂ ಬೇಗನೇ ತಯ್ಯಾರು ಮಾಡಲಾಗುತ್ತದೆ.ಅದು ಮೂರ್ನಾಲ್ಕು ಕೈಗಳಿಗೆ ಹಸ್ತಾಂತರವಾಗುತ್ತದೆ.
ಶೋಷಿಯಲ್ ಮೀಡಿಯದಿಂದ ಒಂದು ಬರಹ ಸುಮ್ಮನೆ ಯಾರ ಗಮನಕ್ಕೆ ಬಾರದೆ ಬಂದು ಕುಳಿತುಕೊಳ್ಳಲು ಸಾಧ್ಯವಿಲ್ಲ.
ವರ್ಣನಾತ್ಮಕ ಶೈಲಿಯ ತಲೆಬರಹ ಕೊಟ್ಟು ಮನೋಹರವಾಗಿ article  ಕೊಡಲಾಗಿದೆ.
ಇನ್ನು ಕೇಸು, ಬಂಧನದಂತಹ ಕಾನೂನು ಬೇಟೆಯನ್ನು ತಪ್ಪಿಸಲಿಕ್ಕಾಗಿ ವ್ಯಕ್ತಿಯ ಹೆಸರು ಕೊಡಲಿಲ್ಲ. ಧರ್ಮದ ಸಂಘಟನೆಯ ಹೆಸರು ಬಾರದಂತೆ ಬರಹಗಾರ ಜಾಗೃತೆ ವಹಿಸಿದ್ದಾನೆ.
ಮಾತೃಭೂಮಿಯ ನೆಬಿ ನಿಂದನೆಗೆ ವಿರುದ್ಧವಾಗಿ ಮೂರು ದಿನದೊಳಗೆ ಬರೋಬ್ಬರಿ ಎಂಟುಲಕ್ಷಕ್ಕಿಂತಲೂ ಜಾಸ್ತಿ ಕಮಂಟ್ಸ್ ಗಳು  ಪ್ರತಿಕ್ರಿಯೆ ರೂಪದಲ್ಲಿ ರಾಶಿಬಿದ್ದಿದೆ!

ಪ್ರವಾದಿ ಮುಹಮ್ಮದ್ ನೆಬಿ(ಸ) ಮತ್ತು ಆಯಿಶಾ (ರ) ರವರ ವಿವಾಹ ನಿಶ್ಚಯ ನಡೆಯುವಾಗ ಆಯಿಶಾ ಬೀವಿಯವರ ವಯಸ್ಸು ಆರು.ಕುಟುಂಬ ಜೀವನ ನಡೆಸುವುದು ಒಂಬತ್ತನೇ ಪ್ರಾಯದಲ್ಲಿ.

ಕಾತಿಬ್ ಅಲ್ ಬಗ್ದಾದಿಯವರ 'ಅಕ್ಮಲ್ ಫೀ ಅಸಮಾಈ ರ್ರಿಜಾಲ್',ಇಮಾಮ್ ತ್ವಬರಿಯವರ :ತಾರೀಖ್' ಬುಖಾರಿ (ರ) ರವರ ಕೆಲವೊಂದು ಹದೀಸ್ ನ ಬೆಳಕಿನಲ್ಲಿ
ಪ್ರಸ್ತುತ ವಿವಾಹ ಬೀವಿಯವರ ಹದಿನೇಳನೇ ವಯಸ್ಸಿನಲ್ಲಾಗಿತ್ತು.
ಹಲವಾರು ಪುರಾವೆಗಳು ಈ ಅಭಿಪ್ರಾಯವನ್ನು ಪುಷ್ಟೀಕರಿಸುತ್ತದೆ.

ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರ ವಿವಾಹ ನಡೆಯುವುದು 1400 ವರ್ಷಗಳ ಮುಂಚೆ ಎಂದು ಪ್ರತೇಕ ಗಮನಿಸತಕ್ಕದ್ದು.
ಆದರೆ ಕರಮಚಂದ ಮೋಹನ್ ದಾಸ್ ಗಾಂಧಿ ಮತ್ತು ಕಸ್ತೂರ್ಭಾ ರವರ ವಿವಾಹ ನಿಶ್ಚಯ ನಡೆಯುವಾಗ ವಧುವಿನ ವಯಸ್ಸು ಏಳು!
1869ರಲ್ಲಿ ಜನನ 1877 ರಲ್ಲಿ ವಿವಾಹ ನಿಶ್ಚಯ 1882ರಲ್ಲಿ ವಿವಾಹ!
ಅದ್ಭುತ .... ಅತ್ಯದ್ಭುತ ..!

ಅಂದರೆ ಮಾತೃಭೂಮಿಯ ಆದರ್ಶ ಪುರುಷನ ಶೈಷವ ವಿವಾಹ ಮಹತ್ತರ!
ಮುಹಮ್ಮದ್ ನೆಬಿಯವರ ವಿವಾಹ ಅಪಹಾಸ್ಯ!
ಈ ಬರಹ ತಯ್ಯಾರು ಮಾಡಿದ ಸಬ್ ಎಡಿಟರ್ ಮತ್ತು ಡಸ್ಕ್ ಛೀಫ್ ನ ಮೆದುಳನ್ನು ಪರಿಶೋಧನೆಗೆ ಒಳಪಡಿಸುವುದು ಒಳಿತು.ಇದೆಲ್ಲಾ ಪ್ರಾಚೀನ ಚಾಲಪ್ಪುರ ಪ್ರೇತಭಾದೆಯಾಗಿದೆ.

ಕೇರಳ ಮತ್ತು ಮಲಯಾಳಿ ಸಮೂಹವಾಗಿದೆ ಮಾತೃಭೂಮಿಯ 'ಭೂಮಿ' .
ಕೇರಳ ಜನಸಂಖ್ಯೆಯ ಇಪ್ಪತ್ತಮೂರು ಶೇಖಡಾ ಮುಸ್ಲಿಮರಿದ್ದಾರೆ.
ಮಾತೃಭೂಮಿಯನ್ನು ಅಪ್ಪುವ (ಒಪ್ಪದಿದ್ದರೂ) ಒಳ್ಳೆಯ ಒಂದು ಅಂಶ ಓದುಗಾರರು ಮುಸ್ಲಿಂಗಳಿದ್ದಾರೆ.
ಜಾತ್ಯತೀತೆಯ ಕುರಿತು ಬಾಯಿತುಂಬಾ ಮಾತನಾಡುವ ಮಾತೃಭೂಮಿ ಯ ಸಮುದಾಯ ಪ್ರಾತಿನಿಧ್ಯ ಎಷ್ಟಿದೆ?
ಡಸ್ಕಿನಲ್ಲಿ ಯಾವ ರೀತಿ ಇದೆ?
ದೊಡ್ಡ ಸನ್ನಾಹದೊಂದಿಗೆ ಒಂದು ಮುಸ್ಲಿಂ ವಿಭಾಗ ಪತ್ರಿಕೆ ಆರಂಭಿಸಿದಾಗ ಅದರ ಉನ್ನತ ಹುದ್ದೆಯಲ್ಲಿ ಪ್ರತಿಷ್ಠಾನ ಮಾಡಿದ್ದು ಪಿ ಕೆ ಬಾಲಕೃಷ್ಣ ರನ್ನಾಗಿದ್ದರೆ ಮತ್ತೊಂದು  ವಿಭಾಗ ಕುಳ್ಳಿರಿಸಿದ್ದು ಸುಕುಮಾರನ್ ಆಝಿಕ್ಕೋಡ್ ಎಂಬವರನ್ನಾಗಿದೆ.
.ಎನ್ ಪಿ ಚೆಕ್ಕೂಟಿಯಾಗಿದ್ದಾರೆ ಒಂದು ಮುಸ್ಲಿಂ ಪತ್ರಿಕೆಯ 'ಕೀ' ಪೋಯಿಂಟ್!

ಅಮುಸ್ಲಿಂ ಪತ್ರಕರ್ತನನ್ನು ಕುಳ್ಳಿರಿಸಿ ಪತ್ರಿಕೆಯ ನಿಲುವನ್ನು ಚರ್ಚೆ ಮಾಡುವುದಕ್ಕೆ 'ಕಾಂತಪುರಂ' ಉಸ್ತಾದರಿಗೆ ಯಾವ ಅಡಚಣೆಯೂ ಇರಲಿಲ್ಲ!
ಒಮ್ಮೆ ಒಂದು ಮುಸ್ಲಿಂ ನಾಯಕ ಮರಣಹೊಂದಿದಾಗ ಮಯ್ಯಿತ್ ನಮಾಝ್ ನಲ್ಲಿ ಸುಜೂದ್ ಮಾಡುವ ಫೋಟೋ ಮಾತೃಭೂಮಿ ಪ್ರಕಟಿಸಿತಂತೆ!
ಅಂದು ಮೊತ್ತಮೊದಲನೆಯದಾಗಿ ಒಬ್ಬ ಮುಸ್ಲಿಂ ಪತ್ರಕರ್ತನ ಅಗತ್ಯದ ಕುರಿತು ಮಾತೃಭೂಮಿ ಚಿಂತಿಸಿದ್ದು!
ಜಾತಿಪದ್ಧತಿಯೂ ಮಾತೃಭೂಮಿ ಇದೆ.ಗಾಂಧೀಜಿ, ಅಯ್ಯಾಂಗಾಳಿ, ಶ್ರೀ ನಾರಯಣ ಗುರು ಮಾತೃಭೂಮಿಯ ಮಾದರಿ ಪುರುಷರು.
ಆಯಿತ್ತೊಚ್ಚಾಡಣಂ ಮಹತ್ತರವಾದ ಆಶಯವಾಗಿದೆ ಆದರೆ ಅದು ಗೇಟಿನ ಹೊರಗೆ! ಇಂತಹವರು ಅಲ್ಪಸಂಖ್ಯಾತ ಪ್ರಾತಿನಿಧ್ಯ ಕೊಡುವರೇ?

ಕೇರಳದ ವಿಧಾನ ಸಭೆ ಚುನಾವಣೆ ಘೋಷಿಸಿದಾಗಲೇ 'ನಾಣಿಕ್ಕೇಂಡೇ ನಾಂ'
ಎಂಬ ಸ್ಥಿರ ಅಂಕಣ ಆರಂಭವಾಗಿತ್ತು.
ನಿಯಮಸಭೆಯಲ್ಲಿ 33-55 ಶೇಕಡಾ ಸ್ತ್ರೀ ಪ್ರಾತಿನಿಧ್ಯ ಇಲ್ಲವೆಂಬ ಕೊರಗುತ್ತಾ ಅದರ ವಿರುದ್ಧ ತೀಕ್ಷಣವಾದ ವಿಮರ್ಶನೆಯಾಗಿತ್ತು ಅಂಕಣದ ಸಾಲುಗಳು.

ಅಪಘಾನ್ ನಿಯಮಸಭೆಯಲ್ಲಿ 28 ಶೇಖಡಾ ಸ್ತ್ರೀ ಪ್ರಾತಿನಿಧ್ಯ ಇದ್ದೂ ಕೂಡಾ ಕೇರಳದಲ್ಲಿ ಕೇವಲ ಐದು ಶೇಖಡಾ ಮಾತ್ರವೆಂಬ ಆರೋಪ ಮಾಡುತ್ತಾ ಅತ್ಮರೋಷಗೊಂಡ ಮಾತೃಭೂಮಿಯ ಡೈರಕ್ಟರ್ ಬೋರ್ಡಲ್ಲಿ ಹೀಗೆ ಸುಮ್ಮನೆ ಕೈ ಜಾಡಿಸಿದಾಗ ಆಶ್ಚರ್ಯವಾಯಿತು.
ಅಷ್ಟು ದೊಡ್ಡ ಜಂಬೋ ಬೋರ್ಡ್ ನಲ್ಲಿ ಮಹಿಳಾ ಪ್ರಾತಿನಿಧ್ಯ ಒಂದೇ ಒಂದು!

ಹೋಗಲಿ ಕೆಳದರ್ಜೆ ಬೋರ್ಡ್ ನಲ್ಲಿ ಎಷ್ಟು ಮಹಿಳಾ ಪ್ರಾತಿನಿಧ್ಯ ಉಂಟೆಂದು ಸರ್ಚ್ ನಡೆಸಿ ನೋಡಿ ಮಾತೃಭೂಮಿ ಯ ಸ್ತ್ರೀ ಸಬಲೀಕರಣದ ಕೆಟ್ಟ ಮುಖ ಅನಾವರಣಗೊಳ್ಳುತ್ತದೆ. ಮಾತೃಭೂಮಿ ಮೊದಲು ಈ ಕಾಪಟ್ಯಕ್ಕ ಅಂತ್ಯಹಾಡಬೇಕು.

ಎರಡು ವಿಭಾಗದ ಮಧ್ಯೆ ಸಮಸ್ಯೆ ತಲೆದೋರಿದರೆ ಅದರ ಪರಿಹಾರಕ್ಕೆ ಹಲವು ಮಾರ್ಗಗಳಿವೆ.ತರ್ಕದಲ್ಲಿರುವ ಒಂದು ವಿಭಾಗ ಸರಿದು ನಿಂತರೆ ಅದೊಂದು ದೊಡ್ಡ ಪರಿಹಾವಾಗಲಿದೆ.ಮಾತೃಭೂಮಿ ತನ್ನ ನಿಲುವನ್ನು ಬದಲಿಸಬೇಡ.ಖೇದ ಕ್ಷಮಾಪಣೆ ಯಾವುದರ ಅಗತ್ಯ ಇಲ್ಲ.ಮುತ್ತು ನೆಬಿಯನ್ನು ನಿಂದಿಸಿದವನ ವಿರುದ್ಧ ಕ್ರಮಕೈಗೊಳ್ಳುವುದೂ ಬೇಡ.
ಸಮಸ್ಯೆಗೆ ಪರಿಹಾರವೆಂಬ ನಿಟ್ಟಿನಲ್ಲಿ ಮಾತೃಭೂಮಿ ಯ ದಾರಿಯಿಂದ ನಾವು ಸರಿಯುವೆವು.ಪ್ರಭಾತಸಮಯದಲ್ಲಿ ಬರುವ ಮಾತೃಭೂಮಿಗೆ ನಮ್ಮ ಮನೆ ಬಾಗಿಲಿಗೆ ಎಂಟರ್ ಇಲ್ಲ.ಸಮುದಾಯದ ಎಲ್ಲಾ ಪ್ರಬಲ ಗ್ರೂಪುಗಳಿಗೂ ಸ್ವಂತ  ದೈನಿಕ ಇದೆ. ಇಪ್ಪತ್ತೈದು ವರ್ಷವಾಯಿತು ನನ್ನ ಮನೆಯ ಸದಸ್ಯನಂತೆ ಮಾತೃಭೂಮಿ ಇತ್ತು.ಇದೀಗ ಪ್ರವೇಶ ನಿಷೇಧಿಸಿದ್ದೆನೆ
ಕುಟುಂಬದ ಸದಸ್ಯನೊಬ್ಬ ಹೊರಹೋಗುತ್ತಿರುವ ಫೀಲಿಂಗ್ ಇದೆ.ಆದರೆ ನಮ್ಮ ಮುತ್ತು ನೆಬಿಯವರಿಕ್ಕಿಂತ ಮೇಲೆ ಇಲ್ಲ.

ಇದೀಗ ಮಕ್ಕಾ ಹರಮ್ ನಲ್ಲಿ  ಉಮ್ರಾ ಕರ್ಮ ನಡೆಯುತ್ತಿದೆಯಾದರೂ ಇತರ ತಿಂಗಳುಗಳಿಗಿಂತ ಜನಸಾಂದ್ರತೆ ಕಡಿಮೆ ಇರುವ ಸಮಯ.....ಆದರೆ
ಬಲಿಪೆರ್ನಾಳ್ ಮತ್ತು ಶುಕ್ರವಾರ ಜೊತೆ ಜೊತೆಯಾಗಿ ಬಂದರೂ ಅತ್ತಕಡೆ ತಿರುಗಿ ನೋಡದ ಮಾತೃಭೂಮಿ ಇದೀಗ ಮಕ್ಕಾ ಹರಮ್ ನ ಪವಿತ್ರ ಕಾಬಾ ದ ವರ್ಣರಂಜಿತ ಫೋಟೋ ಮುಖಪುಟದಲ್ಲಿ ಅಚ್ಚು ಹಾಕಿದೆ!  ಇದರಿಂದ ಮುಸ್ಲಿಂ ಸಮುದಾಯದ ಮನಸ್ಸು ಪುಳುಕಿತಗೊಳ್ಳಬಹುದೆಂಬ ನಿಮ್ಮ ಈ ವಿಚಾರ ಇದೆಯಲ್ಲಾ...... ಶ್ಶ್....ಕಷ್ಟ....
ಮುಸ್ಲಿಮರ ಕುರಿತು ಇವರು ಏನೆಂದು ಭಾವಿಸಿದ್ದಾರೆ❓

ಕನ್ನಡಕ್ಕೆ
✒ ಅಬೂಶಝ

No comments:

Post a Comment