*ಸುನ್ನೀ ರೈಟರ್ಸ್ ಕ್ಲಬ್ ಮಂಗಳೂರು*
✍🏻✍🏻✍🏻✍🏻✍🏻✍🏻✍🏻✍🏻✍🏻✍🏻
*ಸ್ಥಳ: ರೋಟರಿ ಭವನ ಪುತ್ತೂರು*
*ತಾರೀಕು : 17/12/2016*
*ಸಮಯ: ಬೆಳಗ್ಗೆ 11:00*
*ಇದರ ವಾರ್ಷಿಕೋತ್ಸವ ಪ್ರಯುಕ್ತ ಮಂಗಳೂರು ಸುನ್ನೀ ಸಂವಾದ ಸಾರಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಅಬೂಶಝ ಉಸ್ತಾದರಿಗೆ ಸುನ್ನೀ ಬರಹ ರತ್ನ-2016 ಪ್ರಶಸ್ತಿ ಪ್ರಧಾನ.*
*ಮಂಗಳೂರು ಸಂವಾದದ ಮೂಲಕ ಬಂದ ದಾರಿಗೆ ಸುಂಕವಿಲ್ಲವೆಂದು ಸೆಪ್ಪೆ ಮೋರೆ ಹಾಕಿ ಮಂಗಳೂರಿನಿಂದ ಪಲಾಯಣ ಮಾಡಿಸಿದ, ಎಲ್ಲ ನೂತನವಾದಿಗಳ ಹೆಡೆಮುರಿ ಕಟ್ಟಿ ಬಂಧಿಸಿ ಇನ್ನು ತಲೆ ಎತ್ತದಂತೆ ಮಾಡಿ ಎಲ್ಲ ಕುಪ್ರಚಾರಗಳನ್ನು ಸುಟ್ಟು ಬೂದಿ ಮಾಡಿ ಅರಬಿ ಸಮುದ್ರದಲ್ಲಿ ಪಿಂಡ ಬಿಟ್ಟ ಆದರ್ಶ ಧೀರ ಸೇನಾನಿ ತತ್ವಕ್ರಾಂತಿಯ ರಣಕಹಳೆ ಸುನ್ನಿವಾಣಿ ಮಾಸಪತ್ರಿಕೆಯ ಸಂಪಾದಕ ದಕ್ಷಿಣ ಕನ್ನಡ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಬಹುಮಾನ್ಯರಾದ*
_*ಟಿ.ಎಂ ಮುಹಿಯೆದ್ದೀನ್ ಕಾಮಿಲ್ ಸಖಾಫಿ ತೋಕೆ*_
*ಉಸ್ತಾದರಿಗೆ ಹಾಗೂ ಸಹವರ್ತಿಗಳಿಗೆ ಅಭಿನಂದನಾ ಸಮಾರಂಭವು ಪುತ್ತೂರಿನ ರೋಟರಿ ಭವನದಲ್ಲಿ ತಾರೀಕು 17/12/2016 ಬೆಳಗ್ಗೆ 11 ಗಂಟೆಗೆ ನಡೆಯಲಿದೆ.*
*ಅಬೂಶಝ ಹೆಸರಿನಲ್ಲಿ ಆದರ್ಶ ಬದ್ಧತೆಯ ಬರಹಗಳೊಂದಿಗೆ ಸುನ್ನತ್ ಜಮಾ-ಆತಿನ ಎಲ್ಲ ಬದ್ದ ವೈರಿಗಳನ್ನು ತನ್ನ ಹರಿತವಾದ ಲೇಖನಿಯ ಮೂಲಕ ಕಟ್ಟಿಹಾಕಿ, ಸುನ್ನತ್ ಜಮಾ-ಅತ್ ವಿರೋಧಿಗಳು ಕನಸಿನಲ್ಲೂ ಬೆಚ್ಚಿಬೀಳುವ ಬರಹ ರಂಗದ ಅದ್ವಿತೀಯ ಸಾರಥಿ ಪುತ್ತೂರಿನ ಅಭಿಮಾನ ಅಬ್ದುಲ್ ರಝಕ್ ಖಾಸಿಮಿ (ಅಬೂಶಝ) ಪುತ್ತೂರು ಅರ್ಹವಾಗಿಯೇ ಸುನ್ನಿ ರೈಟರ್ಸ್ ಕ್ಲಬ್ ಆರ್ಪಿಸುತ್ತಿರುವ ಸುನ್ನೀ ಬರಹ ರತ್ನ ಪ್ರಶಸ್ತಿ-2016 ಪಾತ್ರರಾಗಿದ್ದಾರೆ.* *ಈ ಪ್ರಶಸ್ತಿಯನ್ನು ಬಹುಮಾನ್ಯರಾದ ತೋಕೆ ಉಸ್ತಾದರ ಕೈಯಿಂದ ಅಬೂಶಝ ಉಸ್ತಾದರವರು ಸ್ವೀಕರಿಸಲಿದ್ದಾರೆ ಇಂಶಾ ಅಲ್ಲಾಹ.*
*ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸುನ್ನೀ ಜಂಇಯ್ಯತುಲ್ ಉಲಮಾದ ನಾಯಕರ, ಎಸ್.ಎಸ್. ಎಫ್ ಎಸ್.ವೈ.ಎಸ್ ಜಿಲ್ಲಾ ಮತ್ತು ರಾಜ್ಯ ನಾಯಕರು ಭಾಗವಹಿಸಲಿದ್ದಾರೆ.*
🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱
*ಸುನ್ನೀ ಸ್ಟೂಡೆಂಟ್ ಫೆಡರೇಶನ್ ದಕ್ಷಿಣ ಕನ್ನಡ*
🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱
*ಬೃಹತ್ ಇಲಲ್ ಹಬೀಬ್ ಈದ್ ಮಿಲಾದ್ ಜಾಥಾ ಮತ್ತು ಸಂದೇಶ ಭಾಷಣ*
*ಆರಂಭ ಮಧ್ಯಾಹ್ನ 1:30*
_*ತಾರೀಕು 17/12/2016*_
*ಪುತ್ತೂರು ರಾಜಬೀದಿಯಲ್ಲಿ ಸಾಗಲಿದೆ ಶಾಂತಿ ಸಾಮರಸ್ಯ ಸಿಪಾಯಿಗಳ ಶಿಸ್ತು ಬದ್ದ ಇಲಲ್ ಹಬೀಬ್ ಈದ್ ಮಿಲಾದ್ ಜಾಥಾ.* *೧೪೦೦ ವರ್ಷಗಳ ಹಿಂದೆಯೇ ಜಗತ್ತಿನ ಜಗಜ್ಯೋತಿಯಾಗಿ ಬೆಳಗಿ ಬಂದ ಲೋಕಪ್ರವಾದಿ ಫೈಗಂಬರ್ ಮುಹಮ್ಮದ್ ಸಲ್ಲಲ್ಹಹು ಅಲೈಹಿವ ಸಲ್ಲಮರ ಜನ್ಮ ದಿನಾಚರಣೆಯ ಪ್ರಯುಕ್ತ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ದಕ್ಷಿಣ ಕನ್ನಡ ಪ್ರತೀ ವರ್ಷ ಹಮ್ಮಿಕೊಂಡು ಬರುತ್ತಿರುವ ಇಲಲ್ ಹಬೀಬ್ ಈದ್ ಮಿಲಾದ್ ಬ್ರಹತ್ ಕಾರ್ಯಕ್ರಮಕ್ಕೆ ಈ ವರ್ಷ ಪುತ್ತೂರು ವೇದಿಕೆ ಕಲ್ಪಿಸಿದೆ.*
*ಅಂಧಾಕಾರದ ಕಾರ್ಗತ್ತಲ ಇರುಳಿನಲ್ಲಿ ಹೆಣ್ಣಿನ ಭ್ರೂಣಹತ್ಯೆ, ಮಿತಿಮೀರಿದ ದುಶ್ಚಟಗಳ ಬೆನ್ನೆಲುಬಾಗಿದ್ದ ಅರಬ್ ಸಾಮ್ರಾಜ್ಯವನ್ನು ಹೆಂಡದಿಂದ ಸಂಪೂರ್ಣ ಮುಕ್ತಿ ನೀಡಿ, ಸಹಬಾಳ್ವೆ ಮತ್ತು ಸಾಮರಸ್ಯದ ಕಹಳೆಯೂದಿ ಮೊಳಗಿಸಿದ ಜಗತ್ತು ಕಂಡ ತತ್ವಜ್ಞಾನಿ, ನವೋ ಭೂಮಂಡಲದ ಅತುಲ್ಯ ಸೇನಾನಿ, ವಿಶ್ವವಿಖ್ಯಾತ ವಿಜ್ಞಾನಿಗಳ ಚಿಂತನೆಗೂ ಸಿಲುಕದ ತತ್ವಸಿದ್ದಾಂತದ ರೂವಾರಿ, ಅನಾಗರಿಕತೆಯನ್ನು ಪ್ರದರ್ಶಿಸುತ್ತಿರುವ ಸಮಾಜಕ್ಕೆ ತನ್ನ 23 ವರ್ಷಗಳ ಜೀವನದಲ್ಲಿ ಪ್ರಬುದ್ಧತೆಯ ಪಾಠ ಹೇಳಿಕೊಟ್ಟ ಮಹಾನ್ ನೇತಾರ, 1400 ವರ್ಷಗಳೇ ಸಂದರೂ ಇಂದಿಗೂ ತನ್ನ ಜೀವನದ ಪ್ರತಿಯೊಂದು ನಿಮಿಷಗಳೂ ಇತಿಹಾಸಕಾರರ ಟಿಪ್ಪಣಿಗಳಲ್ಲಿ ಲಿಖಿತಗೊಳ್ಳುತ್ತಿರುವ ಏಕೈಕ ಮಹಾನ್ ಪ್ರವಾದಿ ಸಲ್ಲಲ್ಹಹು ಅಲೈಹಿವ ಸಲ್ಲಮರ ಜೀವನ ಸಂದೇಶಗಳನ್ನು ಸಾರುವ ಇಲಲ್ ಹಬೀಬ್ ಈದ್ ಮಿಲಾದ್ ಜಾಥಾ ಪುತ್ತೂರಿಗೆ ಒಲಿದು ಬಂದುದರಲ್ಲಿ ಅತೀವ ಸಂತೋಷವನ್ನು ವಯಕ್ತಪಡಿಸುತ್ತಿದ್ದೇವೆ*. ಆಧುನಿಕ ತಂತ್ರಜ್ಞಾನಗಳಿಂದ ಬೆಳೆದು ಬರುತ್ತಿರುವ ಪುತ್ತೂರು ತಾಲೂಕು ಇಂಶಾ ಅಲ್ಲ್ಹಾ ಹೊಸ ಚರಿತ್ರೆಯೊಂದು ಸೃಷ್ಟಿ ಮಾಡಲು ತುದಿಗಾಲಲ್ಲಿ ನಿಂತಿರುವಾಗ ಈ ಸಡಗರ ಸಂಭ್ರಮಕ್ಕೆ ನಾಡಿನ ಎಲ್ಲ ಸುನ್ನೀ ಬಾಂಧವರನ್ನು ಸ್ವಾಗತಿಸುತ್ತಿದ್ದೇವೆ.
*ಹೊಸ ಇತಿಹಾಸವನ್ನೇ ಸೃಷ್ಟಿಸಲಿರುವ ಪುತ್ತೂರು ಇಲಲ್ ಹಬೀಬ್ ಈದ್ ಮಿಲಾದ್ ಜಾಥಾದ ಈ ಕಾಯಕ್ರಮಕ್ಕೆ ಸರ್ವ ಮುಸ್ಲಿಂ ಬಾಂಧವರನ್ನು ಆಮಂತ್ರಿಸುತ್ತಿದ್ದೇವೆ ಸ್ವಾಗತಿಸುತ್ತಿದ್ದೇವೆ.*
*✍🏻 nizzu4ever👁*
*ಉರುವಾಲು ಪದವು*
*niznam4ever@gmail.com*
*members of sunni writers club*
No comments:
Post a Comment