Saturday, October 14, 2017

'ಮಾತೃಭೂಮಿ' ನುಂಗಿದ್ದು ಕಬ್ಬಿಣದ ಕಂಬವನ್ನು.... ಅದು ದಹನವಾಗಲು 'ಖೇದ' ವೆಂಬ ನಾಲ್ಕು ಗೆರೆಯ ಕಸಾಯ ಸಾಕಾಗದು!
''''''''''''''''''''''''''''''''''''''''''''''''''''''''''''''''
ಖ್ಯಾತ ಅಂಕಣಗಾರ ಓ ಎಂ ತರುವಣ
'ಸಿರಾಜ್' ದೈನಿಕದಲ್ಲಿ ಬರೆಯುತ್ತಾರೆ.
'''''''''''''''''''''''''''''''''’'''''''''''''''''''''''''''

ಕರ್ನಾಟಕ ಕಾಡಿನ ದರ್ಗಾದ ಮೇಲೆ ಹಾರುತ್ತಿರುವ ಹಸಿರು ಬಾವುಟವನ್ನು ಪಾಕಿಸ್ತಾನದ ಬಾವುಟ ಹಾರಿತ್ತಿದೆಯೆಂದು, ಅಲ್ಲಿ ಝಿಯಾರತ್ ಗೆ ಬರುವವರನ್ನು ಉಗ್ರವಾದದ ಟ್ರೈನಿಂಗ್ ಗೆ ಬರುವವರೆಂದು 'ಮಾತೃಭೂಮಿ' ಇನ್ನೂಗೀಚಬೇಕು.
ಪರ್ಧಾ, ಬುರ್ಖಾ, ಮುಸ್ಲಿಂ ಸ್ತ್ರೀ ಎಂದೆಲ್ಲಾ ಕೇಳುವಾಗ ನರನಾಡಿಗಳಲ್ಲಿ ರಕ್ತ ಕುದಿಯಲೇಬೇಕು.'ಲವ್'ಜಿಹಾದ್' ಎಂಬ ಕಾಗದ ಹುಲಿಯನ್ನು ತೋರಿಸಿದ್ದಕ್ಕೆ ಮಾತೃಭೂಮಿಗೆ ಬೇಸರ ವ್ಯಕ್ತಪಡಿಸಲಿಕ್ಕಿಲ್ಲವೆ❓
ಉತ್ತರಭಾರತದ ಗಲ್ಲಿಗಳಲ್ಲಿ ಮೃಗಸಮಾನ ಜೀವನ ಸಾಗಿಸುತ್ತಿದ್ದ ಒಂದು ವಿಭಾಗವನ್ನು ಕರಕೊಂಡು ಬಂದು ಅವರಿಗೆ ಅನ್ನ ಮತ್ತು ಅರಿವು ನೀಡಿ ಉತ್ತಮ ಪೌರರನ್ನಾಗಿ ಪರಿವರ್ತಿಸುವ ಸಂಸ್ಥೆಗಳ ನೇರ ಸುರಂಗ ತೋಡಿದ್ದಕ್ಕೆ ಕ್ಷಮಾಪಣೆ ಬೇಡವೆ❓
ಕುಮಳ ಎಂಬ ಹಳ್ಳಿಯಲ್ಲಿ ಶಾಲು ಮಾರುತ್ತಿದ್ದ ಕಾಶ್ಮೀರಿ ಹುಡುಗನನ್ನು ಭಯೋತ್ಪಾದಕನೆಂದು ಚಿತ್ರೀಕರಿಸಿ ಜೈಲಿಗೆ ಅಟ್ಟಿದ ಅದೇ ಮಾತೃಭೂಮಿ ಆ ಹುಡುಗ ನಾಲ್ಕು ವರ್ಷ ಜೈಲಲ್ಲಿ ಕೊಳೆಯುವಂತೆ ಮಾಡಿ ನಂತರ ನಿರಪರಾಧಿಯೆಂದು ವರದಿ ಮಾಡಿತು!
ಮುಸ್ಲಿಂ ಸಮುದಾಯದ ವಿರುದ್ಧ ಪ್ರಯೋಗಿಸಲು ಸಿಗುವ ಸಣ್ಣ ಅವಕಾಶವನ್ನು 'ಮಾತೃಭೂಮಿ' ಮಿಸ್ಸ್ ಮಾಡಲ್ಲ, ಮಾಡಿದ ಚರಿತ್ರೆ ಇಲ್ಲ!

ಯಾವಗಾಲಾದರೂ ಈ ಧಡೂತಿ ಪತ್ರ ಮುಸ್ಲಿಮರ ವಿರುದ್ಧ ತಿರುಗಿಲ್ಲ ಎಂದು ಕಂಡಲ್ಲಿ ಅದರ ಅರ್ಥ ಸೂಟೆಬಲಾದ ಆಯುಧ ಸಿಕ್ಕಿಲ್ಲ ಎಂದಾಗಿದೆ.
'''''''''''''''''''''''''''''''''''''''''''''''''''''''''''''''
ಮಾತೃಭೂಮಿ ಬದಲಾಗುವುದು ಬೇಡ
ನಾವು ಬದಿಗೆ ಸರಿಯುತ್ತೇವೆ...
------------------------------

ನೂರಾರು ವರ್ಷದ ಪರಂಪರೆ ಇರುವ ಪತ್ರವಾಗಿದೆ 'ಮಾತೃಭೂಮಿ' ಸ್ವಾತಂತ್ರ್ಯ ಚಳುವಳಿಯ ಕಾವು -ನೋವುಗಳನ್ನು ಹತ್ತರದಿಂದ ಬಲ್ಲ,ಪತ್ರ 'ಮಾತೃಭೂಮಿ'
ಹಲವಾರು ಮಹಾನುಭಾವರ ಪಾದಸ್ಪರ್ಶದಿಂದ ಪುಳುಕಿತಗೊಂಡ ಪತ್ರವದು.
'ಮಾತೃಭೂಮಿ' ಈಗ ಒಂದು ಕೇವಲ ಪತ್ರವಲ್ಲ ಅದೊಂದು ಸಂಸ್ಥೆಯಾಗಿದೆ.ಬಲಾಢ್ಯ ಚಿಹ್ನೆಗಳನ್ನು ಹೊತ್ತುನಡೆಯುವ ಮೇಲ್ವರ್ಗದ ನಿಯಂತ್ರಣದಲ್ಲಿರುವ ಪತ್ರ.
ಆಕಾಶಮುಟ್ಟಿ ನಿಂತ ಮಹಿಮೆಯ ದೇಶೀಯ ಪತ್ರವೊಂದು ಯಾರ ಮುಂದೆಯೂ ಸಣ್ಣತನ ತೋರಿಸಿ ಸ್ವತಃ ಸಣ್ಣಗಾಗಬಾರದು. ನೂರಿಪ್ಪತ್ತುಕೋಟಿ
ಮುಸ್ಲಿಮರು ಮಾತ್ರವಲ್ಲ, ಮಾನವೀಯತೆಯನ್ನು ಅಂಗೀಕರಿಸುವ ಎಲ್ಲಾ ಮನುಷ್ಯರು ಗೌರವಿಸುವ ಮಹಾ ವ್ಯಕ್ತಿತ್ವ, ಪ್ರವಾದಿ ಮುಹಮ್ಮದ್ ನೆಬಿ (ಸ)ರ ಕುರಿತು 'ಮಾತೃಭೂಮಿ' ಅತೀ ನೀಚವಾದ ಪದ ಬಳಸಿ ನಿಂದಿಸಿದ್ದಕ್ಕೆ ಮುಸ್ಲಿಂ ಸಮುದಾಯದ ಮುಂದೆ ಬೇಸರ ಮತ್ತು ಖೇದವ್ಯಕ್ತಪಡಿಸಿದೆ.

ಮಾತೃಭೂಮಿಯದ್ದು ಕ್ಷಮೆಯಾಚನೆ ಅಲ್ಲ,ಬದಲಾಗಿ ಇಸ್ಲಾಮ್ ಧರ್ಮಾನುಯಾಯಿಗಳ ಮನಸ್ಸನ್ನು ಘಾಸಿಗೊಳಿಸಿದ್ದಕ್ಕಿರುವ ಖೇದಪ್ರಕಟನೆ ಮಾತ್ರ.!
ಮುತ್ತು ನೆಬಿಯವರನ್ನು ಗೌರವಿಸುವ ಲಕ್ಷಾಂತರ ಜನರು ಅನ್ಯಸಮುದಾಯದಲ್ಲಿದ್ದಾರೆ. ಅವರ ಮನಸ್ಸಿಗೆ ಬೇಸರವಾಗಿದ್ದರೆ ಅದರಲ್ಲಿ ಮಾತೃಭೂಮಿ ಗೆ ಖೇದವಿಲ್ಲ!

ಪುಣ್ಯಪುರುಷರಾದ ಮುತ್ತು ನೆಬಿಯವರನ್ನು ಅಸಭ್ಯನಾಗಿ ಚಿತ್ರೀಕರಿಸಿದ್ದಕ್ಕೂ ಈ ಮುದಿಪತ್ರಕ್ಕೆ ಸ್ವತಃ ಖೇದವಿಲ್ಲ!

ಅಂದರೆ ಖೇದವ್ಯಕ್ತಪಡಿಸುವಾಗಲೂ ತಾನೇ ಮೇಲು! ತಾನೊಬ್ಬ 'ಕುರೈಶಿ' !

ಮಾತೃಭೂಮಿ ಈ ಖೇದಪ್ರಕಟನೆಯಿಂದ ಹಿಂದೆಸರಿಯಬೇಕಿತ್ತು ಕಾರಣ ಒಂದು ನಿಮಿಷವಾದರೂ ಕೆಳವರ್ಗದವನ ಮುಂದೆ ಮೇಲ್ವರ್ಗದವ ತಲೆತಗ್ಗಿಸಿ ನಿಂತಿದೆ ಎಂದು ನಾಳೆ ಚರಿತ್ರೆ, ಮಾತೃಭೂಮಿ ಯನ್ನು ತರಾಟೆಗೆಯ್ಯುವ ಸಾಧ್ಯತೆ ಇದೆ. ಮಾತ್ರವಲ್ಲ ಹೀಗೆ ಖೇದಪ್ರಕಟನೆಗೆ 'ಕೀ' ಕೊಟ್ಟರೆ ಈ ಒಂದು ಪ್ರಮಾದಕ್ಕೆ ಮಾತ್ರ ಬೇಸರ ವ್ಯಕ್ತಪಡಿಸಿದರೆ ಸಾಲದು. ಕಳೆದ ಹಲವಾರು ವರ್ಷಗಳಿಂದ ಮಾತೃಭೂಮಿ ಈ ಸಮುದಾಯದ ಎದೆಯ ಮೇಲೆ ಮೆಟ್ಟಿನಿಂತು ತಾಂಡವ ನ್ರತ್ಯವಾಡುತ್ತಿದೆ.
ಇದರಲ್ಲಿ ಯಾವುದಕ್ಕೆಲ್ಲಾ ನೀವು ಖೇದವ್ಯಕ್ತಪಡಿಸುವುದು❓
ಮಾತೃಭೂಮಿಯ ಮುಸ್ಲಿಂ ವಿರುದ್ಧ ನಿಲುವು ಅದರ ಚರಿತ್ರೆಯಷ್ಟೇ ಹಳೆಯದು!
ಅಂದರೆ ಬಡ್ಡಿಸಹಿತ ಕ್ಷಮಾಪಣೆ ಮಾಡುವುದಾದರೆ ಪತ್ರದ ಹತ್ತಿಪ್ಪತ್ತು ಪುಟ ಸಾಕಾಗದು!
ಅಷ್ಟೊಂದು ಪಾಪದ ನಂಟನ್ನು ಮೈಮೇಲೆ ಪತ್ರ ಮೆತ್ತಿಕೊಂಡಿದೆ.
ಆದ್ದರಿಂದಲೇ ಕ್ಷಮಾಪಣೆಗೆ ಹೊರಟುನಿಂತು ಗಿರ್ಗಿಟ್ ಆಗುವುದು ಬೇಡ!

ಇದೀಗ ಮಾತೃಭೂಮಿ ನುಂಗಿದ್ದು ಕಬ್ಬಿಣದ ಸರಳನ್ನಾಗಿದೆ. ಅದು ದಹನವಾಗಲು 'ಖೇದ' ದ ನಾಲ್ಕು ಗೆರೆ ಕಸಾಯ ಸಾಕಾಗದು!

'ಕ್ಷಮಿಸಿರಿ' ಎಂದು ಹೇಳಿದ್ದರೆ 'ಕ್ಷಮಿಸಿದ್ದೇನೆ' ಎಂದು ಹೇಳಬಹುದಿತ್ತು.
'ಮಾಪ್' ಕೊಟ್ಟು ಬಿಡಿ ಎಂದು ಕೇಳಿದ್ದರೆ
'ಮಾಪ್' ಮಾಡಿದ್ದೇನೆಂದು ಹೇಳಬಹುದಿತ್ತು.
ಇದೀಗ 'ಬೇಸರವಿದೆ' ಎಂದು ಹೇಳಿದ್ದರಿಂದ
ನಮಗೆ ಮರುತ್ತರ ಹೇಳಲಿಕ್ಕೆ ಇಲ್ಲ.

ಮಾತೃಭೂಮಿ ಇಷ್ಟರವರೆಗೆ ಯಾವ ರೀತಿ ಇದ್ದಿತೋ ಅದನ್ನೇ ಮುಂದುವರಿಸಬೇಕು.ಕೆಳದರ್ಜೆ ಗೆ ಇಳಿಯಬಾರದು.ಮುಸ್ಲಿಮರಿಗೆ ಏನೇ ಸಮಸ್ಯೆ ಬಂದರೂ ಪ್ರತಿಪಕ್ಷದ ಪಾತ್ರವನ್ನು ಸುಂದರವಾಗಿ ಅಲಂಕರಿಸಿದ ಚರಿತ್ರೆ ಮಾತ್ರ ಮಾತೃಭೂಮಿಯದ್ದು.ಅದನ್ನೇ ಮುಂದುವರೆಸಿರಿ...
ತನ್ನ ಪಾತ್ರವನ್ನು ಬದಲಿಸುವುದು ಬೇಡ, ಬ್ಯೂಟೀ ಪಾರ್ಲರ್ ಗೆ ಹೋಗಿ ಮುಖವನ್ನು ಮಿನುಗಿಸುವ ಉಸಾಬರಿಯೂ ಮುದಿಪತ್ರಕ್ಕೆ ಬೇಡ!

ಗುಂಡಿನ ದಾಳಿಯಿಂದಾಗಿ ಗಡಿಯಲ್ಲಿ ನಾಲ್ಕು ಮಂದಿ ಸತ್ತರೆ ಅದರಲ್ಲಿ ಮೂರು ಮಂದಿ ಮಲಪ್ಪುರದವರೆಂದು ಮಾತೃಭೂಮಿ ಇನ್ನು ಮುಂದೆಯೂ ಕಂಡು ಹಿಡಿಯಬೇಕು!
ಆಯುಧದೊಂದಿಗೆ ಪಾಕಿಸ್ತಾನ ದಿಂದ ಹಡಗೊಂದು ಹೊರಟಿದ್ದರೆ ಅದು ಫರ್ಫಕ್ಟಾಗಿ ಪರಪ್ಪನಂಗಾಡಿ
ಮಸೀದಿಯ ಹತ್ತಿರವೇ ಲಂಗುರ ಹಾಕಬೇಕು!
ರಾಜ್ಯದ ಯಾವ ಕಡೆ ಸ್ಫೋಟ ನಡೆದರೂ ಅದರಲ್ಲಿ ಮುಸ್ಲಿಮರ ಹೆಸರನ್ನು ಕಂಡು ಹಿಡಿಯುವ ಕೃತ್ಯದಿಂದ ಮುದಿಪತ್ರ ಹಿಂದೆಸರಿಯಬಾರದು!
ಪ್ರಜ್ಞಾಸಿಂಗ್ ತೂಕೂರೋ ಪುರೋಹಿತೆಯೋ ಎಂಬುದನ್ನು ನಂತರ ಅನ್ವೇಷಿಸಿ ಕಂಡುಹಿಡಿದರೆ ಸಾಕು.ಮಾಲೆಂಗಾವ್,ಮಕ್ಕಾ ಮಸ್ಚಿದ್,ಸಂಜೋತ್ಸಾ ಸ್ಪೋಟವೆಲ್ಲಾ ಸದ್ಯ ಬದಿಗೆ ಸರಿಯಲಿ...
ಏನೇ ಘಟಿಸಿದರೂ ಮಾತೃಭೂಮಿಯ ಮೊದಲನೇ ಗುರಿ ಮುಸ್ಲಿಂ ಸಮುದಾಯದ ಎದೆಯ ಮೇಲೆಯೇ!

ಕರ್ನಾಟಕ ಕಾಡಿನಲ್ಲಿರುವ ದರ್ಗಾದ ಮೇಲೆ ಹಾರುವ ಬಾವುಟ ಪಾಕಿಸ್ತಾನದ ಬಾವುಟವೆಂದು ಗೀಚುವುದನ್ನು ಮಾತೃಭೂಮಿ ಭೂಮಿ ನಿಲ್ಲಿಸಬಾರದು.
ಬುರ್ಖಾ, ಮುಸ್ಲಿಂ ಸ್ತ್ರೀ ಎಂದೆಲ್ಲಾ ಹೇಳುವಾಗ ನರನಾಡಿಗಳ ರಕ್ತ ಕುದಿಯಲೇ ಬೇಕು.'ಲವ್ ಜಿಹಾದ್' ಎಂಬ ಕಾಗದ ಹುಲಿಯನ್ನು ತೋರಿಸಿದ್ದಕ್ಕೆ ಮುದಿಪತ್ರಕ್ಕೆ ಖೇದವ್ಯಕ್ತಪಡಿಸಲಿಕ್ಕಿಲ್ಲವೇ❓
ಶಾಲು ಮಾರುತ್ತಾ ಜೀವನ ಸಾಗಿಸುತ್ತಿದ್ದ ಕಾಶ್ಮೀರಿ ಹುಡುಗನನ್ನು ಭಯೋತ್ಪಾದಕನೆಂದು ಚಿತ್ರೀಕರಿಸಿ ಜೈಲಿಗೆ ಅಟ್ಟಿದ ಮಾತೃಭೂಮಿ ಆ ಹುಡುಗನನ್ನು ನಾಲ್ಕು ವರ್ಷ ಜೈಲಲ್ಲಿ ಕೊಳೆಯುವಂತೆ ಮಾಡಿ ನಂತರ ನಿರಪರಾಧಿಯೆಂದು ನಿರ್ಲಜ್ಜ ವರದಿ ಮಾಡಿದ್ದಕ್ಕೆ ಖೇದ ವ್ಯಕ್ತಪಡಿಸುವುದಿಲ್ಲವೇ❓
ಹೀಗೆ ಖೇದವ್ಯಕ್ತಪಡಿಸಲು ಆರಂಭಿಸಿದರೆ ಒಳುಉಡುಪು ಧರಿಸಲು ಸಮಯ ಸಾಕಾಗದು.
ಆದ್ದರಿಂದ 'ಖೇದ/ಬೇಸರ' ಎಂಬ ಅಣುಕು ಪ್ರಹಸನ ಬೇಡ.ಅದನ್ನು ಜೇಬಲ್ಲೇ ಭದ್ರವಾಗಿಟ್ಟರೆ ಸಾಕು.

 ಕನ್ನಡಕ್ಕೆ
✒ಅಬೂಶಝ

(ಮುಂದುವರಿಯುವುದು)

No comments:

Post a Comment