*ನನಗೇಕೋ ಮಂಗಳೂರು ಚಲೋ ಮುಸ್ಲಿಮರ ಅಭಿಮಾನದ ಸಂಕೇತವೆಂದೇ ಬಾಸವಾಗುತ್ತಿದೆ.ಇಂದು ಮೂರು ಗಂಟೆಗೆ ಮಂಗಳೂರು ನೆಹರು ಮೈದಾನದಲ್ಲಿ ನನ್ನ ಉಪಸ್ಥಿತಿ ಕಡ್ಡಾಯ*
*-----------------------------*
ಯಾರು ಬರುತ್ತಾರೋ ಇಲ್ಲವೋ ನಾನು ನೋಡಲ್ಲ , ಮಂಗಳೂರು ಚಲೋ ಗೊಂದಲದ ಬಗ್ಗೆಯೂ ನಾನು ತಲೆಕೆಡಿಸಿಕೊಂಡಿಲ್ಲ, ಅದು ಅನಗತ್ಯವೆಂದು ಹೇಳುವವರ ಹೇಳಿಕೆ ನನಗೆ ಏಸುವುದೇ ಇಲ್ಲ.
ಇನ್ಶಾಅಲ್ಲಾ ನಾನು ಇಂದು ಮೂರು ಗಂಟೆಗೆ ನೆಹರುಮೈದಾನದಲ್ಲಿ ರೆಡಿ ಇರುವೆನು.ಆಗಲೇ ನನ್ನ ಮನಸ್ಸಿಗೊಂದು ಸಮಾದಾನ ಸಿಗುತ್ತೆ ಎಂಬ ಪೂರ್ಣ ಭರವಸೆ ನನಗಿದೆ.
ಹೌದು ಈ ಪವಿತ್ರ ದೀನ್ ಹಾಗೇನೆ ಸುಲಭವಾಗಿ ನಮ್ಮ ಕೈ ಸೇರಿದ್ದಲ್ಲ.ಪವಿತ್ರ ದೀನ್ ದೀನಾಗಿ ನಮ್ಮ ಕೈ ಸೇರುವಂತಾಗಲೂ ಅದರ ಹಿಂದೆ ಕಷ್ಟಪಟ್ಟು ದುಡಿದ ಅನೇಕಾರು ಕೈಗಳಿವೆ.ಆ ಕೈಗಳು ದೌರ್ಜನ್ಯ ಸಹಿಸಿಕೊಂಡಿದೆ.ಬೆಂಕಿಯುಂಡೆಯ ಕಠಿಣ ತಾಪ ಸಹಿಸಿ, ಅಂಗೈಯ ಮುಷ್ಟಿ ಹೂತುಹೋಗುವ ಗುಂಡಿಗಳು ಮರಣದ ವರೆಗೂ ನಿಶಾನೆಯಾಗಿ ಅವರ ಬೆನ್ನಲ್ಲಿ ಕಾಣಿಸಿಕೊಂಡಿದ್ದವು!
ಬಾಸುಂಡೆಯ ಅಚ್ಚು ಕಬ್ಬಿಣವನ್ನು ಬೆಂಕಿಯಲ್ಲಿ ಕರಗಿಸಿದಂತೆ ಕಡುಕೆಂಪಾಗಿ ಅವರ ಬೆನ್ನನ್ನು ಅಲಂಕರಿಸಿದ್ದವು!!
ಆದರೆ ಅವ್ರು ದೃತಿಗೆಡಲಿಲ್ಲ!!!
ಪ್ರತಿಕಾರ ಮನೋಭಾವ ಇಟ್ಟಿರಲಿಲ್ಲ.
ಆದರೆ ಅವರು ಪ್ರತಿಭಟಿಸಿದ್ದರು.
ಅಲ್ಲಿ ರಾಜಕೀಯ ಇರಲಿಲ್ಲ,
ಹಣದ ಅಮಿಷ ಇರಲಿಲ್ಲ,
ಅಹಂಕಾರ ಇರಲಿಲ್ಲ,
ಹುಂಬುತನ ಇರಲಿಲ್ಲ,
ಅವ್ರು ಹೆದರು ಪುಕ್ಕಲರು ಆಗಿರಲಿಲ್ಲ.
ಯಾರದೋ ರಾಜಕೀಯ ಪುಂಡರ ಎಂಜಲಿಗಾಗಿ ತಮ್ಮ ಪ್ರತಿಭೆಟನೆಯ ಶೌರ್ಯವನ್ನು ನಂದಿಸಲು ಅವರು ತಯ್ಯಾರಾಗಿರಲಿಲ್ಲ.
ದರ್ಗಾಕ್ಕೆ ಹೋಗುವ ಮುಸ್ಲಿಮರನ್ನು ಮುಸ್ಲಿಮರೆಂದೇ ನಂಬದ ನೂತನವಾದಿ ವಿತಂಡವಾದಿಗಳನ್ನು ಜತೆಸೇರಿಸಿ ಚರ್ಚಿಸಿದ ಪಟ್ಟಾಂಗಕ್ಕೆ 'ಶೂರಾ' ಎಂಬ ಕೊಂಡಾಟದ ಹೆಸರಿಟ್ಟ ಕೂಡಲೇ ಅದು ಶೂರಾ ಆಗುವುದಿಲ್ಲ.
ಸದರಿ ' ಶೂರಾ' ಎಂಬ ಹಾವನ್ನು ತೋರಿಸುವ ಶೌರ್ಯಕ್ಕೆ ಇಲ್ಲಿ ಬೆಲೆಯೇ ಇಲ್ಲ.
ಕಾರಣ ಮುಸ್ಲಿಮರನ್ನು ಮುಸ್ಲಿಮರೆಂದೇ ನಂಬದ ಕಪಟ ನೂತನವಾದಿ ಅಡಬೆ ಅಲ್ಲಿ ಎಂಟ್ರಿ ಕೊಟ್ಟಾಗಲೇ ಆ ಚರ್ಚೆ ಪಟ್ಟಾಂಗವಾಗಿ ಮಾರ್ಪಟ್ಟಿದೆ.
ಮತ್ತೆಲ್ಲಿಂದ ಬಂತು ಶೂರಾ?
ನೂತನವಾದಿಯನ್ನು ಸೇರಿಸಿ ನಡೆಸಿದ ಚರ್ಚೆಯನ್ನು ಶೂರಾ ಎಂದು ಕರೆದರೆ ಅದು ' ಶೂರಾ' ಕ್ಕೆ ಮಾಡುವ ಅವಮಾನವಾಗಿದೆ.
ಸರಕಾರ COD ತನಿಖೆ ನಡೆಸಲಿ.
ಅದು ಅವರ ಕೆಲಸ. ಆದರೆ ಅದನ್ನೇ ನಂಬಿ ನಮ್ಮ ಹಕ್ಕೊತ್ತಾಯವನ್ನು ಮೃದುಗೊಳಿಸಬೇಕೆಂಬ ಬೇಡಿಕೆ ಅಪ್ರಸ್ತುತ.
ಶೈಖುನಾ ಖಾಝಿ ಚೆಂಬರಿಕ CM ಉಸ್ತಾದರ ಮರಣದ ನಿಜಸ್ಥಿತಿ ಬಹಿರಂಗ ಗೊಳಿಸಲು ಕೇಂದ್ರದಿಂದ ಮೂರು ಬಾರಿ COD ಯ ಅಣ್ಣ CBI ಬಂದು ತನಿಖೆ ನಡೆಸಿಯೂ ಅದಕ್ಕೊಂದು ಪರಿಹಾರ ಇದುವರೆಗೆ ಸಿಕ್ಕಿದಾ?
CBI ಗೆ ಇದುವರೆಗೆ ಭೇಧಿಸಲಾಗದ ಅದೆಷ್ಟೋ ಘಟನೆಗಳು ಇಂದಿಗೂ ಜೀವಂತವಾಗಿದೆ.
ಸೌಮ್ಯ ಹಂತಕರನ್ನು ಜನತೆಯ ಮುಂದಿಡಲು COD ಗೆ ಯಾಕೆ ಸಾದ್ಯವಾಗಿಲ್ಲ?
ಕಲ್ಲಡ್ಕ ಬಾವ ರನ್ನು ಪೋಲಿಸರು ಎತ್ಕೊಂಡು ಹೋಗಿ ಭೀಕರ ಚಿತ್ರ ಹಿಂಸೆ ನೀಡಿ ಅವರ ಎರಡು ಕಿಡ್ನಿಗಳು ಘಾಸಿಗೊಂಡಿತ್ತು!
ಅದನ್ನು COD ತನಿಖೆಗೆ ಒಳಪಡಿಸಲಾಗಿತ್ತು.
ಪರಿಣಾಮ ಚಿತ್ರ ಹಿಂಸೆ ನೀಡಿದ ಪೋಲಿಸ್ ಅಧಿಕಾರಿಗಳು ಈಗಲೂ ಸರಕಾರಿ ಹುದ್ದೆಯ ಸವಿ ಸವಿಯುತ್ತಿದ್ದಾರೆಂದರೆ ನಾವು ಇನ್ನೆಷ್ಟು ಕಾಲ ಮೂರ್ಖರಾಗಿಯೇ ಇರಬೇಕು?
ಮಂಗಳೂರಿನಲ್ಲಿ ಚರ್ಚ್ ಗಳ ಮೇಲೆ ದಾಳಿ ಮಾಡಲಾಯಿತು ಶಿಲುಬೆಯಲ್ಲಿ ತೂಗು ಹಾಕಲಾಗಿದ್ದ ಏಶುವಿನ ಕೈ ಕಾಲುಗಳನ್ನು ತುಂಡರಿಸಿ ಸಂಘಿಗಳು ಕೇಕೆ ಹಾಕಿದರು.
ಸರಕಾರ ತನಿಖಾ ಆಯೋಗ ನೇಮಿಸಿತು. ಪರಿಣಾಮ ಪರಿಹಾರ ಸಿಕ್ಕಿತಾ?
ದೌರ್ಜನ್ಯ ಮಾಡಿದ ಆರೋಪ ಎದುರಿಸುವ ಪೋಲಿಸ್ ಅಧಿಕಾರಿಗಳನ್ನು ಆರೋಪ ಮುಕ್ತರಾಗುವ ತನಕ ಅಮಾನತು ಮಾಡುವ ಪರಿಪಾಠ ಇದೆ.ಆದರೆ ಅದು ನಡೆದಿಲ್ಲ!
ಇದನ್ನು ಪ್ರಶ್ನಿಸಬೇಡವೇ?
ನಿಜವಾಗಿಯೂ ಮುಸ್ಲಿಮ್ ಸಮುದಾಯದ ಮಹಾ ದೊಡ್ಡ ದೌರ್ಬಲ್ಯ ವಾಗಿದೆ ಮೆರೆವು!
ಒಂದು ಪ್ರಕರಣ ನಡೆದಾಗ ಇನ್ನಿಲ್ಲದಂತೆ ಬೊಬ್ಬೆ ಹೊಡೆಯುತ್ತೇವೆ.ಆವಾಗಲೇ ಮಕ್ಕಳ ಕೈಯಲ್ಲಿ ಆಟಿಕೆ ಕೊಟ್ಟು ಸಮಾಧಾನಿಸುವಂತೆ ಬಲೆ ಹಾಕಲು ರಾಜಕೀಯ ಪುಡಾರಿಗಳು ತರೆಮೆರೆಯಲ್ಲಿ ಸ್ಕೆಚ್ ಹಾಕಿರುತ್ತಾರೆ.
ನಮ್ಮ ಎಲ್ಲಾ ಆವೇಶ *ತನಿಖೆ* ಎಂಬ ಗೊಂಬೆಯೊಂದಿಗೆ ಅವಸಾನವಾಗಿರುತ್ತದೆ.
ಇದು ನಮ್ಮ ದೌರ್ಬಲ್ಯ.
ಇಂದಿನ ಪ್ರತಿಭಟನೆಯ ವಿಶೇಷತೆ ಏನೆಂದರೆ ಸಮುದಾಯದ ಬಹುಸಂಖ್ಯಾತ ಪ್ರಬಲ ಗ್ರೂಪುಗಳಾದ ಎರಡು ಸುನ್ನಿ ವಿಭಾಗ ಒಂದಾಗಿದ್ದಾರೆ.
ಸಮುದಾಯ ಕಾತರದಿಂದ ಕಾಯುತ್ತಿದ್ದ ಸುನ್ನಿ ಐಕ್ಯದ ಒಂದು ಸೆಲೆಯೂ ನೆಹರುಮೈದಾನದಲ್ಲಿ ಅನಾವರಣ ಗೊಳ್ಳಲಿದೆ.
ಸುನ್ನಿಗಳನ್ನು ಮುಸ್ಲಿಮರೆಂದು ನಂಬದ ಸಳಪಿ ಜಮಾತೇ ಇಸ್ಲಾಮೀ ತಬ್ಲೀಗ್ & ಫ್ಯಾನ್ಸ್ ಪಂಗಡಗಳನ್ನು ಹೊರಗಿಡಲಾಗಿದೆ.
ಆದ್ದರಿಂದ ಪ್ರತಿಯೊಂದು ಸುನ್ನಿಯೂ ಈ ಮಂಗಳೂರು ಚಲೋ ದಲ್ಲಿ ಭಾಗವಹಿಸಬೇಕು.
ಖುರೈಸಿ ಸಹಿತ ಎಲ್ಲಾ ದೌರ್ಜನ್ಯ ಗಳಿಗೆ ತೆರೆ ಎಳೆಯುವಂತಹ ಪ್ರತಿಭಟನೆ ನಮ್ಮದಾಗಬೇಕು.
ಪ್ರಚಾರ ಮಾಡಲು ಸಾಕಷ್ಟು ಸಮಯದ ಅಭಾವ ಆಗಿದೆ.
ಗೊಂದಲಗಳನ್ನು ಸೃಷ್ಟಿಸಿ ಪ್ರತಿಭಟನೆಯ ಕಾವನ್ನು ಕುಗ್ಗಿಸುವ ಪ್ರಯತ್ನ ನೂತನವಾದಿಗಳು ಮತ್ತು ಅವರ ಫ್ಯಾನ್ಸ್ ಮಾಡುತ್ತಿದ್ದಾರೆ.
ಅಪಪ್ರಚಾರಕ್ಕೆ ಯಾರೂ ಕಿವಿಗೊಡಬೇಡಿ.....
ಬನ್ನಿ ಸಹಕರಿಸಿ...........
ಎಲ್ಲಾ ಜಮಾತ್ ಮೊಹಲ್ಲಾಗಳಿಂದ ತಂಡೋಪತಂಡವಾಗಿ ಬನ್ನಿ...
ಸುನ್ನಿಯ ಹೆಸರಿಟ್ಟು ಸಂಘಿಗಳ ದಳ್ಳಾಳಿಯಾಗಿ ಅಪ್ಡೇಟ್ ಮಾಡುವ ಅಪ್ಪಟ ಸಳಪಿಯೂ ಈ ಪ್ರತಿಭಟನೆಯ ಕಾವನ್ನು ತಣಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಓ ಮುಸ್ಲಿಮ್ ಸಮುದಾಯವೇ ಎಚ್ಚೆತ್ತು ಕೊಳ್ಳೋಣ. ರಾಜಕೀಯ ಬಣ್ಣಗಳಿಗೆ ಮರುಳಾಗದಿರೋಣ.
ಬನ್ನಿ ಇಂದು ಮದ್ಯಾಹೆ ಮೂರು ಗಂಟೆಗೆ ಮಂಗಳೂರು ನೆಹರುಮೈದಾನಕ್ಕೆ....
ನಾನು ಸಹ ರೆಡಿ👍
- ಅಬೂಶಝ
No comments:
Post a Comment