*ಮನುಜ ಅದ್ಬುತವಲ್ಲವೇ ನಿನ್ನ ಬದುಕು?*
ನೀನು ಹುಟ್ಟಿದಾಗ ಅರಿತಿಲ್ಲ ತಾಯಿ ಹೊಟ್ಟೆಯಿಂದ ನಿನ್ನ ಹೊರತಳ್ಳಿದವರು ಯಾರೆಂದು?
ನೀನು ಮರಣ ಹೊಂದಿದಾಗ ಅರಿತಿಲ್ಲ ನೀನು,ನಿನ್ನ ಗೋರಿಗೆ ತಳ್ಳಿದವರು ಯಾರೆಂದು?
ನೀನು ಹುಟ್ಟಿದಾಗ ಅರಿತಿಲ್ಲ ನೀನು,ನಿನ್ನ ಸ್ನಾನ ಮಾಡಿಸಿದವರು ಯಾರೆಂದು?
ನಿನ್ನ ಮರಣ ಘಟಿಸಿದಾಗ ಅರಿತಿಲ್ಲ ನೀನು, ನಿನ್ನ ಸ್ನಾನ ಮಾಡಿಸಿದವರು ಯಾರೆಂದು?
ನಿನಗೆ ಜನ್ಮವಿತ್ತಾಗ ಅರಿತಿಲ್ಲ ನೀನು ನಿನ್ನ ಆಟ ಆಡಿಸಿ ನಗಿಸಿದವರು ಯಾರೆಂದು?
ನಿನ್ನ ಮರಣ ನಡೆದಾಗ ನಿನಗಾಗಿ ವ್ಯಥೆಯಿಂದ ಕಣ್ಣೀರಟ್ಟವರು ಯಾರೆಂದು?
ನೀನು ಹುಟ್ಟಿದಾಗ ಅರಿತಿಲ್ಲ ನೀನು,ನಿನಗಾಗಿ ಉಡುಪು ತೊಡಿಸುವವರು ಯಾರೆಂದು?
ನಿನ್ನ ಮರಣ ಸಮಯ ನೀನು ಅರಿತಿಲ್ಲ ನಿನಗಾಗಿ ಕಫನ್ ಧರಿಸುವವರು ಯಾರೆಂದು?
ನೀನು ಹುಟ್ಟಿದಾಗ ನಿನಗಿಟ್ಟ ಹೆಸರಿನ ಕುರಿತು ಜನರು ಕೇಳುವರು ಏನೆಂದು?
ನೀನು ಮರಣ ಹೊಂದಿದಾಗ ಮಲಕುಗಳು ಕೇಳುವರು ನಿನ್ನ ಸತ್ಕರ್ಮಗಳ ಕುರಿತು ಏನೆಂದು?
*ನಿನ್ನ ಪರಲೋಕಕ್ಕೆ ನೀನು ಮಾಡಿಟ್ಟ ಕರ್ಮವಾದರೂ ಏನು?*
-ಅಬೂಶಝ
ಮೂಲ ಅರಬಿ
No comments:
Post a Comment