ಹೌದು ನಿಜಕ್ಕೂ ಆಶ್ಚರ್ಯವಾಗುತ್ತಿದೆ..
ಕರ್ನಾಟಕ ಕಲ್ಚರಲ್ ಪೌಂಡೇಶನ್ (ಕೆಸಿಎಫ್) ಎಂಬ ಕನ್ನಡಿಗರ ಪ್ರೀತಿಯ ಎರಡು ವರ್ಷದ ಕೂಸು ಕ್ರಾಂತಿಯ ಅಲೆಯನ್ನೇ ಎಬ್ಬಿಸುತ್ತಿದೆ.
ಉಲಮಾಗಳ ಗರಡಿಯಲ್ಲಿ ಪಳಗುತ್ತಿರುವ ಈ ಕೂಸು ತನ್ನ ಗುರಿ ಏನೆಂದು ಈಗಾಗಲೇ ಸ್ಪಷ್ಟ ಪಡಿಸಿ ಆಗಿದೆ.
ಅದರ ಗುರಿ ಮತ್ತು ದಾರಿ ಎರಡೂ ಸ್ಪಟಿಕದಂತೆ ನೈಜ ದೀನಿ ಚಟುವಟಿಕೆಯಾಗಿದೆ.ಜೊತೆಗೆ ಸಾಂತ್ವನ, ದೀನರ ಕಣ್ಣೀರೊಪ್ಪುವ ದೌತ್ಯವನ್ನು ತನ್ನ ಬದುಕಿನ ಅವಿಭಾಜ್ಯ ಅಂಗವಾಗಿ ಅಪ್ಪಿಕೊಂಡಿದೆ.
ಈ ಎರಡು ವರ್ಷದ ಕೂಸು ಎಷ್ಟರ ಮಟ್ಟಿಗೆ ತನ್ನ ಪಕ್ವತೆಯನ್ನು ತೋರಿಸಿದೆಯೆಂದರೆ ಈ ವರ್ಷದ ಹಜ್ಜಾಜ್'ಗಳ ಸೇವೆಗೆಯ್ಯುವ ತನ್ನ ಪ್ರಥಮ ಹೆಜ್ಜೆಯಲ್ಲೇ ಎಲ್ಲರ ಪ್ರಶಂಸೆಯನ್ನು ಬಾಚಿಗೊಂಡಿದೆ.
ಸೇವಾ ರಂಗದಲ್ಲಿ ತನ್ನದೇ ಆದ ವಿಶೇಷ ಛಾಪನ್ನು ಮೂಡಿಸಿ ಕ್ರಾಂತಿಯ ಅಲೆಯನ್ನೇ ಎಬ್ಬಿಸಿದ ಕೆಸಿಎಫ್ ನ ಸೌದಿ ರಾಷ್ಟ್ರೀಯ ಸಮಿತಿಯ ಅಧೀನ ಸಂಘವಾದ ಹಜ್ಜ್ ವಾಲೆಂಟ್ರಿಯಸ್ಸ್ ಕೋರ್ ಸೌಧಿ ಅರೇಬಿಯಾ ministry of Health ಅಧೀನ Meena New street Hospital ನ ಅಭಿಮಂದನಾ ಪತ್ರವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಅಲ್ಲಾಹು ಸ್ವೀಕರಿಸಲಿ ಆಮೀನ್.
ನಿಜವಾಗಿಯೂ ಸೌದಿ ಅರೇಬಿಯ ಕೆಸಿಎಫ್ ರಾಷ್ಟ್ರೀಯ ಸಮಿತಿ ನೂರಾರು volunteers ಗಳನ್ನು ಹಜ್ಜಾಜ್ ಗಳ ಸೇವೆಗಾಗಿ ಇಳಿಸಿ ಎಲ್ಲರ ಮೆಚ್ಚುಗೆಯನ್ನು ಪಡೆದದ್ದಕ್ಕೆ ಸಲ್ಯೂಟ್ ಹೊಡೆಯಲೇ ಬೇಕು.
ಆದರೆ ಈ ರೀತಿ ಸ್ವಯಂ ಸೇವಕರನ್ನು ಕಳುಹಿಸುವಾಗ ಅವರ ಬಸ್ಸ್ ಬಾಡಿಗೆ,ಫುಡ್, ವ್ಹೀಲ್ ಚೇರ್ ಖರ್ಚು
ಮತ್ತು ಇನ್ನಿತರ ಖರ್ಚು ಸೇರಿ 60 ಸಾವಿರ ರಿಯಾಲ್ ಅಂದರೆ ಭಾರತದ ಹತ್ತುಲಕ್ಷಕ್ಕಿಂತಲೂ ಮೇಲೆ ಖರ್ಚು ಇದೆ.
ಅದನ್ನು ಸಂಘಟನೆ ಭರಿಸಬೇಕಾಗಿರುವುದರಿಂದ ಕೆಸಿಎಫ್ ನ್ನು ಪ್ರೀತಿಸುವ ಕಾರ್ಯಕರ್ತರು ಮತ್ತು ಹಿತೈಷಿಗಳ ಸಹಾಯ ಕೋರಿ ಒಂದು ಕೂಪನ್ ತಯ್ಯಾರು ಮಾಡಿದ್ದನ್ನು ನೆಪಮಾಡಿ ಫಿತ್ನ ಮಾಡುವುದು ಎಷ್ಟುಸರಿ.??
ಸೇವಾ ರಂಗಕ್ಕೆ ಮುಡಿಪಾಗಿಟ್ಟ ಯುವಕರನ್ನು ನಾವು ನಮ್ಮಿಂದಾದಷ್ಟು ಪ್ರೋತ್ಸಾಹ ನೀಡಿ ಅವರ ಸೇವೆ ಇನ್ನಷ್ಟು ವಿಸ್ತರಿಸಲು ಸಹಾಯ ಮಾಡುವಲ್ಲಿ ನಾವೆಲ್ಲಾ ಕೈಜೋಡಿಸೋಣ.
ಏನಂತೀರಿ..??
✒ಅಬೂಶಝ
No comments:
Post a Comment