Saturday, October 14, 2017

ಇರ್ತಕಬ್ತು ಅಲಲ್ ಖತಾ....(ಅಗಣಿತ ತಪ್ಪುಗಳನ್ನು ಗೈದ ನಾನು ತಮ್ಮೊಂದಿಗೆ ನನ್ನ ಅಹವಾಲನ್ನು ಹೇಳುತ್ತಿದ್ದೇನೆ ನಬಿಯೇ) ಇದು ಈ ವಹಾಬಿಗಳಿಗೆ  ಸಿರ್ಕ ಆಗಿದೆ.ಇಲ್ಲಿ ಈ ಸಲಪಿಗಳು ಎರಡು ಶಿರ್ಕನ್ನು ಸಂಶೋಧಿಸಿದ್ದಾರೆ.

ಒಂದು ಮರಣ ಹೊಂದಿದ ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ರನ್ನು ಸಂಬೋಧಿಸಿದ್ದು.

ಎರಡು ಪಾಪ ಮೋಚನ ಅಲ್ಲಾಹನಿಗೆ ಮಾತ್ರ ಇರುವುದಾದರೂ ಅದನ್ನು ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಯಾಚಿಸಿದ್ದು.

ಇದು ವಹಾಬಿಯ ವಕ್ರಬುದ್ದಿಯಿಂದ ಉದಿಸಿದ ಮಾತುಗಳು. ವಾಸ್ತವದಲ್ಲಿ ಮಂಕೂಸ್ ಮೌಲಿದ್ ನ ಈ ಗೆರೆಯಲ್ಲಿ ಯಾವ ಅಸಂಬದ್ಧತೆಯೂ ಇಲ್ಲ. ಕುರ್'ಆನ್ ಇದನ್ನು ಸಮ್ಮತಿಸುತ್ತದೆ.ಸೂರತುನ್ನಿಸಾ ಅ್ ನ 64ನೇ ಸೂಕ್ತದಲ್ಲಿ ಅಲ್ಲಾಹನು ಹೇಳುತ್ತಾನೆ

"ಅವರು (ತಪ್ಪು ಮಾಡಿದವರು) ತಮ್ಮ ಸ್ವಶರೀರವನ್ನು ಅಕ್ರಮಿಸಿದರೆ ತಮ್ಮ ಬಳಿ ಬರಬೇಕು. ಅವರಿಗೆ ಬೇಕಾಗಿ ರಸೂಲ್ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಪಾಪ ಮೋಚನೆ ನಡೆಸಬೇಕು. (ಹಾಗಾದರೆ) ಅಲ್ಲಾಹನನ್ನು ಧಾರಾಳವಾಗಿ ಪ್ರಶ್ಚಾತಾಪ ಸ್ವೀಕರಿಸುವವರನ್ನಾಗಿಯೂ,ಕಾರುಣ್ಯವಂತರನ್ನಾಗಿಯೂ ಅವರು ಕಾಣುವರು

ಈ ಸೂಕ್ತದಲ್ಲಿ ತಪ್ಪು ಮಾಡಿದವರು ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂರ ಸನ್ನಿಧಿಗೆ ಬಂದು ಅಲ್ಲಾಹನೊಂದಿಗೆ ಅವರೂ ಜೊತೆಗೆ ನಬಿಯವರೂ (ಸ್ವಲ್ಲಲ್ಲಾಹು ಅಲೈಹಿವಸಲ್ಲಂ ) ಪಾಪವಿಮೋಚನೆಗಾಗಿ ಪ್ರಾರ್ಥಿಸಬೇಕೆಂದಿದೆ.

"ಇರ್ತಕಬ್ತು ಅಲಲ್ ಖತಾ" ಎಂಬ ಗೆರೆಯಲ್ಲಿ ಇದೇ ಆಶಯವನ್ನು ಹೇಳಲಾಗಿದೆ.

ಮೇಲಿನ ಸೂಕ್ತದ ವ್ಯಾಖ್ಯಾನದಲ್ಲಿ ಇಮಾಂ ಇಬ್ನು ಕಸೀರ್ (ತಫ್ಸೀರುಲ್ ಕುರ್'ಆನಿಲ್ ಅಳೀಂ 1/410) ವಿವರಿಸುತ್ತಾರೆ.ಶೈಖ್ ಅಬೂಮಂಸೂರ್'ರನ್ನೊಳಗೊಂಡ ವಿದ್ವಾಂಸರ ಸಂಘವು ಅತಬೀ(ಇಮಾಂ ಶಾಫಿ ರಳಿಯಲ್ಲಾಹು ಅನ್ಹು ರವರ ಉಸ್ತಾದ್) ಎಂಬವರಿಂದ ಉದ್ಧರಿಸಿದ ಘಟನೆಯದು.ಅವರು ಹೇಳುತ್ತಾರೆ "ನಾನು ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ರವರ  ರೌಳಾ ಶರೀಫಿನ ಸಮೀಪವಿದ್ದಾಗ ಒಬ್ಬ ಅಅ್'ರಾಬಿ(ಗ್ರಾಮೀಣ ವಾಸಿ) ಬಂದು ಮೇಲಿನ ಆಯತ್ ಓದಿ  "ನಬಿಯೇ ನಾನು ತಮ್ಮ ಬಳಿ ಪಾಪ ಮೋಚನೆ ಬೇಡುತ್ತಾ ಬಂದಿದ್ದೇನೆ ಎಂದು ಹೇಳಿ

"ಯಾ ಖೈರ ಮನ್ ದುಫಿನತ್ " ಎಂಬ ಹಾಡನ್ನು ಹಾಡಿ ಹೊರಟುಹೋದರು.ನಂತರ ನಾನು ನಿದ್ರಿಸಿದಾಗ ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಕನಸಿನಲ್ಲಿ ಬಂದು "ಅತಬೀ ನೀವು ಆ ಅಅ್'ರಾಬಿಯ ಬಳಿ ಹೋಗಿ, ಅಲ್ಲಾಹು ಅವರಿಗೆ ಪಾಪ ಮೋಚನೆ ನೀಡಿದ್ದಾಗಿ ತಿಳಿಸಬೇಕು. "

ಈ ಘಟನೆಯನ್ನು ಉಲ್ಲೇಖಿಸಿ ಪಾಪ ಮಾಡಿದವರು ಮೋಚನೆಗಾಗಿ ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಬಳಿ ಸಾಗಿ ಅವರೊಂದಿಗೆ ಬೇಡಬೇಕೆಂದು ಇಬ್ನು ಕಸೀರ್ ಬರೆಯುತ್ತಾರೆ.

ನನ್ನನ್ನು ಕನಸಿನಲ್ಲಿ ಕಂಡರೆ ಅವನು ನನ್ನನ್ನೇ ಕಂಡಿರುವನು.ಸೈತಾನನಿಗೆ ನನ್ನ ರೂಪ ತಳೆಯಲು ಸಾಧ್ಯವಿಲ್ಲ ಎಂದು ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂರವರು ಹೇಳಿದ್ದಾರೆ. ಈ ಹದೀಸಿನ ಆಧಾರದಲ್ಲಿ ಮರಣ ಹೊಂದಿದ ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ರೊಂದಿಗೆ ಇಸ್ತಿಗಾಸ ನಡೆಸಬಹುದು ಎಂದು ತಿಳಿಯುತ್ತದೆ.

ಇದನ್ನೆಲ್ಲ ಮುಚ್ಚಿಟ್ಟು ಈ ಮಮ್ಮುಟ್ಟಿ ಮೌಲವಿಯಂತವರು ಮುಸ್ಲಿಮರನ್ನು ವಂಚಿಸುತ್ತಾರೆ.

No comments:

Post a Comment