ಹೌದು...
ಕರಾಯ ದ ಅಲ್ಲಾಹನ ಭವನ ದಾಳಿಗೊಳಪಟ್ಟಾಗ ನಮ್ಮ ಹ್ರದಯ ನೋವಿನಿಂದ ನರಳಿದ್ದು ಸತ್ಯ.....
ನಂತರ ಸಾಮಾಜಿಕ ತಾಣಗಳಲ್ಲಿ ಕೆಲವೊಂದು ಯುವಕರು
ಹರಿದು ಬಿಟ್ಟ ಕೊಳಕು ಸಂದೇಶಗಳು ಕಂಡಾಗ
ನನಗೆ ನೆನಪಾದದ್ದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ನುಡಿ👇👇
👉 ಅಂತ್ಯ ದಿನ ಸಮೀಪಿಸುವಾಗ ಒಂದು ತಂಡ ಬರಲಿದ್ದಾರೆ.....
ಅಹ್ದಾಸುಲ್ ಅಸ್ನಾನಿ
ಅವರು ಅತ್ಯಂತ ಸಣ್ಣ ಪ್ರಾಯದ ಜನರು
ಅವರಿಗೆ ಪ್ರಾಯ ಬಹಳ ಕಮ್ಮಿ ಇರುತ್ತದೆ
ಅವರಲ್ಲಿ ಮೆಚ್ಯೂರಿಟಿ ಇರುವುದಿಲ್ಲ
ಅವರಿಗೆ ಪ್ರಬುದ್ಧತೆ ಇರುವುದಿಲ್ಲ
ಅವರಿಗೆ ವಯಸ್ಸಿನ ಚಾಪಲ್ಯತೆ ಮಾತ್ರ ಇರುತ್ತೆ.
ಸುಫಹಾಹುಲ್ ಅಹ್ಲಾಮ್
ಅವರಿಗೆ ಸರಿಯಾಗಿ ಬುಧ್ದಿ ಬೆಳೆದಿರುವುದಿಲ್ಲ
ವಯಸ್ಸಿಗೆ ತೋಚಿದ ಹಾಗೆ ನಾಡನ್ನು ಮುನ್ನೆಡಸುವ
ಪಕ್ವತೆ ಇಲ್ಲದ ಬುಧ್ದಿ ಕಮ್ಮಿ ಇರುವ ಯುವ ಜನರು ನಿಮ್ಮಡೆಗೆ ಬರಲಿದ್ದಾರೆ...
ಯಖ್ ರ ಊನಲ್ ಕುರ್ ಆನ ಲಾ ಯುಜಾವಿಝು ಹನಾಜಿರಹುಮ್ 👇
👉ಅವರು ಪವಿತ್ರ ಕುರಾನನ್ನು ಉಲ್ಲೇಖ ಮಾಡಿಕೊಂಡು ನಿಮ್ಮ ಮುಂದೆ ಬರುವರು
ಅವರು ಹೇಳುವ ಮಾತಿನೊಂದಿಗೆ ಅವರಿಗೆ
ಬಧ್ದತೆ ಇರುವುದಿಲ್ಲ
ಕೇವಲ ಸ್ಪಿರಿಟ್ ...
ಬಾಯಿ ಮಾತು ಮಾತ್ರ ....
ಯಮ್ ರುಖೂನ ಮಿನಧ್ದೀನಿ .........👇
👉ಯಾವುದಾದರೊಂದು ಮ್ರಗಕ್ಕೆ ಬಿಲ್ಲನ್ನು ಬಿಟ್ಟರೆ ಆ ಬಿಲ್ಲಿನ ಹರಿತದಿಂದಾಗಿ ಪ್ರಾಣಿಯ ಚರ್ಮವನ್ನು ತೂತು ಮಾಡಿ ಇನ್ನೊಂದು ಬದಿಯಿಂದ ಹೊರಗೆ ಹೋಗುವಂತೆ ...
ಅವರು (ಸ್ಪಿರಿಟ್ ಯುವಕರು)
ಇಸ್ಲಾಮಿನಿಂದ ರಟ್ಟುತ್ತಾ, ದೂರವಾಗುತ್ತಾ ಇರುತ್ತಾರೆ.
(ಬುಖಾರಿ ಹದೀಸ್)
ಅಂದರೆ ಅವರ ಇಸ್ಲಾಮ್ ಕೇವಲ ಸ್ಪಿರಿಟ್ ಗೆ ಮಾತ್ರ ಸೀಮಿತ ಎಂದರ್ಥ.
♻👉ನಿಜವಾಗಿ ಇಂದು ನಮಲ್ಲಿ ಈಮಾನ್ ಇಲ್ಲ.
ಆವೇಶ ಬೇಕಾದಷ್ಟು ಉಂಟು...!
ಈಗ ನೋಡಿ ಜಗತ್ತಿನಲ್ಲಿ 165 ಕೋಟಿ ಮುಸಲ್ಮಾನರು ಇದ್ದಾರೆ. ಅಂದರೆ ಜನ ಸಂಖ್ಯೆ ಯಲ್ಲಿ ನಾವೇನು ಕಡಿಮೆ ಇಲ್ಲ💪
57ರಾಷ್ಟ್ರಗಳು ಮುಸ್ಲಿಮರ ಕೈಗಳಲ್ಲಿ ಭದ್ರವಾಗಿದೆ.
ಆದರೂ ನಮ್ಮ ನೆರೆಯ ಬರ್ಮಾ,ಪ್ಯಾಲಸ್ತೀನ್,ಇರಾಕ್,ಅಪಘಾನ್ ರಾಷ್ಟ್ರಗಳ ಮುಸ್ಲಿಮ್ ಸಹೋದರರು ಪ್ರತಿಯೊಂದು ನಿಮಿಷಗಳನ್ನು ದಾರುಣಾವಾಗಿ
ಸವೆಸುತ್ತಿದ್ದಾರೆ.
ನಮ್ಮಲ್ಲಿ ಅಧಿಕಾರವಿದ್ದು,ಹಣವಿದ್ದು,ಜನಸಂಖ್ಯೆ ಎಲ್ಲವೂ ಇದ್ದು ಆ ಸಹೋದರರಿಗೆ ಒಂದು ಶಾಶ್ವತ ಪರಿಹಾರ ನೀಡಲಿಕ್ಕೆ ಸಾಧ್ಯವಾಗುದಿಲ್ಲ
ಅಂದರೆ ನಾವು ಕೇವಲ ಹೆಸರಿಗೆ ಮುಸ್ಲಿಮರಾಗಿದ್ದು
ನಮ್ಮ ಈಮಾನ್ ಆದರ್ಶ ಸೋರಿಹೋಗಿದೆ.
ಎಂದರ್ಥ.
👉ಅಲ್ಲಾಮ ಇಕ್ಬಾಲ್ ಹೇಳುತ್ತಾರೆ..
ಓ..... ಮುಸಲ್ಮಾನ್.....
ನಿನ್ನ ಕೈಯಲ್ಲಿ ಅಧಿಕಾರದ ದಂಡು ಇರಬಹುದು
ನಿನ್ನ ಕೈಯಲ್ಲಿ ಬೇಕಾದಷ್ಟು ಜನರಿರಬಹುದು
ನೀನು ಧರಿಸುವ ಗಡಿಯಾರ.ನಿನ್ನ ಬಟ್ಟೆ
ನಿನ್ನ ಮನೆ ಕೋಟೆ ಕೊತ್ತಳಗಳು ಜಗತ್ತನ್ನೇ
ಬೆರಗು ಮೂಡಿಸುವಂತಾಗಿರಬಹುದು.....
👉ಆದರೆ ಅಲಿಯ್ಯ್ (ರ) ರವರ ಸಾಮರ್ಥ್ಯ ನಿನ್ನಲ್ಲಿಲ್ಲ....
ಸಲ್ಮಾನ್ ಫಾರಸಿ (ರ) ರವರ ಈಮಾನ್
ಆದರ್ಶ ಧ್ರಡತೆ ನಿನ್ನಲ್ಲಿ ಇಲ್ಲ
ನಿನ್ನ ಕೈಯಲ್ಲಿ ಈಮಾನ್ ಇಲ್ಲದಾದಗ...
ನಿನ್ನ ಹ್ರದಯದಲ್ಲಿ ತುಡಿಯುವಂತಹ ಭಕ್ತಿ ಕಡಿಮೆಯಾದಾಗ....
ನಿನ್ನ ಮೇಲೆ ಅಲ್ಲಾಹನ ಕಡೆಯಿಂದ ವಿಶೇಷ ಸಹಾಯ ಇಲ್ಲದಾದಗ.......
👉ನೀನು ನೂರ ಅರವತ್ತೈದು ಕೋಟಿ ಇದ್ದು ಪ್ರಯೋಜನ ಇಲ್ಲ..
👉ನಿನ್ನ ಕೈಯಲ್ಲಿ ಅರುವತ್ತರಷ್ಟು ರಾಷ್ಟ್ರ ಇದ್ದೂ ಆಟಕ್ಕುಂಟು ಲೆಕ್ಕಕ್ಕಿಲ್ಲ
👉ನಮಗೆ ಅಧಿಕಾರ ಕೊಡಿ
ಮುಸ್ಲಿಮರ ರಕ್ಷಣೆ ನಾವು ಮಾಡುತ್ತೇವೆ ಎಂದು ಹೇಳಿ ಪ್ರಯೋಜನವಿಲ್ಲ
👉ಅಧಿಕಾರ ಅಂತಸ್ತು , ಸಬಲತೆ ಎಲ್ಲಕ್ಕಿಂತಲೂ ಮುಖ್ಯ ಮುಸಲ್ಮಾನನಿಗೆ
ಬೇಕಾದುದು ಈಮಾನ್ ಮತ್ತು ಆದರ್ಶ ಬಧ್ದತೆ👍
♻👉ಅದಿಲ್ಲದೆ ಏನೆ ಡೊಂಬರಾಟ ನಡೆಸಿ
ಪ್ರಯೋಜನಬವಿಲ್ಲ..
♻👉ಪ್ರವಾದಿ ಸಲ್ಲಲ್ಲಾಹು ಅಲೈಹಿವ ಸಲ್ಲಮರು
ಈ ಸಮಾಜವನ್ನು ಮುನ್ನೆಡಸಲು ಅರ್ಹರಾದವರು ಅದು ಆಲಿಮ್ ಗಳು ಮಾತ್ರ ಎಂಬ ಅರ್ಥ ದಲ್ಲಿ ಸಮುದಾಯದ ನಾಯಕತ್ವವನ್ನು ಆಲಿಮ್ ಗಳಿಗೆ ನೆಬಿಯವರು
ಮೀಸಲಿಟ್ಟಿದ್ದಾರೆ.👇
♻👉"ಇತ್ತಬಿಉಲ್ ಉಲಮಾಅ್......
ನೀವು ಆಲಿಮ್ ಗಳನ್ನು ಹಿಂಬಾಲಿಸಿ ಬೇಕು
ಎಲ್ಲಾ ಅರ್ಥದಲ್ಲಿ ಕೂಡಾ ಅವರ ಮಾರ್ಗದರ್ಶನ ಪಡೆಯಬೇಕು.
👉ಅವರು ಈ ಪ್ರಪಂಚದಲ್ಲಿರುವ ಪ್ರಕಾಶ ಗೋಪುರಗಳು
ಮತ್ತು ಪಾರತ್ರಿಕ ಲೋಕದಲ್ಲಿ
ನಿಮಗೆ ದಾರಿ ದೀಪವಾಗಲಿದ್ದಾರೆ.(ಹದೀಸ್)
♻👉ಪ್ರವಾದಿ ನುಡಿ ಇದೆ ತಾನೆ...?
ಆಲಿಮ್ ಗಳು ಪ್ರವಾಸಿಗಳ ಉತ್ತರಾಧಿಕಾರಗಳು..
♻👉ನಾವು ಚರಿತ್ರೆಗಳಿಂದ ಪಾಠ ಕಲಿಯಬೇಕಾಗಿದೆ.
ನಾವು ಆಲಿಮ್ ಗಳ ಸೆಯ್ಯಿದ್ ಗಳ ನೇತ್ರತ್ವವನ್ನು ಅಂಗೀಕರಿಸಿ,
ನಮ್ಮ ಆದರ್ಶವನ್ನು ಗಟ್ಟಿಯಾಗಿ ಹಿಡಿದು
ಒಂದಿಂಚು ಚಂಚಲತೆ ಇಲ್ಲದೆ ವಿನಯಾನ್ವಿತ
ಸ್ವಭಾವ ದಿಂದ ಎಲ್ಲರ ಮನಸ್ಸನ್ನು ಗೆಲ್ಲಬೇಕಾಗಿದೆ....
♻👉 ಚರಿತ್ರೆಗಳಿಂದ ನಮಗೆ ತಿಳಿಯುವ ವಿಚಾರ..
ಈ ಸಮುದಾಯಕ್ಕೆ ಕೊಟ್ಟಂತಹ ಯಶಸ್ಸು ಅದು ಯಾವುದೇ ಆಯುಧ ಬಲದಿಂದ ಅಲ್ಲ
ಯಾವುದೇ ಬಂದೂಕುಗಳಿಂದಲೋ
ಬೋಂಬ್ ಸ್ಪೋಟಗಳ ಶಕ್ತಿಯಿಂದಲೋ
ಯಾವುದೇ ಭಿಕರವಾದಿ ,ಉಗ್ರವಾದಿ ಚಟುವಟಿಕೆಗಳಿಂದಲೋ ಅಲ್ಲ
ಬದಲಾಗಿ ನಮ್ಮ ಪೂರ್ವಿಕರಾದ ಅವುಲಿಯಾಗಳ ಅಲಿಮ್ ಗಳ ಉಜ್ವಲ ವಿನಯಾನ್ವಿತ ಸ್ವಭಾವಗಳಿಂದ ಇಸ್ಲಾಮ್
ಎಲ್ಲೆಡೆ ಹರಡಿತು.
ಅವರಲ್ಲಿ ಧ್ವೇಷ,ಹಗೆತನ,ಇರಲಿಲ್ಲ
♻👉ಅವರಿಗೆ ನೆಬಿ ಸಲ್ಲಲ್ಲಾಹು ಅಲೈವಸಲ್ಲಮರ ನಡಿ
ಅಕ್ರಮವೆಸಗಿದವರಿಗೆ ನೀನು ಕ್ಷಮೆ ನೀಡು
ನಿನ್ನೊಂದಿಗೆ ಸಂಬಂದ ಮುರಿದವನೊಂದಿಗೆ ನೀನು ಸಂಬಂಧ ಮುರಿಯಬೇಡ
ನಿನಗೆ ತಡೆ ಹಿಡಿದವನಿಗೆ ನೀನು ತಡೆ ಹಿಡಿಯಬೇಡ
ಇದಾಗಿತ್ತು ನಮ್ಮ ಪೂರ್ವಿಕ ಉಲಮಾಗಳಿಗೆ
ಮಾದರಿಯಾಗಿದ್ದದ್ದು.
♻👉ಕೊನೆಯದಾಗಿ ಹೇಳುವುದೇನಂದರೆ
ನಮ್ಮ ಈಮಾನ್ ಆದರ್ಶ ದಲ್ಲಿ ಚ್ಯುತಿ ಸಂಭವಿಸಿದರೆ ನಾವು ಎಷ್ಟೇ ಒಗ್ಗಟ್ಟಾಗಿ ಪ್ರಯೋಜನವಿಲ್ಲ
ಮೊದಲಿಗೆ ನಮ್ಮ ಈಮಾನ್/ಆದರ್ಶ
ಗಟ್ಟಿಮಾಡಬೇಕು
ಇಂದು ಕರಾಯದ ಲ್ಲಿರುವ ಅಲ್ಲಾಹನ ಭವನ
ದಾಳಿಗೆಯ್ಯಲ್ಪಟ್ಟರೆ
ಮುಂದೊಂದು ದಿನ ಭೂಮಿಯ ಪ್ರಥಮ ಮಸೀದಿಯಾದ ಕಾಬಾ ಶರೀಪ್ ಕೂಡ
ದಾಳಿಗೊಳಗಾಗುತ್ತದೆ
ಅಂದು ಈಮಾನ್ ನಷ್ಟ ಹೊಂದಿದ ಮುಸ್ಲಿಮ್
ಮಾತ್ರ ಈ ಭೂಮಿಯಲ್ಲಿರುತ್ತಾನೆಯೇ ಹೊರತು ನೈಜ ವಿಶ್ವಾಸಿ ಇರುವುದಿಲ್ಲ.
ನೆನಪಿರಲಿ...
👉ಅಬೂಶಝ ಪುತ್ತೂರು
No comments:
Post a Comment