Saturday, October 14, 2017

*ಪ್ರವಾದಿ (ಸ) ರಿಗೆ ನೆರಳಿದೆ ಎಂಬ ವಾದ ಎಪಿ ವಿಭಾಗ ಕ್ಕಿದೆಯೇ ... ?*

ಪ್ರವಾದಿ ( ಸ) ರು ಪ್ರಕಾಶ ದಿಂದ ಸೃಷ್ಟಿ ಸಲ್ಪಟ್ಟವರು.ಅವರಿಗೆ ನೆರಳು ಇಲ್ಲ ಎಂಬುದು ಮುಸ್ಲಿಂ ಜಗತ್ತಿನ ನಂಬಿಕೆ ಮತ್ತು ವಾಸ್ತವ. ಎಪಿ ವಿಭಾಗ ವೂ ಇದೇ ನಂಬಿಕೆ ಯನ್ನು ಹೊಂದಿವೆ.

ಪೆರೋಡ್ ಉಸ್ತಾದ್ ಒಂದು ಪ್ರಭಾಷಣ ದಲ್ಲಿ ಪ್ರವಾದಿ(ಸ)ರಿಗೆ ನೆರಳಿಲ್ಲ ಯಾಕೆ  ?ಎಂಬುದರ ಕುರಿತು ಇಮಾಮ್ ಗಳು ಹೇಳಿದ ನಾಲ್ಕು ಕಾರಣ ಗಳನ್ನು ಹೇಳುತ್ತಾರೆ. ಪೆರೋಡ್ ಉಸ್ತಾದರ ಪ್ರಭಾಷಣ ವನ್ನು ಸರಿಯಾಗಿ ಅರ್ಥಮಾಡದ ಕಳ್ಳ ತ್ವರೀಕತ್ ನವರು ವಿವಾದ ಮಾಡಿದಾಗ ತೋಕೆ ಉಸ್ತಾದರು ಅದರ ನಿಜ ಸ್ಥಿತಿ ಯನ್ನು ಬರೆಯುತ್ತಾರೆ. ಇಲ್ಲಿ ನೆರಳಿದೆ ಎಂಬ ವಾದವನ್ನು ಇವರು ಮಂಡಿಸುವುದಿಲ್ಲ. ಆ ರೀತಿಯ ವಾದವು ಇವರಿಗೆ ಇಲ್ಲ.

ಈ ಸತ್ಯ ಅರಿತಿರುವ ಕಾರಣ ದಿಂದಲೇ *ಗೌರವಾನ್ವಿತ ಜಿಪ್ರೀ ತಂಙಳ್ ಹಾಗೂ ಅಲೀ ಕುಟ್ಟಿ ಮುಸ್ಲಿಯಾರ್ ರವರು ನಾಯಕತ್ವ ನೀಡಿದ ಸಮಸ್ತ ಒಂದಕ್ಷರೂ ಮಾತನಾಡಲಿಲ್ಲ.*

ಸಾಧಾರಣ ವಿಷಯಗಳಿಗೆ ಮಧ್ಯಪ್ರವೇಶಿಸುವ ಸಮಸ್ತ ನೆರಳಿನಂತ ನಂಬಿಕೆ ಮೇಲೆ ದಾಳಿ ಯಾದಾಗ ಮೌನ ವಹಿಸುತ್ತವೆ ಎಂದು ನಂಬಲು ಸಾಧ್ಯವಿಲ್ಲ. ಸಮಸ್ತ ನಾಯಕರಿಗೆ ಸತ್ಯ ದ ಬಗ್ಗೆ ತಿಳಿದಿರುವ ಕಾರಣ ದಿಂದಲೇ ಅವರು ಮೌನ ವಹಿಸಿದ್ದಾರೆ.

ಇನ್ನು ನೌಷಾದ್ ತೋರಿಸುತ್ತಿದ್ದಾನಲ್ಲವೇ  ?? ಎಂಬ ಸಂಶಯ ಕೆಲವರಿಗಿದೆ.

ನೌಷಾದ್ ನನ್ನು ಕುರುವಟ್ಟೂರ್ ತ್ವರೀಕತ್ ಹೆಸರಲ್ಲಿ ಎಪಿ ವಿಭಾಗ ಹೊರ ಹಾಕಿವೆ. ಎಪಿ ವಿಭಾಗ ಹೊರ ಹಾಕಿದವರು ಎಲ್ಲರೂ ತಮ್ಮ ಆಕ್ರೋಶ ತೀರಿಸಲು ಇಂತಹ ಆರೋಪ ದೊಂದಿಗೆಯೇ ರಂಗ ಪ್ರವೇಶ ಮಾಡಿದ್ದಾರೆ.
*ಹಸನ್ ಸಖಾಫಿ, ಮಾಲೆಯಮ್ಮ ಸಖಾಪಿ,ಜಲೀಲ್ ಸಖಾಪಿ,ಕಣ್ಣೂರ್ ಸ ಅದಿ,ರಮಾಂತಳಿ,ಜಿಶಾನ್ ಮಾಯೆ* ಮುಂತಾದ ಹಲವರು ವಿವಿಧ ರೀತಿಯ ಆರೋಪ ಮಾಡಿ ಇದೀಗ ಎಲ್ಲಿಯೂ ನೆಲೆ ಇಲ್ಲದೆ ಬಾಲ ಮಡಚಿ ಕುಳಿತ್ತಿದ್ದಾರೆ.

ನೌಷಾದ್ ನನ್ನಾಗಲಿ, ನೌಷಾದ್ ನ ತ್ವರೀಕತ್ ನನ್ನಾಗಲಿ, ಅಥವಾ ನೌಷಾದ್ ಪೆರೋಡ್ ಉಸ್ತಾದ್ ,ಪೊನ್ಮಳ ಉಸ್ತಾದರ ಮೇಲೆ ಮಾಡುವ ಆರೋಪ ವನ್ನಾಗಲಿ ಸಮಸ್ತ ಮತ್ತು ಅದರ ನಾಯಕರು ಒಪ್ಪುವುದಿಲ್ಲ ಮತ್ತು ಈ ತನಕ ಅಂಗೀಕಾರ ವನ್ನೂ ನೀಡಿಲ್ಲ.

ಒಬ್ಬರಿಗೆ ಇಲ್ಲದ ವಾದ ವನ್ನು ಅವರ ಮೇಲೆ ಎತ್ತಿಕಟ್ಟಿ ಅವರನ್ನು ಅಪರಾಧಿ ಯಾಗಿ ಬಿಂಬಿಸುವಾಗ ಅದು ಸಂಘಟನೆಯ ವೈರಾಗ್ಯ ದಿಂದ ಕೆಲವರಿಗೆ ಖುಷಿ ನೀಡಬಹುದು.

ಆದರೆ ,ಅಲ್ಲಾಹ ನನ್ನು ಸ್ಮರಿಸುವ ಹೃದಯವು ಇಂತಹ ಸುಳ್ಳು ಗಳಿಂದ ದೂರ ನಿಲ್ಲುತ್ತವೆ.

ಪೆರೋಡ್ ಉಸ್ತಾದರ, ಪೊನ್ಮಳ ಉಸ್ತಾದರ ವಾಳ್ ಸರಿಯಾಗಿ ಕೇಳಿದರೆ ಈ ಸತ್ಯವು ಅರಿವಾಗುತ್ತೆ.

ನೌಷಾದ್ ಗೆ ಸತ್ಯ ಬೇಕಿಲ್ಲ. ಸತ್ಯ ಬೇಕಿದ್ದರೆ ನೇರವಾಗಿ ಪೆರೋಡ್ ಉಸ್ತಾದ್ ಮತ್ತು ಪೊನ್ಮಳ ಉಸ್ತಾದರ ಬಳಿ ಹೋಗಿ ಈ ವಿಷಯ ಕೇಳಿ ತಿಳಿಯುತ್ತಿದ್ದ.

*ಇವೆಲ್ಲಕ್ಕಿಂತ ಲೂ ದೊಡ್ಡ ವಿಚಿತ್ರ ಏನು ಗೊತ್ತೇ ..?  ಇದೇ ನೌಷಾದ್ ಪ್ರವಾದಿ ಯವರಿಗೆ ನೆರಳಿದೆ ಎಂಬ ವಾದ ವನ್ನು ಸುನ್ನಿ ಸಲಪಿ ಸಂವಾದದ ಲ್ಲಿ ಸಲಪಿ ಗಳು ಕೇಳಿದಾಗ ಪೊನ್ಮಳ ಉಸ್ತಾದರನ್ನ ಸಮರ್ಥಿಸಿ ಅದು ಝಾತಿಯಾದ ಚರ್ಚೆ, ಅದರ ಅರ್ಥ ನೆರಳಿದೆ ಎಂಬುದಲ್ಲ.ಅದು ಸಲಪಿ ಗೆ ತಿಳಿಯಲ್ಲ ಎಂದು ಹೇಳುತ್ತಾನೆ*

ಅಂದರೆ ನೌಷಾದ್ ಗೆ ಅದರ ವಾಸ್ತವ ಗೊತ್ತಿದೆ. ಪೆರೋಡ್ ಉಸ್ತಾದ್ ,ಪೊನ್ಮಳ ಉಸ್ತಾದರ ಮೇಲಿನ ಹಗೆ ತೀರಿಸಲು ಈಗ ಸುಳ್ಳು ಹೇಳಿ ನಡೆಯುತ್ತಿದ್ದಾನೆ.

No comments:

Post a Comment