Saturday, October 14, 2017

ಅದೊಂದು ಸಂಘ
ಕಾಯಕವೇ ನಲ್ಮೆಯ ಭಂಗ
ಹೇಳುತ್ತಾರೆ ನಾವು ಸಾತ್ವಿಕರ ಸಂಗ
ಇವರೇ ಮಹಾ  ಫಿತ್ನ ಸಂಘ

ಅಂದು ಇಸವಿ ಎಂಬತ್ತರ ಆಸುಪಾಸು
ಫುಂಗಿ ಬಿಟ್ಟರು 'ಎಪಿ' ನುಂಗಿದರು ಕಾಸು
ಹಣ ಕೊಟ್ಟ ಅರಬಿಯ ಫರ್ಮಾನು ಬಂತು
"ಇಲ್ಲ ನುಂಗಿಲ್ಲ 'ಎಪಿ' ನನ್ನ ಕಾಸು"

ಸಾಥ್ ಕೊಟ್ಟರು 'ಎಪಿ'ಗೆ ಸೂರ್ಯ ತೇಜಸ್ಸು.
ಜೊತೆ ಜೊತೆಗೆ ಮುದ್ರೆ ಕೂಡಾ ಒತ್ತಿದರು,
'ಎಪಿ' ಯ ಕೈ ಶುಧ್ದ 'ಹಸ್ತ'ವೆಂದು.
 ಅವರ ಹೆಸರೇ 'ಶಂಸುಲ್ ಉಲಮ'ವೆಂದು

ಜೊತೆಗೆ ಕೊಂಡಾಡಿದರು 'ಎಪಿ' ಯನ್ನು
"ಕೇರಳ ಮುಸ್ಲಿಮರಿಗೆ 'ಸಮಸ್ತ' ವಿಳಾಸವಾಯಿತು..
'ಸಮಸ್ತ' ಕ್ಕೆ 'ಎಪಿ' ವಿಳಾಸವಾದರು.!!

ದಿಕ್ಕು ತೋಚದೆ ಚಡಪಡಿಸಿತು ಫಿತ್ನ ಸಂಘ.
ಹಣೆಯುತ್ತಾ ಇತ್ತು ಮತ್ತೊಂದು ಹೊಸ ಫುಂಗ.
ಕೋಪ ರೋಶ ಮುಗಿಲು ಮುಟ್ಟುತ್ತಿತ್ತು
ಎಲ್ಲವೂ ಸೂರ್ಯ ತೇಜಸ್ಸ ನೇರ ತಿರುಗಿತ್ತು.

ಫಿತ್ನ ಸಂಘದ ಕೈ ಮೇಲಾಯಿತು.
ಶಂಸುಲ್ ಉಲಮಾರನ್ನು ಹೊರದಬ್ಬಲಾಯಿತು...!!
ಪಟ್ಟಿಕ್ಕಾಡ್ ಜಾಮಿಅ ಅನಾಥವಾಯಿತು.!!!
ಸುನ್ನೀ ಸಮೂಹ ಕಣ್ಷೀರಿಟ್ಟಿತು..!!

ತೀರಲಿಲ್ಲ ಫಿತ್ನ ಸಂಘದ ಹಗೆಯ ದಾಹ
ಬಗೆಯುತ್ತಾ ಇತ್ತು ಸೂರ್ಯ ತೇಜಸ್ಸಿನ ನೇರ ದ್ರೋಹ.
ಅಂದು ತೇಜಸ್ಸು ತೃಶೂರಿನ ಖಾಝಿ.
ಗೀಚಿದರು  ಅವರು ಬರೇ ಖಾಲಿ.. ಖಾಲಿ...
ಬರೆದವರು ನಾಟಿಗ ನಿವಾಸಿ..!!
ಬರೆದರು 'ಹಿಕ್ಮತ್' ನಲ್ಲಿ ಈಸಿ(easy) !

ಮತ್ತೊಬ್ಬ ಗೀಚಿದ ಅಸಹ್ಯ ಹೀಗಿತ್ತು.
"ಮನುಜ ಕೆಟ್ಟರೆ ಮೃಗ ಸಮಾನ
ಮೃಗ ಕೆಟ್ಟರೆ 'ಈಕೆ' ಸಮಾನ"..!!!

ನಂತರದ ಗುರಿ ಸಮಸ್ತ ನಲ್ವತ್ತು ಆಲಿಂ ಗಳ ನೇರ.
ಗೀಚಿತ್ತು 'ಅಲ್ ಮುಬಾರಕ್' ಎಂಬ ಫುಂಗ
' ಸಮಸ್ತ' =  ಆಲಿ ಬಾಬ ಮತ್ತು ನಲ್ವತ್ತು ಕಳ್ಳರ ಸಂಘ..!!!
ಇದೆಲ್ಲವೂ ಸಮಸ್ತ ವಿಭಜನೆಯ ಮುಂಚಿನ ರಂಗ.

ದೃತಿಗೆಡಲಿಲ್ಲ 'ಈಕೆ' ಎಂಬ ದಣಿವರಿಯದ ವೀರ.!!
ಜೊತೆಗಿದ್ದರು ಧೀರ ಸೈನಿಕನಂತೆ 'ಎಪಿ'ಎಂಬ ಧೀರಾಧಿ ಧೀರ..!!

  ಅಂದು  ಸಮಸ್ತಕ್ಕೆ ಅರುವತ್ತರ ಗುಂಗು
ಸುನ್ನೀ ಶಕ್ತಿಯ ಸಮ್ಮಿಲನ ರಂಗು
ತಕ್ಬೀರ್ ಧ್ವನಿಯ ಅಬ್ಬರದ ಹುಂಗು
ಸಾರಿತು ಇಲ್ಲ, ನಮಗಿಲ್ಲ ಯಾರದೇ ಹಂಗು

ಸಮ್ಮೇಳನ ಜನಜಂಗುಳಿಯಾಗಿತ್ತು
ಮುಸ್ಲಿಮ್ ಕೇರಳ ವಿಧ್ವಾಂಸರ ಗರಡಿಯಲ್ಲಾಗಿತ್ತು
ರಾಜಕೀಯ ಪ್ರೇರಿತ ಫಿತ್ನ ಸಂಘಕ್ಕೆ ಚಳಿಹಿಡಿದಿತ್ತು.!!
ಎಲ್ಲೆಲ್ಲೂ ಎಪಿ ಈಕೆ ನಾಮದ ಜೊತೆ ತಕ್ಬೀರ್ ಮೊಳಗುತ್ತಿತ್ತು..!!

 ಫಿತ್ನ ಸಂಘ ವಿಲವಿಲನೆ ಒದ್ದಾಡಿತು..!!
ಕೋಪ, ರೋಶ ತಾರಕ್ಕೇರಿತ್ತು
ಜನಸಾಮಾನ್ಯ ಕೈತಪ್ಪಿದ ರೋದನ ಮುಗಿಲು ಮುಟ್ಟಿತು.!!
ಎಪಿ ಈಕೆ ಯನ್ನು ಬೇರ್ಪಡಿಸುವ ತಂತ್ರವ ಹೆಣೆದಿತ್ತು.

ಮಾಟ,ಮಂತ್ರ,ತಂತ್ರದ ದ ಮೊರೆ ಹೊಕ್ಕಿತ್ತು.
ಈಕೆ ಎಂಬ ಉಲಮಾ ಶಂಸನ್ನು ಬುಟ್ಟಿಗೆ ಹಾಕಿತು. !!
ಮತ್ತೊಮ್ಮೆ ಪಿತ್ನ ಸಂಘ ಕೈ ಮೇಲಾಯಿತು.
ಸುನ್ನಿಗಳ ಪಾಲಿಗೆ ಅದು ಕರಾಳ ದಿನವಾಗಿತ್ತು.
ಅಂದು ಇಸವಿ ಒಂಬೈನೂರ ಎಂಬತ್ತ ಒಂಬತ್ತಾಗಿತ್ತು..!!

ಧೃತಿಗೆಡಲಿಲ್ಲ, ಎದೆಗುಂದಲಿಲ್ಲ 'ಎಪಿ' ಎಂಬ ಮಹಾ ಶಕ್ತಿ
ಧೀರ ನೇತ್ರತ್ವ ದಿಶೆ ತೋರಿಸಿತು ಆ ವ್ಯಕ್ತಿ
ಬೆಂಬಲಕ್ಕಿದ್ದರು ತಾಜುಲ್ ಉಲಮಾ ಎಂಬ
ಮಹಾ ಶಕ್ತಿ
ಸೆಟೆದೆದ್ದಿತು ಸುನ್ನೀ ಸಮೂಹ ವೀರಾವೇಶದಿಂದ
 ಹಿಂಬಾಲಿಸಿತು 'ಎಪಿ' ಯನ್ನು ಅಷ್ಟೇ ಆವೇಶದಿಂದ.

ಸುನ್ನಿಗಳ ಪಾಲಿಗೆ ಹೊಸ ಉದಯವಾಯಿತು.
ಎಲ್ಲೆಲ್ಲೂ ವಿಜಯದ ಬಾಗಿಲು ತೆರೆಯಿತು.
-----------------------------
                    ಭಾಗ ೨

ಫಿತ್ನ ಸಂಘ ಬುಸುಗುಟ್ಟುತ್ತಿತ್ತು
'ಎಪಿ'ಯ ನಾಶಕ್ಕೆ ಶಪತ ಹಾಕಿತ್ತು
ಆಹೋರಾತ್ರಿ ಹೆಣೆಯುತ್ತಿತ್ತು
ಗುರಿ ಒಂದೇ 'ಎಪಿ'ಯ ನಾಶವಾಗಿತ್ತು..!!

ಹರಿಯ ಬಿಟ್ಟರು ಆರೋಪಗಳ ಕ್ಷುದ್ರ ಬಾಣ
ಸೇರಿತ್ತು ಅದರಲ್ಲಿ ವ್ಯಭಿಚಾರ ಮದ್ಯಪಾನ
ಕಲ್ಲೆಸದರು ಪುಡಿಗೈದರು
'ಎಪಿ'ಹತ್ತಿದ ಸ್ಟೇಜ್'ಗಳನ್ನೆಲ್ಲಾ.
ಪಾರಾದರು ಪವಾಡದೃಶ್ಯ ಅವುಲಿಯಾಗಳ ಮದದ್'ಗಳಿಂದೆಲ್ಲಾ.

ಕಟ್ಟಿದರು 'ಎಪಿ' ಮರ್ಕಝ್ ಎಂಬ ಮಹಾ ಸಾಗರ
ಪಡೆದರು ಆಸರೆ ಅದರಲ್ಲಿ ಲಕ್ಷಾಂತರ ಸುನ್ನೀ ಸಾಗರ.
ಅದರಿಂದ ಹೊರಬರುವ ಸಖಾಫಿಗಳ ಗೆಟಪ್ಪೇ ಬಲುಚಂದ
ಆಲಿಂ ಜೊತೆಗೆ ಲಾಯರ್,ಡಾಕ್ಟರ್ ಬಿರುದು ಅವರಿಗೆ ಸ್ವಂತ.

ಮೈಲಾರೆಂದರೆ ತಿರುಗಿ ನೋಡದ ಕಾಲ
ಇದೀಗ ಮಂತ್ರಿ ಮಾಗದರು ಸಹಿತ ಎಲ್ಲರೂ ಕಾಲಿಗೆರಗುವ ಕಾಲ
ಬದಲಾವಣೆ ತಂದದ್ದೋ ಮರ್ಕಝ್ ಎಂಬ ಸುನ್ನೀ ಜಾಲ.!!
ನಿಮಿತ್ತವೋ 'ಎಪಿ' ಎಂಬ ಮಹಾ ಜಾಲ..!!

ಶತ್ರುಗಳ ಕೋಪ ನೆತ್ತಿಗೇರಿತ್ತು.
ಇಲ್ಲ ತಡೆಯಲಸಾದ್ಯವೆಂಬ ಸತ್ಯ ತಿಳಿದಿತ್ತು
ನಾಲೆಜ್ ಸಿಟಿ ಯ ಕೆಲಸ ಆರಂಭವಾಗಿತ್ತು.
ಅದನ್ನ ನೋಡಿ ಫಿತ್ನ ಸಂಘದ ತಲೆ ಗಿರ್ಗಿಟಾಗಿತ್ತು..!!

ಓಡಿದರು ಸುಳ್ಳು ಕಂತೆಗಳನ್ನು ಹೊತ್ತು.
ಏರಿದರು ಚೆನ್ನೈ ಕೋರ್ಟನ್ನು ಹೊತ್ತಲ್ಲದ ಹೊತ್ತು.
ಕೇಳಿದ್ದರು 'ನಾಲೆಜ್ ಸಿಟಿ' ಯ ತಡೆಗೆ ಒತ್ತು.
ಕೋರ್ಟ್ ಪಟ್ಟಿ ಹಿಡಿದು ಹೊರದಬ್ಬಿತ್ತು
 ಜೊತೆಗೆ ಛೀಮಾರಿ ಬೇರೆ ಹಾಕಿತು..!!

 ಹೇಳಿತು ನ್ಯಾಯಾಲಯ
ಇದೆಲ್ಲಾ ಘೋರ ಅನ್ಯಾಯ..!!

ಮುಖ ಸುಟ್ಟು ಕೊಂಡರು ಫಿತ್ನ ಸಂಘ
ಕಾದಿತ್ತು ಅವರಿಗೆ ತೀವ್ರ ಮುಖಭಂಗ.!!
ಮದರಸ ಮಕ್ಕಳಿಂದ ಪೀಕಿದ್ದರು ಕೇಸಿಗಾಗಿ ಹಣ.
ಎಲ್ಲವೂ ಮಣ್ಣುಪಾಲಾಯಿತು ದಿನದಿಂದ ದಿನ.

ಶಹರ್ ಮುಬಾರಕ್ ಪಳ್ಳಿ ವಿರುದ್ಧ ಕೊಟ್ಟರು ಪೆಟ್ಟೀಶನ್
ಪಡೆದಿದ್ದರು ಲಕ್ಷ ಲಕ್ಷ ಕಮೀಶನ್.!!
ಪೆಟ್ಟೀಶನ್ ಗೆರೆಯ ರಂಗ ಹೀಗಿತ್ತು
ಆಶಿಕ್ ಗಳ ಮನ ನೋಯುವಂತಿತ್ತು.

"ಕಾಶ್ಮೀರ್ ಬಾಲ್ ಪಳ್ಳಿಯ ಭಯೋತ್ಪಾದನೆ
ನಿಮಿತ್ತವೋ ತಿರು ಕೇಶದ ಸಂಭಾವನೆ.!!"

ಇದೀಗ ಹೊಸ ರಾಗದೊಂದಿಗೆ ಫಿತ್ನ ಸಂಘದ ರಂಗ.
ಮದರಸ ಭಯೋತ್ಪಾದನೆಯ ಫುಂಗ
ಅರೋಪಿ ಎಪಿ ಉಸ್ತಾದರೆಂಬ ರಾಗ.

ವಕೀಲ ಶೆಟ್ಟಿಯ ವಿರುದ್ಧ ಕತ್ತಿ ಮೆಸೆದರು
ಇವರಿಗೇನು ಗೊತ್ತು ನಾಸರ್ ಮದನಿಗೆ ಜಾಮೀನ್ ಸಿಗಲಿಕ್ಕೆ ಶೆಟ್ಟಿ ನಿಮಿತ್ತರೆಂದು.!

ಹೆಂಗಾದರೂ ಮಾಡಿ 'ಎಪಿ'ಯ ಕಂಬಿ ಎಣಿಸುವ ಮೋಹ
ಸತ್ತರೂ ತೀರುವುದಿಲ್ಲ ಹಗೆ ಎಂಬ ದಾಹ

ಪಾಪ.. ಇವರಿಗೇನು ಗೊತ್ತು  ಅವರ ವಿಜಯದ ಗುಟ್ಟು
ಗುಂಡು ಹೊಡೆದರೂ ನಾಟದು ಅವರ ತಲೆಕಟ್ಟು.
ಹೇಳಿದವರು ಸಿ ಎಮ್ ಎಂಬ ಮಹಾ ಸೊತ್ತು.
ಸುಳ್ಳಾಗಲಾರದು ಎಂದೂ ಅವರ ಮಾತು.

"ಹೇಳಿದರು ಸೇರಿರಿ ಜತೆಗೂಡಿರಿ 'ಎಪಿ' ಯ ಹಿಂದೆ
ಸತ್ಯ ಎಂಬುದು ಅವರ ಮುಖ ಮುದ್ರೆ."
"ದೀನ್ ಎಂಬುದು ಅವರ ಕೈಯಲ್ಲಿ ಭದ್ರ.
ಅವರನ್ನು ನೋಯಿಸಿದರೆ ಇದ್ದೇ ಇದೆ ತೊಂದ್ರೆ.!!"
'ಎಪಿ' ಯ ಹಿಂದೆ ಇರುವಷ್ಟು ಕಾಲ
ಸುನ್ನಿಗಳಿಗೆ ಪರ್ವ ಕಾಲ..!!
✒ಅಬೂಶಝ

No comments:

Post a Comment