*ಓನ್ ಲೈನ್ ನಲ್ಲಿ ಸಂಬಂಧ ಕುದುರಿಸಿದ ದಂಪತಿಗಳು ವಿರಸವಾದಾಗ ಮದುವೆ ಮಂಟಪ ವಿರುದ್ದ ಧರಣಿ ಕುಳಿತರೆ ಹೇಗೆ!?*
*-----------------*
ಆ ಮುಂಡಾಸುದಾರಿ ಮುಸ್ಲಿಯಾರ್ ನಲ್ವತ್ತು ವರ್ಷದ ಮುಂಚೆ ಒಂದು ಕೋಟಿರೂಪಾಯಿ ಯೋಜನೆಯನ್ನು ಮುಂದಿಟ್ಟಾಗ,ಒಂದು ಸಾವಿರ ರೂಪಾಯಿ ಕೂಡಾ ಸಂಬಳವಿಲ್ಲದ ಮುಸ್ಲಿಯಾರ್ ಕೋಟಿಯ ವಿಷಯ ಮಾತನಾಡುತ್ತಾರೆಂದು ವಿರೋಧಿಗಳು ಅಪಹಾಸ್ಯ ಮಾಡಿದ್ದರು.
ಆದರೆ ಆ ಮುಸ್ಲಿಯಾರ್ ಗೆ ಸ್ಪಷ್ಟ ಗುರಿಯಿತ್ತು.
ಕನಸನ್ನು ನನಸು ಮಾಡುವ ಅಚಂಚಲಧೃಡತೆಯಿತ್ತು.
ಅಪಹಾಸ್ಯವನ್ನು ಹೂಮಾಲೆಯಂತೆ ಸ್ವೀಕರಿಸುವಧೃಢಚಿತ್ತವಿತ್ತು.
ಗಟ್ಟಿಯಾದ ಸಮರ್ಪಣೆಯಿತ್ತು. ಎಲ್ಲಕ್ಕಿಂತಲೂ ಮಿಗಿಲಾಗಿ ಗುರುಗಳ,ಸಜ್ಜನರ ಆಶಿರ್ವಾದವಿತ್ತು.
ಜೊತೆಗೆ ಇಖ್ಲಾಸ್ ಗಟ್ಟಿಯಾಗಿತ್ತು.
ಆ ಮುಸ್ಲಿಯಾರ್ ಮುನ್ನೇರಿದರು.ಎದುರಾದ ಎದುರುತೊಡರುಗಳನ್ನು ಮೆಟ್ಟಿ ನಿಂತು ವಿಜಯದ ಶಿಖರವನ್ನೇರಿದರು.ತಾನು ಘೋಷಿಸಿದ ಕೋಟಿಯ ಪ್ರೊಜಕ್ಟನ್ನು ಸಂಪೂರ್ಣವಾಗಿ ಮುಗಿಸಿ ತೋರಿಸಿಯೇ ಕೊಟ್ಟರು!
ಪರಿಹಾಸ್ಯಗೈದವರು ಮೂಗಿನ ಮೇಲೆ ಬೆರಳಿಟ್ಟು ಮೂಲೆ ಸೇರಿದರು.
ಮುಸ್ಲಿಯಾರ್ ಮತ್ತು ಅವರು ಕಟ್ಟಿದ ಸಂಸ್ಥೆಯು ನಾಗಲೋಟವೇಗದಲ್ಲಿ ಸಂಚರಿಸಿತು.
ಆ ಮುಸ್ಲಿಯಾರರ ಹೆಸರೇ *ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್!*
ಅವರು ಕಟ್ಟಿದ ಸಂಸ್ಥೆ,
*ವಿಶ್ವ ವಿಖ್ಯಾತ ಮರ್ಕಝ್!*
ಅಂದಿನಿಂದ ವಿರೋಧಿಗಳು ಮರ್ಕಝ್ ನ ನಾಶಕ್ಕಾಗಿ ಆಹೋರಾತ್ರಿ ಸ್ಕಚ್ ಹಾಕುತ್ತಾ ಇದ್ದರು.
ಮರ್ಕಝ್ ನ ಡ್ರೈನೇಜ್ ನೆಪದಲ್ಲಿ ಸಮರ ಸಾರಿ ಮರ್ಕಝ್ ನ ಮುಂದೆ ಧರಣಿ ನಡೆಸಿದರು.ಅವರ ಉದ್ದೇಶ ಮರ್ಕಝಗೆ ಶಾಸ್ವತವಾಗಿ ಬೀಗ ಜಡಿಸುವುದಕ್ಕಾಗಿತ್ತು!
ಅದಾಗಲೇ ಐವತ್ತು ಲಕ್ಷ ಖರ್ಚಿನಲ್ಲಿ ವಾಟರ್ ರಿಸೈಕಲಿಂಗ್ ಯಂತ್ರ ಅಳವಡಿಸಿಯಾಗಿತ್ತು!
ಶತ್ರುಗಳು ಇಂಗುತಿಂದ ಮಂಗಗಳಂತೆ ಹಿಂತುರಿಗಿದರು.
ನಂತರ ಮರ್ಕಝ್ ನ ನೀರಿನ ಟಾಂಕಿಗೆ ವಿಷ ಕಲಸಿ ಹಾಕುವ ಹುನ್ನಾರವೂ ನಡೆಯಿತು.ಅದರಲ್ಲೂ ಶತ್ರುಗಳು ವಿಫಲರಾದರು.
ಕಾಸರಗೋಡಿನ ಇಬ್ರಾಹೀಂ ದಾರಿಮಿ ಎಂಬಾತ ತನಗೆ ಹದಿನಾಲ್ಕು ದಿನದಲ್ಲಿ ಮರ್ಕಝ್ ನಿಂದ ಸನದ್ ಸರ್ಟಿಫಿಕೇಟ್ ಲಭಿಸಿದೆ ಎಂದು ಡಂಗುರ ಸಾರಿ ಮರ್ಕಝ್ ಸರ್ಟಿಫಿಕೆಟ್ ಗೆ ವ್ಯಾಲ್ಯೂವೇ ಇಲ್ಲವೆಂದು ಪ್ರಚಾರ ಮಾಡಿ ವಿದ್ಯಾರ್ಥಿಗಳು ಬಾರದಂತೆ ತಡೆಯುವ ಷಡ್ಯಂತರ 2004 ರಲ್ಲಿ ನಡೆಯಿತು. ನಂತರ ಗತ್ಯಂತರವಿಲ್ಲದೆ ಅದೇ ದಾರಿಮಿ ಮರ್ಕಝ್ ಬಂದು ಕ್ಷಮೆ ಕೇಳಬೇಕಾಯಿತು!
ಕಾಶ್ಮೀರದಿಂದ ವಿದ್ಯಾರ್ಥಿಗಳು ಮರ್ಕಝ್ ಗೆ ಬಂದಾಗ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಕಲ್ಪಿಸಿ ಪ್ರಸ್ ಕ್ಲಬ್ ಕರೆಯಲಾಯಿತು!
ಅವರ ಉದ್ದೇಶವೂ ಮರ್ಕಝ್ ಗೆ ಶಾಸ್ವತವಾಗಿ ಬೀಗ ಜಡಿಯುದಾಗಿತ್ತು.
ಆದರೆ ಮರ್ಕಝ್ ವಿದ್ಯಾರ್ಥಿಗಳಾದ ಕಾಶ್ಮೀರ ಪುಟಾಣಿಗಳು ಜಾಗತಿಕ ಮಟ್ಟದಲ್ಲಿ ಮಿಂಚುವುದರೊಂದಿಗೆ ವಿರೋಧಿಗಳ ಆ ಷಡ್ಯಂತರವೂ ಟುಸ್ಸಾಯಿತು.
ಇದೀಗ ಹೊಸ ವರಸೆಯೊಂದಿಗೆ ವಿರೋಧಿಗಳು ಪ್ರತ್ಯಕ್ಷರಾಗಿದ್ದಾರೆ.
ಅಂಗೀಕೃತವಲ್ಲದ ನಕಲಿ ಕೋರ್ಸ್ ನ ಹೆಸರಲ್ಲಿ ಮರ್ಕಝ್ ಕವಡೆಕಾಸಿನ ಬೆಲೆ ಇಲ್ಲದ ಸರ್ಟಿಫಿಕೆಟ್ ನೀಡಿ ವಂಚಿಸಿದಂತೆ!
ಇನ್ಶುಟಿಟ್ಯೂಶನ್ ಓಫ್ ಸಿವಿಲ್ ಇಂಜಿನಿಯರ್ಸ್ ಇಂಡ್ಯ,ಇನ್ಶಿಟಿಟ್ಯೂಸ್ಟ್ ಫೋರ್ ಆಟೋಮೊಬೈಲ್ ಎಂಬೀ ಎರಡು ಕಂಪೆನಿಗಳ ಅಧೀನದಲ್ಲಿ ನಡೆದ ಕೋರ್ಸ್.
ಕೋರ್ಸ್ ನಡೆಸಿದವರು ಮತ್ತು ಪರೀಕ್ಷೆ ನಡೆಸಿದವರು ಹಾಗೂ ಸರ್ಟಿಫಿಕೇಟ್ ಕೊಟ್ಟದ್ದು ಎಲ್ಲವೂ ದೆಹಲಿ,ಪಂಜಾಬ್ ಲೂಧಿಯಾನ ಕೇಂದ್ರವಾಗಿ ಕಾರ್ಯಚರಿಸುವ ಇದೇ ಇನ್ಶಿಟ್ಯೂಟ್ ಕಂಪನಿಗಳಾಗಿತ್ತು.
ಡಿಗ್ರಿ ಡಿಪ್ಲೊಮಾ ಕೋರ್ಸ್ ಗಳಲ್ಲಿ ಫೇಲಾಗಿ ಅರ್ಹತೆ ಸಿಗದ ವಿದ್ಯಾರ್ಥಿಗಳಿಗೆ ಕೇವಲ ವೃತ್ತಿಪರ ತರಬೇತಿ ಎಂಬ ಸ್ಕೀಮ್ AICTE ಆವಿಷ್ಕರಿಸದ್ದು,ಎಲ್ಲಾ ವಿವರಗಳನ್ನು ದಾಖಲಾತಿಗೆ ಮುಂಚೆ ವಿತರಿಸುವ ಫೋರ್ಮ್ ಗಳಲ್ಲಿ ವಿವರಿಸಲಾಗಿತ್ತು.
ಇದೆಲ್ಲವೂ ವಿದ್ಯಾರ್ಥಿಗಳು ಮತ್ತು ಇನ್ಶಟ್ಯೂಟ್ ಕಂಪೆನಿಗಳ ಮದ್ಯೆ ಇರುವ ಕರಾರಾಗಿರುತ್ತದೆ.
ಸರ್ಟಿಫಿಕೇಟ್ ಕೂಡಾ ಮರ್ಕಝ್ ಕೊಟ್ಟದ್ದಲ್ಲ.
ಆದರೂ ಅವರು ಮರ್ಕಝ್ ನ ಮುಂದೆ ಧರಣಿ ಕುಳಿತಿದ್ದಾರೆ!
ಮರ್ಕಝ್ ಅವರಿಗೆ 20ಲಕ್ಷ ನಷ್ಟ ಪರಿಹಾರ ಕೊಡಬೇಕಂತೆ!
ಮರ್ಕಝ್ ಅವರಿಗೆ ಬೇಕಾದ ಲ್ಯಾಬ್,ಹಾಲ್,ವರ್ಕ್ ಶಾಪ್,ವೆಲ್ಡಿಂಗ್ ಸೆಕ್ಷನ್,ಮುಂತಾದ ಸೌಕರ್ಯಗಳ ಒದಗಿಸಿಕೊಟ್ಟದ್ದು ನಿಜ.
ಇದೆಲ್ಲಾ ಸೌಕರ್ಯಕ್ಕಾಗಿ ಒಬ್ಬ ವಿದ್ಯಾರ್ಥಿಯಿಂದ ಎರಡು ಸಾವಿರಕ್ಕಿಂತಲೂ ಸಣ್ಣ ಮೊತ್ತ ಮಾತ್ರ ಮರ್ಕಝ್ ಪಡಕೊಂಡದ್ದು!
ಅದರಲ್ಲಿಯೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ 50 ಶೇಖಡಾ ಫೀಸ್ ನಲ್ಲಿ ಕನ್ಶಶನ್ ಮಾಡಲಾಗಿತ್ತು.
ವಿದ್ಯಾರ್ಥಿಗಳಿಂದ ಪಡಕೊಂಡ ಎನ್ರೋಳ್ಮೆಂಟ್ ಫೀಸ್,ಪರೀಕ್ಷಾ ಫೀಸ್,ಹೋಸ್ಟೆಲ್ ಫೀಸ್ ಇದ್ಯಾವುದೂ ಮರ್ಕಝ್ ಗೆ ಸಂದಾಯವಾಗುವುದಿಲ್ಲ.ಎಲ್ಲವೂ ಕಂಪೆನಿಗೆ!
ಆದರೂ ಮರ್ಕಝ್ ಪ್ರತಿಯೊಬ್ಬ ವಿದ್ಯಾರ್ಥಿಗೆ 20ಲಕ್ಷದಷ್ಟು ನಷ್ಟಪರಿಹಾರ ಕೊಡಬೇಕಂತೆ!
ಕಲಿಯುವ ಸಮಯ ಬೇಕಾಬಿಟ್ಟಿ ಅಂಡಲೆಯುತ್ತಾ ನಡೆದು ತರಗತಿಗೆ ಚಕ್ಕರ್ ಹೊಡೆದು ಗ್ರೇಡ್, ಮಾರ್ಕ್ ಯಾವುದೂ ಸಿಗದೆ ಕೊನೆಯ ಅಭಯಕ್ಕಾಗಿ ಹತ್ತಿದವನಿಗೆ ಎನ್ ಐ ಟಿ - ಪೋಲಿ ದರ್ಜೆಯ ಸರ್ಟಿಫಿಕೇಟ್ ಬೇಕಂತೆ!
ಕಲಿತ ಕೋರ್ಸ್ ಗೆ ಯಾವ ಸರ್ಟಿಫಿಕೇಟ್ ಕೊಡಬೇಕೋ ಅದನ್ನು ಕೊಡಲಾಗಿದೆ.ಸದರಿ ಸರ್ಟಿಫಿಕೇಟ್ ಗೆ ಈಗಲೂ ವ್ಯಾಲ್ಯೂ ಉಂಟು.ಆ ಸರ್ಟಿಫಿಕೇಟ್ ಆಧಾರಿತ ಉನ್ನತ ಪಠಣ ಕಲಿಯುವವರು ಮತ್ತು ಉದ್ಯೋಗದಲ್ಲಿದ್ದವರೂ ಈಗಲೂ ಇದ್ದಾರೆ.
ವಿಪರ್ಯಾಸವೇನಂದರೆ ಇವರಲ್ಲಿಯೂ ಕೆಲವರು ಧರಣಿ ಚಪ್ಪರದಲ್ಲಿ ಚಪ್ಪರ ಹಾಕಿ ಕುಳಿತಿದ್ದಾರೆ!!
ಡಿಮ್ಯಾಂಡ್ 20 ಲಕ್ಷ ತಾನೇ?
ಸಿಕ್ಕಿದರೆ ಬಂಪರ್ ಲಾಟ್ರಿ!!
ಧರಣಿ ಮದ್ಯೆ ಕುಳಿತವನೊಬ್ಬ ಒಂದುವರೆ ವರ್ಷದಲ್ಲೇ ಕೋರ್ಸ್ ಪೂರ್ತಿಗೊಳಿಸದೆ ಅರ್ಧದಲ್ಲಿ ಎಸ್ಕೇಪ್ ಆದವ!
ಅವನಿಗೂ ಬೇಕಂತೆ 20ಲಕ್ಷ!
2012ರಲ್ಲಿ ಆರಂಭಿಸಿದ ಕೋರ್ಸ್ ಕುರಿತು 2013ರಲ್ಲೇ ಗೊಂದಲವಿತ್ತು.ಕೇಂದ್ರ ಸರಕಾರ ಹೊಸ ನಿಯಮವಾಗಿತ್ತು ಸಮಸ್ಯೆಗೆ ಕಾರಣ.ಆವಾಗಲೇ ಮರ್ಕಝ್ ಸದರಿ ಕೋರ್ಸ್ ಗೆ ಬ್ರೇಕ್ ಹಾಕಿತ್ತು.ಸಂಘಟಿಸಿದ ಏಜೆನ್ಸಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿತ್ತು.ಆರಂಭಿಸಿದ ಕೋರ್ಸ್ ಪೂರ್ತಿ ಮಾಡುವಂತೆ ವಿದ್ಯಾರ್ಥಿಗಳು ಒಕ್ಕೂರಲಿನಿಂದ ಹೇಳಿದ್ದರು.ಕೇಂದ್ರ ಸರಕಾರದ ತೆಗೆದ ತೀರ್ಮಾನದಿಂದ ಉಂಟಾದ ಸಮಸ್ಯೆಗಳನ್ನು ಸಾದ್ಯವಾದಷ್ಟು ರೀತಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಪರಿಹರಿಸಲು ಪ್ರಯತ್ನಸಬೇಕೆಂಬ ನಿಲುವು ತಾಳಲಾಗಿತ್ತು.
ಸೌಕರ್ಯಗಳನ್ನು ಒದಗಿಸಿದ ಫ್ರಾಂಚೈಸಿ ಎಂಬ ನಿಟ್ಟಿನಲ್ಲಿ ಮರ್ಕಝು ಕೂಡಾ ಗರಿಷ್ಠ ಪ್ರಮಾಣದ ಕಾರ್ಯಚಟುವಟಿಕೆಗಳನ್ನು ನಡೆಸಿತ್ತು.ಈಗಲೂ ಸದರಿ ಪ್ರಯತ್ನಗಳು ಮುಂದುವರೆಯುತ್ತಾ ಇದೆ.
ಇಷ್ಟಾಗಿಯೂ ಕೆಲವರಿಗೆ ಹೊಟ್ಟೆ ಬಾಕವೃತ ಅನುಷ್ಠಿಸಿ ಧರಣಿ ನಡೆಸಲು ಮನಸ್ಸಿದ್ದರೆ ಅವರು ದೆಹಲಿಯಲ್ಲಿರುವ AICTE ಮುಂದೆ ಪ್ರತಿಭಟನೆ ನಡೆಸಲಿ.ಅಥವಾ ಕೋರ್ಸ್ ಸಂಘಟಿಸಿದ ಏಜೆನ್ಸಿಗಳ ಮನೆ ಮುಂದೆಯೂ ಆಗಬಹುದು.
ಮರ್ಕಝ್ ಗೇಟ್ ಮುಂದೆ ಧರಣಿ ಕುಳಿತವರಿಂದ ಕೆಲವೊಂದು ಸ್ವಾರಸ್ಯಕರ ಪ್ರಸಂಗ ಕಂಡು ಬಂತು.
ಒಬ್ಬಳು ತಾಯಿ ಮಗನನ್ನು ಚರ್ಚೆಗಾಗಿ ಕರಕೊಂಡು ಬಂದಿದ್ದಳಂತೆ.
ಚರ್ಚೆ ನಡೆಸಲು ಸ್ವಲ್ಪ ಲೇಟಾಯಿತು.ತಾಯಿ ಅವಸರ ಮಾಡತೊಡಗಿದಳು ಕಾರಣ ಅನ್ವೇಷಿಸಿದಾಗ ಮಗನು ' ಓಡಿ' ಕಂಪೆನಿಯಲ್ಲಿ ಕೆಲಸಕ್ಕಿದ್ದಾನೆ,ಮಧ್ಯಾಹ್ನ ವರೆಗೆ ಅರ್ಧ ರಜೆ ಹಾಕಿ ಬಂದಿದ್ದಾನೆ!
ಅವರ ಆರೋಪವು ಸರ್ಟಿಫಿಕೇಟ್ ಗೆ ವ್ಯಾಲುವ್ ಇಲ್ಲ ಎಂದಾಗಿದೆ!
(ತರುವಣ)
ಅದಕ್ಕಿಂತಲೂ ಸ್ವಾರಸ್ಯಕರವಾದ ಮತ್ತೊಂದು ಪ್ರಸಂಗ ಧರಣಿಗೆ ಬೆಂಬಲವಾಗಿ ಎಸ್ಸೆಸ್ಸೆಫ್ ನ ಸಾಥ್!
ಆದರೆ ಎಸ್ಸೆಸ್ಸೆಫ್ ಫ್ಲಾಗ್ ಹಿಡಿದವನು ಕ್ಯಾಲಿಕಟ್ ಫುಟ್ಬಾತ್ ನಲ್ಲಿ ಕೂಡಾ ಎಗ್ಗಿಲ್ಲದೆ ಮಾರುತ್ತಿರುವ ಸಣ್ಣ ಟೋಪಿಯೊಂದನ್ನು ಖರೀದಿಸಿ ತಲೆ ಮುಚ್ಚಲು ಮರೆತಿದ್ದ!
ಮೆಂಬರ್ಶಿಪ್ಪ್ ಕಾರ್ಡ್ ಪ್ರದರ್ಶಿಸಿದಾಗ ಅವನ ವಂಚನೆ ಮತ್ತಷ್ಟು ಬಯಲಾಯಿತು.
ಒಂದು ಭಾಗದಲ್ಲಿ ಹೆಸರೇ ಇರಲಿಲ್ಲ.
ಸಹಿ ಹಾಕಿದ್ದು ಮಾವೂರು ಕಲಾಂ ಮಾಸ್ಟರ್!
ಅವರು ಸಕ್ರೇಟರಿ ಸ್ಥಾನದಿಂದ ನಿರ್ಗಮಿಸಿ ಐದಾರು ವರ್ಷಗಳೇ ಕಳೆದಿತ್ತು!
ಆದರೂ ವಿರೋಧಿಗಳಿಂದಲೇ ಎಸ್ಸೆಸ್ಸೆಫ್ ಗೆ ಗಂಟಲು ಬಿರಿಯುವಂತೆ ಝಿಂದಾಬಾದ್ ಮೊಳಗಿಸಿದ ಅಲ್ಲಾಹನಿಗೆ ಸ್ತುತಿ!
ಶತ್ರುವಾದ ಫಿರ್ಔನ್ ನ ಆಸ್ತಾನದಲ್ಲಿ ಹಝ್ರತ್ ಮೂಸಾ (ಅ) ರವರನ್ನು ಅಲ್ಲಾಹು ಬೆಳೆಸಿದಂತೆ!!
ಎಪಿ ಉಸ್ತಾದರ ಶಿಷ್ಯ ,ಪೇರೋಡ್ ಉಸ್ತಾದ್ ನಡೆಸಿಕೊಂಡು ಬರುವ ಸಂಸ್ಥೆ ಕುಟ್ಯಾಡಿ ಸಿರಾಜುಲ್ ಹುದಾ ಅಧೀನದ ಸಂಸ್ಥೆಗೂ ಬೀಗ ಜಡಿಸಲು ಇದೇ ದುರುಳರು ಶತಾಗಯತ ಪ್ರಯತ್ನ ನಡೆಸಿ ಕೈಸುಟ್ಟುಕೊಂಡದ್ದನ್ನು ಇಲ್ಲಿ ಸ್ಮರಿಸಬಹುದು.
ಆದ್ದರಿಂದಲೇ ಸುನ್ನಿಗಳು ಎರಡು ಗ್ರೂಪುಗಳಿದ್ದು ಅದರೆಡೆಯಲ್ಲಿ ವ್ಯತ್ಯಾಸವೇನೆಂದು ನೂರುಲ್ ಉಲಮಾ ಎಂ ಎ ಉಸ್ತಾದರಲ್ಲಿ ಪತ್ರಕರ್ತರನೊಬ್ಬ ಪ್ರಶ್ನೆ ಕೇಳಿದಾಗ
*ನಮ್ಮದು ನಿರ್ಮಾಣ ಚಟುವಟಿಕೆ ಅವರದ್ದು ನಿರ್ನಾಮ ಚಟುವಟಿಕೆ* ಎಂದು ಮಾರಮಿಕವಾಗಿ ಉತ್ತರಿಸಿದ್ದರು.
ಹೌದು ನಮ್ಮ ಉಲಮಾಗಳು ಬೆವರಿಳಿಸಿ ಕಟ್ಟಿದ ಸಂಸ್ಥೆಗಳನ್ನು ನಿರ್ನಾಮ ಮಾಡಲು ಪಣತೊಟ್ಟಿರುವ ವಿರೋಧಿಗಳು *ಮುಕ್ಕಂ ಯತೀಂ ಖಾನ* ಅಧಿಕಾರಿಗಳ ನಿರೀಕ್ಷಣೆಯಲ್ಲಿ ಬೀಗ ಜಡಿಯುವ ಸ್ಥಿತಿಗೆ ತಲುಪಿದಾಗ ಎಪಿ ಉಸ್ತಾದರು ಅಲ್ಲಿ ಗ್ರೂಪ್ ನೋಡದೆ ಯತೀಮ್ ಖಾನದ ಪರವಾಗಿ ವಾದಿಸಿದ್ದನ್ನಾದರೂ ನೆನಪಿಟ್ಟುಕೊಳ್ಳಬೇಕಿತ್ತು.
ಟೋಟಲಾಗಿ ಮರ್ಕಝ್ ಎಂದರೆ ಅದೊಂದು ಗೂಡಂಗಡಿಯಷ್ಟೇ ದೊಡ್ಡದು ಸುಮ್ಮನೆ ಏನೆಲ್ಲಾ ಹೇಳಿ ಪುಕ್ಕಟೆ ಪ್ರಚಾರ ಕೊಡುತ್ತಿದ್ದಾರೆಂದು ಅಪಪ್ರಚಾರ ಮಾಡಿ ಮರ್ಕಝ್ ಕುರಿತು ಹಗುರ ಭಾವನೆ ಹಾಕಿಕೊಟ್ಟ ಮರಿ ಶತ್ರುಗಳು ಧರಣಿ ನಿಮಿತ್ತ ಮರ್ಕಝ್ ದ್ವಾರದ ಬಳಿ ಬಂದಾಗ ತಮ್ಮ ಧರಣಿಯನ್ನೇ ಮರೆತು ಗೇಟಿನ ಮುಂದೆ ಸೆಲ್ಫಿ ತೆಗೆಯುವುದರಲ್ಲಿ ತಲ್ಲೀನರಾಗಿದ್ದರು!
ಮರ್ಕಝ್ ಗೇಟಿಗಾಗಿ ಯೂಸುಫಲಿ ಸಾಹಿಬ್ ಕೊಟ್ಟ ಒಂದು ಕೋಟಿ ಎಪಿ ಉಸ್ತಾದ್ ಗುಳುಂ ಮಾಡಿದ್ದಾರೆಂದು ಸಾಮಾಜಿಕ ತಾಣದಲ್ಲಿ ಅಪಪ್ರಚಾರ ಮಾಡಿದ ಸೈಬರ್ ಕಿಂಗ್ ಗಳು ಗೇಟ್ ನೋಡಿ ತಬ್ಬಿಬ್ಬಾದದ್ದು ಸುಳ್ಳಲ್ಲ.
ಇನ್ನೂ ಹತ್ತಾರು ಧರಣಿಗಳನ್ನು ವಿರೋಧಿಗಳು ಮರ್ಕಝ್ ನತ್ತ ನಡೆಸಬೇಕು.ಮರ್ಕಝನ್ನು ಮುಖತಾ ನೋಡಲು ವಿರೋಧಿಗಳಿಗೂ ಅವಕಾಶ ಸಿಗುತ್ತೆ.
ಅವರ ತಪ್ಪುಧಾರಣೆ ನೀಗಲು ಅದು ಸಹಕಾರಿಯಾಗಬಹುದು.
ಅಂತೂ ಇಂತೂ ಮರ್ಕಝ್ ಮುಂದೆ ಧರಣಿ ಕುಳಿತವರನ್ನು ನೋಡುವಾಗ ಪರಸ್ಪರ ಮಾತುಕತೆ ನಡೆಸಿ ಎರಡು ಕಡೆಯವರ ಒಪ್ಪಂಧದ ಮೇರೆಗೆ ನಿಕಾಹ್ ನಡೆಸಲು ಸ್ಥಳವಕಾಶ ,ಕುರ್ಚಿನ ವ್ಯವಸ್ಥೆ, ಊಟದ ವ್ಯವಸ್ಥೆ, ಹಾಲ್ ಮುಂತಾದ ಸೌಕರ್ಯ ಒದಗಿಸಿದ ಮದುವೆ ಮಂಟಪದ ಎದುರು ದಂಪತಿಗಳು ವಿರಸವಾದಾಗ ಧರಣಿ ಕುಳಿತಂತಾಗಿದೆ!
ಖ್ಯಾತ ಅಂಕಣಕಾರ
ಓ ಎಂ ತರುವಣ ಸಾಹಿಬ್ ಹೇಳಿದಂತೆ ಅವರು ಧರಣಿ ಕುಳಿತುಕೊಳ್ಳಲಿ ಯಾರೂ ಕೂಡಾ ಮಧ್ಯಸ್ಥಿಕೆ ನಡೆಸಬಾರದು ಒಂದು ಆರು ತಿಂಗಳಾದರೂ ಮುಂದುವರೆಯಲಿ.
ಯುವ ತುರ್ಕಿಗಳು ಧರಣಿ ಕುಳಿತು ಕಲಿಯಲಿ...
ಏನಂತೀರಿ?
- ಅಬೂಶಝ
No comments:
Post a Comment