Saturday, October 14, 2017

ಮೌಲಿದ್ ವಿರೋಧಿಗಳ ಚಳಿ ಬಿಡಿಸಿದ ದುಬೈ ಖುತುಬಾ!
————————————

ಇಂದು ಯುಎಈ (UAE)ಯ ಎಲ್ಲಾ  ಮಸೀದಿ ಮಿಂಬರ್ ಗಳಲ್ಲಿ ಪಾರಾಯಣ ಮಾಡಿದ ಖುತುಬಾ ಪುಣ್ಯ ಪ್ರವಾದಿ (ಸಲ್ಲಲ್ಲಾಹು ಅಲೈಹಿವಸಲ್ಲಮರ) ಮೌಲೂದಾಗಿತ್ತು!

ಖತೀಬರು ಹಂದ್ ಸಲಾತ್, ತಕ್ವಾ ವಸಿಯ್ಯತ್'ನ ನಂತರ ಆರಂಭದಲ್ಲಿಯೇ ಹೇಳಿದ್ದು ಹೀಗೆ....👇🏻👇🏻

ايها المسلمون
ಓ... ಮುಸಲ್ಮಾನರೇ...

اننا نعيش في هذه الايام ذكري عزيزة علي قلب كل مسلم

ನಿಶ್ಚಯವಾಗಿಯೂ  ಪ್ರತಿಯೊಬ್ಬ ಮುಸಲ್ಮಾನನು ತನ್ನ ಹೃದಯಾಂತರಾಳದಲ್ಲಿ ಪ್ರಬಲವಾಗಿ ಸ್ಮರಿಸುವ ದಿವಸಗಳನ್ನ ನಾವು ಸವೆಸುತ್ತಿದ್ದೇವೆ

انها ذكري مولد الهدي والنور سيدنا ونبينا  محمد صلي الله عليه وسلم

ಹೌದು ಪ್ರತಿಯೊಬ್ಬ ಮುಸಲ್ಮಾನನು ಅನುಸ್ಮರಿಸಲೇ ಬೇಕಾದ ಸನ್ಮಾರ್ಗ ಮತ್ತು  ಪ್ರಕಾಶ ಭರಿತವಾದ,
 ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಜನ್ಮದಿನವಾಗಿದೆ!

قال الله تعالي:
فد جاءكم من الله نور وكتاب مبين
(مائده ١٥)
ನಿಜಕ್ಕೂ ನಿಮ್ಮ ಬಳಿಗೆ ಅಲ್ಲಾಹನ ವತಿಯಿಂದ ಒಂದು ಪ್ರಕಾಶ ಮತ್ತು ಸ್ಪಷ್ಟವಾದ ಒಂದು ಗ್ರಂಥವು ಬಂದಿದೆ
(ಮಾಈದ 15)

ارسل الله عزوجل نبيه محمد صلي الله عليه وسلم فاضاء برسالاته الارض بعد ظلالمها

ನಿಶ್ಚಯವಾಗಿಯೂ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರ ನಿಯೋಗದ ನಿಮಿತ್ತ ಅಲ್ಲಾಹು ಇರುಳಿನಿಂದ ಕೂಡಿದ ಭೂಮಿಯನ್ನು ಪ್ರಕಾಶಿಸಿದ!

وهدي به الالباب بعد ظلالها

ದಾರಿಗೆಟ್ಟ ಹೃದಯಗಳಿಗೆ ಮುತ್ತು ನೆಬಿಯವರ ನಿಮಿತ್ತ ಸನ್ಮಾರ್ಗ ತೋರಿಸಿದ!

فكان مولده وبعثته صلي الله عليه وسلم
رحمة للناس جميعا

ಮುತ್ತು ನೆಬಿ (ಸಲ್ಲಲ್ಲಾಹು ಅಲೈಹಿವಸಲ್ಲಮರ) ಜನನ ಎಲ್ಲಾ ಜನರಿಗೆ ಅನುಗ್ರಹವಾಗಿದೆ!
ಪುಣ್ಯ ರಸೂಲರ ನಿಯೋಗವೂ ಕೂಡಾ!

قال سبحانه:
وما ارسلناك الا رحمة للعالمين

ಓ.. ಪ್ರವಾದಿಯವರೇ.. ತಮ್ಮನ್ನು ನಾವು ಸರ್ವ ಲೋಕಗಳಿಗೆ ಅನುಗ್ರಹವಾಗಿ ಕಳುಹಿಸಿರುವೆವು (ಅಂಬಿಯಾ 107)

اي ان الله ارسل نبيه محمدا صلي الله عليه وسلم رحمة لجميع العالم مؤمنهم وكافرهم

ಅಂದರೆ ವಿಶ್ವಾಸಿ /ಅವಿಶ್ವಾಸಿ /ಮುಸ್ಲಿಮ್ / ಅಮುಸ್ಲಿಮ್ ಎಂಬ ಭೇದಭಾವ ಇಲ್ಲದೆ ಸರ್ವರಿಗೂ ಅನುಗ್ರವಾಗಿದೆ ಪುಣ್ಯ ನೆಬಿಯವರ ಜನನ ಮತ್ತು ರಿಸಾಲತ್!

فاما مؤمنهم فان الله هداه به

ಸತ್ಯವಿಶ್ವಾಸಿಗಳ ಹಿದಾಯತ್ ಗೆ ನಿಮಿತ್ತವಾಗಿದ್ದಾರೆ ಮುತ್ತು ನೆಬಿಯವರು. ಹಾಗಾಗಿ ಅವರಿಗೆ ಮುತ್ತು ನೆಬಿ ಅನುಗ್ರಹವಾದರು!

ಹಾಗಾದರೆ ಸತ್ಯ ನಿಷೇಧಿಗಳಿಗೆ ಮುತ್ತು ನೆಬಿ ಅನುಗ್ರಹವಾಗುವುದು ಹೇಗೆ ಎಂಬ ಪ್ರಶ್ನೆ ಗೆ ಖತೀಬ್ ಮುಂದಿನ ಗೆರೆಯಲ್ಲಿ ಉತ್ತರಿಸುತ್ತಾರೆ.👇🏻👇🏻

واما من لم يؤمن به فدعاهم الي الخير فابوا!
فلم يدع عليهم ولم يلعنهم علي الرغم مما ناله منهم من الاساءة والاذي

ಸತ್ಯನಿಷೇಧಿಗಳನ್ನು ಮುತ್ತು ನೆಬಿಯವರು ಸನ್ಮಾರ್ಗಕ್ಕೆ ಆಹ್ವಾನಿಸಿದಾಗ ಅವರು ಸತ್ಯವನ್ನು ನಿರಾಕರಿಸಿದರು!
ಮಾತ್ರವಲ್ಲ ಮುತ್ತು ನೆಬಿಯವರಿಗೆ ದೈಹಿಕವಾಗಿಯೂ ಮಾನಸಿಕವಾಗಿಯೂ ಹಿಂಸೆ ಕೊಟ್ಟರು!
ಆವಾಗಲೆಲ್ಲಾ ಅವರ ವಿರುದ್ಧವಾಗಿ  ನೆಬಿಯವರು ದುಆ ಮಾಡಲಿಲಲ್ಲ!
ಅವರನ್ನು ಶಪಿಸಲಿಲ್ಲ!
ಅವರು ಕಠಿಣವಾಗಿ ಮುತ್ತು ನೆಬಿಯವರನ್ನು ಅಕ್ರಮಿಸಿದಾಗ ಪುಣ್ಯ ನೆಬಿಯವರ ಪ್ರತ್ಯುತ್ತರ ಹೀಗಿತ್ತು!👇🏻👇🏻👇🏻

رب اغفر لقومي فانهم لا يعلمون

ಯಾ.. ಅಲ್ಲಾಹ್! ಅವರನ್ನು ನೀನು ಕ್ಷಮಿಸು!
ನಿಶ್ಚಯವಾಗಿಯೂ ಅವರು ತಿಳುವಳಿಕೆ ಇಲ್ಲದ ಸಮೂಹವಾಗಿದ್ದಾರೆ!

ಆದ್ದರಿಂದಲೇ ಮುತ್ತು ನೆಬಿಯವರು ಸತ್ಯನಿಷೇಧಿಗಳಿಗೂ ಅನುಗ್ರವಾಗಿದ್ದಾರೆ.!
ಅವರ ಗುಣಫಲಕ್ಕಾಗಿ ಪ್ರಾರ್ಥಿಸುವ ಮೂಲಕ!

لذلك كانت بعثة رسول الله صلى الله عليه وسلم للعالمين نعمة من الله عظمي
ومنة من الله كبري

ಆದ್ದರಿಂದಲೇ ಮುತ್ತು ನೆಬಿಯವರ ಆಗಮನ ಅದು ಸರ್ವ ಲೋಕಕ್ಕೂ ಅತಿ ಮಹತ್ತರವಾದ ಅನಗ್ರಹವಾಗಿದೆ!
ಜೊತೆಗೆ
ಅಲ್ಲಾಹನ ಅತ್ಯಂತ ದೊಡ್ಡ ಔದಾರ್ಯ ಕೂಡಾ ಆಗಿದೆ!

ನಂತರ ಮುಂದುವರೆದು ಖತೀಬ್ ತನ್ನ ಖುತುಬಾದಲ್ಲಿ ಹೇಳುತ್ತಾರೆ 👇🏻👇🏻

عباد الله!

ಓ.. ಅಲ್ಲಾಹನ ದಾಸರೇ....

ان رسالة محمد صلى اللَّه عليه وسلم 
قوامها الرحمة!

ನಿಶ್ಚಯವಾಗಿಯೂ ಮುಹಮ್ಮದ್ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರ ನಿಯೋಗ
ಅದರ ಪ್ರಭಾವ ಶಕ್ತಿ ಅನುಗ್ರಹವಾಗಿದೆ!

واساسها الدعوة للسعادة!
ರಿಸಾಲತ್ ನ ತಳಪಾಯ ದಹ್'ವತ್!
ಹೌದು ಸನ್ಮಾರ್ಗ ದರ್ಶನ!

فانبثق شعاع الخير للبشرية!

ಮುತ್ತು ನೆಬಿ ನಿಮಿತ್ತ ಸರ್ವ ಮನುಷ್ಯರಿಗೂ ಒಳಿತಿನ ಕಿರಣ ಗೋಚರಿಸುವಂತಾಯಿತು!

قال الله تعالي:
وانك لعلي خلق عظيم (القلم ٤)

ಓ ಪ್ರವಾದಿವರ್ಯರೇ..ಖಂಡಿತವಾಗಿಯೂ ತಾವು ಅತ್ಯುನ್ನತ ಮಟ್ಟದ ಸ್ವಭಾವದರಾಗಿದ್ದೀರಿ

اي انك علي طبع كريم

ಅಂದರೆ ತಾವು ಮಹತ್ತರವಾದ ಚಾರಿತ್ರ್ಯವಂತರಾಗಿದ್ದೀರಿ

فكان صلي الله عليه وسلم  احسن الناس خلقا
ಮುತ್ತು ನೆಬಿಯವರು ಮನುಷ್ಯರಲ್ಲಿ ಅತ್ಯುತ್ತಮ ಗುಣ ನಡತೆಯುಳ್ಳವರಾಗಿದ್ದಾರೆ

قيل له : يا رسول الله  ادع علي المشركين.

ಮುಶ್ರಿಕ್ ಗಳ ವಿರುದ್ಧ ಪ್ರಾರ್ಥಿಸುವಂತೆ ಮುತ್ತು ನೆಬಿಯವರಲ್ಲಿ ಕೋರಲಾಯಿತು ಆಗ ಪುಣ್ಯ ಪ್ರವಾದಿಯವರ ಉತ್ತರ ಹೀಗಿತ್ತು👇🏻👇🏻

فقال:  اني لم ابعث لعانا

"ನಿಶ್ಚಯ! ನನ್ನನ್ನು ಶಪಿಸುವವನಾಗಿ ನಿಯೋಗಿಸಲ್ಪಟ್ಟಿಲ್ಲ!

وانما بعثت رحمة

(مسلم ٢٥٩٩)

ನಿಶ್ಚಯವಾಗಿಯೂ ನನ್ನನ್ನು ಎಲ್ಲರಿಗೂ ಅನುಗ್ರಹವಾಗಿ ನಿಯೋಗಿಸಲ್ಪಟ್ಟಿದೆ!

ಈ ರೀತಿ ಸುಮಾರು ಎಂಟು ಪುಟದಷ್ಟು ಬರುವ ಖುತುಬಾದ 'ಕೀ ನೋಟ್' ನಲ್ಲಿ
ಮುತ್ತು ನೆಬಿಯವರ ಮೌಲಿದೇ ತುಂಬಿತ್ತು!

ಎರಡನೇ ಖುತುಬಾದಲ್ಲಿ ಪುಣ್ಯ ನೆಬಿಯವರ ಮೇಲೆ ಕೋಟಿ ಕೋಟಿ ಸಲಾತ್ ಹೇಳುವಂತೆ ಪ್ರೇರಣೆ ನೀಡಲಾಗಿತ್ತು!

ಮುತ್ತು ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಜನ್ಮಮಾಸ ರಬೀವುಲ್ ಅವ್ವಲ್ ಆಗಮನವಾದುದರಿಂದಲೇ ಪುಣ್ಯ ನೆಬಿಯವರ ಗುಣಗಾನ ಹೇಳುವ ಈ ಖುತುಬಾವನ್ನು ದುಬೈ ಅವ್'ಖಾಫ್ ತಯ್ಯಾರಿಸಿದೆ ಎಂಬುದು ಗಮನಾರ್ಹ!

ಅಂತೂ ಇಂತೂ ಇಂದಿನ ಖುತುಬಾ ಮೌಲಿದ್ ವಿರೋಧಿಗಳ ಚಳಿಬಿಡಿಸಿದೆ ಎಂಬುದು ಸುಳ್ಳಲ್ಲ!
ಏನಂತೀರಿ❓

ಕನ್ನಡಕ್ಕೆ
✒ಅಬೂಶಝ

ಮೌಲಿದ್ ವಿರೋಧಿಗಳ ಚಳಿ ಬಿಡಿಸಿದ ಇಂದಿನ ದುಬೈ ಖುತುಬಾ!: http://www.janadhvani.com/archives/24020

No comments:

Post a Comment