ಹೌದು....
1990 ರ ಕಾಲ...
ಅಂದು ಸಮದಾನಿ ಯ ಪ್ರಭಾಷಣ ಕ್ಕೆ
ಜನ ಸಾಗರ ಕಿಕ್ಕಿರಿದು ಹರಿದು ಬರುತ್ತಿತ್ತು..
ಆವಾಗ ಸಮದಾನಿಯ ಡ್ಯೂಟಿ
ಸಮಸ್ತ ದ ಲೇಬಲ್ ನಲ್ಲಿ ಲೀಗ್ ಗೆ ಬೇಕಾಗಿ
ಕೂಲಿ ಪ್ರಭಾಷಣ ಮಾಡುವುದಾಗಿತ್ತು.
ಸಹಜವೆಂಬಂತೆ ಸಮದಾನಿ ತನ್ನ ಎದುರಿನಲ್ಲಿ ಇದ್ದ ಜನ ಸಾಗರವನ್ನು ಪ್ರತಿನಿಧಿಸಿ
ಎಪಿ ಉಸ್ತಾದರನ್ನು ಆರೋಪಿಯನ್ನಾಗಿಸಿ
ಸುಳ್ಳಿನ ಕಂತೆಗಳನ್ನೇ ಹರಿದು ಬಿಡುತ್ತಿದ್ದರು
ಎಪಿ ಉಸ್ತಾದರು ಬಹರೈನ್ ಭೇಟಿ ನೀಡಿದಾಗ
ಅದೊಂದು ಶುಕ್ರವಾರವಾಗಿತ್ತಂತೆ.
ಹಾಗೆ ಅಲ್ಲಿನ ಇಮಾಮ್ ಎಪಿ ಉಸ್ತಾದರನ್ನು
ಖುತುಬ ಓದಲು ಆಹ್ವಾನಿಸಿದ್ದರಿಂದ
ಖುತುಬ ಓದಲು ಎಪಿ ಉಸ್ತಾದ್ ಮಿಂಬರ್
ಹತ್ತಿದಾಗ ಕೆಳಗೆ ಕೂತವರೆಲ್ಲಾ ಎದ್ದು ನಿಂತು
ಪ್ರತಿಭಟಿಸಿ ...
ಈ ಮನುಷ್ಯ ಕೇರಳದ ಮಹಾ ವಂಚಕ
ಇವರು ಖುತುಬ ನಿರ್ವಹಿಸುವುದಾದರೆ
ನಾವಿಲ್ಲ ಅಂತ ಹೇಳಿ ಬೇರೆ ಮಸೀದಿಗೆ
ಹೋದರಂತೆ
ಕೊನೆಗೆ ಅಲ್ಲಿನ ಇಮಾಮ್ ಎಲ್ಲರೊಂದಿಗೂ
ಕ್ಷಮೆ ಕೋರಿದರಂತೆ
ನಂತರ ಎಪಿ ಉಸ್ತಾದರ ಕೊರಳಿಗೆ
ತೆಂಗಿನ ಕಾಯಿ ಗೆರಟೆ ಯ ಹಾರ ಹಾಕಿ
ನಿಂದಿಸಲಾಯಿತಂತೆ....❗❗
ಇದನ್ನು ಕೇಳಿ
ಸೇರಿದ ಜನ ಸಾಗರ ಕೇಕೆ ಹಾಕಿ ಸಂಭ್ರಮಿಸುವ ಭರದಲ್ಲಿ ತೆಂಗಿನ ಮರವೇ
ಇಲ್ಲದ ಮರುಭೂಮಿಯಲ್ಲಿ ಗೆರಟೆ ಎಲ್ಲಿಂದ ಬಂತು ಅಂತ ಯೋಚಿಸುವ ವಿವೇಕವು ಅವರಲ್ಲಿ ಇರಲಿಲ್ಲ..
ಎಪಿ ಉಸ್ತಾದರ ಗೀಬತ್ ಕೇಳಿ
ಸೇರಿದ ಜನೋಸ್ತಮಕ್ಕೆ ಸಂತೋಷವಾದರೆ
ಸಾವಿರದ ಗರಿ ಗರಿ ನೋಟುಗಳು
ಜೇಬಿಗೆ ಬಿದ್ದುದರಿಂದ ಸಮದಾನಿ
ಸಾಹಿಬ್ ಗೂ ಸಮದಾನವಾಯಿತು.
👉ಆದರೆ ಎಪಿ ಉಸ್ತಾದ್ ತನ್ನನ್ನು ವಿಮರ್ಶಿಸಿದ ಯಾರಿಗೂ ಜವಾಬ್ ಕೊಡದೆ
ತನ್ನ ದೌತ್ಯದೊಂದಿಗೆ ಮುನ್ನುಗ್ಗುತ್ತಾ ಇದ್ದರು
👉ಕಾಲ ಕಳೆಯಿತು...
ಸ್ಟೇಜ್ ಪೇಜ್ ಗಳಲ್ಲಿ ನಖಶಿಖಾಂತ ವಿರೋಧಿಸುತ್ತಿದ್ದ ಸಮದಾನಿಗೆ ಎಪಿ ಉಸ್ತಾದರ ಮಹತ್ವ ಅರಿಯಲು
ಸರಿ ಸುಮಾರು ಇಪ್ಪತ್ತು ವರ್ಷ ಹಿಡಿಯಿತು.
ಕೊನೆಗೆ ಸಮದಾನಿ ಖುದ್ದು ಮರ್ಕಝ್ ಗೆ
ಭೇಟಿ ನೀಡಿ ಎಪಿ ಉಸ್ತಾದರ ಆಶಿರ್ವಾದ ಪಡೆದು MLA ಆದರು.
♻👉 ನಂತರ...
ಅಬ್ದುನ್ನಾಸರ್ ಮದನಿ ಎಂಟರ್ ಆಯಿತು.
ನಾಸರ್ ಮದನಿಯ ಪ್ರಭಾಷಣ ವೈಭವ
ಎಲ್ಲರಿಗೂ ಗೊತ್ತು ತಾನೇ.
ಎಪಿ ಉಸ್ತಾದರನ್ನು ತೆಗಳಲಿಕ್ಕಾಗಿಯೇ
ಸಮಸ್ತ ನಾಸರ್ ಮದನಿ ಯನ್ನು ಬಳಸಿತು.
ತನ್ನ ಎದುರಿನಲ್ಲಿ ಕಿಕ್ಕಿರಿದು ತುಂಬಿದ ಜನೋಸ್ತಮವನ್ನು ನೋಡಿ ಮದನಿ
ಎಪಿ ಉಸ್ತಾದರನ್ನು ತನ್ನ ಸಾಹಿತ್ಯ ಸಂಪುಷ್ಠ
ಭಾಷೆ ಬಳಸಿ ವಿಮರ್ಶಿಸಿದರು.
👉ಕೊನೆಗೆ ನಾಸರ್ ಮದನಿಗೂ
ಸತ್ಯ ಏನೆಂದು ತಿಳಿಯಲು ವರ್ಷಗಳೇ
ಹಿಡಿದವು.
ನಂತರ ಕಾಸರಗೋಡ್ ಗೆ ಬಂದ ನಾಸರ್
ಮದನಿ ತನ್ನ ಪ್ರಭಾಷಣವನ್ನು ಎಪಿ ಉಸ್ತಾದರೊಂದಿಗೆ ಕ್ಷಮೆಯಾಚಿಸಲಿಕ್ಕಾಗಿ
ಮೀಸಲಿಟ್ಟರು.
ಆಗಲೂ ಎಪಿ ಉಸ್ತಾದರಿಗೆ ಮುಗುಳ್ನಗೆ ಮಾತ್ರ ಉತ್ತರವಾಗಿತ್ತು.
♻👉 ನಂತರ ಎಂಟ್ರಿ ಕೊಟ್ಟವರೇ
ಖ್ಯಾತ ಕುರಾನ್ ಪ್ರಭಾಷಣ ಗಾರ
ರಹ್ಮತುಲ್ಲಾ ಖಾಸಿಮಿ..
ಪ್ರಾರಂಭದಲ್ಲಿ ಎಲ್ಲಾ ಸರಿ ಇತ್ತು.
ತನ್ನ ಕುರಾನ್ ಪ್ರಭಾಷಣದಿಂದ ಜನ ಮನಸ್ಸನ್ನು ಆಕರ್ಷಿಸಿದರು.
ಜನ ಸಾಗರವೇ ಅವರ ಮುಂದೆ ಸೇರುತ್ತಿತ್ತು
♻👉ಕೊನೆಗೆ ಖಾಸಿಮಿ ಯಾರದೋ
ಪ್ರಭಾವಕ್ಕೆ ಒಳಗಾಗಿ ತನ್ನ ಟ್ರಾಕ್ ಬದಲಿಸಿದರು ...
ಪಟ್ಟಿಕ್ಕಾಡ್ ಜಾಮಿಅ
ಸಮ್ಮೇಳನದಲ್ಲಿ ಎಪಿ ಉಸ್ತಾದರ ನ್ನು
ನಾಯಿ ಗಿಂತಲೂ ಕೀಳು ಎಂದು ಜರೆದರಲ್ಲದೆ
ಸೇರಿದ ಸಭಿಕರಿಂದಲೂ ಹೇಳಿಸಿ ಚಪ್ಪಾಳೆ ಗಿಟ್ಟಿಸಿ ಕೊಂಡರು.
ನಂತರ ಖಾಸಿಮಿಯ ಬಹುತೇಕ ಸ್ಟೇಜ್ ಗಳು
ಎಪಿ ಉಸ್ತಾದರ ವಿಮರ್ಶನೆಗಾಗಿಯೇ ಮೀಸಲಾಗಿತ್ತು.
👉ಇತ್ತ ಎಪಿ ಉಸ್ತಾದ್ ಯಾರ ವಿಮರ್ಶಗಳನ್ನು ತಲೆಗೆ ಹಚ್ಚಿ ಕೊಳ್ಳದೆ
ಸಕರಾತ್ಮಕ ಕೆಲಸಗಳಲ್ಲಿಯೇ ಮಗ್ನರಾಗಿದ್ದರು
ಕಾಲ ಉರುಳಿತು...
ಖಾಸಿಮಿಗೂ ಜ್ಞಾನೋದಯವಾಯಿತು
ಕೂಡಲೇ ಕ್ಯಾಲಿಕಟ್ ನಲ್ಲಿ ಸಭೆ ಸೇರಿಸಿದರು
ಆ ಪ್ರಭಾಷಣ ದ ಉದ್ದಗಲಕ್ಕೂ
ತಾನು ಇಷ್ಟು ವರ್ಷ ನಡೆಸಿದ ಗೀಬತ್
ಪ್ರಭಾಷಣ ಕ್ಕೆ ಖೇದ ವ್ಯಕ್ತ ಪಡಿಸುವುದರೊಂದಿಗೆ
ತಾನು ಅತ್ಯಂತ ವಿಮರ್ಶಿಸಿದ
ಎಪಿ ಉಸ್ತಾದರೊಂದಿಗೆ ಕ್ಷಮೆಯಾಚಿಸಲು
ಮೆರೆಯಲಿಲ್ಲ...
ಆಗಲೂ ಎಪಿ ಉಸ್ತಾದರ ಜವಾಬ್
ಇಷ್ಡರ ತನಕ ಹೇಳಿದ್ದು ಇನ್ನೂ
ಹೇಳಲಿಕ್ಕಿರುವುದಕ್ಕೂ ಕ್ಷಮೆ ನೀಡಿದ್ದೇನೆ ಎಂದಾಗಿತ್ತು .!!
♻👉 ಇದೀಗ ಹೊಸ ಅವತಾರ ಎಂಟ್ರಿ
ಕೊಟ್ಟಿದೆ.
ಅದರ ಹೆಸರೇ ನೌಶಾದ್ ಬಾಖವಿ.
ಪ್ರಭಾಷಣ ವೆಂಬುವುದು ಅದೊಂದು ಕಲೆ
ನೌಶಾದ್ ಬಾಖವಿಗೆ ಆ ಕಲೆ ಗೊತ್ತು.
ಪ್ರಾರಂಭದಲ್ಲಿ ಯಾವುದೇ ಪಾರ್ಟಿಗೆ
ಒಗ್ಗದೆ ಜಗ್ಗದೆ ಬಾಖವಿ ತನ್ನ ಪ್ರಭಾಷಣ
ಮೂಲಕ ಜನಮನಸ್ಸನ್ನು ಆಕರ್ಷಿಸಿದರು.
ನಂತರ ಇದೀಗ ಮುಸ್ಲಿಮ್ ಲೀಗ್ ನ ಕೂಲಿ ಪ್ರಭಾಷಣಗಾರನಾಗಿ ಮಧ್ಯೆ ಮಧ್ಯೆ ಸಮಸ್ತ
ಪ್ರಭಾಷಣಗಾರನಾಗಿ ಶಂಸುಲ್ ಉಲಮಾ
ಕಣ್ಣಿಯತ್ ಉಸ್ತಾದರ ಹೆಸರು ಬಳಸಿ
ಎಪಿ ಉಸ್ತಾದರನ್ನು ವಿಮರ್ಶಿಸಲು
ಶುರು ಮಾಡಿದ್ದಾರೆ..
ಇನ್ ಶಾ ಅಲ್ಲಾ
ಬಾಖವಿ ಗೆ ಕೂಡಾ ಜ್ಞಾನೋದಯವಾಗುವ
ದಿನ ದೂರವಿಲ್ಲವೆಂದು ಆಶಿಸೋಣ..
ಎಪಿ ಉಸ್ತಾದರಿಗೆ ವಿಮರ್ಶೆ ಅದೊಂದು
ವಿಷಯವೇ ಅಲ್ಲ
ಯಾರೂ ವಿಮರ್ಶಿಸಿದರೂ ಅವರ ಉತ್ತರ
ಮುಗುಳ್ನಗೆ ಮಾತ್ರ.
ಆದರೆ ಎಪಿ ಉಸ್ತಾದರನ್ನು ವಿಮರ್ಶಿಸಿದ ಎಲ್ಲಾ ಘಟಾನುಘಟಿ ಪ್ರಭಾಷಣ ಗಾರರೆಲ್ಲಾ
ಮೂಲೆ ಗುಂಪಾಗಿದ್ದು
ಉಸ್ತಾದ್ ಮಾತ್ರ ಈಗಲೂ ಸುಲ್ತಾನ್
ಆಗಿ ಮೆರೆಯುತ್ತಿದ್ದಾರೆ.
ಎಂಬುವುದನ್ನು ಬಾಖವಿ ಗೆ ನೆನಪಿಸುತ್ತಾ..
ಇಮಾಮ್ ಶಾಫಿ ಯ ವಿಮರ್ಶಕರಿಗೆ
ಇಮಾಮ್ ಶಾಫಿ ಯಾವುದೇ ಉತ್ತರ ನೀಡುತ್ತಿರಲಿಲ್ಲ
ಬದಲಿಗೆ ಹೀಗೆ ಹೇಳುತ್ತಿದ್ದರು
ನನ್ನನ್ನು ವಿಮರ್ಶಿಸುವವರು
ಊದು ಬತ್ತಿಯ ಹಾಗೆ
ಅವರು ಸ್ವತಃ ಉರಿಯುತ್ತಾ ಹೋಗುತ್ತಾರೆ
ಇತರರಿಗೆ ಪರಿಮಳ ಸಿಗುತ್ತಾ ಇರುತ್ತದೆ.!!
ಅದೇ ತತ್ವವನ್ನು ಸ್ವೀಕರಿಸಿದ ಎಪಿ ಉಸ್ತಾದ್
ವಿರೋಧಿಗಳ ವಿಮರ್ಶನದಿಂದಲೇ
ಉಸ್ತಾದರ ಪರಿಮಳ ಎಲ್ಲರಿಗೂ ಸಿಗುತ್ತಾ ಇದೆ.
ಪಾಪ ವಿಮರ್ಶಕರು ಸ್ವತಃ ಉರಿಯುತ್ತಲೇ
ಮೂಲೆ ಗುಂಪಾಗುತ್ತಾ ಇದ್ದಾರೆ..!!
♻👉ಅಬೂ ಶಝ ಪುತ್ತೂರು
No comments:
Post a Comment