*ಜಾಕಿರ್ ನಾಯ್ಕ್ ಇಶ್ಯೂ*
*ಮದೀನಾ ಹಸಿರು ಖುಬ್ಬಾ ಈಗಲೂ ಅವರಿಗೆ ತಲೆನೋವಾಗಿ ಕಾಡುತ್ತಿದೆ*
*ವಹ್ಹಾಬಿಸಂ ಇಸ್ಲಾಂ ಎಂದು ನಂಬುವವರಿಗೂ ನಂಬಿಸುವವರಿಗೂ ಇದೊಂದು ಪಾಠವಾಗಲಿ*
👇ಮುಂದೆ ಓದಿ....
Isis ನ ಹುಟ್ಟು ಮತ್ತು ಕಾರ್ಯವ್ಯಾಪ್ತಿ ಯಹೂದಿಗಳಿಂದ ಎಂದು ನಾವು ನಂಬುವುದರ ಜೊತೆ ಜೊತೆಗೆ ಸಳಪಿಯಾದಿ ವಹ್ಹಾಬಿಸಂನ್ನು ಕೂಡಾ ಇಲ್ಲಿ ಹೈಲೇಟ್ ಮಾಡಿದ್ದು ಹಂಪರ್ ಎಂಬ ಒಬ್ಬ ಯಹೂದಿ ಎಂಬುದನ್ನು ನಾವು ಮೆರೆಯಬಾರದು.ಅದೇ ವಹ್ಹಾಬಿಸಂ ಆಶಯ ಪ್ರಚಾರಕ್ಕಾಗಿ ದೈವದತ್ತವಾಗಿ ಸಿಕ್ಕಿದ ಎಲ್ಲಾ ಅನುಗ್ರಹಗಳನ್ನು ದಾರೆಯೆರೆದ ವ್ಯಕ್ತಿಯಾಗಿದ್ದಾರೆ ಡಾ ಝಾಕಿರ್ ನಾಯ್ಕ್.
ಆದ್ಯಾತ್ಮಿಕತೆ ಇಲ್ಲದ ಒಣ ಇಸ್ಲಾಮನ್ನು ಪ್ರಚಾರ ಮಾಡುವ ನಾಯ್ಕ್,ದರ್ಗಾ ಗಳನ್ನು ನಂಬುವ ಬಹುಸಂಖ್ಯಾತ ಸುನ್ನೀ ಮುಸ್ಲಿಮರನ್ನು ಮುಶ್ರಿಕ್ ಮತ್ತು ಕುರಾನ್ ವಿರುದ್ದರೆಂಬ ಹಣೆ ಪಟ್ಟ ಕಟ್ಟಿ ಆರೋಪಿಸುತ್ತಾರೆ.
ಅದೇನು 'ಮುಶ್ರಿಕ್' ಎಂಬ ಆರೋಪ 'ಭಯೋತ್ಪಾದಕ' ಆರೋಪಕ್ಕಿಂತ ಸಣ್ಣದೇನು ಅಲ್ಲ. ಭಯೋತ್ಪಾದನೆಗೆ ದುನಿಯಾ ಮತ್ತು ಪರಲೋಕದಲ್ಲಿ ಫನಿಶ್ಮೆಂಟ್ ಸಿಗುವುದಾದರೆ, ಮುಶ್ರಿಕ್ ಗೆ ಆಖಿರದಲ್ಲಿ ಭಯಾನಕ ನರಕ ಶಿಕ್ಷೆ ಎಂಬುದರಲ್ಲಿ ಸಂಶಯವಿಲ್ಲ.
ಕುರಾನನ್ನು ದುರ್ವ್ಯಖ್ಯಾನ ಮಾಡಿ ಸುನ್ನೀ ಮುಸ್ಲಿಮರನ್ನು ಮುಶ್ರಿಕ್ ಎಂದು ಆರೋಪಿಸಿದ ಜಾಕಿರ್ ನಾಯ್ಕ್ ಗೆ ಇದೀಗ ಅವರ ಪ್ರಭಾಷಣವೇ ತಿರುಗು ಬಾಣವಾಗಿದೆ!
ಅಂದರೆ ಅವರ ಭಾಷಣವನ್ನೇ ದುರ್ವ್ಯಖ್ಯಾನ ಮಾಡಿ 'ಭಯೊತ್ಪಾದಕ' ಎಂದು ಆರೋಪಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಅಥವಾ ನಾಯ್ಕ್ ಕುರಾನನ್ನು ತಪ್ಪಾಗಿ ಅರ್ಥೈಸಿ ವಹ್ಹಾಬಿಯಾದಂತೆ ಅವರ ಭಾಷಣವನ್ನು ಬಾಂಗ್ಲಾದಲ್ಲಿ ಸೆರೆಯಾದ ಉಗ್ರ ತಪ್ಪಾಗಿ ಅರ್ಥೈಸಿ ಭಯೋತ್ಪಾದಕನಾಗಿದ್ದಾನೆ!
ಉಗ್ರವಾದ ಮತ್ತು ಭಯೋತ್ಪಾದನೆ ನಂಟು ವಹ್ಹಾಬಿಸಂನ ಹುಟ್ಟಿನಿಂದಲೇ ಅಂಟಿಕೊಂಡ ಜಿಗುಟಾಗಿದೆ.
ಅದರ ಭಾಗವಾಗಿ 2015 ಜೂನ್ 27ರಂದು ಈಜಿಪ್ಟ್ ಸಹಿತ ಹಲವಾರು ಮುಸ್ಲಿಮ್ ರಾಷ್ಟ್ರ ಗಳು ವಹ್ಹಾಬಿಸಂ ಗ್ರಂಥಗಳು ಮತ್ತು ಸಿಡಿ ಗಳಿಗೆ ತಮ್ಮ ರಾಜ್ಯದಲ್ಲಿ ನಿಷೇಧ ಹೇರಿದ್ದನ್ನು ಸ್ಮರಿಸಬಹುದು.
ಮಾತ್ರವಲ್ಲ ಹಂಪರ್ ಪರಂಪರೆಯ ಫ್ರೊಡಕ್ಟ್'ಗಳಾದ ವಹ್ಹಾಬಿಸಂ ಮತ್ತು ಐಸಿಎಸ್ ಪುಡಿಗೈದ ದರ್ಗಾಗಳಿಗೆ ಲೆಕ್ಕವಿಲ್ಲ.ಅತೀ ಕ್ರೂರವಾಗಿ ಕೊಂದು ಹಿಸುಕಿ ಹಾಕಿದ ಮುಸ್ಲಿಮರ ಸಂಖ್ಯೆಗೆ ಮಿತಿ ಇಲ್ಲ. ಈ ವರ್ಷ ವಹ್ಹಾಬಿಸಂ ನ ನವನೂತನ ವಾದವಾದ ತರಾವೀಹ್ ನಿಷೇಧವನ್ನು Isis ಎತ್ತಿ ಹಿಡಿದು ಫತ್ವಾ ಕೊಟ್ಟದ್ದು ಎಲ್ಲಾ ಮೀಡಿಯಗಳು ವರದಿ ಮಾಡಿತ್ತು.
ಪವಿತ್ರ ಕಾಬಾವನ್ನು ದರೋಡೆಗೈದು ಅಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಲೂಟಿಮಾಡಿ ತವಾಫ್ ಮಾಡುತ್ತಿದ್ದ ಮುಸ್ಲಿಮರನ್ನು ಕೊಂದುಹಾಕಿ ಮದೀನಾದಲ್ಲಿದ್ದ ಸಹಾಬಿಗಳ ದರ್ಗಾಗಳನ್ನು ಧ್ವಂಸಮಾಡಿ ನರತಾಂಡವ ನೃತ್ಯವನ್ನಾಡುವ ಮೂಲಕ ವಹ್ಹಾಬಿ ಭಯೋತ್ಪಾದಕರು ತಮ್ಮ ಆಶಯ ಪ್ರಚಾರಕ್ಕೆ ಮುನ್ನುಡಿ ಬರೆದದ್ದು ಇತಿಹಾಸ.
ಅಂದು ವಿಶ್ವ ಮುಸ್ಲಿಮರ ಪ್ರತಿಭಟನೆ ಮಾಡಿದ ನಿಮಿತ್ತ ಪವಿತ್ರ ರೌಲಾ ಶರೀಫ್ ದರ್ಗಾದ ಮೇಲೆ ತಲೆ ಎತ್ತಿ ನಿಂತಿರುವ ಹಸಿರು ಖುಬ್ಬಾವನ್ನು ಹೊಡೆದುರುಳಿಸಲು ಸಳಪಿಗಳಿಗೆ ಸಾಧ್ಯವಾಗಿಲ್ಲ.
ಈಗಲೂ ಅವರಿಗೆ ಅದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಅದನ್ನು ಹೊಡೆದುರುಳಿಸಲು ಹೊಂಚು ಹಾಕುತ್ತಾ ಇದ್ದಾರೆ.
ಮಲ್ಲು ಸಳಪಿ ಝಕರಿಯಾ ಸಲಾಹಿ ತನಗೆ ಸೌದಿ ಅಧಿಕಾರ ಸಿಕ್ಕಿದರೆ ಮೊತ್ತ ಮೊದಲನೆಯದಾಗಿ ಮುತ್ತು ನೆಬಿಯವರ ದರ್ಗಾದ ಮೇಲಿರುವ ಹಸಿರು ಖುಬ್ಬಾವನ್ನು ಹೊಡೆದುರುಳಿಸುವ ತನ್ನ ನೀಚ ಇಂಗಿತವನ್ನು ಬಹಿರಂಗ ಪಡಿಸಿದ್ದಾನೆ!!
.
ಅದೇ ಗುರಿಯನ್ನಿಟ್ಡು Isis ಉಗ್ರ ಮೊನ್ನೆ ಮದೀನಾದ ರೌಲಾ ಶರೀಫ್ ಗೆ ನುಗ್ಗಿ ಹಸಿರು ಖುಬ್ಬಾವನ್ನು ಹೊಡೆದುರುಳಿಸುವ ಪ್ರಯತ್ನಕ್ಕೆ ಕೈ ಹಾಕಿ ಭದ್ರತಾ ಪಡೆಯ ಕೈಗೆ ಸಿಕ್ಕಿ ತನ್ನನ್ನೇ ತಾನು ಸ್ಪೋಟಿಸಿ ನಾಯಿಯಂತೆ ಸತ್ತಿದ್ದಾನೆ.
ಸಂಕ್ಷಿಪ್ತವಾಗಿ ಹೇಳುವುದಾದರೆ Isis ಮತ್ತು ವಹ್ಹಾಬಿಸಂನ ಇತಿಹಾಸ ಹಾಗೂ ಭೀಕರ ತಾಂಡವದ ಚರಿತ್ರೆ ವೀಕ್ಷಿಸುವಾಗ ಎರಡೂ ಒಂದೇ ನಾಣ್ಯದ ಎರಡು ಮುಖವೆಂದು ಮನವರಿಕೆಯಾಗುತ್ತದೆ.
ಅಂತಹ ವಹ್ಹಾಬಿಸಂನ್ನು ಬೆಂಬಲಿಸುವ ಝಾಕಿರ್ ನಾಯ್ಕ್ ರ ವಿರುದ್ದ ಭಯೋತ್ಪಾದನೆಯ ಆರೋಪ ಬಂದಿರುವುದು ಆಶ್ಚರ್ಯ ಪಡುವಂತಹ ವಿಷಯವೇನು ಅಲ್ಲ.
ವಹ್ಹಾಬಿಸಂನ್ನು ನೂರು ವರ್ಷಗಳ ಕಾಲ ಅನ್ನ ಆಹಾರ ಕೊಟ್ಟು ಬೆಳೆಸಿದ್ದು ಸೌದೀಅರೇಬಿಯಾ ಸರಕಾರವಾಗಿತ್ತು.
ಲಾದೆನ್ ನೇತೃತ್ವದ ಅಲ್ ಖಾಯಿದಾ ಉಗ್ರವಾದಿಗಳು ಜಿದ್ದಾ ದಲ್ಲಿ ಬಾಂಬ್ ಸ್ಪೋಟಿಸಿ ಸರೆ ಸಿಕ್ಕಾಗ ಹಾಲು ಕೊಟ್ಟ ಕೈಗೆ ಕಚ್ಚುವ ಸರ್ಪವಾಗಿತ್ತು ವಹ್ಹಾಬಿಸಂ ಎಂದು ಸೌದಿಸರಕಾರಕ್ಕೆ ಮನದಟ್ಡಾಯಿತು.
ಕಾರಣ ಸರೆ ಸಿಕ್ಕ ಉಗ್ರರು ಅದೇ ಊರಿನ ವಹ್ಹಾಬಿಗಳಾಗಿದ್ದರು!!
ಆದ್ದರಿಂದಲೇ ಅಲ್ಲಿನ ಸರಕಾರ ಅವರ ಮೇಲೆ ನಿಯಂತ್ರಣ ಹಾಕಿದೆ.ಅದರ ಭಾಗವೆಂಬಂತೆ ಕಳೆದ ವರ್ಷ ಅಲ್ಲಿನ ಸರಕಾರ ಮುತವ್ವ ಪೋಲಿಸ್ ಗಳ ಕೈ ಕಟ್ಟಿ ಹಾಕಿದೆ!
ಮುಂಚೆ ಅವರಿಗಿದ್ದ ಎಲ್ಲಾ ಅಧಿಕಾರಗಳನ್ನು ತಡೆ ಹಿಡಿಯಲಾಗಿದ್ದರಿಂದಲೇ ಸೌದಿಯ ಮುತವ್ವಗಳು ಹಲ್ಲಿಲ್ಲದ ಹಾವಿನಂತೆ ನರಕ ಯಾತನೆ ಅನುಭವಿಸುತ್ತಿದ್ದಾರೆ.
ಇಂದು ಅರಬ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಎಲ್ಲಾ ಅರಾಜಕತೆಗೆ ನೇತೃತ್ವ ಕೊಡುವವರಿಗೆ ಸಳಪಿಸಂ ಮತ್ತು ಬ್ರದರ್ ಹುಡ್ ನಂತಹ ಮಾರಿ ಸಂಘಟನೆಗಳೊಂದಿಗೆ ನೇರ ಅಥವಾ ಪರೋಕ್ಷ ಸಂಭಂದವಿದೆ.
ಆದ್ದರಿಂದಲೇ ಭಾರತದ ಫ್ಯಾಶಿಸಂ ಸಂಘಟನೆಗಳು ಹಿಂದೂ ಧರ್ಮದ ಮುಖವನ್ನು ಹಿಂಸಾತ್ಮಕವನ್ನಾಗಿ ಪರಿವರ್ತಿಸಿದಂತೆ ಸಳಪಿಯಾದಿ ವಹ್ಹಾಬಿಸಂ ಇಸ್ಲಾಮನ್ನು ಭಯೋತ್ಪಾದನೆಯ ಧರ್ಮವನ್ನಾಗಿ ಬದಲಾಗಿಸಿದ್ದಾರೆ.
ಬಜರಂಗ ದಳದಂತಹ ಫ್ಯಾಸಿಶಂ ಶಕ್ತಿಗಳು ಝಾಕಿರ್ ನಾಯ್ಕ್ ನ ವಿರುದ್ದ ಹೇಳಿಕೆ ಕೊಡುತ್ತಿರುವುದರಿಂದಲೇ ಇದೊಂದು ಹಿಂದು ಮುಸ್ಲಿಂ ಇಶ್ಯುವನ್ನಾಗಿ ಪರಿವರ್ತಿಸಿ ಅನುಕಂಪದ ಅಲೆ ಸೃಷ್ಡಿಸುವ ಅಗತ್ಯ ಇಲ್ಲ.
ಬಾಂಗ್ಲಾದಲ್ಲಿ ಸ್ಪೋಟ ನಡೆಯುತ್ತದೆ ಅದರಲ್ಲಿ ಸೆರೆ ಸಿಕ್ಕ ಉಗ್ರರು ಜಾಕಿರ್ ನಾಯ್ಕ್ ನ ಹೆಸರು ಬಹಿರಂಗ ಪಡಿಸುತ್ತಾರೆ
ಬಂಗ್ಲಾ ಸರಕಾರ ಭಾರತದೊಂದಿಗೆ ಅನ್ವೇಷಣೆ ನಡೆಸಲು ರಿಕ್ವೆಸ್ಟ್ ಮಾಡುತ್ತದೆ.
ಅದರಂತೆ ಕೇಂದ್ರ ಗೃಹ ಮಂತ್ರಿ ತನಿಖೆ ನಡೆಸುವಂತೆ ಆದೇಶಿಸುತ್ತಾರೆ.
ತನಿಖೆ ನಡೆಯಲಿ ಸತ್ಯ ಸಂಗತಿ ಹೊರಬರಲಿ....
ಜೊತೆಗೆ ವಹ್ಹಾಬಿಸಂ ಇಸ್ಲಾಂ ಎಂದು ನಂಬುವ,ನಂಬಿಸುವ ಎಲ್ಲರಿಗೂ ಇದೊಂದು ಪಾಠವಾಗಲಿ...
ಓರ್ವ ಕಟ್ಟಾ ಸುನ್ನೀ....
No comments:
Post a Comment