*ನೂತನ ಸಾರಥಿಗಳಿಗೆ ಅಭಿನಂದನೆ ಸಲ್ಲಿಸುವ ಮುಂಚೆ...*
*------------------------------*
ಹಲವರೊಂದಿಗೆ ಹಲವು ರೀತಿಯಲ್ಲಿ ಪ್ರೀತಿ ಮೂಡಿತ್ತು.
ಮುತ್ತು ಹಬೀಬರೊಂದಿಗೆ....
ತಂದೆ-ತಾಯಿಯೊಂದಿಗೆ...
ಗುರು-ಶಿಷ್ಯರೊಂದಿಗೆ..
ಸಹಪಾಠಿಗಳೊಂದಿಗೆ....
ಸಂಘಟನಾ ನಾಯಕರೊಂದಿಗೆ..
ಹೌದು ರಾತ್ರಿ ಹಗಲೆನ್ನದೆ ಹೃದಯಂತರಾಳದಲ್ಲಿ ಹೊತ್ತು ನಡೆದ ನನ್ನ ಎಸ್ಸೆಸ್ಸೆಫ್ ಸಂಘಟನೆಯೊಂದಿಗೆ....
ಊರು ಕೇರಿ ಗಲ್ಲಿ ಗಲ್ಲಿಗಳಲ್ಲಿ ಸಂಘಟನೆಯ ಧ್ವಜ ಹಾರುವಾಗ ನನ್ನ ಹೃದಯದಲ್ಲಾಗುವ ಅನುಭೂತಿಯನ್ನು ಅಕ್ಷರಕ್ಕಿಳಿಸಲು ನಾನು ಆಶಕ್ತನಾಗಿರುವೆ.
ಅದೇ ಧ್ವಜ ನನ್ನ ಎಡ ಭುಜಕ್ಕೊರಗಿ ಹಾರಾಡುವಾಗ ಎಲ್ಲಿಯಾದರು ಅಹಂ ಬಂದಿತೆ ಎಂಭ ಭಯ ಆವರಿಸದೆ ಇರಲಿಲ್ಲ.
ಪ್ರಣಯಸಖಿ ನನ್ನ ಶರೀರವನ್ನು ಅಪ್ಪುವುದಕ್ಕಿಂತಲೂ ಶ್ರೇಷ್ಠ ಮಧುರವಿತ್ತು ನನ್ನ ಪತಾಕೆಯ ಅಪ್ಪುಗೆಯಿಂದ...
ಸಂಘಟನೆಯ ಘೋಷವಾಕ್ಯ ಕರೆಯುವಾಗ ಶರೀರದ ರೋಮಗಳು ನೆಟ್ಟಗೆ ನಿಂತು ಸೆಲ್ಯೂಟ್ ಹೊಡೆಯುತ್ತಿತ್ತು.
🌑ಹೌದು ಹಬೀಬ್ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಅಂತರಾಳದಿಂದ ಸ್ನೇಹಿಸಲು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಸಂಘಟನೆಯಾಗಿತ್ತು.
🌑ಉಲಮಾ ಸಾದಾತ್ ಗಳನ್ನು ರಸ್ತೆ ಬದಿಯಲ್ಲಿ ವೇದಿಕೆ ಕಟ್ಟಿ ಎಗ್ಗಿಲ್ಲದೆ ದೂಷಿಸುವಾಗ, ಗ್ರೂಪು ನೋಡದೆ ಎಲ್ಲಾ ಉಲಮಾಗಳನ್ನು ಗೌರವಿಸಲು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ರಸ್ತೆ ಬದಿಯಲ್ಲಿ ಉಲಮಾಗಳ ಭಾವಚಿತ್ರ ಗಳನ್ನು ಅಂಟಿಸಿದ ಪ್ಲೆಕ್ಷ್ ಗಳು ದೂಳಿ ಹಿಡಿದು ಮೃಗ ಪಕ್ಷಿಗಳ ಹೇಸಿಗೆ ಬಿದ್ದು ಮಲಿನವಾಗಿ ಅಗೌರವಿಸಲ್ಪಡುವಾಗ ಅದಕ್ಕೆ ಬ್ರೇಕ್ ಹಾಕಿಸಿ ಗೌರವ ಕಲಿಸಿಕೊಟ್ಟದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಉಲಮಾ ಸಾದಾತುಗಳು ವೇದಿಕೆ ಹತ್ತುವಾಗ ತ್ವಾಲಹಲ್ ಬದ್ರು ಹಾಡಿ ಸ್ವೀಕರಿಸಿದ ಮದೀನಾ ನಿವಾಸಿಗಳ ಮಾದರಿ ಕಲಿಸಿಕೊಟ್ಟದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಕಾರ್ಯಕರ್ತನೊಬ್ಬ ಮರಣ ಹೊಂದಿದರೆ ಅವನ ಪಾರತ್ರಿಕ ಮೋಕ್ಷಕ್ಕಾಗಿ ಊರು ಕೇರಿ ಹೆಸರು ಸಂಬಂಧ ನೋಡದೆ ಕುರಾನ್ ಝಿಕ್ರ್ ಹೇಳುವಂತೆ ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಕೋಟಿ ಕೋಟಿ ಸಲಾತ್ ಎಂಬ ವಿನೂತನ ಸಟ್ಟಪ್ಪಿನೊಂದಿಗೆ ಸಮಯ ಪೋಳು ಮಾಡುತ್ತಿದ್ದ ನನ್ನಂತಹ ಸಣ್ಣ ಕಾರ್ಯಕರ್ತರನ್ನು ದುರೂದ್ ಸಲಾತಿನಲ್ಲಿ ತಲ್ಲೀನರಾಗುವಂತೆ ಮಾಡಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑 ಬುರ್ದಾ ಕಾವ್ಯ ಅಲಾಪಿಸಿ ಇಶ್ಕ್ ನ ಅಲೆಗಡಲಲ್ಲಿ ತೇಲುವಂತೆ ಮೋಟಿವೇಶನ್ ಕೊಟ್ಟದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಆತ್ಮೀಯತೆ ಮೆರೆಯಾಗುತ್ತಿರುವ ಸಂಧಿಗ್ದ ಘಟ್ಟದಲ್ಲಿ ಆದ್ಯಾತ್ಮಿಕತೆಯನ್ನು ಗಟ್ಟಿಯಾಗಿ ಹಿಡಿದು ಬದುಕಲು ಆಜ್ಞಾಪಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಕಬೀರ್ ನಂತಹ ಎಳೆವಯಸ್ಸಿನ ಯುವಕ ಅನ್ಯಾಯವಾಗಿ ಕೋವಿಗೆ ಬಲಿಯಾದಾಗ ನ್ಯಾಯ ಕೇಳಲು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಅಲ್ಲಾಹನ ಮತ್ತು ರಸೂಲರ ಕುರಿತು ಅರಿವಿಲ್ಲದ ಉತ್ತರ ಕರ್ನಾಟಕದ ಸಹೋದರರಿಗೆ ಇಹ್ಸಾನ್ ಮೂಲಕ ದೀನಿ ಕಲಿಸಿಕೊಟ್ಟದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಉಲಮಾಗಳು ವಿದ್ಯಾಸಂಸ್ಥೆ ಕಟ್ಟಿ ಶಿಕ್ಷಣ ಕ್ರಾಂತಿ ನಡೆಸುವಾಗ ಅವರ ಬೆನ್ನಲುಬಾಗಿ ನಿಂತು ಖಿದ್ಮ ಮಾಡಲು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ನಿರ್ದಿಷ್ಟ ರಾಜಕೀಯ ಪಕ್ಷದ ದಾಸರಾಗಿ, ದಾಳವಾಗಿ, ಬಾಲವಾಗಿ ಯುವಕರು ಕಾರ್ಯಚರಿಸಿದಾಗ ನಾವು ಬಾಲಗಳಾಗಬೇಕಾದವರಲ್ಲ ರಾಜಕೀಯ ಪಕ್ಷಗಳ ತಲೆಗಳಾಗಿ ಮಾರ್ಪಾಡು ಗೊಳ್ಳಬೇಕೆಂದು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಕೋಮುವಾದ,ಭೀತಿವಾದ,ಅವಿವೇಕ ಆವೇಶ ಕ್ಷಣಿಕ. ಶಾಸ್ವತ ಪರಿಹಾರವಾಗಿ ಶಾಂತಿಯ ಮತ್ತು ವಿವೇಕ,ತಂತ್ರ,ಹಿಕ್ಮತ್ ನ ಪಾಠ ಕಲಿಸಿಕೊಟ್ಟದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ತಂದೆ ತಾಯಿಗಳಿಗೆ ತಲೆನೋವಾಗಿ ಪರಿಣಮಿಸಿದ ಮಕ್ಕಳ ಮದ್ಯೆ ಮಾದರಿ ಪುತ್ರರನ್ನಾಗಿ ಬಾಳಲು ಕಲಿಸಿಕೊಟ್ಟದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಗಾಂಜಾ ಡ್ರಗ್ಸ್ ಗಳ ದಾಸರಾಗಿ ಅಕಾಶ ದಿಟ್ಟಿಸುವ ಯುವಕರ ಮದ್ಯೆ ಅಮಲು ಪದಾರ್ಥಗಳ ನಿರ್ಮೂಲನಕ್ಕೆ ಸಮರ ಸಾರಲು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಮೂಗು ಮುಸುತಿ ನೋಡದೆ ಮುಕ್ಕಾಗಂಟೆಗಳನ್ನು ದೂರ ಮಾಡಿ ಮೂಸದಂತೆ ನೋಡಿಕೊಳ್ಳಲು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಬೆಲೆಕಟ್ಟಲಾಗದ ಸಾಂತ್ವನದ ಮೂಲಕ ಅಬಲೆಯರ ನಿರಾಶ್ರಿತ ನಿರ್ಗತಿಕರ ಬಾಳಲ್ಲಿ ಬೆಳಕಾಗಿ ಮೂಡಲು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಅಂಗಡಿ ಜಗಲಿಗಳಲ್ಲಿ ರಸ್ತೆ ಮೋರಿಗಳಲ್ಲಿ ಪಾನ್ ಪರಾಗ್ ಗುಟ್ಕದ ದಾಸರಾಗಿ ಅಲೆಯುತ್ತಿರುವಾಗ,ಬದರ್ ಮೌಲಿದ್ ,ಇಲ್ಮ್ ನ ಮಜ್ಲಿಸೆಂದು ಹೇಳುತ್ತಾ ,ಅತ್ತ ಕಡೆ ಸಕ್ರಿಯವಾಗಲು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಎಸ್ಸೆಸ್ಸೆಫ್ ನ ಪ್ರತಿಯೊಂದು ನಿಶಾ ಕ್ಯಾಂಪುಗಳು,ಆಧ್ಯಾತ್ಮಿಕತೆಯತ್ತ ,ಮುತ್ತು ಹಬೀಬರ ಇಶ್ಕ್ ಮತ್ತು ಸ್ವರ್ಗೋದ್ಯಾಯನದ ಕಡೆ ನನ್ನನ್ನು ಕೊಂಡೊಯ್ಯುತ್ತಿತ್ತು.
ಹರಾಮ್ ನ ಚಲನಚಿತ್ರದ ಹಾಡುಗಳೇ ತುಟಿಗಳು ಮಂತ್ರಿಸುತ್ತಿದ್ದಾಗ ಸಲಾತಿನ, ಕುರಾನಿನ,ಬುರ್ದಾದ ಗೆರೆಗಳನ್ನು ಮಂತ್ರಿಸುವಂತೆ ಮಾಡಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
*ಸಾಂತ್ವನ, ಇಬಾದತ್,ಇಶ್ಕ್,ದೀನಿಚೈತನ್ಯ,ಅದಬ್,ಗೌರವಗಳನ್ನು ನನಗೆ ಕಲಿಸಿ ಕೊಟ್ಟ ನನ್ನ ಎಸ್ಸೆಸ್ಸೆಫ್ ನನ್ನ ಗುರು, ನನ್ನ ಶೈಖ್,ನನ್ನ ತರೀಖತ್ ಹೌದು ಏನು ಹೇಳಿದರೂ ಸಾಕಾಗಲ್ಲ ಹಾಗಾಗಿ ಇಷ್ಟೇ ಹೇಳುತ್ತೇನೆ ಎಸ್ಸೆಸ್ಸೆಫ್ ಝಿಂದಾಬಾದ್ 👍*
ಇದೀಗ ಎಸ್ಸೆಸ್ಸೆಫ್, *ಕೊಡಗಿನ ರತ್ನ ಪಿ.ಎ.ಇಸ್ಮಾಯಿಲ್ ಸಖಾಫಿ ಕೊಂಡಂಗೇರಿಯವರ* ಸಾರಥ್ಯದ ಸಮರ್ಥವಾದ ಟೀಂ ಒಂದರಲ್ಲಿ ಭದ್ರವಾಗಿದೆ. ಅಡ್ವಕಟ್ ಕೆ ಎಂ ಇಲ್ಯಾಸ್ ನಾವುಂದ,ಮುಹಮ್ಮದ್ ಶರೀಫ್ ಬೆಂಗಳೂರು ರವರಂತಹ ಘಟಾನುಘಟಿ ಯುವ ಪಡೆಯೇ ಸಖಾಫಿ ಉಸ್ತಾದರ ಬೆಂಗಾವಲಿಗೆ ಬೆನ್ನಲುಬಾಗಿ ನಿಂತಿದೆ.
*ಪುತ್ತೂರಿನ ಕಣ್ಮನಿ ನನ್ನ ಆತ್ಮೀಯ ಮಿತ್ರರು,ಯುವ ಮುಂದಾಳು ಅಡ್ವಕಟ್ ಶಾಕಿರ್ ಹಾಜಿಯವರ ಎಂಟ್ರಿ ಬಹಳ ಸಂತೋಷತಂದಿದೆ.*
ಎಲ್ಲರಿಗೂ ಹೃದಯಾಂತರಾಳದಿಂದ ಅಭಿನಂದನೆಗಳು💐💐💐
ಜೊತೆಗೆ....
ಎಸ್ಸೆಸ್ಸೆಫ್ ನ್ನು ನೀರುಣಿಸಿ ಸಾಕಿ ಸಲಹಿ ಹೆಮ್ಮರವಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ, *ಎಸ್. ಪಿ.ಹಂಝ ಸಖಾಫಿ, ಪಿ.ಪಿ.ಸಖಾಫಿ, ಜಿ ಎಮ್ ಕಾಮಿಲ್ ಸಖಾಫಿ, ಝೈನಿ ಕಾಮಿಲ್ ಸಖಾಫಿ, ಕಾವಲ್ ಕಟ್ಟೆ ಹಝ್ರತ್, ಕೆಕೆಎಮ್.ಕಾಮಿಲ್ ಸಖಾಫಿ, ಹಫೀಲ್ ಸಹದಿ,ಮೌಲಾನ ಶಾಫಿ ಸಹದಿ* ಯಂತಹ ಘಟಾನುಘಟಿ ನಾಯಕರು ಕೂಡಾ ಅಭಿನಂದನಗೆ ಅರ್ಹರು.
ಅಲ್ಲಾಹು ಅವರ ನೆರಳನ್ನು ಇನ್ನಷ್ಟು ಅನುಭವಿಸಲು ನಮಗೆ ತೌಫೀಕ್ ನೀಡಲಿ ಆಮೀನ್.
- ಅಬೂಶಝ
No comments:
Post a Comment