ಅಂದು ಹೇಳಿದರು ನನ್ನ ಬಳಿ ಅವನು ಹಿಂದುವೆಂದು ಕೆಲವರು....
ಹೋಗ ಬೇಡ ಅತ್ತ ಕಡೆ ಅವನು ನಮ್ಮವನಲ್ಲವೆಂದು
ತೋರಿಸಿದರು ಗುಜರಾತ್ ಹತ್ಯ ಕಾಂಡವ ಸಿಡಿ ಯನ್ನು...
ಮಿಡಿಯಿತು ನನ್ನ ಮನವು ಕುದಿಯಿತು
ನನ್ನ ರಕ್ತವು
ಉರಿಯಿತು ನನ್ನ ದೇಹ ಹಿಂದುಗಳೆಲ್ಲಾ ನಮ್ಮ ಶತ್ರುವೆಂದು...
ನನ್ನ ತಂದೆಯ ಆಪ್ತ ಮಿತ್ರರು ಬೊಬ್ಬ ಪಾಂಡು ರಮೇಶ ಆಚಾರ್ಯ
ಎಲ್ಲರೂ ನನಗೆ ಆಜನ್ಮ ಶತ್ರುವಂತೆ ಬಾಸವಾದರು...
ನನ್ನ ತಂದೆ ನಾನು ಚಿಕ್ಕವನಾಗಿದ್ದಾಗ ಅವರತ್ತಿರ ಕರಕೊಂಡು ಹೋಗಿದ್ದರು....
ಅವರೆಲ್ಲರೂ ನನ್ನ ಸ್ನೇಹ ಬಾಸ್ಪದಿಂದ ಸ್ವಿಟ್ ಕೊಟ್ಟು ಮುದ್ದಾಡಿದ್ದರು...
ನನ್ನ ತುಂಟತನ ನೋಡಿ ಗಹಗಹಿಸಿ ನಕ್ಕಿದ್ದರು..
ನಮ್ಮ ನೆರೆ ಮನೆಯ ಲಕ್ಷಿ ಅಕ್ಕ ನನ್ನ ತಾಯಿಯ ಆಪ್ತರಾಗಿದ್ದರು
ಅಲ್ಲಿ ಏನೆ ಆತಿಥಿ ತಿಂಡಿ ಮಾಡಿದರೂ
ಅದರಲ್ಲೊಂದು ನಮ್ಮ ಮನೆ ಸೇರುತ್ತಿತ್ತು
ನಮ್ಮ ಮನೆಯ ಬಿರಿಯಾನಿ ಫುಲಾವ್ ಗಳೂ ಅವರ ಮನೆ ಸೇರುತ್ತಿತ್ತು
ನಂತರ ಸಂಜೆ ಅವುಗಳ ಹುಳಿ ಉಪ್ಪು ಖಾರಗಳ ಚರ್ಚೆ ನಮ್ಮ ಮನಸ್ಸಿಗೆ ಮುದ ನೀಡುತ್ತಿತ್ತು
ಹಿಂದು ಮುಸ್ಲಿಮ್ ಎಂದು ಭೇದಭಾವವಿಲ್ಲದೆ ಜೀವಿಸಿದ್ದ ಆ ಕಾಲ
ಅದೆಷ್ಟು ಸುಂದರವಾಗಿತ್ತು..
ಇದೀಗ ಕೆಲವರಿಗೆ ಮತಾಂಧ ಪಿತ್ತ ನೆತ್ತಿಗೇರಿದೆ
ರಾಮ ನ ಮತ್ತು ಟಿಪ್ಪುವಿನ ಹೆಸರಿನಲ್ಲಿ ಕಾದಡುತ್ತಿದ್ದಾರೆ....
ಎಲ್ಲರೂ ಒಟ್ಟಾಗಿ ಹಿಂದುವನ್ನು ಬಡಿಯಿರಿ
ಎಲ್ಲರೂ ಒಗ್ಗಟ್ಟಾಗಿ ಬ್ಯಾರಿ ಯನ್ನು ಸೆದೆ ಬಡಿಯಿರಿ......
ಆದರೆ ಬ್ಯಾರಿಯಲ್ಲೂ ಹಿಂದುವಲ್ಲಿಯೂ ಓಡುವುದು ಕೆಂಪು ರಕ್ತ...
ಎಲ್ಲರೂ ಆದಮರ ಪುತ್ರರು..
ಎಂಬುವುದನ್ನು ಅವರು ಮೆರೆಯುವರು...
ಅಂದು ಸೌಮ್ಯ ಕೊಲೆ ನೆಪವಾಗಿಸಿ
ಗಲಭೆಯಾದಾಗ ಗುರಿಯಿಟ್ಟರು ಮತಾಂದರು
ನಮ್ಮ ಮನೆಯನ್ನು.....
ಆವಾಗ ಧಾವಿಸಿ ಬಂದರು ನೆರೆಯ ಲಕ್ಷ್ಮಿ ಅಕ್ಕ ಕಮಲಕ್ಕ ತಂದೆ ಯ ಮಿತ್ರ ಬೊಬ್ಬ ಪಾಂಡು ರಂಗ ಎಲ್ಲರೂ...
ರಕ್ಷಿಸಿದರು ಚಡ್ಡಿ ಸಂಘಿ ಶೈತಾನನ
ದಾಳಿ ಕೊಳ್ಳಿ ಕೊಲೆಯಿಂದ....
ಇದೀಗ ಮತ್ತೊಂದು ಗಲಭೆಯಾಗಿದೆ
ಚಡ್ಡಿಗಳ ಹೊಡೆವ ತಾಳಲಾರದೆ
ಮನೆಯ ರಕ್ತ ನೋಡಲಾರದೆ...
ನಾ ಗಟ್ಟಿ ಕೂಗಿದರೆ
ಸುತ್ತ ಮನೆಯ ಸಹಾಯ ಕೇಳಿದರೆ
ಯಾರೂ ಬರಲಿಲ್ಲ ನನ್ನ ಬಳಿ
ಕಾರಣ ನಾನು ಹೋಗಿರಲಿಲ್ಲ ಅವರ ಬಳಿ
ಕಾರಣ ನಾನು ಈಗ ಒಬ್ಬ ಮತಾಂಧನಾಗಿದ್ದೆ.....!!!!
ನನಗೀಗ ನನ್ನ ತಪ್ಪಿನ ಅರಿವಾಗಿತ್ತು.
ಮತಾಂಧತೆ ಯಾವುದಕ್ಕೂ ಪರಿಹಾರವಲ್ಲವೆಂದು
ನನ್ನ ತಂದೆ ತಾಯಿ ತೋರಿಸಿ ಕೊಟ್ಟ
ಸೌಹಾರ್ದತೆ ಅದುವೇ ಮನುಜ ಧರ್ಮವೆಂದು...
ನಾನು ನನ್ನ ಮನಸ್ಸಿನಲ್ಲಿ ಯೇ ಖಚಿತಪಡಿಸಿದೆ....
ಇನ್ನೆಂದಿಗೂ ನಾನು ಮತಾಂಧನಾಗಲ್ಲ..
ಚಡ್ಡಿ ಸಂಘಿ ಶನಿ ಶಕುನಿಗಳು ಮತ್ತು
ಮುಸ್ಲಿಮ್ ಮತಾಂಧರು ಉಂಟು ಮಾಡುವ
ಅನ್ಯಾಯ ಅಕ್ರಮ ಗಳನ್ನು
ಹಿಂದು ಮುಸ್ಲಿಮರಾದ ನಾವು ಒಟ್ಟಾಗಿ ಎದುರಿಸೋಣ..
ನಮ್ಮ ತಂದೆ ತಾಯಿ ಹಿರಿಯರು ಕಟ್ಟಿ ಬೆಳೆಸಿದ ಸೌಹಾರ್ದತೆ ಸಾಮರಸ್ಯ ವನ್ನು
ಗಟ್ಟಿ ಗೋಳಿಸೋಣ...
ಹಿಂದು ಮುಸ್ಲಿಮ್ ಮತಾಂದರು ಏನಿದ್ದರೂ ನಾಲ್ಕು ಓಟಿಗಾಗಿ ಅವರ ಕಚ್ಚಾಟ...
ಅದಕ್ಕೆ ಆಸ್ಪದ ಕೊಡಲೇ ಬಾರದು
ಎಂದು ತೀರ್ಮನಿಸಿ ಮನೆಯಿಂದ ಹೊರಕಡೆ
ತಲೆ ಹಾಕಿದೆ...
ಆವಾಗ ಈ ಪಿತ್ತ ನೆತ್ತಿಗೇರಿದ ಮತಾಂದರ ಕ್ರೂರ ಆರ್ಭಟಕ್ಕೆ ಹಿಂದು ಮುಸ್ಲಿಮ್ ಎಲ್ಲರ ಮನೆಗಳೂ ಸುಟ್ಟು ಭಸ್ಮವಾಗಿದ್ದವು...!!!
ಅಬೂಶಝ ಪುತ್ತೂರು
No comments:
Post a Comment