Saturday, October 14, 2017

🌴      🐚🐚🐚🐚🐚    🌴

💥 *ಸಾಲೆತ್ತೂರು* *ಫೈಝಿ ಮತ್ತು*
 *ಕೆಲವು ಸತ್ಯಗಳು*💥

ಮಂಗಳೂರು ರಾಜಧಾನಿ ಹೋಲಿಸಿದರೆ ನಲ್ಲಿ ಖುತ್ಬಾದ ಭಾಷೆ ಬಗ್ಗೆ ಪುಸ್ತಕ ಬರೆಯಲು ಪೇರೋಡ್ ಉಸ್ತಾದ್ ಮತ್ತು ಸಾಲೆತ್ತೂರು ಫೈಝಿ ಮೂರು ದಿನ ತಂಗಿದ್ದಾಗ ಪೇರೋಡ್ ಉಸ್ತಾದ್ ರ ತಂತ್ರಗಾರಿಕೆ,ಕುರುಟು ಬುದ್ದಿ ಅರ್ಥವಾಯಿತು ಎಂಬುದು ಸಾಲೆತ್ತೂರು ಫೈಝಿ ಯ ವಿವರಣೆ.
ಪೊಡಿಕೈ ನಾವು ಮಾಡಬೇಕಾಗುತ್ತದೆ ಎಂದು ಅವರು ಹೇಳಿದರಂತೆ,
ಇಲ್ಲಿ ಅಚ್ಚರಿಯ ಸಂಗತಿಯೆಂದರೆ ಈ ಸಾಲೆತ್ತೂರು ಫೈಝಿ ಪೊಡಿಕೈ ಯಲ್ಲಿ ಎತ್ತಿದ ಕೈ ಎನಿಸಿದವರು.

*ಹಲವರಿಂದ ನೂರು,ಸಾವಿರ ಎಂದು ಪೊಡಿಕೈ ಪಡೆದು ನಂತರ  ಅದನ್ನು ಇಂದಿನ  ತನಕವೂ ಕೊಡದೆ ವಂಚಿಸಿದವರು.*

 ಏನಾದರೊಂದು ಬರೆದರೂ
ಅದಕ್ಕೆ ಅವರಿಗೆ ಪೊಡಿಕೈ ಕೊಡಲೇ ಬೇಕು.
ನಮ್ಮ ನಡುವೆ ಎಷ್ಟೋ ಮಂದಿ ಲೇಖಕರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಬರೆಯುತ್ತಿರುವಾಗ ಸಾಲೆತ್ತೂರು ಫೈಝಿ ಮಾತ್ರ ಪೊಡಿಕೈ ಗಾಗಿ ಮಾತ್ರ ಬರೆದು ಬೆಳಕಿಗೆ ಬಂದವರು.
*ಎಪಿ ವಿಭಾಗದಲ್ಲೇ ಇದ್ದರೂ ಅವರ ವಂಚನೆಯ ಕಾರಣ ಮನಸ್ಸು ದೂರವಾಯಿತೆಂದು ಹಸಿಸುಳ್ಳು ಹೇಳುವ ಸಾಲೆತ್ತೂರು ಫೈಝಿ,*
*ಎಪಿ ವಿಭಾದಿಂದ ದೂರವಾಗಲು ಬೇರೆಯೇ ಕಾರಣ ಇದೆ.*

ಅಲ್ ಅನ್ಸಾರ್ ನಿಂದ ಸಾಲೆತ್ತೂರು ಫೈಝಿ ಯನ್ನು ಪ್ರಕಾಶಕ ಇಬ್ರಾಹಿಂ ಬಾವ ಹಾಜಿ ಕೈಬಿಟ್ಟಾಗ ದಿಕ್ಕು ತೋಚದೆ ಪರಿತಪಿಸಿ ಕೊನೆಗೆ ಎಸ್ ಕೆ ಸಮಸ್ತ ಸೇರುವ ನಾಟಕವಾಡಿದರು.
ಸುನ್ನೀ ಸಂದೇಶ ಪತ್ರಿಕೆಯಲ್ಲಿ "ಎಪಿ ವಿಭಾಗಕ್ಕೆ ಸಾಲೆತ್ತೂರು ಫೈಝಿ ಗುಡ್ ಬೈ" ಎಂದು ವರದಿ ಬರುವಂತೆ ನೋಡಿಕೊಂಡು ಸುನ್ನೀ ಸಂದೇಶ ಸಂಪಾದಕರೂ ಆಗಿ ಕೆಲವೇ ತಿಂಗಳು ಆ ಹುದ್ದೆ ನಿರ್ವಹಿಸಿ ತನಗಾಗದವರನ್ನು ಸುನ್ನೀ ಸಂದೇಶದಲ್ಲಿ ನಿಂದಿಸಿ ತೀಟೆ ತೀರಿಸಿದರು.

*ನಂತರ ಹೊಸಂಗಡಿಯಲ್ಲಿ ನಡೆದ ಸಲಪಿ ಸಮ್ಮೇಳನದಲ್ಲಿ ಸಲಪಿ ಪಂಥ ಸೇರಿ,ಉಲಮಾ ಸಾದಾತ್ ಗಳು,ಇಮಾಮರು ಸಹಿತ ಎಲ್ಲಾ ಮಹಾತ್ಮರನ್ನು ಮನಸೋ ಇಚ್ಚೆ ನಿಂದಿಸಿದರು.*

ಬರುಬರುತ್ತಾ ಸಾಲೆತ್ತೂರು ಫೈಝಿ ಯ ಕುರುಟು ಬುದ್ದಿ ಸಲಪಿ ಗಳಿಗೂ ಅರ್ಥವಾಯಿತು.ಸಲಪಿ ಗಳು ಸಾಲೆತ್ತೂರು ಫೈಝಿ ಯನ್ನು ದೂರ ಮಾಡಿದರು.
ಎರಡು ಮೂರು ಬಾರಿ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಲಾಂಗ್ ಜಂಪ್ ಮಾಡಿ ಬಸವಳಿದಿದ್ದ ಸಾಲೆತ್ತೂರು ಫೈಝಿ ಮುಂದಿನ ವರಸೆ ಬಗ್ಗೆ ಚಿಂತಿಸುತ್ತಿರುವಾಗ ನೆನಪಿಗೆ ಬಂದವರು ಬಹುಕಾಲದ ಒಡನಾಡಿ ಡಿ.ಐ.ಅಬೂಬಕರ್ ಕೈರಂಗಳ!
*ಅತಾವುಲ್ಲಾಹ್ ತಂಙಳ್ ಉದ್ಯಾವರ,ಹಬೀಬುಲ್ಲಾಹ್ ತಂಙಳ್ ಪೆರುವಾಯಿ ಹಾಗೂ ಡಿ.ಐ.ಅಬೂಬಕರ್ ಕೈರಂಗಳ* ರೊಂದಿಗೆ ಸಂಪರ್ಕ ಸಾಧಿಸಿ ಮರಳಿ ಸುನ್ನಿಗೆ ಬಂದು  ಕೊನೆಗೆ ಮದರಂಗಿ ಮಾಸ ಪತ್ರಿಕೆಯ ಸಂಪಾದಕ ರಾಗುವಲ್ಲಿಯೂ ಯಶಸ್ವಿಯಾದರು.
ನಾವಿಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ,ಸಾಲೆತ್ತೂರು ಫೈಝಿ ಮರಳಿ ಸುನ್ನಿಯಾದಾಗ ಅವರ ಕುರುಟು ಬುದ್ದಿ ಎಲ್ಲರಿಗೂ ಗೊತ್ತಿರುವ ಕಾರಣ  ಯಾರೂ ಅವರನ್ನು ಸ್ವೀಕರಿಸಲು ಮುಂದಾಗಿರಲಿಲ್ಲ.
*ಸಾಲೆತ್ತೂರು ಫೈಝಿ ಮರಳಿ ಸುನ್ನಿಗೆ ಬಂದ ವಿಷಯ ತಿಳಿದಾಗ ನಿಷ್ಕಳಂಕ ಹೃದಯದ ಶೈಖುನಾ ಪೇರೋಡ್ ಉಸ್ತಾದ್ ರು ಸುನ್ನೀ ಕಾರ್ಯಕರ್ತರೊಂದಿಗೆ ಹೇಳಿದರು." ನಾವೆಲ್ಲರೂ ಸುನ್ನತ್ ಜಮಾಅತ್ ನಲ್ಲಿ ಕಾರ್ಯಾಚರಣೆ ಮಾಡುವುದು,* *ಎಲ್ಲರಿಗೂ ಸತ್ಪಥ ಸಿಗಬೇಕೆಂಬ  ಉದ್ದೇಶದಿಂದಾಗಿದೆ*
ಆದ್ದರಿಂದ ಸಾಲೆತ್ತೂರು ಫೈಝಿ ಯನ್ನು ನಾವು ಸ್ವೀಕರಿಸಬೇಕು.
ಬಳಿಕ‌ ಪೇರೋಡ್ ಉಸ್ತಾದ್ ರು ಸಾಲೆತ್ತೂರು ಫೈಝಿ ಯನ್ನು ಕೇರಳಕ್ಕೆ ಕರೆಸಿ ಅಲ್ಲಿ ನಡೆದ ಒಂದು ಸುನ್ನೀ ಸಮ್ಮೇಳನದಲ್ಲಿ ಪರಿಚಯಿಸಿ ,ಇವರು ಮರಳಿ ಸುನ್ನತ್ ಜಮಾಅತ್ ಗೆ ಬಂದ ಲೇಖಕರಾಗಿದ್ದಾರೆಂದು, ಫೈಝಿ ಯವರಿಂದ ಆ ವೇದಿಕೆಯಲ್ಲಿ ಭಾಷಣವನ್ನೂ ಮಾಡಿಸಿದ್ದರು.

*ಪೇರೋಡ್ ಉಸ್ತಾದ್ ರ ಉದಾತ್ತ ಗುಣದಿಂದಾಗಿ ಸಾಲೆತ್ತೂರು ಫೈಝಿ ಗೆ ಈ ಅಂಗೀಕಾರ ಲಭಿಸಿತ್ತು.*
ಸಾಲೆತ್ತೂರು ಫೈಝಿ ಯಂತೆ ಕುರುಟು ಬುದ್ದಿ ಇದ್ದರೆ ಇಂತಹಾ ಅವಕಾಶ ಖಂಡಿತ ನೀಡುತ್ತಿರಲಿಲ್ಲ.

*ಸಾಲೆತ್ತೂರು ಫೈಝಿ ಸಲಪಿಯಾದ ಸಂದರ್ಭ.*
 *ಉಳ್ಳಾಲ ದರ್ಗಾದಲ್ಲಿ  ಸಮಾರಂಭವೊಂದು ನಡೆಯುತ್ತಿತ್ತು. ಸಮಾರಂಭದಲ್ಲಿ ಭಾಗವಹಿಸಿದ್ದ ಶತಮಾನದ ಸಮುದ್ಧಾರಕ ಖಮರುಲ್ ಉಲಮಾ ಕಾಂತಪುರಂ ಎ.ಪಿ ಉಸ್ತಾದ್ ರವರು,ಸಾಲೆತ್ತೂರು ಫೈಝಿ ಯನ್ನು ಪ್ರಸ್ತಾಪಿಸುತ್ತಾ ಆ ವ್ಯಕ್ತಿ ಫೈಝಿ ಯಲ್ಲ *ಪೈಸಿ* *ಎಂದು ಕರೆದಿದ್ದರು.*

.ಅದೇ ರೀತಿ ಸಾಲೆತ್ತೂರು ಫೈಝಿ
 ಸಲಪಿ ಸೇರಿದ ಸಂದರ್ಭದಲ್ಲಿ ಕುಡ್ತಮುಗೇರಿನಲ್ಲಿ ನಡೆದ ಬೃಹತ್ ಸು‌ನ್ನೀ ಸಮಾವೇಶದಲ್ಲಿ ಮಾತನಾಡಿದ ತಾಜುಶ್ಶರೀಅಃ ಶೈಖುನಾ ಅಲಿಕುಂಞಿ ಉಸ್ತಾದ್ ರವರು"
*ಪೋಯೋರೆ ಬಿಳಿಕ್ಕಂಡ ಮಣ್ಣ್ ತಿನ್ನ್ ಟ್ಟಿ ಪೋಟ್*"
ಎಂದು ಸಾಲೆತ್ತೂರು ಫೈಝಿ ಬಗ್ಗೆ  ಬಹಿರಂಗವಾಗಿ ಹೇಳಿದ್ದರು.
ಶೈಖುನಾ ಅಲಿ ಕುಂಞಿ ಉಸ್ತಾದ್ ರ ದೀರ್ಘ ದೃಷ್ಟಿ ಇಲ್ಲಿ ನಾವು ಗಮನಿಸಲೇಬೇಕು.
*ಇನ್ನು ಸಾಲೆತ್ತೂರು ಫೈಝಿ ಮರಳಿ ಬಂದರೂ ನಿಜವಾದ ಸತ್ಪಥ ಸರಣಿಯಲ್ಲಿ ಇರಲಾರರು ಎಂಬರ್ಥಲ್ಲಿ ಅಲಿಕುಂಞಿ ಉಸ್ತಾದ್ ಈ ಮಾತು ಹೇಳಿದ್ದರೆಂಬುದು ಕಟು ವಾಸ್ತವ.*

ಎ.ಪಿ.ಉಸ್ತಾದ್ ಪ್ರವಾದಿ ಕೇಶ ತಂದ ಬಳಿಕ ನಾನು ಎ.ಪಿ.ವಿಭಾಗದಿಂದ ದೂರವಾದೆ ಎಂಬುದೂ ಸಾಲೆತ್ತೂರು ಫೈಝಿ ಯ ಹಸಿಸುಳ್ಳು.
ನಿಜವಾಗಿ ಎ.ಪಿ.ಉಸ್ತಾದ್ ಅಬುಧಾಬಿಯ ಖಝ್ ರಜಿ ಯವರಿಂದ ತಂದ ಪ್ರವಾದಿ ಕೇಶದ ಸನದ್ ಈಗಲೂ ಎ.ಪಿ.ಉಸ್ತಾದ್ ರಲ್ಲಿದೆ.ಸನದ್ ಇಲ್ಲ ಎಂಬುದು ಎ.ಪಿ.ವಿಭಾಗವನ್ನು ಕೀಳಾಗಿ ಚಿತ್ರೀಕರಿಸಲು ವಿರೋಧಿಗಳು ಆರಿಸಿಕೊಂಡ ಸುಳ್ಳುಗಳ ಪೈಕಿ ಒಂದು ಸುಳ್ಳು ಮಾತ್ರ.

*ಸಾಲೆತ್ತೂರು ಫೈಝಿ ಯನ್ನು ಮದರಂಗಿ ಪತ್ರಿಕೆ ಯಿಂದ ಡಿ.ಐ.ಅಬೂಬಕರ್ ಕೈಬಿಟ್ಟಾಗ ಮತ್ತೊಮ್ಮೆ ದಿಕ್ಕು ತೋಚದೆ ಫೈಝಿ ಪರಿತಪಿಸಿದರು.*
*ಮದರಂಗಿಯಿಂದ ಸಾಲೆತ್ತೂರು ಫೈಝಿ ಯನ್ನು ಕೈಬಿಡಲು ಕಾರಣವೂ ಇತ್ತು.*
ಸುನ್ನಿ ಗೆ ಮರಳಿ ಬಂದಿದ್ದರೂ ಸಾಲೆತ್ತೂರು ಫೈಝಿ ಯ ಕುರುಟು ಬುದ್ದಿಯ ಕಾರಣ ತಿಳಿದಿದ್ದರಿಂದ ಎಸ್ ಎಸ್ ಎಫ್ ನವರು ಹತ್ತಿರ ಸೇರಿಸಿರಲಿಲ್ಲ.ಆದರೆ ಹಿಂದಿನಿಂದಲೇ ಎಲ್ಲರೊಂದಿಗೂ ಪ್ರಾಮಾಣಿಕತೆ ಯಿಂದ ವ್ಯವಹರಿಸುವ ಡಿ.ಐ.ಅಬೂಬಕರ್ ಕೈರಂಗಳ ,ಕನಿಕರದಿಂದ ಸಾಲೆತ್ತೂರು ಫೈಝಿ ಯನ್ನು ಮದರಂಗಿ ಗೆ ಸಂಪಾದಕರಾಗಿ ಸೇರಿಸಿದ್ದರು.
ಸಾಲೆತ್ತೂರು ಫೈಝಿ ಇದ್ದಾರೆಂಬ ಕಾರಣಕ್ಕೆ ಮದರಂಗಿ ಯನ್ನು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳದ ಎಷ್ಟೋ ಮಂದಿ ಇದ್ದರು.
ಇನ್ನೂ ಸಾಲೆತ್ತೂರು ಫೈಝಿ ಮದರಂಗಿ ಯಲ್ಲೇ ಇದ್ದರೆ ಸುನ್ನಿಗಳ ವಿರೋಧ ಹೆಚ್ಚಾಗಬಹುದೆಂಬುದನ್ನು ಮನಗಂಡ ಡಿ.ಐ.ಅಬೂಬಕರ್ ಕೈರಂಗಳ , *ಝೈನಿ ಉಸ್ತಾದ್*ರ ನ್ನು ಮದರಂಗಿ ಪ್ರಧಾನ ಸಂಪಾದಕರಾಗಿ ನೇಮಕ ಮಾಡಿ ಮದರಂಗಿ ಯನ್ನು  ಸುನ್ನಿಗಳ ಅಧಿಕೃತ ಪತ್ರಿಕೆ ಯಾಗಿಸುವಲ್ಲಿ ಯಶಸ್ವಿ ಯಾದರು.
ಇದನ್ನು ಕಂಡು ಹಲುಬ ತೊಡಗಿದ *ಕುರುಟು ಬುದ್ದಿಯ ಸಾಲೆತ್ತೂರು ಫೈಝಿ*
ತನ್ನ ಮೊಬೈಲ್ ನಲ್ಲಿ ವಾಟ್ಸಪ್ ಕ್ರಿಯೇಟ್ ಮಾಡಿ ,ಆರಂಭಿಕ ಹಂತದಲ್ಲಿ ತೋಕೆ ಸಖಾಫಿ ಉಸ್ತಾದ್ ರನ್ನು ನಿರಂತರವಾಗಿ ನಿಂದಿಸತೊಡಗಿದರು.
ಸಾಲೆತ್ತೂರು ಫೈಝಿ ಯ ಇಂತಹಾ ವಾಟ್ಸಪ್ ಬರಹಗಳು ಎಲ್ಲರಿಗೂ ತಲುಪಿತು.

*ಇರುವ ಸತ್ಯವನ್ನು ಯಾರ ಮುಖ ಮೂತಿ ನೋಡದೆ ತನ್ನ ಸಂಪಾದಕತ್ವದ ಸುನ್ನೀ ವಾಣಿಯಲ್ಲಿ ಬರೆಯುವ ಮತ್ತು ಬಹಿರಂಗವಾಗಿ ವೇದಿಕೆಗಳಲ್ಲಿ ಹೇಳುವ  ತೋಕೆ ಉಸ್ತಾದ್ ರನ್ನು ನಿಂದಿಸುವುದು ವಿರೋಧಿ  ಪಂಗಡದವರಿಗೂ ಬೇಕಿತ್ತು.*

ಸಾಲೆತ್ತೂರು ಫೈಝಿ ಯ ಬರಹಗಳಿಗೆ ವಿರೋಧಿಗಳಿಂದ ಪ್ರಶಂಸೆಗಳ ಸುರಿಮಳೆಯಾಯಿತು.
ತನ್ನ ಬೇಳೆ ಬೇಯಿತೆಂದು ಮನದಟ್ಟು ಮಾಡಿಕೊಂದ ಸಾಲೆತ್ತೂರು ಫೈಝಿ, ಪುಣ್ಯ ಸಮಸ್ತ ಎಂಬ ಹೊಸ ವರಸೆ ಆರಂಭಿಸಿ ಸಮಸ್ತ ದ ಪರವಾಗಿ ವಾಟ್ಸಪ್ ನಲ್ಲಿ ಬರೆಯಲಾರಂಬಿಸಿದರು.
ಇದು  ಎಲ್ಲೆಡೆಗೂ ತಲುಪಿದಾಗ,
ಸಮಸ್ತ ಪರ ವಾಟ್ಸಪ್ ಗ್ರೂಪ್ ಗಳಿಗೆ ಸಾಲೆತ್ತೂರು ಫೈಝಿ ಯನ್ನು ಸೇರಿಸಲಾಯಿತು.
ಎಪಿ ವಿಭಾಗದ ಉಲಮಾಗಳ ಮೇಲೆ ಕಪೋಲ ಕಲ್ಪಿತ ಆರೋಪಗಳನ್ನು ಸೃಷ್ಟಿಸಿ ನಿರಂತರವಾಗಿ ಬರೆಯತೊಡಗಿದ ಫೈಝಿ, ಇನ್ನು ನಾನು ಸಮಸ್ತದ ಅಭಿಮಾನಿ,ನನಗೆ ಯಾವುದೇ ಸ್ಥಾನಮಾನದ ಮೋಹವಿಲ್ಲ ಎಂದು ಒಂದು ಡೈಲಾಗ್ ಹೊಡೆದರು.
ನಂತರ ಹೇಳಬೇಕಿಲ್ಲ ತಾನೇ?ಸಾಲೆತ್ತೂರು ಫೈಝಿ ಸಮಸ್ತ ಬೆಂಬಲಿಗನಾಗಿ ವಾಟ್ಸಪ್ ನಲ್ಲಿ ಮಿಂಚಿದರು.

*ಸಾಲೆತ್ತೂರು ಫೈಝಿ ಸಮಸ್ತ ಕ್ಕೆ ಸೇರಲಿ ಬಿಡಲಿ,*
*ನಮ್ಮ ವಿಷಯ ಅದಲ್ಲ.* ಅವರು ತನ್ನ ಮೊಂಡುವಾದಗಳನ್ನು ಸಮರ್ಥಿಸಲು ಅನುಸರಿಸುವ ವಕ್ರ ದಾರಿಗಳಿವೆಯಲ್ಲಾ,ಅದನ್ನು ಸಮಸ್ತ ದ ಸಹೋದರರೂ ಇತರರೂ ಅರ್ಥಮಾಡಿಕೊಳ್ಳಬೇಕೆಂಬುದು ಈ ಬರಹದ ಉದ್ದೇಶ.

       *ಸಾಮಾಜಿಕ ಚಿಂತಕ*

      🕸🕸🕸🕸🕸🕸

No comments:

Post a Comment