Saturday, October 14, 2017

🌑 ಮದರಸ ಗಳಲ್ಲಿ ಭಯೋತ್ಪಾದನೆ🌑 ,,,,,,,,,,,,,,,,,,,,,,,,,,,,,,,,,,,,,,,,,,,,,,,,,

ಅದ್ಯಾವನೋ ಒಬ್ಬ ಭೂಪ ನಿನ್ನೆ ಒಂದು ವಾಯ್ಸ್ ಮೆಸ್ಸೇಜ್ ಕಳುಹಿಸಿದ್ದ.
ಅದೇನಂದರೆ ಸಮಸ್ತ ದ ಮದರಸಗಳಲ್ಲಿ ಭಯೋತ್ಪಾದನೆ ಕಲಿಸಲಾಗುತ್ತಿದೆ ಎಂದು
ಎಪಿ ಉಸ್ತಾದ್ ಹೈಕೋರ್ಟ್ ಗೆ ವಕೀಲನ ಮುಖಾಂತರ ಅರ್ಜಿ ಸಲ್ಲಿಸಿದ್ದಾರೆ ಎಂದು.
ನಿಜವಾಗಿಯೂ ಇದು ಕೇಳಿದಾಗ ನನಗೆ ನಗು ಬಂತು.
ಏಕೆಂದರೆ ಬಹು ಎಪಿ ಉಸ್ತಾದ್ ಅಂತರರಾಷ್ಟ್ರೀಯ ಮಟ್ಟದಲ್ಲಿ ನಾಯಕನಾಗಿ ಮಿಂಚುತ್ತಿದ್ದು, ಭಾರತದಾದ್ಯಂತ ಸಾವಿರಾರು ಸಂಸ್ಥೆಗಳು ಮತ್ತು ಮದರಸ ಗಳನ್ನು ನಿರ್ಮಿಸಿ ಮುಸ್ಲಿಮ್ ಸಮೂಹಕ್ಕೆ ದಿಶೆ ತೋರಿಸುವ ಅಪ್ರತಿಮ ದಾರ್ಶನಿಕ ವ್ಯಕ್ತಿಯಾಗಿ ಎಲ್ಲರೂ ಬೊಟ್ಟು ಮಾಡುವಾಗ,
ಕರಾವಳಿ ಭಾಗದಲ್ಲಿ ಮಾತ್ರ ಅಸ್ತಿತ್ವ ಇರುವ
ಬೆರಳೆಣಿಕೆಯ ಮದರಸಗಳ ಮೇಲೆ ಭಯೋತ್ಪಾದನೆಯ ಆರೋಪ ಹೊರಿಸಿ ಎಪಿ ಉಸ್ತಾದರಿಗೆ ಸಿಗುವ ಲಾಭವಾದರೂ ಏನು..??
ಇಂತಹ ಜುಜುಬಿ ಕಾರ್ಯಗಳಿಗೆ ಕೈಹಾಕಿ ಅದರ ಹಿಂದೆ ಓಡಲು ಎಪಿ ಉಸ್ತಾದರಿಗೆ ಸಮಯಾವಾದರೂ ಎಲ್ಲಿ.?

ಇನ್ನು ಹಾಗೆ ಏನಾದರೂ ಭಯೋತ್ಪಾದನೆಯ ಆರೋಪ ಎಪಿ ಉಸ್ತಾದರು ವಕೀಲರ ಮುಖಾಂತರ ದಾವೆ ಹೂಡಿದ್ದರೆ ಅದರ ಒಂದು ಕೋಪಿ ಮಾಹಿತಿ ಹಕ್ಕು ಕಾಯಿದೆಯ ಪ್ರಕಾರ ಇಪ್ಪತ್ತೈದು ರೂಪಾಯಿ ಖರ್ಚು ಮಾಡಿದರೆ ಯಾರಿಗೆ ಬೇಕಾದರೂ ಪಡೆಯ ಬಹುದೆಂಬ ಸಾಮಾನ್ಯ ಜ್ಞಾನ ಕೂಡಾ ಆ ವಾಯ್ಸ್ ಭೂಪನಿಗೆ ಇಲ್ಲ ಅಂತ ಕಾಣುತ್ತೆ.
ಮಾತ್ರವಲ್ಲ ಹಾಗೇ ಏನಾದರೂ ಆರೋಪ ಮಾಡಿದ್ದು ಸಾಬೀತಾದರೆ ಅರ್ಜಿದಾರರ ಮೇಲೆ ಮಾನನಷ್ಟ ಮೊಕದ್ದಮೆ ಕೂಡಾ ಹಾಕಿ ಜೈಲು ಕಂಬಿ ಎಣಿಸುವಂತೆ ಮಾಡಬಹುದು.
ತಾಕತ್ತಿದ್ದರೆ ಆ ವಾಯ್ಸ್ ಮೆಸ್ಸೇಜ್ ಕಳುಹಿಸಿ ಫಿತ್ನ ಮಾಡಿದ ಭೂಪ ಅದಕ್ಕೆ ತಯಾರಾಗಲಿ. ಅವನ ವಾಯ್ಸ್ ನ್ನು ಸಾಮಾಜಿಕ ತಾಣಗಳಲ್ಲಿ ಹರಿಯ ಬಿಟ್ಟು ಅವನಿಗೆ ಸಾಥ್ ಕೊಟ್ಟ ಎಲ್ಲಾ ಅಲೆಮಾರಿಗಳು ಜೊತೆ ಸೇರಲಿ.
ಅವನು ಗಂಡಸಾಗಿದ್ದರೆ ಅವನ ವಾಯ್ಸ್ share ಮಾಡಿ ಮಜಾ ಮಾಡಿದ ನಫುಂಸಕರು ಅವರು ನಫುಂಸಕರು ಅಲ್ಲ ಎಂದು ಸಾಬೀತು ಪಡಿಸಲಿಕ್ಕೆ ಇದೊಂದು ಸುವರ್ಣವಕಾಶ..!!!
ಕೇವಲ ಒಂದು ತಾಸು ವರೆಗೆ ಆದರೂ ಈ ವಿಷಯದಲ್ಲಿ ಮಾನ ನಷ್ಟ ಮೊಕದ್ದಮೆ ಹಾಕಿ ಎಪಿ ಉಸ್ತಾದರನ್ನು ಕಂಬಿ ಎಣಿಸುವಂತೆ ಮಾಡಿ ತೋರಿಸಿ.
ಫಿತ್ನ ಮಾಡು ವಾಟ್ಸಪ್ ನಲ್ಲಿ ಹರಿಯ ಬಿಡುವಷ್ಟು ಸುಲಭ ಅಲ್ಲ ತಾನೆ ಅದು.??

ನಿಜವಾಗಿಯೂ ಆ ವಾಯ್ಸ್ ಮೆಸ್ಸೇಜ್ ಕಳುಹಿಸಿದ ಭೂಪ ಅವನು ಶಂಸುಲ್ ಉಲಮಾ ರ ಅಭಿಮಾನಿಯಾಗಲಿಕ್ಕೆ ಸಾಧ್ಯನೇ ಇಲ್ಲ.
ಅವನು ಮುಸ್ಲಿಮರ ಮಧ್ಯೆ ಹೊಸ ಫಿತ್ನ ಮಾಡಿ ಪರಸ್ಪರ ಕಚ್ಚಾಡುವಂತೆ ಮಾಡಿ ಉರಿಯುವ ಬೆಂಕಿಗೆ ತುಪ್ಪ ಹಾಕುವ ನಂ ಒನ್ ಇಬ್ಲೀಸ್...!!
ತನಗೂ ಒಂದು ಎಡ್ರಸ್ ಉಂಟು ಎಂದು ಹೇಳಲಿಕ್ಕಾಗಿ ತಾನು ಸಮಸ್ತ,,ಈಕೆ ಎಂದೆಲ್ಲಾ ಬೊಗಳುತ್ತಾನೆ.
ನಿಜವಾಗಿ ಈಕೆ ಉಸ್ತಾದರಿಗೂ ಇಂತಹ ಫಿತ್ನ ಗಾರರಿಗೂ ಯಾವುದೇ ಸಂಬಂಧ ಇಲ್ಲ.
ಈ ಫತ್ತಾನ್ ನ ವಾಯ್ಸ್ ಮೆಸ್ಸೇಜ್ share ಮಾಡಿ ಮಜಾ ಉಡಾಯಿಸುವ ಎಲ್ಲಾ ಅಲೆಮಾರಿಗಳ ಅವಸ್ಥೆ ಕೂಡಾ ತಥೈವ..!!
ಸಮಸ್ತ, ಸಮಸ್ತ ಶಂಸುಲ್ ಉಲಮಾ ಅಂತ ಬೊಬ್ಬಿರಿಯುದಲ್ಲದೆ ಸಮಸ್ತಕ್ಕೂ ಇವರಿಗೂ ಅಜಗಜಾಂತರ ವ್ಯತ್ಯಾಸ ಇದೆ.
ಇಂತಹ ಫಿತ್ನಗಾರರನ್ನು' ಸಮಸ್ತದವರು' ಎಂದು ಕರೆಯುವುದು ಕುರೂಪಿ ಯಾದ ಹೆಣ್ಣಿಗೆ ಸುಂದರಿ ಎಂದು ಹೆಸರಿಟ್ಟು ಕರೆಯುವುದಕ್ಕೆ ಸಮ.

ಇಷ್ಟಕ್ಕೂ ಈ ಫಿತ್ನಗಾರನಿಗೆ ಈ ವಿಷಯದಲ್ಲಿ ಫಿತ್ನ ಮಾಡಲಿಕ್ಕೆ ಹೇತು ಕೆಲವೊಂದು ಪತ್ರ ರಿಪೋರ್ಟ್.
ಆ ಪತ್ರಗಳಲ್ಲಿ ಎಪಿ ಉಸ್ತಾದರ ಹೆಸರಾಗಲೀ,ಎಪಿ ವಿಭಾಗದ ನಾಯಕರ ಹೆಸರಾಗಲೀ ಇಲ್ಲ.
ಕಡೇ ಪಕ್ಷ ಎಸ್ಸೆಸ್ಸೆಫ್ ನ ಸಾಮಾನ್ಯ ಕಾರ್ಯಕರ್ತನ ಹೆಸರೂ ಕೂಡಾ ಇಲ್ಲ.
2011 ರಲ್ಲಿ ಮುಹಮ್ಮದ್ ಇಕ್ಬಾಲ್ ಎಂಬಾತ ಒಂದು ರಿಟ್ ಅರ್ಜಿ ಸಲ್ಲಿಸಿದ್ದ.
ಆ ಅರ್ಜಿ ಹೀಗಿತ್ತು.👇🏻👇🏻
ರಾಜ್ಯದ ಕರಾವಳಿ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಬ್ಯಾರಿ ಮಾತೃಬಾಷೆಯ ಮುಸ್ಲಿಮ್ ಸಮುದಾಯದ ಮಕ್ಕಳಿಗೆ ಮದರಸಗಳಲ್ಲಿ ಧಾರ್ಮಿಕ ಶಿಕ್ಷಣ ನೀಡಲು ಕೇರಳ ಮೂಲದ ಎರಡು ವಿದ್ಯಾಭ್ಯಾಸ ಮಂಡಳಿಯ ಪಠ್ಯ ಪುಸ್ತಕಗಳನ್ನು ಅಳವಡಿಸಿಕೊಂಡಿದ್ದಾರೆ.
ಈ ಎರಡು ಮಂಡಳಿಯ ಪಠ್ಯಪುಸ್ತಕಗಳನ್ನು ತಮ್ಮ ತಮ್ಮ ಜಮಾತ್ ಗಲ್ಲಿ ಅಳವಡಿಸಿದ್ದರಿಂದ ಆ ಪ್ರದೇಶಗಲ್ಲಿ ಆಗಾಗ ಘರ್ಷಣೆ ನಡೆಯುತ್ತಿದೆ. ಇದು ಸಾಮಾಜಿಕ ಶಾಂತಿಗೆ ಭಂಗ ಉಂಟಾಗುತ್ತಿದೆ.
ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ವಿವಿಧ ಗುಂಪುಗಳ ಸಭೆ ಕರೆಯಲು ತೀರ್ಮಾನಿಸಿ,ಕರ್ನಾಟಕದಲ್ಲಿ ಪ್ರತ್ಯೇಕ ಪಠ್ಯ ಪುಸ್ತಕ ರಚಿಸುವ ಕುರಿತು ಕ್ರಮ ಕೈಗೊಂಡಿತು. ಅದರಂತೆ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯು  ಬಿಗುವಿನ ಪರಿಸ್ಥಿತಿ ತಿಳಿಯಾಗಿಸಲು ಮದರಸಗಳಲ್ಲಿ 2011 ರ
 ಆ 31ರ ವರೆಗೆ ಅಳವಡಿಸಿ ಕೊಂಡು ಬಂದಿರುವ ಪಠ್ಯ ಪುಸ್ತಕವನ್ನು ತಮ್ಮ ತಮ್ಮ ಮದರಸಗಳಲ್ಲಿ ಮುಂದುವರೆಸಿ ಯಥಾ ಸ್ಥಿತಿ ಕಾಯ್ದುಕೊಳ್ಳಲು ಎಲ್ಲಾ ಮದರಸಗಳ ಆಡಳಿತ ಸಮಿತಿಗೆ ತಿಳಿಸಿತ್ತು.
ಅಲ್ಲದೆ ಶಾಂತಿ ವ್ಯವಸ್ಥೆ ಕಾಪಾಡಲು ಪೋಲಿಸ್ ಇಲಾಖೆಗೆ ಕೂಡಾ ನಿರ್ದೇಶಿಸಲಾಗಿತ್ತು.
ಅಲ್ಲದೆ ರಾಜ್ಯದಲ್ಲಿರುವ ಸಾವಿರಕ್ಕೂ ಹೆಚ್ಚು ಮದರಸಗಳಲ್ಲಿ' ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ'
 ಪಠ್ಯ ಕ್ರಮದಂತೆ ಧಾರ್ಮಿಕ ಶಿಕ್ಷಣ ನೀಡಬೇಕೆಂದು  2011ರ ಅಕ್ಟೋಬರ್  11 ರಂದು ಅಲ್ಪ ಸಂಖ್ಯಾತ ಇಲಾಖೆಯ ಅದೀನ ಕಾರ್ಯದರ್ಶಿ ,ಅಬ್ಬಾಸ್ ಶರೀಫ್ ಎಲ್ಲಾ ಮದರಸಗಳಿಗೆ ಸುತ್ತೋಲೆ ಹೊರಡಿಸಿದ್ದರು. ಆದರೆ ಸರಕಾರಿ ಆದೇಶವನ್ನು ಕಡೆಗಣಿಸಿ ಕಾನೂನು ಬಾಹಿರವಾಗಿ ಕರಾವಳಿಯ ಕೆಲವೆಡೆ ಸಮಸ್ತ ಕೇರಳ ಬೋರ್ಡ್ ನ ಪಠ್ಯ ಪುಸ್ತಕ ಅಳವಡಿಸಿ ಶಾಂತಿ ಭಂಗ ಮಾಡುತ್ತಿದ್ದಾರೆ ಎಂದು ಮುಸ್ಲಿಂ ಪೋಷಕರು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರಿಂದ,
2015ರ ಫೆ 02 ರಂದು ಏಕ ಸದಸ್ಯ ಪೀಠವು ಶಾಂತಿ ಕದಡುವ ವ್ಯವಸ್ಥೆ ಸರಿಪಡಿಸುವಂತೆ ತೀರ್ಪು ನೀಡಿತ್ತು.
ಮಾತ್ರವಲ್ಲ ಸುನ್ನೀ ಬೋರ್ಡ್ ನ ಪಠ್ಯ ಕ್ರಮ ಅಳವಡಿಸುವಂತೆಯೂ ತೀರ್ಪಿನಲ್ಲಿ ಹೇಳಲಾಗಿತ್ತು.
ಏಕ ಸದಸ್ಯ ಪೀಠ ಉಲ್ಲೇಖಿಸಿದರೂ ರಾಜ್ಯ ವಕ್ಫ್ ಬೋರ್ಡ್ ,ಆಯಾ ಜಿಲ್ಲಾ ವರಿಷ್ಟಾಧಿಕಾರಿಗಳು, ಸರಕಾರದ ಅದೀನ ಕಾರ್ಯದರ್ಶಿಗಳಾಗಲೀ ಸೂಕ್ತ ಕ್ರಮ ಕೈಗೊಂಡಿಲ್ಲದ್ದಿರಿಂದ ಮನನೊಂದ ಪೋಷಕರಾದ ಇಕ್ಬಾಲ್ ರವರು ಮತ್ತೊಮ್ಮೆ ಉಚ್ಛನ್ಯಾಯಾಲಯದ ದ್ವಿ ಸದನ ಪೀಠದ ಮುಂದೆ ರಿಟ್ ಅರ್ಜಿ ಸಲ್ಲಿಸಿದರು.
ನ್ಯಾಯ ಮೂರ್ತಿಗಳಾದ ಎಸ್ ಕೆ ಮುಖರ್ಜಿ,ಹಾಗೂ ಬಿ ವಿ ನಾಗರತ್ನ ಅವರನ್ನೊಳಗೊಂಡ ಪೀಠವು ,ವಕ್ಫ್ ಬೋರ್ಡ್,ಸರಕಾರ ಅಧೀನ ಕಾರ್ಯದರ್ಶಿ,
ಎಲ್ಲಾ ಮದರಸಗಳಿಗೆ  2015 ಜು 15 ರಂದು ಪುನಃ ನೋಟೀಸ್ ಜಾರಿಗೊಳಿಸಿತ್ತು.
ಆ: 20 ರಂದು ದ್ವಿ ಸದಸ್ಯ ಪೀಠ ಈ ಪ್ರಕರಣವನ್ನು ಆಲಿಸಿ
ಇದೀಗ  ಎರಡು ವಾರದ ಗೆಡು ನೀಡಿದೆ ಎರಡು ವಾರದಲ್ಲಿ ಲಿಖಿತ ವರದಿ ನೀಡುವಂತೆ ಆದೇಶಿಸಿದೆ.
ಈ ಆದೇಶದಿಂದ ಗರಬಡಿದಂತಾದ ನಮ್ಮ ವಾಯ್ಸ್ ಫಿತ್ನಗಾರ ತನ್ನ ಸಿಟ್ಟನ್ನು ಎಪಿ ಉಸ್ತಾದರನ್ನು ತೆಗಳುವ ಮೂಲಕ ತೀರಿಸಲು ಪ್ರಯತ್ನಿಸಿದ್ದಾನೆ.
ಎಪಿ ಉಸ್ತಾದರ ಹೆಸರು ಕನಸಲ್ಲೂ ಕೇಳಿದರೂ ಬೆಚ್ವಿಬೀಳುವ ಕೆಲವು ನರರೋಗಿಗಳು ಅವನಿಗೆ ಸಾಥ್ ನೀಡಿದ್ದಾರೆ.
ಇಂತಹ ನರಪಿಶಾಚಿಗಳ ಕೃತ್ಯವನ್ನು ನೋಡಿ ಯಾರೂ ಕೂಡಾ ಸಮಸ್ತವನ್ನೋ ಅದರ ಆಲಿಮ್ ಗಳನ್ನೋ ತೆಗಳಲು ಹೋಗಬೇಡಿ.
ನಮಗೆ ನಮ್ಮ ನೇತ್ರತ್ವ ಕಲಿಸುವುದು ಕೂಡಾ ಹಾಗೆ ತಾನೇ
ಯಾವುದೇ ಆಲಿಂ ಗಳನ್ನು ತೆಗಳಬೇಡಿ.
ಅದು ಎಪಿ ಯಾದರೂ ಈಕೆ ಯಾದರೂ
ಎಲ್ಲರೂ ದಿಗ್ಗಜ ಆಲಿಂ ಗಳು..
ಅವರ ಮಧ್ಯೆ ಏನಾದರೂ ತರ್ಕ ವಿತರ್ಕ ಇದ್ದರೆ ಅವರೇ ಅದಕ್ಕೆ ಪರಿಹಾರ ಕಾಣಲಿ.
ನಮ್ಮಂತಹ ಜಾಹಿಲ್ ಗಳು ಸೇರಿ ಫಿತ್ನ ಮಾಡುವುದು ಬೇಡ.
ಅಲ್ಲದಿದ್ದರೂ ಒಂದು ಕಾಲದಲ್ಲಿ  ಶಂಸುಲ್ ಉಲಮಾ ಈಕೆ ಉಸ್ತಾದರು ಫಿತ್ನ ಗಾರರ ತೀವ್ರ ಟೀಕೆಗೆ ಗುರಿಯಾಗಿದ್ದರು..!!
ಆ ಫಿತ್ನ ಹೇಗಿತ್ತೆಂದರೆ ಅವರನ್ನು ತೃಶೂರು ಖಾಝಿಯಾಗಿ ನೇಮಕ ಮಾಡಿದಾಗ ಒಬ್ಬ ಹೀಗೆ ಬರೆದಿದ್ದ.
"ಈ ಕೆ ಜಿಲ್ಲಾ ಖಾಝಿ ಹೋಗಿ ವಿಲ್ಲೇಜ್ ಕಾಝಿಯಾಗಲಿಕ್ಕೂ ನಾಲಯಕ್ಕು"..!!
ಶಂಸುಲ್ ಉಲಮಾ ಎಂಬ ಬಿರುದಾಂಕಿತ ನಾಮದಲ್ಲಿ ಪ್ರಖ್ಯಾತಿ ಹೊಂದಿದ ಈ ಕೆ ಉಸ್ತಾದರ ಕುರಿತು ಆ ಮುಸ್ಲಿಯಾರ್ ಹಾಗೆ ಬರೆದಾಗ ಎಲ್ಲರೂ ಅವನಿಗೆ ಮಾನಸಿಕ ಅಂತ ಹೇಳಿ ಸುಮ್ಮನಾಗಿದ್ದರು.
ಕೊನೆಗೆ ಫಿತ್ನ ದ ತೀವ್ರತೆ ಹೇಗಿತ್ತೆಂದರೆ
ಸಮಸ್ತದ ಸ್ಥಾಪನೆಯಾದ ಜಾಮಿಅ ನೂರಿಯಾ ಕಾಲೇಜ್ ನಲ್ಲಿ ಪ್ರಿನ್ಸಿಪಾಲ್ ಆಗಿದ್ದ ಶಂಸುಲ್ ಉಲಮಾರ ನ್ನು ಅಲ್ಲಿಂದ ಹೊರದಬ್ಬಲಾಯಿತು.
ಕೊನೆಗೆ ಸಮಸ್ತ ದ ಅಜೇಯ ಕಾರ್ಯದರ್ಶಿ
ಕಾಸರಗೋಡಿನ ಪೂಚ್ಚಕ್ಕಾಡ್ ಗೆ ಬಂದು ದರ್ಸ್ ನಡೆಸಬೇಕಾಯಿತು...!!
ಇದೆಲ್ಲವೂ ಸಮಸ್ತ ಇಭ್ಭಾಗವಾಗುವ ಮುಂಚೆ ಆಗಿತ್ತು ಎಂಬುವುದನ್ನು ಯಾರೂ ಮೆರೆಯಬಾರದು.
ಅಂದರೆ ಫಿತ್ನಗಾರರು ಎಲ್ಲಾ ಕಾಲದಲ್ಲೂ ತನ್ನ ಕರಾಳ ಹಸ್ತವನ್ನು ಆಲಿಂಗಳ ನೇರ ಹರಿಯ ಬಿಡುತ್ತಿದ್ದರು.
ಇದೀಗ ಸುಮಾರು ನಲ್ವತ್ತು ವರ್ಷವಾಗುತ್ತಾ ಬಂತು 'ಎಪಿ' ಎಂಬ ದ್ವಯ ನಾಮದ ವಿರುದ್ಧ ಫಿತ್ನಗಾರರು ಸಾಲು ಸಾಲಾಗಿ ಬಂದು ತಮ್ಮ ಅಸ್ತ್ರ ವನ್ನು ಬಿಡುತ್ತಾ ಇದ್ದಾರೆ.
ಅದರೆ ಎಪಿ ಉಸ್ತಾದ್ ಅದ್ಯಾವುದರ ಪರಿವೆಯೇ ಇಲ್ಲದೆ ಸದಾ ಮುಗುಳ್ನಗುತ್ತಾ,ಸಮುದಾಯದ ಕಣ್ಣೀರೊಪ್ಪುವ ತನ್ನ ದೌತ್ಯ ನಿರ್ವಹಣೆಯಲ್ಲೇ ತಲ್ಲೀನರಾಗಿದ್ದಾರೆ.
ಆದ್ದರಿಂದಲೇ ರಾಜಾ ರಾಜರಿಂದ ಹಿಡಿದು ದರಿದ್ರವಾಸಿಯ ತನಕ ಎಲ್ಲರೂ ತಮಗೆ ಸಂಕಷ್ಟ ಬಂದಾಗ ಹೋಗಿ ತಟ್ಟುವುದು ಎಪಿ ಉಸ್ತಾದರ ಬಾಗಿಲನ್ನು.
ಅದಲ್ಲವೇ ಒಂದು ಕಾಲದಲ್ಲಿ ಮುಸ್ಲಿಯಾರ್ ಎಂದರೆ ಬೆಲೆಯೇ ಇರಲಿಲ್ಲ.
ಇದೀಗ ನೋಡಿ ನಿನ್ನೆ ರಾಜ್ಯದ ಮುಖ್ಯ ಮಂತ್ರಿ ತನ್ನ ಅಧಿಕೃತ ಕಾರ್ಯಕ್ರಮಗಳನ್ನು ರದ್ದು ಮಾಡಿ, ಮರ್ಕಝ್ ನಲ್ಲಿ  ಎಪಿ ಉಸ್ತಾದರು ಇದ್ದಾರೆಂದು ತಿಳಿದಾಗ  ಬೇಟಿಯಾಗಿ ಆಶಿರ್ವಾದ ಪಡೆಯಲು ಮರ್ಕಝ್ ಗೆ ಬರುತ್ತಾರೆ...!!
ಇದು ನಿನ್ನೆ ನಡೆದ ಘಟನೆ..!!
ಅದನ್ನು ಕಣ್ಣು ತುಂಬಾ ನೋಡಿ ಆಸ್ವಾದಿಸಬೇಕೆಂದರೆ ಒಮ್ಮೆ ಮರ್ಕಝ್ ಗೆ ಭೇಟಿ ಕೊಡಬೇಕು.
ಅದಕ್ಕೂ ಬೇಕಲ್ಲವೇ ತೌಫಿಕ್ ಎಂಬ ಮಹಾ ಭಾಗ್ಯ .
ಸದಾ ಫಿತ್ನ ಮಾಡುವುದರಲ್ಲೇ ತಲ್ಲೀನರಾದರೆ ಅದೆಲ್ಲಿಂದ ಸಿಕ್ಕಿತು ?
ಏನಂತೀರಿ..??
ಅಲ್ಲಾಹು ಹಿದಾಯತ್ ನೀಡಲಿ ಆಮೀನ್
ನನ್ನ ಈ ಬರಹದಲ್ಲಿ ಏನಾದರೂ ಕಠಿಣ ಪದಗಳು ನುಸುಳಿದ್ದರೆ ಎಲ್ಲರಲ್ಲೂ ಕ್ಷಮೆಯಾಚಿಸುತ್ತಾ,
ಸಮಯ ಸಂದರ್ಭ ಇದ್ದರೆ ಮತ್ತೊಮ್ಮೆ ಬೇಟಿಯಾಗೋಣ
ಅದುವರೆಗೂ ✋🏻✋🏻✋🏻
✒ ಅಬೂಶಝ

No comments:

Post a Comment