Saturday, October 14, 2017

🌹🌹  ಎಪಿ ಎಫಕ್ಟ್..!! 🌹🌹

ಅತ್ತ ಇತ್ತ ಸುತ್ತುವರಿದರು ನಾಯಿ
 ನರಿ ತೋಳಗಳಂತೆ ....

ಅವರ ಹೆಸರಾದರೂ  ಜಮ ಮುಜ ಚೇಳಾರಿಗಳಂತೆ...!

ಹಸಿದ ಹೆಬ್ಬುಲಿಗಳಂತೆ ದಾಳಿ ಯಿಟ್ಟರು 'ಸಮಸ್ತ' ವೆಂಬ ಭದ್ರಕೋಟೆಗೆ
ಅದಾಗಿತ್ತು ಕಾಲ ಇಸವಿ ಎಪ್ಪತ್ತರ ಆಸುಪಾಸಿಗೆ..
ಅದೆಲ್ಲವೂ ಅಗ್ನಿ ಪರೀಕ್ಷೆಯಾಗಿತ್ತು ನೈಜ ಸುನ್ನಿಗಳ ಪಾಲಿಗೆ..

ಅದಾಗಲೇ ಎಂಟ್ರಿ ಕೊಟ್ಟಿದ್ದರು ಓರ್ವ ದಿಟ್ಟ ಆಲಿಂ ಒಬ್ಬರು...
'ಎಪಿ' ಎಂಬ ದ್ವಯ ಅಕ್ಷರದಿಂದಲೇ ಅವರು ಪ್ರಸಿದ್ಧರು..!!
ಧಿರತೆಯ ಜೊತೆ ಅವರು ಅರಿವಿನ ಸಾಗರ
ಇಖ್ಲಾಸ್ ಮಾತ್ರವೇ ಅವರ ವಜ್ರಯುಧ..!!

 ಮೂರು ಅಸ್ತ್ರವ ಬಿಟ್ಟರು ಎದುರಾಳಿ ಪಡೆಯ ಮುಂದೆ..
ಮಂಡಿಯೂರಿದರು ಜಮ ಮುಜ ಚೇಳಾರಿ
ಅಲೆಮಾರಿಗಳು ಅವರ ಮುಂದೆ..

ಇದಾಗಿತ್ತು ಮೊತ್ತ ಮೊದಲನೇ ಎಫಕ್ಟ್
ಅದುವೇ 'ಎಪಿ' ಎಂಬ ದ್ವಯ ನಾಮದ ಎಫಕ್ಟ್...!!

👉ಶಂಸುಲ್ ಉಲಮಾ ಎಂಬ ಧೀರನಾಯಕ..!!
ಅವರ ಪಾದದಡಿ ಬಂಡೆಗಲ್ಲಿನಂತೆ...
 ಗಟ್ಟಿಯಾಗಿದ್ದರು 'ಎಪಿ' ಎಂಬ  ಧೀರ ಸೈನಿಕ..!!

ಮಗದೊಮ್ಮೆ ಒಟ್ಟು ಸೇರಿದರು ಜಮ,ಮುಜ ಚೇಳಾರಿ ವರ್ಗ.
ಹೆಣೆದರು ಕುತಂತ್ರವ ಅತೀವೇಗ.
 ಕುತಂತ್ರ ಕ್ಕೆ   ಬಲಿಯಾದರು ಶಂಸುಲ್ ಉಲಮಾವೆಂಬ ಧೀರ
ದ್ರತಿಗೆಡದೆ ನಿಂತರು 'ಎಪಿ'ಎಂಬ ಧೀರಾಧಿ ದೀರ..!!

👉ಸಮರ ಸಾರಿದರು 'ಎಪಿ' ನಿರಂತರ ಶತ್ರುಗಳ ನೇರ.
ಸೆಟೆದೆದ್ದು ನಿಂತರು ಫೀನಿಕ್ಷ್ ಪಕ್ಷಿಯಂತೆ ಸುನ್ನೀ ಸಮೂಹ..!!
ಅದಾಗಿತ್ತು ಕಾಲ  ಇಸವಿ ಎಂಬತ್ತೊಂಬತ್ತು.!!
ಅದಾಗಿತ್ತು ದ್ವಿತೀಯ ಎಫಕ್ಟು..!!
ಅದು ಕೂಡಾ 'ಎಪಿ' ಎಂಬ ದ್ವಯ ನಾಮದ ಎಫಕ್ಟು.!!

ಸುನ್ನೀಸಂ ಭದ್ರವಾಗಿತ್ತು 'ಎಪಿ' ಎಂಬ ದ್ವಯ ಅಕ್ಷರದೊಳಗೆ..
ಅದಕ್ಕೆ ಸಹಿ ಹಾಕಿದ್ದರು 'ಈಕೆ' ಎಂಬ ದ್ವಯ ಅಕ್ಷರ ಜೊತೆಜೊತೆಗೆ..!!

ಸಮಸ್ತ ಒಂದಾಗ ಬೇಕೆಂಬ ನಿಯ್ಯತ್ತು ಅವರಿಗಿತ್ತು.
ಸೂರ್ಯ ತೇಜಸ್ಸಿನ ಅವಸಾನ ಕಾಲದ ಆಶೆ ಕೂಡಾ  ಅದಾಗಿತ್ತು.
ಅದು ಕೂಡಾ 'ಎಪಿ' ಎಂಬ ದ್ವಯ ನಾಮದ ಎಫೆಕ್ಟು..!!

ಅಂದು ಜನಜನಿತವಾಗಿತ್ತು ಮೈಲಾರರು ಜನಸೇವೆಗೆ ನಾಲಯಕ್ಕು.
ಏನಿದ್ದರೂ ಮಸೀದಿಯ ಮೂಲೆಯೇ ಅವರ ಹಕ್ಕು.

ನಿರ್ಮಿಸಿದರು 'ಎಪಿ'
ಮರ್ಕಝ್ ಎಂಬ ಜ್ಞಾನ ಭಂಡಾರದ ಮಹಾ ಸಾಗರ..!!

ಟೊಂಕಕಟ್ಟಿ ನಿಂತಿತು ಜನಸೇವೆಗೆ ಮೈಲಾರ್ ಗಳ ಸಾಲು ಸಾಲು..
ಸಖಾಫಿ ಪಟ್ಟದ ಜೊತೆಗಿತ್ತು ಲಾಯರ್,ಇಂಜಿನಿಯರ್,ಡಾಕ್ಟರ್ ಕಾರುಬಾರು..!!
ಅದಾಗಿತ್ತು ತ್ರತೀಯ ಎಫಕ್ಟು.!!
ಅದು ಕೂಡಾ 'ಎಪಿ' ಎಂಬ ದ್ವಯ ನಾಮದ ಎಫಕ್ಟು..!!

ಅಂದು ಎಲ್ಲರಿಗೂ ಇತ್ತು ಭಯ ರಾಜಕೀಯ ಪುಡಾರಿಗಳದ್ದು...!!

ಆದ್ದರಿಂದಲೇ ಒಬ್ಬ ಪುಡಾರಿ ಒದರಿದ್ದು..
 ತನ್ನ ಕೊನೆಯ ಶ್ವಾಸ ಇರುವವರೆಗೆ ಸುನ್ನಿ ವಿರುದ್ಧ ಹೋರಾಡುವೆನೆಂದು

ಕೊನೆಗೆ ಅವನ ರಾಜಕೀಯ ಜೀವನದ ಅಂಟು ಬಂದಾಯಿತು...!!
ಇದು ಕೂಡಾ 'ಎಪಿ'ಎಂಬ ದ್ವಯದ ಎಫೆಕ್ಟು..!!

👉ಇದೀಗ ರಾಜಕೀಯ ದಿಗ್ಗಜರು ಬಂದು ಕಾಲಿಗೆರಗುವರು..!!
ಮುಂಡಾಸು ಮೈಲಾರ್ ಗಳ ಸಮ್ಮತಕ್ಕೆ ಕಾಯುವರು.!!
ಅಭ್ಯರ್ಥಿಯ ನ್ನು ಕಣಕ್ಕೆ ಇಳಿಸುವಾಗ ಕೇಳುವರು..!
ಮೈಲಾರ್ ಗೆ ಅಸಂತೃಪ್ತಿಯೆಂದರೆ ಕೂಡಲೇ ಹಿಂಪಡೆಯುವರು...!!
ಅದಾಗಿತ್ತು ಐದನೆಯ ಎಫಕ್ಟು..!!
ಅದು ಕೂಡಾ 'ಎಪಿ' ಎಂಬ ನಾಮದ ಎಫೆಕ್ಟು..!!

👉ವಿಶ್ವಾದಾದ್ಯಂತ ನಾಯಕರಲ್ಲಿ ಅವರೊಬ್ಬ  ಉನ್ನತ ನಾಯಕ..!!
ಭಾರತದಲ್ಲಿ  ಕೂಡಾ ಅವರು  ಹೆಮ್ಮೆಯ ನಾಯಕ..!!

👉ಮಂತ್ರಿ ಮಾಗದರು ಸಹಿತ ಎಲ್ಲರಿಗೂ ಬೇಕು ಅವರ ಸಲಹೆ ಸಹಾಯ.
ಕಾಯುತ್ತಿರುತ್ತಾರೆ ಅದಕ್ಕಾಗಿ ಅದೆಷ್ಟೋ ಸಮಯ..!!

👉ಸುರತ್ಕಲ್ ನಲ್ಲಿ 'ಬಾವ ' ರ ವಿರುದ್ಧ ಹೆಣೆದರು ತಂತ್ರ.
ಅದರಲ್ಲಿ ಮುಂಚೂಣಿ ಯಲ್ಲಿದ್ದದ್ದು 'ಎಸ್ಕೆ'ಯ ಮಂತ್ರ.

👉'ಎಪಿ' ಎಂಬ ದ್ವಯ ಅಕ್ಷರ ಹೇಳಿದ ಅಭ್ಯರ್ಥಿ ಯಾದುದರಿಂದಲೇ 'ನಂಜಿ' ತುಂಬಿ ತುಳುಕುತ್ತಿತ್ತು..!!
ಆದ್ದರಿಂದಲೇ 'ಬಾವ' ಜಯಭೇರಿ ಬಾರಿಸಿ ತೋರಿಸಿದರು ತಾಕತ್ತು..!!
ಅದುವೇ 'ಎಪಿ'ಯ ಎಫೆಕ್ಟು..!!

👉ಉಳ್ಳಾಲದಲ್ಲಿ UT ಯ ಎದುರು ನಿಂತಿದ್ದರು ಬರೋಬ್ಬರಿ ಎಂಟು ಗಂಟು..!!
ಎಲ್ಲವೂ ನಂಜು ಅಸೂಯೆಯ ಒಗ್ಗಟ್ಟು..!!

 ಕೊಟ್ಟಿದ್ದರು ತಾಜುಲ್ ಉಲಮಾ ಬಿರುದೊಂದನ್ನು
'ಮಂತ್ರಿ ಖಾದರ್'
ಅದುವೇ ಆಗಿತ್ತು ಖಾದರ್ ನ ಖದರ್..
ಅದು ಕೂಡಾ 'ಎಪಿ' ಎಂಬ ದ್ವಯ ಅಕ್ಷರದ ಎಫೆಕ್ಟು..!!

👉ಭದ್ರಾವತಿಯಲ್ಲಿ ಸೋಲುಂಡರು ಇಬ್ರಾಹಿಂ ಎಂಬ ಸೀ ಎಮ್ಮು.
ಕುಣಿದು ಕುಪ್ಪಳಿಸಿದರು ಜಮ ಮುಜ ಚೇಳಾರಿ ಒಂದೇ ದಮ್ಮು...!!

ಸೋಲುಂಡ ಇಬ್ರಾಹಿಮ್ ಇದೀಗ
 ಉಪ ಸೀ ಎಮ್ಮು..!!

ಎಲ್ಲಾ ಮಂತ್ರಿ ಮಾಗದರ ಕಂಟ್ರೋಲ್ ಅವರ ಕೈ ಯ ರಿಂಗು..!!
ಅದುವೇ 'ಎಪಿ'ಎಂಬ ದ್ವಯ ಅಕ್ಷರದ ಎಫಕ್ಟು..!!

👉ಕೇರಳದಲ್ಲಿ ನಡೆಸಿದರು ಕೇರಳ ಯಾತ್ರೆ.
ಮದ್ಯದ ವಿರುದ್ಧ ಸಾರಿದ್ದರು 'ಎಪಿ' ಸಮರ ಜಾತ್ರೆ.
ಫರ್ಮಾನು ಹೊರಬಂತು ಮದ್ಯ ನಿಷಿದ್ಧ ವಂತೆ..!!
ಎಲ್ಲವೂ ಈ 'ಎಪಿ' ದ್ವಯದ ಎಫಕ್ಟೇ..!!

👉ಕರ್ನಾಟಕದಲ್ಲಿ ಹೊರಟಿತು ಕರ್ನಾಟಕ ಯಾತ್ರೆ
ಮೊಳಗಿತು ಕರ್ನಾಟಕಾದ್ಯಾಂತ ಮಾನವೀಯತೆ ಜಾತ್ರೆ.
ಅದೂ ಕೂಡಾ ಈ 'ಎಪಿ'ಎಂಬ ದ್ವಯ ಅಕ್ಷರದ ಎಫಕ್ಟೇ..!!

ಅಸೂಯೆ ನಂಜು ಕೋರರು ಮಾಡುತ್ತಿರುವರು
'ಎಪಿ ' ಯನ್ನು
ಜೈಲಿಗೆ ತಳ್ಳಲು ಇನ್ನಿಲ್ಲದ ಪ್ರಯತ್ನ.!!
ಚೇಗನ್ನೂರು,ಚೆಂಬರಿಕ ಕೊಲೆ ಆರೋಪದ ಯತ್ನ..!!

ಆದರೆ ಅಲ್ಲಾಹು 'ಎಪಿ' ಗೆ ದಯಪಾಲಿಸಿದ 'ಕಾಬಾ' ಒಳಗೆ ಹೋಗುವ ಮಹಾ ಭಾಗ್ಯದ ರತ್ನ...!!

ಅವರೇ 'ಎಪಿ' ಎಂಬ ದ್ವಯ ಅಕ್ಷರದ ಸುಲ್ತಾನ್ 👍
ಅಶ್ಶೈಖ್ ಅಬೂಬಕರ್ ಅಹಮದ್ ಕಾಂತಪುರಂ ಮಹಾನ್..!!
📝 ಅಬೂಶಝ

No comments:

Post a Comment