Saturday, October 14, 2017

*ಮಾಡಿದ್ದುಣ್ಣು ಮಾರಾಯ  ಎಂದು, ಝೀ ಹೇಳಬೇಕೆ ಹೊರತು ಅಬೂಶಝ ವಿರುದ್ದ ಗೀಚಿ ಏನು ಪ್ರಯೋಜನ?*

ಅಬೂಶಝ ಚೆನ್ನಾಗಿ ಬರೆದಿದ್ದಾರೆ ಸಲಫಿಗಳನ್ನು ತದಕಿ ಅವರ ಕರ್ಮಕಾಂಡಗಳನ್ನು ಬಯಲಿಗೆಳೆದಿದ್ದಾರೆ.
ಅವರ ಹುಟ್ಟು, ಬೆಳವಣಿಗೆ ಮತ್ತು ಅವರು ಹೇಗೆ ಮುಸ್ಲಿಂ ಸಮುದಾಯಕ್ಕೆ ಮಾರಕವಾಗುತ್ತಾರೆಂಬುದನ್ನು ಎಳೆಎಳೆಯಾಗಿ ವಿವರಿಸಿದ್ದಾರೆ.

ಕೊನೆಯಲ್ಲಿ ಸಲಫಿಸಂ ನಲ್ಲಿ ಯಾರೂ ಇಸ್ಲಾಮನ್ನು ಕಾಣಬೇಡಿ ಎಂದು,ಮೀಡಿಯಾ  ಸಹಿತ ಎಲ್ಲಾ ಸಮುದಾಯದವರೊಂದಿಗೆ ಬೇಡಿದ್ದಾರೆ.
ನಿಜವಾಗಿಯೂ ಅವರ ಬರಹ ಸಕಾಲಿಕವಾಗಿತ್ತು.

ಇಸ್ಮಾಈಲ್ ಶಾಫಿ ಎಂಬ ಸಲಫಿ ಮುಖಂಡನ ವಾಯ್ಸ್ ವೈರಲಾದಗಲೇ ನನ್ನ ಮನಸ್ಸು ಹೇಳುತ್ತಿತ್ತು.ಇದರ ಕುರಿತು ಒಳ್ಳೆಯ ಸೃಷ್ಟೀಕರಣ ಸುನ್ನಿಗಳ ಕಡೆಯಿಂದ ಬಂದಿದ್ದರೆ ಉತ್ತಮವಾಗುತ್ತಿತ್ತು.
ಇಲ್ಲದಿದ್ದರೆಈ ಸಲಪಿಗಳ ಕಚ್ಚಾಟದಿಂದ ನಾಳೆ ಮೀಡಿಯಾಗಳು ಇಡೀ ಮುಸ್ಲಿಮ್ ಸಮುದಾಯವನ್ನು  ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ  ಇಸ್ಲಾಮನ್ನು ಫ್ರೈ ಮಾಡುತ್ತದೆ.

ನಾನು ಎಣಿಸಿದಂತೆ ಆಯಿತು.
ಸುನ್ನಿಗಳ ಪರವಾಗಿ ಅಬುಶಝ ರ ಲೇಖನ ಬಂತು.
ಮೀಡಿಯಾಗಳು ಇಸ್ಲಾಮನ್ನು ಗುರಿಯಾಗಿಸದೆ  ಕೇವಲ ಸಲಫಿಸಂ ನ್ನು ಮಾತ್ರ ಟಾರ್ಗೇಟ್ ಮಾಡಿ ವರದಿ ಮಾಡಿತು.

ನಿಜವಾಗಿಯೂ ಸಲಫಿಗಳು ಬೆತ್ತ  ಕೊಟ್ಟು ಪೆಟ್ಟು  ಪಡಕೊಂಡರು.
ಪೆಟ್ಟು ಬೀಳಬೇಕಾದಲ್ಲಿ ಬಿದ್ದಿದೆ.ಇನ್ನಾದರೂ ಪರಸ್ಪರ  ಕಚ್ಚಾಟ ನಿಲ್ಲಿಸಿ ಸುದುರಾಗುವರು ಎಂದು ಬಾವಿಸೋಣ.

ಇದೀಗ ಎಲ್ಲರಿಗೂ ಮನವರಿಕೆಯಾಗಿದೆ,ಸಲಫಿಸಂ ಅಂದರೆ ಅದು ನೈಜ ಇಸ್ಲಾಂ ಅಲ್ಲ,ಬದಲಾಗಿ  ಅದೊಂದು ಇಸ್ಲಾಮಿನ ಹೆಸರೇಳಿಕೊಂಡು ಕಾರ್ಯಚರಿಸುವ ತೀವ್ರ ಇಸ್ಲಾಂ ಸಂಘ.ಅವರಿಗೂ ಇಸ್ಲಾಮಿಗೂ ನಂಟಿಲ್ಲ ಎಂದು.

ಆದರೆ ಝೀ ಎಂಬ ಹೆಸರಿನ ಸಲಫಿ, ಸಲಫಿಸಂ ನ್ನು ನೈಜ ಇಸ್ಲಾಂ ಮಾಡುವ ಹುನ್ನಾರಕ್ಕೆ  ಇಳಿದು ಜನರೆಡೆಯಲ್ಲಿ  ಕನ್ಫ್ಯೂಸ್ ಮಾಡಲಿಕ್ಕೆ  ಪ್ರಯತ್ನಿಸಿದ.
  ಫಲಿಸಲಿಲ್ಲ ಎಂದು ಮಾತ್ರ.

ಅವನು ತನ್ನ ಬರಹದಲ್ಲಿ *ಮುಸ್ಲಿಂ  ಸಮುದಾಯವನ್ನು ISIS ಎಂಬ ಇಸ್ರೇಲ್ ನಿರ್ಮಿತ  ಸಂಘಟನೆಯೊಂದಿಗೆ ಸೇರಿಸಿ ಅಬೂಶಝ ಬರೆದ ಲೇಕನ ಖಂಡನಾರ್ಹ ಎಂದು ಗೀಚಿದ್ದಾನೆ.*

ಇದು ಝಿ ಸಳಪಿಯ ಸುಳ್ಳು‌ ಪ್ರಚಾರ.
ಅಬೂಶಝ ಮುಸ್ಲಿಂ ಸಮುದಾಯಕಕೆ ISIS ನಂಟು ಇದೆ  ಎಂದು ಹೇಳಲೇ ಇಲ್ಲ.

ಸಲಫಿ ಮುಖಂಡ ಇಸ್ಮಾಈಲ್ ಶಾಫಿಯ ಓಡಿಯೋ ಮತ್ತು ಇನ್ನಿತರ  ಪುರಾವೆ  ಒದಗಿಸಿ ಅದನ್ನು ಮುಂದಿಟ್ಟು ಸಲಫಿ ಗಳಿಗೆ ISIS ಸಂಭಂದ ಇದ್ದುದನ್ನು ತನ್ನ ಬರಹದಲ್ಲಿ ಸಮರ್ಥಿಸಿದ್ದಾರೆ.

ಮಾತ್ರವಲ್ಲ ಝೀ ಮತ್ತೊಂದು ವಿಷಯ ಪ್ರಸ್ತಾಪಿಸಿದ್ದಾನೆ.👇🏻

APಸುನ್ನಿ ವಿಭಾಗ ಮತ್ತು ಸಲಫಿಗಳ ಮದ್ಯೆ ಪ್ರವಾದಿ (ಸ)  ರವರ ಕೂದಲು ವ್ಯಾಪಾರ,40ಕೋಟಿ, ಕುಪ್ಪಸ್ವಾಮಿ  ದರ್ಗಾ ,ಮುಂತಾದ ವಿಷಯಗಳಲ್ಲಿ ಇರುವ ಕೋಪದಿಂದ ಅಬೂಶಝ ಇನ್ನಿಲ್ಲದ  ಆರೋಪ ಮಾಡಿದ್ದಾರೆಂದು ಹೇಳಿದ್ದಾನೆ.
ಅದೂ ಕಡಾ ಸುಳ್ಳು.

ಕಾರಣ ಇದೆಲ್ಲಾ  ಇತ್ತೀಚೆಗಿನ ಘಟನೆಗಳು.
ಇದಕ್ಕಿಂತ ಮುಂಚೆಯೇ ಸಲಫಿಗಳ ವಿರುದ್ದ ನಮ್ಮ ಉಲಮಾಗಳು ಸಮರಸಾರಿದ್ದಾರೆ.
ಖುದ್ದು ಎಪಿ ಉಸ್ತಾದರ ಹೇಳಿಕೆಯೇ ಇದೆ.👇🏻
*"ಜಗತ್ತಿನಾದ್ಯಂತ ನಡೆಯುವ ಭಯೋತ್ಪಾದನಾ ಕೃತ್ಯಕ್ಕೆ  ಕುಮ್ಮಕ್ಕು ನೀಡುವವರು ಸಲಫಿಯಾದಿ ನೂತನವಾದಿಗಳು"*

ಇದೀಗ ವರ್ಷವಿಡೀ ಸಾಮಾಜಿಕ  ತಾಣಗಳಲ್ಲಿ ಫಿತ್ನ ಫಸಾದ್ ಮೆಸ್ಸೇಜ್ ಮಾಡಿ ಮುಸ್ಲಿಮರನ್ನು  ಪರಸ್ಪರ ಎತ್ತಿಕಟ್ಟುತ್ತಿದ್ದ ಝೀ ದೊಡ್ಡ ಸೊಬಗನಂತೆ ಸಮಾಧಾನದ ಫೋಸ್ ಕೊಟ್ಟು ತಾನು ಸಂಘಿಗಳ ವಿರುದ್ದವೆಂಬ ನಾಟಕವಾಡುತ್ತಾ  ಬಂದಿದ್ದಾನೆ.

ಅಬೂಶಝರ ವಿರುದ್ದ ಕತ್ತಿಮಸೆಯುವ  ಮುನ್ನ ಝೀ ತನ್ನ ನಾಯಕ ಇಸ್ಮಾಈಲ್ ಶಾಫಿ ಯ ಹೇಳಿಕೆಯನ್ನು ಖಂಡಿಸಲಿ...

ಅವತ್ತು ಇದೇ ಇಸ್ಮಾಈಲ್ ಶಾಫಿ ಬಾಬಾಬುಡನ್  ಗಿರಿ ದರ್ಗಾವನ್ನು ಸಂಘಪರಿವಾರಕ್ಕೆ ಬಿಟ್ಟುಕೊಡಬೇಕೆಂಬ ಹೇಳಿಕೆ ನೀಡಿ ಚಡ್ಡಿಗಳ ಪಾದ ನೆಕ್ಕಿದಾಗ  ಝೀ ಯ ಅಂಟು ಬಂದಾಗಿತ್ತಾ?

ಆವಾಗ ಝೀ ಯ ಸಮುದಾಯ ಪ್ರೇಮ ಎಲ್ಲಿ ಹೋಗಿತ್ತು?

*ನಮ್ಮೆಡೆಯಲ್ಲಿರುವ ತರ್ಕಗಳನ್ನು ನಮ್ಮೆಡೆಯಲ್ಲೆ  ಮುಗಿಸಬೇಕಂತೆ*
👆ಇದು ಝೀ ಯ ಡೈಲಾಗ್.

ಹಾಗಾದರೆ ಇಷ್ಟು ವರ್ಷ SSF ನ್ನು MRM ಆಗಿ ಚಿತ್ರೀಕರಿಸುತ್ತಾ ಸುನ್ನೀ ಮುಸ್ಲಿಮರ ಆಚಾರ ವಿಚಾರಗಳನ್ನು ಗೇಲಿಮಾಡುತ್ತಾ ಸಾಮಾಜಿಕ ತಾಣದಲ್ಲಿ ತಾನು ಗೀಚಿದನ್ನು ಅವನು  ಮರೆತು  ಹೋದನೆ?
ಅದನ್ನು ಸಂಘಿಗಳು ಓದುವುದಿಲ್ಲವೆ?
ಮುಸ್ಲಿಮರು ಐಕ್ಯ ಇಲ್ಲ ಎಂಬುದು ಅವರಿಗೆ ತಿಳಿಯುವುದಿಲ್ಲವೆ?
ನಮ್ಮೆಡೆಯಲ್ಲಿರುವ ತರ್ಕಗಳನ್ನು ನಮ್ಮೆಡೆಯಲ್ಲೆ ಹೇಳಿ ಮುಗಿಸದೆ  ಎಲ್ಲವನ್ನು  ಸಾಮಾಜಿಕ ತಾಣದಲ್ಲಿ ಬಡಿಸುವಾಗ  ಝೀ ಮೈಂಡ್ ಝೀರೋ ಆಗಿತ್ತಾ?

ಆವಾಗ ನಮ್ಮೆಡೆಯಲ್ಲಿರುವ ತರ್ಕಗಳ ಲಾಭ ಪಡೆಯಲು  RSS ಹೊಂಚು ಹಾಕುತ್ತಿರುವ  ವಿಷಯ ಗೊತ್ತಿಲ್ಲದೆ  ಹೊಗಿತ್ತಾ?

ಇದೀಗ ಸಲಫಿಸಂನ ಅವತಾರ ನೋಡಿ ಎಲ್ಲರೂ ಕ್ಯಾಕರಿಸಿ  ಉಗುಳುವುದನ್ನು ನೋಡಿದಾಗ ಸಮುದಾಯದ ಅನುಕಂಪ ಗಿಟ್ಟಿಸಲು  RSS ಎಂಬ ಬೊಮ್ಮನ್ನು  ತೊರ್ಪಡಿಸುವ ನಿನ್ನ  ನಾಟಕವನ್ನು  ತಿಳಿಯದಷ್ಟು ಮೂರ್ಖರಲ್ಲ ಸುನ್ನಿಗಳೆಂದು ನೆನಪಿಸುತ್ತೇನೆ.

ವ್ಯಕ್ತಿಯೊಬ್ಬರ ಉತ್ತಮ ಕಮಂಟ್ ನಾನು ನೋಡಿದೆ ಅದು ಹೀಗಿತ್ತು👇🏻

*ಚರಿತ್ರೆಯನ್ನು  ಅರಗಿಸಿಕೊಳ್ಳಲು ಕಷ್ಟವಾಗಬಹುದು....*

*ಆದರೆ ಸಲಫಿಸಂ ನ ರಕ್ತಸಿಕ್ತ  ಚರಿತ್ರೆ ಮುಚ್ಚಿಡಲು ಸಾದ್ಯವಿಲ್ಲ....*

*ಅಷ್ಟೊಂದು  ಭೀಕರತೆಯಾಗಿದೆ ಸಲಫಿಗಳ ಪ್ರಭೋಧನೆಯೆಂಬುದು....*

*ಇಸ್ಲಾಮಿನ ಹಲವು ಚರಿತ್ರಾ ಸ್ಥಳಗಳ ನಾಶವು ಇವರಿಂದ ನಡೆದಿದೆ....*

*ಮೌನವಾದರೆ ನಾಳೆ ಈಜಿಪ್ಟ್,ಶಿರಿಯಾ,ಬಗ್ದಾದ್,ಸೌದಿ ಅರೇಬಿಯಾ ಸಹಿತ 58ರಾಷ್ಟ್ರಗಳಲ್ಲಿ ಮುಸ್ಲಿಮರ ಹತ್ಯೆ ಮುಸ್ಲಿಮರಿಂದಲೇ ನಡೆಯುವ ರಕ್ತಸಿಕ್ತ  ಅಧ್ಯಾಯಕ್ಕೆ ಭಾರತೀಯ ಮುಸ್ಲಿಮರು ಮುಸ್ಲಿಮರಿಂದಲೇ ಬಲಿಯಾಗಬೇಕಾದೀತು...!*

*ನ್ಯಾಯೀಕರಿಸಲು ಯತ್ನಿಸಿ  ಅನಾಹುತಗಳ ಬೆಂಬಲಿಗರಾಗಬೇಡಿ..!*

✍ *ಅಬ್ದುಲ್ ಸಲೀಂ ಕನ್ಯಾನ*

No comments:

Post a Comment