'ಎಪಿ' ಉಸ್ತಾದ್ ಬಿಜೆಪಿಯ ಅಂಬಾಸಿಡರಂತೆ ಹೌದಾ!!❓
--------------------------------------------
ಅದೊಂದು ಪುಟ್ಟ ಊರು. ಹಲವಾರು ನ್ಯಾಯಬೆಲೆ ಅಂಗಡಿಗಳು ಅಲ್ಲಿವೆ. ಅದರಲ್ಲಿ ಖಾದರಿಚ್ಚರವರ ಬದ್ರಿಯಾ ಸ್ಟೋರ್ ವರದರಾಜರವರ ಲಕ್ಷ್ಮೀ ಸ್ಟೋರ್, ರೋಬರ್ಟ್ ರವರ ಮಾಲಕತ್ವದಲ್ಲಿರುವ ಡಿಶೋಝ ಸ್ಟೋರ್ ಸಹಿತ ಐದಾರು ಅಂಗಡಿಗಳಿವೆ.
ಅವರಲ್ಲಿ ಯಾರು ದರಕಡಿತದಲ್ಲಿ ಮಾರಾಟ ಮಾಡುತ್ತಾರೋ ಅಲ್ಲಿಗೆ ನಾವು ಹೋಗುತ್ತೇವೆ.ಅಲ್ಲಿ ಹಿಂದು ಮುಸ್ಲಿಂ ಎಂಬ ವ್ಯತ್ಯಾಸ ನಾವು ನೋಡುವುದಿಲ್ಲ.
ಅಲ್ಲಿಂದ ಖರೀದಿಸಿದ ಹತ್ತು ಕಿಲೋ ಅಕ್ಕಿಯನ್ನು ಚೀಲದಲ್ಲಿ ಹಾಕಿ ನನ್ನ ಬಲ ಕೈಯಲ್ಲಿ ಹಿಡಿದು ಮನೆ ಕಡೆ ಹೆಜ್ಜೆ ಹಾಕುತ್ತೇನೆ.ನನ್ನ ಇರಾದೆ ಇಷ್ಟೇ. ಅಕ್ಕಿ ನನ್ನ ಮನೆಗೆ ಸೇಫ್ ಆಗಿ ತಲುಪಬೇಕು.ಅದಕ್ಕಾಗಿ ನಾನೀಗ ಬಲಕೈ ಯ್ಯೂಝ್ ಮಾಡುತ್ತಾ ಇದ್ದೇನೆ. ಸ್ವಲ್ಪ ದೂರ ಕ್ರಮಿಸಿದಾಗ ನೋವು ಆಯಾಸವಾಗಿ ಬಲ ಕೈಯ ಶಕ್ತಿ ಕ್ಷೀಣಿಸಿ,ಅದು ನನ್ನೊಂದಿಗೆ ಸಹಕರಿಸುವುದಿಲ್ಲವೆಂದು ಕಂಡಾಗ ಅಕ್ಕಿಚೀಲವನ್ನು ನನ್ನ ಎಡ ಕೈಗೆ ಬದಲಿಸುತ್ತೇನೆ. ಕಾರಣ ನನ್ನ ಉದ್ದೇಶ ಅಕ್ಕಿ ಮನೆಗೆ ತಲುಪಬೇಕು ಅಷ್ಟೇ.
ಅದರಲ್ಲಿ ಎಡ/ಬಲ ಎಲ್ಲವೂ ಸಮ.
ಯಾರು ನನ್ನೊಂದಿಗೆ ಸಹಕರಿಸುತ್ತಾರೋ ಅವರನ್ನು ಯ್ಯೂಝ್ ಮಾಡುತ್ತೇನೆ.
ಎಡ/ಬಲ ಎರಡೂ ಸಹಕರಿಸುವುದಿಲ್ಲವೆಂದು ಕಂಡು ಬಂದರೆ ಒಂದು ವಾಹನ ಹಿಡಿದಾದರೂ ಅಕ್ಕೀ ಚೀಲವನ್ನು ಮನೆಗೆ ತಲುಪಿಸುವಲ್ಲಿ ನಾನು ಜಾಗೃತಿ ವಹಿಸುತ್ತೇನೆ.
ಕಾರಣ ನನ್ನ ಉದ್ದೇಶ ಒಂದೇ...
'ಹತ್ತು ಕಿಲೋ ಅಕ್ಕಿ ನನ್ನ ಮನೆ ತಲುಪಬೇಕು'
ಇದೇ ರೀತಿಯಾಗಿದೆ ಎಸ್ಸೆಸ್ಸೆಫ್ ಗೆ ನೇತೃತ್ವ ಕೊಡುವ ಸುನ್ನಿಗಳು ರಾಜಕೀಯವನ್ನು ಯ್ಯೂಝ್ ಮಾಡುವುದು.
ಸಮಾಜಕ್ಕೆ ಸಮುದಾಯಕ್ಕೆ ವಿಶೇಷವಾಗಿ ಸುನ್ನತ್ ಜಮಾತಿನ ಚಟುವಟಿಕೆಗಳ ಒಳಿತಿಗಾಗಿ ಯಾರು ಇಲ್ಲಿ ಸಹಕರಿಸುತ್ತಾರೋ ಅವರೊಂದಿಗೆ ನಾವು ಸಹಕರಿಸುತ್ತೇವೆ. ನಮ್ಮ ಉದ್ದೇಶ ಒಂದೇ ಸಮುದಾಯ ಸಬಲೀಕರಣಗೊಳ್ಳಬೇಕು. ಅವರ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ಶಕ್ತಿ ತುಂಬ ಬೇಕು.ಸುನ್ನತ್ ಜಮಾತ್ ಬಲಿಷ್ಠವಾಗಿಯೇ ನೆಲೆಯೂರಬೇಕು.
ಜೊತೆಗೆ ಸಮಾಜದ ಎಲ್ಲಾ ವರ್ಗದವರಿಗೆ ಒಳಿತು ಸಿಗಬೇಕು. ಭಯೋತ್ಪಾದನೆ ಮತ್ತು ಫ್ಯಾಸಿಸಂ ನಿರ್ಮೂಲನೆಯಾಗಬೇಕು.
ಇಂತಹ ಉದಾತ್ತವಾದ ಹಲವಾರು ಉದ್ದೇಶಗಳನ್ನಿಟ್ಟು ಕೊಂಡು ಎಸ್ಸೆಸ್ಸೆಫ್ ಕಾರ್ಯಚರಿಸುವಾಗ, ನಮ್ಮ ಈ ಉದ್ದೇಶದೊಂದಿಗೆ ಯಾರು ಸಹಕರಿಸುತ್ತಾರೋ ಅವರನ್ನು ನಾವು ಪರಿಗಣಿಸುತ್ತೇವೆ ಅಲ್ಲಿ ಪಕ್ಷಬೇಧ ಇಲ್ಲ.ಪಕ್ಷಪಾತವೂ ಇಲ್ಲ.
ಇಂತಹ ವಿಶಾಲವಾದ ಉದ್ದೇಶವನ್ನಿಟ್ಟು ಕೊಂಡು ಬಹು ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಮತ್ತು ಅವರು ನೇತೃತ್ವ ಕೊಡುವ ಸಂಘಟನೆಗಳು ಭಾರತದ್ಯಾದಂತ ಕಾರ್ಯಚರಿಸುವುದರಿಂದಲೇ ದೇಶದ ಎಲ್ಲಾ ರಾಜಕೀಯ ಪಕ್ಷದ ನೇತಾರರು ಎಪಿ ಉಸ್ತಾದರನ್ನು ಬೇಟಿಯಾಗುತ್ತಾರೆ.ಮಾತ್ರವಲ್ಲ ಉಸ್ತಾದರ ಜೊತೆ ಪೋಟೋ ತೆಗೆಯಲಿಕ್ಕೆ ಅವರು ಪೈಪೋಟಿ ನಡೆಸುತ್ತಾರೆ.ಅದರಲ್ಲಿ ಕಾಂಗ್ರೆಸ್ ,ಬಿಜೆಪಿ,ದಳ,ಮುಸ್ಲಿಂ ಲೀಗ್. ಮಾರ್ಕಿಸ್ಟ್ ಎಂಬ ಭೇಧಬಾವವಿಲ್ಲ.
ಆದರೆ ಕೆಲವರಿಗೆ ಒಂದು ಹಠ, ಉಸ್ತಾದರು ನಮ್ಮ ಪಕ್ಷದ ನೇತಾರರೊಂದಿಗೆ ಮಾತ್ರ ಫೋಟೋಗೆ ಫೋಸ್ ಕೊಡಬೇಕೆಂದು, ಬೇರೆ ಪಕ್ಷದ ನಾಯಕರೊಂದಿಗಿರುವ ಉಸ್ತಾದರ ಪೋಟೋ ಕಂಡರೆ ಅವರಿಗೆ ಅಲರ್ಜಿ!
ಆದ್ದರಿಂದಲೇ ಒಂದೆರಡು ವರ್ಷಗಳ ಮುಂಚೆ ಉತ್ತರ ಕರ್ನಾಟಕದ ಯಾವುದೋ ಒಂದು ಕಾರ್ಯಕ್ರಮದಲ್ಲಿ ಬಿಜೆಪಿ ಯ ಮುಖಂಡರೊಬ್ಬರ ಜೊತೆ ಇದ್ದ ಫೋಟೋವನ್ನು ಹೆಕ್ಕಿ ತಂದು ಸಾಮಾಜಿಕ ತಾಣದಲ್ಲಿ ಹಾಕಿ
"ಕಾಂತಪುರಂ ಬಿಜೆಪಿ ಗೆ" ಎಂದು ಅಪಪ್ರಚಾರ ಮಾಡುತ್ತಾರೆ.
ಭಾರತದ ಪ್ರಧಾನ ಮಂತ್ರಿ ಮೋದಿ ಉದ್ಘಾಟಿಸಿದ ಸೂಫಿ ಸಮ್ಮೇಳನದಲ್ಲಿ ಎಪಿ ಉಸ್ತಾದ್ ಭಾಗವಹಿಸಿದ ಫೋಟೋ ಹಾಕಿ
"ಕಾವಿ ಮೌಲಾನ" ಎಂದು ತಲೆಬರಹ ಹಾಕುತ್ತಾರೆ.
ಇದೀಗ ಕೇರಳದಲ್ಲಿ ವಿಧಾನಸಭೆ ಚುನಾವಣೆ ಘೋಷಿಸಿದ್ದರಿಂದಲೇ ಎಲ್ಲಾ ಪಕ್ಷದ ಅಭ್ಯರ್ಥಿಗಳು ಉಸ್ತಾದರ ಆಶಿರ್ವಾದ ಮತ್ತು ಬೆಂಬಲ ಕೇಳುತ್ತಾ 'ಮರ್ಕಝ್' ಗೆ ಸಾಲುಸಾಲಾಗಿ ಬರುತ್ತಿರುವ ದೃಶ್ಯ ಸರ್ವೆ ಸಾಮಾನ್ಯವಾಗಿದೆ.
ಕೇರಳದ ಪತ್ರಿಕೆಗಳು ಅದಕ್ಕೆ ವಿವಿಧ ಶೈಲಿಯ ತಲೆಬರಹ ಹಾಕಿ ವರದಿ ಮಾಡುತ್ತಿದೆ.
'ಆತ್ಮೀಯಚಾರ್ಯಂಡೆ ಪಿಂದುಣ ತೇಡಿ ಸ್ಥಾನಾರ್ಥಿಗಳ್ ಒರೇ ವೇದಿಯಿಲ್'
'ಸ್ಥಾನರ್ಥಿಗಳ್ಕ್ ಕಾಂತಪುರತ್ತಿಂಡೆ ಆಶಿರ್ವಾದವುಂ ಅನುಗ್ರಹವುಂ'
' ಪಿಂದುಣ ತೇಡಿ ಸ್ಥಾನರ್ಥಿಗಳ್ ಮರ್ಕಝಿಲ್ ಎತ್ತಿ"
(ಇದು ಕೆಲವೊಂದು ಸ್ಯಾಂಪಲ್ ಇದರಲ್ಲಿ ಪಕ್ಷ ಭೇಧವಿಲ್ಲದೆ ಎಲ್ಲಾ ಪಾರ್ಟಿಯ ಅಭ್ಯರ್ಥಿಗಳು ಬರುತ್ತಾ ಇದ್ದಾರೆ)
ಅಂದರೆ ಎಲ್ಲಾ ಅಭ್ಯರ್ಥಿಗಳಿಗೂ ಎಪಿ ಪಂಗಡದ ಓಟಿನ ಮೇಲೆ ಕಣ್ಣು ಇಟ್ಟಿರುವಂತೆಯೇ ಬಿಜೆಪಿ ಅಭ್ಯರ್ಥಿಯಾದ ಬಾದುಷಾ ತಂಙಳ್ ಎಂಬವರು ತನ್ನನ್ನು 'ಎಪಿ' ವಿಭಾಗದವರು ಬೆಂಬಲಿಸುವರೆಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಅದನ್ನೇ ಗುರಾಣಿಯಾಗಿ ಹಿಡಿದು ಕೆಲವರು ಬಾದುಷಾ ತಂಙಳ್ ಎಪಿ ಉಸ್ತಾದ್ ನಿಲ್ಲಿಸಿದ ಬಿಜೆಪಿ ಅಭ್ಯರ್ಥಿಯೆಂಬಂತೆ ಬಿಂಬಿಸಿ, ಅಪಪ್ರಚಾರ ಮಾಡಿದ್ದೂ ಅಯಿತು.!
ಅಂತೂ ಇಂತೂ ಅಪಪ್ರಚಾರದ ಮೂಲಕ ಕೆಲವರು ಎಪಿ ಉಸ್ತಾದರನ್ನು ಬಿಜೆಪಿ ಯ ಅಂಬಾಸಿಡರಾಗಿ ಘೋಷಿಸುತ್ತಿರುವಂತೆಯೇ ಇತ್ತ ಎಪಿ ಉಸ್ತಾದ್ ಫ್ಯಾಸಿಸಂ ಗೆ ವಿರುದ್ದವಾಗಿ ಎಲ್ಲರೂ ಮತಚಲಾಯಿಸಬೇಕೆಂದು ಕರೆ ನೀಡುತ್ತಾ,ಅಪಪ್ರಚಾರ ಮಾಡುವವರ ವಿರುದ್ದ ಛಾಟಿಯೇಟು ಬೀಸಿದ್ದಾರೆ.
ಎಲ್ಲಾ ರಾಜಕೀಯ ಪಕ್ಷದವರು ಒಂದಂತು ತಿಳಿದಿರುವುದು ಒಳಿತು.
ಎಪಿ ಉಸ್ತಾದರನ್ನು ಅವರು ನೇತೃತ್ವ ಕೊಡುವ ಸಂಘಟನೆಗಳನ್ನು ಒಂದು ರಾಜಕೀಯ ಪಕ್ಷದ ಹಟ್ಟಿಯಲ್ಲಿ ಕಟ್ಟಿಡಲು ಸಾದ್ಯವಿಲ್ಲ. ಅಂತಹ ವ್ಯಾಮೋಹ ಯಾರಿಗಾದರೂ ಇದ್ದರೆ ಅದನ್ನು ತೊಡೆದು ಹಾಕುವುದು ಅವರಿಗೆ ಒಳಿತು.
ಒಂದು ಊರಿನ ಖತೀಬ್ ಆ ಊರಿನಲ್ಲಿರುವ ಎಲ್ಲಾ ಪಕ್ಷ/ಪಾರ್ಟಿ/ಪಂಗಡದ ಜನರನ್ನು ಒಂದೇ ರೀತಿಯಲ್ಲಿ ನೋಡುತ್ತಾ ಅವರು ಎಡವಿದಾಗ ಎಚ್ಚರಿಸಿ ತಿದ್ದಿ ಸರಿದಾರಿಗೆ ಕರೆತರುವ ಉದಾತ್ತವಾದ ಮಾದರಿಯನ್ನಾಗಿದೆ ಸುನ್ನೀಸಂಘಟನೆಗಳು ಅನುಕರಿಸುತ್ತಿರುವುದು. ಅದಾಗಿದೆ ಎಪಿ ಉಸ್ತಾದ್ ನಮಗೆ ಕಲಿಸಿಕೊಟ್ಟ ಮಾರ್ಗ.
ಆದ್ದರಿಂದಲೇ ಅಪಪ್ರಚಾರ ಮಾಡುವವರು ಎಷ್ಟೇ ಕೂಗಾಡಿದರೂ, ಅದ್ಯಾವುದನ್ನು ಲೆಕ್ಕಿಸದೆ ಎಲ್ಲಾ ಪಕ್ಷದ ಅಭ್ಯರ್ಥಿಗಳು ಬೆಂಬಲಕ್ಕಾಗಿ ,ಆಶಿರ್ವಾದ ಪಡೆಯಲಿಕ್ಕಾಗಿ ಮರ್ಕಝನ್ನು ಗುರಿಯಾಗಿಸಿ ತಮ್ಮ ವಾಹನವನ್ನು ಹೈಸ್ಪೀಡಲ್ಲಿ ಚಲಾಯಿಸುತ್ತಿರುವ ದೃಶ್ಯ ನಾವು ಕಾಣುತ್ತಿದ್ದೇವೆ.
ಹೇಗೆ,ಯಾರನ್ನು ,ಎಲ್ಲಿ, ಯಾವ ರೀತಿ ಬೆಂಬಲಿಸಿದರೆ ಸಮೂಹಕ್ಕೆ ಸಮುದಾಯಕ್ಕೆ ವಿಶೇಷವಾಗಿ ಸುನ್ನತ್ ಜಮಾತಿಗೆ ಒಳಿತೆಂಬ ಸ್ಪಷ್ಟವಾದ ಸಂದೇಶ ಅನುಯಾಯಿಗಳಿಗೆ ತಲುಪಿಸುವ ಅಪ್ರತಿಮ ಸಂಘಟನಾ ಸೆಟ್ಟಪ್ಪ್ ಇರುವುದರಿಂದಲೇ ಬಹಿರಂಗವಾಗಿ ಯಾರಿಗೂ ಉಸ್ತಾದ್ ಬೆಂಬಲ ಸೂಚಿಸಲ್ಲ.
ಅದರಲ್ಲಿ ಬಿಜೆಪಿಯ ಬಾದುಷಾ ತಂಙಳ್ ಕೂಡಾ ಒಳಪಡುವರೆಂದು ಬೇರೆಯೇ ಹೇಳಬೇಕಾಗಿಲ್ಲತಾನೇ❓
✍ ಅಬೂಶಝ
No comments:
Post a Comment