*ಮದ್ರಸ ಖತೀಬರನ್ನು ಮತ್ತು ಸಂಘಟನಾ ನಾಯಕರನ್ನು ಬಲಿಪಶು ಮಾಡುತ್ತಿರುವ ಪಿ.ಎಫ್. ಐ ಕಾರ್ಯಕರ್ತರು!!!*
ಸಮುದಾಯ ರಕ್ಷಣೆ ಹೆಸರಿನಲ್ಲಿ ಸ್ವತಃ ಸಮುದಾಯಕ್ಕೆ ವಂಚಿಸುತ್ತಿರುವ ದಿವಂಗತ ಕೆ.ಎಫ್.ಡಿ ಯಾನೆ ಯಸ್.ಡಿ.ಪಿ ಐ ಕಾರ್ಯಕರ್ತರ ಕರಾಳ ಮುಖವಾಡವು ಒಂದೊಂದೇ ಬೆಳಕಿಗೆ ಬರುತ್ತಿದೆ. ಸುನ್ನತ್ ಜಮಾ-ಅತ್ತಿನ ನಿಷ್ಠಾವಂತ ಉಲಾಮಾಗಳು ಆರಂಭದಿಂದಲೇ ಈ ಸಂಘಟನೆಯ ವಿರುದ್ಧ ಎಚ್ಚರಿಕೆಯನ್ನು ನೀಡಿ ಸಮುದಾಯವನ್ನು ರಕ್ಷಿಸಿದ್ದರು. ನಂತರಗಳಲ್ಲಿ ಅದರ ಎಲ್ಲಾ ಕಾರ್ಯಚಟುವಟಿಕೆಗಳು ಸುನ್ನತ್ ಜಮಾ-ಅತ್ ವಿರುದ್ಧ ಮತ್ತು ಕೇವಲ ಬಿದ್ಅತ್ತಿನ ಪ್ರಚಾರಕರು ಎಂಬುದು ಕಾಲವು ಅರಿತುಕೊಂಡಿತು.
ಆಲಿಮ್ ಗಳನ್ನೂ ಔಲಿಯಾಗಳನ್ನು, ಮಕ್ಬರಗಳನ್ನು ಅವಹೇಳನ ಮಾಡುತ್ತಾ ಫ್ಯಾಸಿಸ್ಟ್ ಶಕ್ತಿಗಿಂತಲೂ ಒಂದು ಹೆಜ್ಜೆ ಮುಂದು ಎಂಬಂತೆ ಪರಂಪರಾಗತ ಇಸ್ಲಾಮಿನ ಸುಂದರ ಆಶಯಗಳನ್ನು ತಿರುಚಲು ಆರಂಭಿಸಿದರು. *ಕೆಲವು ಆಲಿಮ್ ಗಳನ್ನೂ ಅದಕ್ಕೆ ಸೇರಿಸಿ ತೆರೆಮರೆಯಲ್ಲಿ ನೂತನವಾದವನ್ನು ಪ್ರಚಾರ ಮಾಡಿದರು. ಆದರೆ ಅದೆಲ್ಲವನ್ನು ಸಯ್ಯದ್ ಸಾದತ್ ಗಳು, ಆಲಿಂಗಳು ಸಾರ್ವಜನಿಕವಾಗಿ ಬಯಲಿಗೆಳೆದಾಗ ಕೆಲವು ಯುವ ಕಾರ್ಯಕರ್ತರು ಆಲಿಮ್ ಸಾಧಾತುಗಳ ಮೇಲೆ ಹರಿಹಾಯ್ದರು. ಅವರನ್ನು ಸೋಶಿಯಲ್ ಮೀಡಿಯಾ ಗಳಲ್ಲೂ ಹೀನಾಯವಾಗಿ ನಿಂದಿಸಿದರು, ಜೀವಬೆದರಿಕೆಗಳು ಬರತೊಡಗಿತು*. ಅವರು ಸಂಚರಿಸುವ ಕಾರುಗಳಿಗೆ ಕಲ್ಲೆಸೆದು ಉಪದ್ರವಿಸಿದರು. ವೇದಿಕೆಗೆ ಹತ್ತಲು ಬಿಡಲಾರೆವು ಎಂದು ಬಹಿಷ್ಕಾರ ಪ್ರತಿಭಟಿಸಿದರು. ಆಗಲೇ ಇವರ ಹಿಡನ್ ಅಜೆಂಡಾ ಜನರ ಮುಂದೆ ಅನಾವರಣ ಗೊಂಡಿತ್ತು. ಸಮುದಾಯ ರಕ್ಷಣೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತ ಸಯ್ಯದ್ ಸಾದತ್ ಗಳು ಆಲಿಮ್ ಗಳು ನಾಯಕರು ಇವರ ವಿರುದ್ಧ ಎಚ್ಚರಿಕೆಯನ್ನು ನೀಡುತ್ತಲೇ ಹೋದರು.
ಕಾಲಕ್ರಮೇಣ ಸತ್ಯವನ್ನು ಅರಿತ ಕೆಲವು ಯುವಕರು ಸಂಘಟನೆಯಿಂದ ಹಿಂಜರಿದರು. ಇನ್ನು ಕೆಲವು ಯುವಕರು ಇಂದೂ ಕೂಡ ಜೈಲು, ಕೋರ್ಟ್,ಕಚೇರಿ, ಕಾನೂನು ಎಂದು ಅಂಡಲೆಯುತ್ತಲೇ ಇದ್ದಾರೆ. ಸಮುದಾಯ ರಕ್ಷಣೆಯ ಕರಾಳ ಮುಖವಾಡವನ್ನು ಹೊತ್ತ ಈ ಸಂಘವು ಅದೆಷ್ಟು ಯುವಕರ ಬಿಸಿರಕ್ತದ ಚೆಲ್ಲಾಟವಾಡಿದೆ, ಮಹಿಳೆಯರನ್ನು ವಿಧವೆಯರನ್ನಾಗಿಸಿದೆ, ಮಕ್ಕಳನ್ನು ಅನಾಥರನ್ನಾಗಿಸಿದೆ, ತಂದೆ ತಾಯಿಯನ್ನು ಬೀದಿ ಬೀದಿ ಅಲೆಯುವಂತೆ ಮಾಡಿದೆ ಇದ್ಕಕೇಳವು ನಾಳೆ ಅಲ್ಲಾಹನ ಬಳಿ ಉತ್ತರವನ್ನು ಹೇಳಬೇಕಾಗಿದೆ.
ಇದೀಗ ಈ ಸಂಘಟನಾ ಕಾರ್ಯಕರ್ತರು ಹೊಸ ಡ್ರಾಮದೊಂದಿಗೆ ಪ್ರತ್ಯಕ್ಷಗೊಂಡು ಸುನ್ನತ್ ಜಮಾ-ಅತ್ತಿನ ಸಂಘಟನಾ ಉಲಮಾ ನಾಯಕರನ್ನು, ಮಸೀದಿ ಖತೀಬ್ ಗಳನ್ನೂ ಗುರಿಯಾಗಿಸಿ ಅವರ ಊಟಕ್ಕೆ ಕಣ್ಣ ಹಾಕಲು ಶುರು ಮಾಡಿದೆ. ಅವರ ಹೆಸರಿನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿ ಸೋಶಿಯಲ್ ಮೀಡಿಯಾ ಗಳಲ್ಲಿ ಅವರ ಮಾನ ಹರಾಜು ಮಾಡುವುದಲ್ಲದೆ ಸುನ್ನತ್ ಜಮಾ-ಅತ್ತಿನ ಕಾರ್ಯಕರ್ತರೆಡೆಯಲ್ಲಿ ಗೊಂದಲವನ್ನು ಸೃಷ್ಟಿ ಮಾಡುತ್ತಿದ್ದಾರೆ. ಸಮುದಾಯವನ್ನೇ ಪರಸ್ಪರ ಕಚ್ಚಾಡುವಂತೆ ಮಾಡಿ ನೂತನವಾದಿಗಳಿಗೆ ಏರಲು ಏಣಿಯಿಟ್ಟು ಕೊಡುತ್ತಿರುವ ಈ ವಂಚಕ ಸಂಘವು ಮಸೀದಿ ಮದ್ರಸಗಳಿಂದ ಉಸ್ತಾದರನ್ನು ಮನೆಗಟ್ಟಲು ಪರಿಶ್ರಮ ಪಡುತ್ತಿದೆ.
ಅನ್ಯೋನ್ಯತೆಯಿಂದ ಪರಸ್ಪರ ಸಹಕರಿಸಿಕೊಂಡು ಹೋಗುತ್ತಿರುವ ಮಹಲಿನಲ್ಲಿ ಅಲ್ಲಿನ ಖತೀಬರ ವಿರುದ್ಧ ಅಪಪ್ರಚಾರ ಮಾಡಿ ಗಲಾಟೆ ಮಾಡಿಸುವ ಇವರ ಈ ಕುತಂತ್ರವನ್ನು ಇನ್ನಾದರೂ ಜನರು ಅರಿತುಕೊಳ್ಳಬೇಕು. ಇದರಿಂದ ಒಂದು ವಿಭಾಗವು ಮಸೀದಿ ಖತೀಬರ ವಿರುದ್ಧ ದಂಗೆಯೇಳಬಹುದು, ಇನ್ನೊಂದು ವಿಭಾಗವು ಖತೀಬರಿಗೆ ಬೆಂಬಲವಾಗಿ ನಿಲ್ಲಬಹುದು. ಈ ಎರಡು ವಿಭಾಗಗಳು ಪರಸ್ಪರ ಹೊಡೆದಾಡಿಕೊಂಡು ಜೈಲು ಕಂಬಿ ಎಣಿಸುತ್ತಾರೆ, ಮನನೊಂದ ಉಸ್ತಾದರು ಅಲ್ಲಿಂದ ರಾಜೀನಾಮೆ ಕೊಟ್ಟು ಜಾಗ ಕಾಲಿಮಾಡುತ್ತಾರೆ ಇಲ್ಲಿಂದ ಮಸೀದಿ ಎರಡು ಆರಂಭಗೊಳ್ಳುತ್ತದೆ ಇದೆಲ್ಲವೂ ಸಂಭವಿಸಿದ್ದು ಒಂದು ಕಳ್ಳ ಪ್ರಚಾರದಿಂದ ಆಗಿರುತ್ತದೆ.
ನೀವು ಕಾರ್ಯಕ್ರಮ ನಡೆಸಿ, ರಾಜಕೀಯ ಮಾಡಿ ಬಾರತೀಯ ಸಂವಿಧಾನ ಅದಕ್ಕೆ ಮುಕ್ತ ಅವಕಾಶವನ್ನು ನೀಡಿದೆ.ಆದರೆ ಸಮುದಾಯದ ಹೆಸರಿಗೆ ಕಳಂಕ ತರಿಸುವ ರೀತಿಯಲ್ಲಿ ಪ್ರಚಾರ ಮಾಡಿ ಸಂಘಟನಾ ನಾಯಕರ ಮತ್ತು ಮಸೀದಿ ಖತೀಬರುಗಳ ಹೆಸರು ಬಳಸಿ ಪರಸ್ಪರ ಗಲಾಟೆ ನಡೆಸುವ ನಿಮ್ಮ ತಂತ್ರ ಫಲಿಸದು. ಸುನ್ನತ್ ಜಮಾ-ಅತ್ತಿನ ರಾಜ್ಯ ಮಟ್ಟದ ಸಂಘಟನಾ ನಾಯಕರ ವ್ಯಕ್ತವಾದ ಪ್ರತಿರೋಧ ಇರುವುದರಿಂದ ಮತ್ತು ನಿಮ್ಮ ಜಮಾ-ಅತ್ತಿನ ಚುಕ್ಕಾಣಿ ಹಿಡಿದು ನಿಯಂತ್ರಿಸುತ್ತಿರುವ ಉಲಾಮಾಗಳ ಮಾತಿಗೆ ವಿರುದ್ಧವಾಗಿ ಕಾರ್ಯಕ್ರಮಕ್ಕೆ ಹೋಗುವುದಾದರೆ ಪರಲೋಕ ಜೀವನದ ಬಗ್ಗೆ ಚಿಂತಿಸುವುದು ಒಳಿತು.
*ಸಮುದಾಯ ಪ್ರೇಮಿ*
No comments:
Post a Comment