*ISIS ನೊಂದಿಗೆ ಸಲಫಿಸಂ ನ್ನು ಎತ್ತಿಕಟ್ಟುವುದು ಎಷ್ಟು ಸರಿ!?*
*--------------------------*
✍ಅಬೂಶಝ
ಬಹಳ ಸ್ಪಷ್ಟವಾಗಿ ಹೇಳುವುದಾದರೆ ಇಸ್ಲಾಮಿಕ್ ಸ್ಟೇಟ್ ಎಂಬ ಮಹಾಮಾರಿಯನ್ನು ಜಗತ್ತಿನಾದ್ಯಂತ ಹುಟ್ಟುಹಾಕಲು ಕಾರಣಕರ್ತರಾದ ನಾಲ್ಕು ವ್ಯಕ್ತಿಗಳಿದ್ದಾರೆ.
1)ಸೌದೀ ಅರೇಬಿಯಾದ ಇಬ್ನ್ ಅಬ್ದುಲ್ ವಹ್ಹಾಬ್ .
2)ಈಜಿಪ್ಟ್ ನ ಹಸನುಲ್ ಬನ್ನಾ
3)ಮುಹಮ್ಮದ್ ಕುತುಬ್.
4)ಭಾರತದಲ್ಲಿ ಅಬುಲ್ ಆಲಾ ಮೌದೂದಿ.
ISIS ಮತ್ತು ಅದರ ಮುಂಚೆ ಅಸ್ಥಿತ್ವದಲ್ಲಿದ್ದ ಅಲ್ ಖೈದಾ ಭಯೋತ್ಪಾದಕ ಸಂಘಟನೆಗಳು ಪೂರ್ಣವಾಗಿ ಇಬ್ನ್ ಅಬ್ದುಲ್ ವಹ್ಹಾಬ್ ನ ಸಲಫಿ ಆಶಯಗಳನ್ನು ಅಪ್ಪಿಕೊಂಡು ಅದರ ಪ್ರಚಾರಕ್ಕಾಗಿಯೇ ಕಟ್ಟಿಕೊಂಡ ಸಂಘಟನೆಯೆಂಬುದು ಚರಿತ್ರೆ.
2006ರಲ್ಲಿ ರಚನೆಯಾದ ISIS ಬರೋಬ್ಬರಿ ಏಳುವರ್ಷ ಸಲಫಿ ಆಶಯಗಳನ್ನು ಜನರ ಮದ್ಯೆ ರಹಸ್ಯವಾಗಿ ಪ್ರಚಾರ ಮಾಡುತ್ತಾ ಜನರ ತಲೆಗೆ ಸಲಫಿಸಂನ ಅಮಲೇರಿಸುವ ಮೂಲಕ ಅಡಿಪಾಯ ಗಟ್ಟಿಮಾಡಿದರು.
ನಂತರ ಅನಿರೀಕ್ಷಿತವಾಗಿ ಒಂದು ಶುಕ್ರವಾರ ದಿನ ಜಗತ್ತನ್ನು ಬೆಚ್ಚಿಬೀಳಿಸುತ್ತಾ ಕ್ರೂರ ಅಟ್ಟಹಾಸದೊಂದಗೆ ಪ್ರತ್ಯಕ್ಷರಾದವರೇ,
ISIS ನ ಸ್ಥಾಪಕನೆಂದೇ ಹೇಳಲ್ಪಡುವ ಅಬೂಬಕರ್ ಅಲ್ ಬಗ್ದಾದಿ ಮತ್ತು ಮುಖ್ಯ ಸಂಘಟಕ ಅಬೂ ಉಮರ್ ಅಲ್ ಬಗ್ದಾದಿ!
ಅಂದು ವಹ್ಹಾಬಿಸಂ(ಸಲಫಿಸಂ) ವಿಷಬೀಜ ಬಿತ್ತುವ ಉಗ್ರ ಪ್ರಭಾಷಣಗಳು ಕೂಡಾ ಇವರಿಂದ ನಡೆದಿದ್ದವು!
2006 ರಲ್ಲಿ ISIS ನ ಮುಖ್ಯ ಗುರಿಗಳ ಕುರಿತು ಹೇಳಿದ ಮಾತು ಇದಾಗಿತ್ತು.
*"ಬಹುದೈವ ಆರಾಧನೆಯನ್ನು ನಿರ್ನಾಮ ಮಾಡಿ ಮುಸ್ಲಿಮರಿಂದಲೇ ಬಹುದೂರವಾಗಿರುವ ತೌಹೀದನ್ನು ಮರುಸ್ಥಾಪಿಸುವುದು.ಅದಕ್ಕಾಗಿ ಯುವ ಸಮುಹವೊಂದರ ಅಗತ್ಯವಿದೆ* ಎಂದು ಹೇಳಿದ್ದರು.
ಐಸಿಎಸ್ ನಾಯಕರಾಗಿದ್ದ
ಅಬೂಉಮರ್ ಬಗ್ದಾದಿ ಮತ್ತು ಅಬೂಹಂಝ ಮುಹಾಜಿರ್,
ತೌಹೀದ್ ಕಲಿತದ್ದು ಅಬೂಮುಹಮ್ಮದ್ ಮಕ್ದಸಿ ಎಂಬಾತನಿಂದ
ಈ ಅಸಾಮಿಯಾಗಿದ್ದಾನೆ ಅಲ್ ಖೈದಾ ನಾಯಕರಿಗೆ ತೌಹೀದ್ ಕಲಿಸಿದ ಮುಖ್ ಗುರು!
ಇವರೆಲ್ಲರೂ ತೌಹೀದ್ ಕಲಿತದ್ದು ಇಬ್ನ್ ಅಬ್ದುಲ್ ವಹ್ಹಾಬ್ ಎಂಬ ಸಲಫಿಗಳ ಪ ರಮೋನ್ನತ ಗುರುವಿನಿಂದ!
ಅಥಾವಾ ಇಬ್ನ್ ಅಬ್ದುಲ್ ವಹ್ಹಾಬ್ ಕಲಿಸಿದ ತೀವ್ರ ದರ್ಗಾ ,ಮಸೀದಿ ಕೆಡಹಿ ದ್ವಂಸಗೆಯ್ಯುವ ವಿದ್ವಂಸಕ ಆಶಯ ಆದರ್ಶಗಳಿಂದ...!!
2014 ನಂತರವೂ ಐಸಿಎಸ್ ಎಂಬ ಭಯೋತ್ಪ ಾದಕ ಸಂಘಟನೆ ಸಲಫಿ ಆಶಯ ಆದರ್ಶ ಪ್ರಚಾರ ನಡೆಸುವ ಸಲುವಾಗಿ ಶಿರಿಯ ಮತ್ತು ಇರಾಕಿನಲ್ಲಿ ಬೃಹತ್ ವಾಹನ ಜಾಥಾ ಮಾಡಿದ್ದಾಗಿ ಅಂದಿನ ಅರಬ್ ಪ ತ್ರಿಕೆಗಳು ವರದಿಮಾಡಿದ್ದವು.
ಇಂದಿಗೂ ಐಸಿಎಸ್ ಹೊರತಂದ ಕೃತಿಗಳಲ್ಲಿ ಇಬ್ನ್ ಅಬ್ದುಲ್ ವಹ್ಹಾಬ್ ನ ತೀವ್ರವಾದ ಆಶಯ ಆದರರ್ಶಗಳಿಂದ ತುಂಬಿಹೋಗಿದೆ.
ಕೆಲವು ಸಾಮಾನ್ಯ ಜನರು ಮುಗ್ದವಾಗಿ ಕೇಳುತ್ತಾರೆ ಐಸಿಎಸ್ ಯಾಕೆ ಮುಸ್ಲಿಮರನ್ನೇ ಗುರಿಯಾಗಿಸಿ ದಾಳಿ ನಡೆಸುತ್ತದೆ?
ಮುಸ್ಲಿಮರ ಪ ರಮೋನ್ನತ ಭವನ ಪ ವಿತ್ರ ಕಾಬಾದ ಬಳಿ ಯಾಕೆ ಬಾಂಬ್ ಸ್ಟೋಟಗೊಳಿಸಲು ಶ್ರಮಿಸುತ್ತದೆ?
ಯಾಕಾಗಿ ಅಲ್ಲಾಹನ ಅತಿಥಿಗಳಾಗಿ ಬಂದ ಹಾಜಿಗಳನ್ನು ಹತ್ಯೆಗೆಯ್ಯುವುದರಲ್ಲಿ ಪ ುಣ್ಯ ಕಾಣುತ್ತದೆ?
ISIS ಎಂಬ ಭೀಕರ ಸಂಘಟನೆ ವಹ್ಹಾಬಿಸಂ ಅಥವಾ ಸಲಫಿಸಂ ನ ಆಧುನಿಕ ಮುಖವೆಂಬುದು ಪಾಪ ಅವರಿಗೆ ಗೊತ್ತಿಲ್ಲ.
ಇಬ್ನ್ ಅಬ್ದುಲ್ ವಹ್ಹಾಬ ತನ್ನ ಸಲಫಿ ಕ್ರಾಂತಿಯನ್ನು ಆರಂಭಿಸಿದ್ದೇ ಪವಿತ್ರ ಕಾಬಾ ಮತ್ತು ಮದೀನಾ ಪವಿತ್ರ ರೌಳಾ ಝಿಯಾರತಿಗೆ ಬಂದ ಮುಸ್ಲಿರ ಮಾರಣಹೋಮ ಮಾಡುವುದರ ಮೂಲಕವಾಗಿತ್ತು!
ISIS ಮತ್ತು ಸಲಫಿಸಂ ರವರ ವಾದ *ಇಂದು ಬದುಕಿರುವ ಮುಸ್ಲಿಮರೆಲ್ಲರೂ ನೈಜ ಮುಸ್ಲಿಮರಲ್ಲ.ಅವರೆಲ್ಲಾ ಬಹುದೈವ ಆರಾಧಕರೆಂದಾಗಿದೆ!!*
ಸಲಪಿಗಳ ಕೇರಳ ನಾಯಕ ಮುಜಾಹಿದ್ ಬಾಲುಶ್ಶೇರಿ ಎಂಬಾತ ಪವಿತ್ರ ಹಜ್ಜ್ ಕರ್ಮಕ್ಕೆ ತೆರಳಿದ ಮೂವತು ಲಕ್ಷ ಹಜ್ಜಾಜ್ ಗಳಲ್ಲಿ ಸಲಫಿ ಆಶಯದವರಲ್ಲದ ಬಾಕಿ 99.9ಶೇಖಡಾ ಮುಸ್ಲಿಮರೆಲ್ಲರೂ ಕಾಫಿರ್ ಗಳು ಎಂದು ಫತ್ವಾ ಹೊರಡಿಸಿದ್ದ!
ಸಲಫಿಗಳೇತರ ಮದರಸಗಳಲ್ಲಿ ಕಲಿಯುವ ಮಕ್ಕಳನ್ನು ಕತ್ತು ಹಿಸುಕಿ ಕೊಲ್ಲಬೇಕೆಂದು ಫರ್ಮಾನು ಹೊರಡಿಸಿದ್ದ!
ನೀವು ಆಶ್ಚರ್ಯಪಡಬೇಡಿ....
ಸಲಪೀ ಭಯೊತ್ಪಾದಕ ಮೌಲವಿಗಳು ಈ ರೀತಿ ಹೇಳಲು ಅವರಿಗೆ ಪ್ರೇರಣೆಯಾದುದು ಅವರ ನಾಯಕ ಇಬ್ನ್ ಅಬ್ದುಲ್ ವಹ್ಹಾಬ್ ನಿಂದಾಗಿದೆ.
ಕಾರಣ ಅವನ ವಹ್ಹಾಬಿ ಸೈನ್ಯ ಅಂದಿನ ಮಕ್ಕಾ ಮದೀನಾ ನಿವಾಸಿಗಳಾದ ಮುಸ್ಲಿಮ್ ಮಹಿಳೆಯರು ತಮ್ಮ ಕಂದಮ್ಮಗಳಿಗೆ ಎದೆಹಾಲುಣಿಸುತ್ತಿರುವಾಗ ತಾಯಿಯ ಸ್ತನವನ್ನೇ ಮುರಿದು ಮಗುವನ್ನು ಕೊಚ್ಚಿಕೊಂದ ಭೀಕರ ಘಟನೆ ಈಗಲೂ ಚರಿತ್ರೆ ಪುಟಗಳಲ್ಲಿ ಕೆಂಪು ಕೆಂಪಾಗಿ ರಕ್ತ ಮೆತ್ತಿ ನಿಂತಿದೆ!
ಮದೀನಾದ ಗಲ್ಲಿ ಗಲ್ಲಿಗಳಲ್ಲಿ ಇಬ್ನ್ ಅಬ್ದುಲ್ ವಹ್ಹಾಬ್ ಸೈನ್ಯ ನರತಾಂಡವಾಡಿತು.ಕಂಡ ಕಂಡವರೆನ್ನೆಲ್ಲಾ ಕೊಚ್ಚಿಹಾಕಿತು. ರಕ್ತದ ಹೊಳೆಯೇ ಮಕ್ಕಾ ಮದೀನಾದ ರಸ್ತೆಯ ಇಕ್ಕೆಲಗಳಲ್ಲಿಯೂ ಹರಿಯಿತು!!
ಈ ಭೀಕರ ನರತಾಂಡವಕ್ಕೆ ಪುರಾವೆಯಾಗಿ ಅವರು ಹೇಳಿದ ಸಬೂಬು ಕೇಳಿದರೆ ನೀವೂ ಕೂಡಾ ಬೆಚ್ಚಿಬೀಳುವಿರಿ!
ದರ್ಗಾ ಝಿಯಾರತ್ ಮಾಡುವ ಮುಸ್ಲಿಮರು ಬಹುದೈವರಾದಕರು!
ಮಾತ್ರವಲ್ಲ ಪ್ರಸಕ್ತ ನರಹತ್ಯೆಯಲ್ಲಿ ವಹ್ಹಾಬಿಗಳು ಪುಣ್ಯ ಕಂಡಿದ್ದರು!
ಇದನ್ನೇ ಆಧುನಿಕ ಸಲಫೀ ಭೀಕರ ಸಂಘಟನಯಾದ ಐಸಿಎಸ್ ಶಿರಿಯಾ ಮತ್ತು ಇರಾಕ್ ನಲ್ಲಿ ಮಾಡುತ್ತಿರುವುದು.
ತಮ್ಮ ಆಶಯ ಆದರ್ಶಗಳನ್ನು ಅಪ್ಪದ ಒಪ್ಪದವರನ್ನು ಗುಂಡಿಟ್ಟು ಕೊಲೆಮಾಡುವುದು,ಬೋನಿನೊಳಗೆ ಕೂಡಿ ಹಾಕಿ ಬೆಂಕಿ ಹಾಕಿ ಜೀವಂತ ಸುಟ್ಟು ಕೊಲ್ಲುವುದು,ವನ್ಯಮೃಗಗಳ ಮುಂದೆ ಜೀವಂತ ಎಸೆದು ಅವುಗಳ ಆಹಾರವಾಗಿಸಿ ಕೊಲ್ಲುವುದು,ಜೀವಾಂತ ಹೂಳುವ ಕಿರಾತ ಕೃತ್ಯಗಳಿಗೆ ಬಲಿಯಾಗಿಸಿ ಚಿತ್ರಹಿಂಸೆ ನೀಡುವುದು ಮುಂತಾದುವುಗಳು ಸ್ಯಾಂಪಲ್ ಮಾತ್ರ.
ISIS ಆಶಯ ರೂಪೀಕರಣದಲ್ಲಿ ಇಂದು ಅತ್ಯಂತ ಪ್ರಭಾವವಿರುವ ನಾಯಕ ಬಿನ್ ಅಲಿ ಎಂಬಾತನ ಸ್ಟೇಟ್ ಮೆಂಟ್ ಗಳು ಈ ವಿಷಯದಲ್ಲಿ ಇನ್ನಷ್ಟು ಸ್ಪಷ್ಟತೆಯನ್ನು ಹೊಂದಿರುತ್ತದೆ.
isis ನ್ನು ವಿರೋಧಿಸುವವರು ಇಬ್ನ್ ಅಬ್ದುಲ್ ವಹ್ಹಾಬ್ ನನ್ನು ವಿರೋಧಿಸಿದ್ದ ಜನತೆಗೆ ಸಮವೆಂದು ಆತ ಬಣ್ಣಿಸುತ್ತಾನೆ.
ಅಥವಾ ತನ್ನ ಈ ಹೇಳಿಕೆಯ ಮೂಲಕ ನಾವು ಇಬ್ನ್ ಅಬ್ದುಲ್ ವಹ್ಹಾಬಿನ ಸಂತತಿಗಳಾಗಿದ್ದೇವೆ ಎಂದು ಜನರಿಗೆ ತಿಳಿಸಿಕೊಡುತ್ತಿದ್ದಾನೆ.
ವಹ್ಹಾಬಿ ಭೀಕರರು ತಾಂಡವಾಡಿದ ಮತ್ತೊಂದು ಸ್ಥಳವಾಗಿದೆ ದರ್ಗಾಗಳು.
1800 ನಿಂದ ದರ್ಗಾ ಧ್ವಂಸದ ವಿಧ್ವಂಸಕ ಕೃತ್ಯವನ್ನು ಕೈಗೆತ್ತಿಗೊಂಡ ಸಲಫಿಗಳು ಹತ್ತು ವರ್ಷದೊಳಗೆ ಮಕ್ಕಾ ಮದೀನಾ ಸಹಿತ ಸೌಧಿ ಅರೇಬ್ಯಾದಲ್ಲಿದ್ದ ಎಲ್ಲಾ ಮಕ್ಬರಗಳನ್ನು ಹೊಡೆದುರುಳಿಸಿ ಕೇಕೆ ಹಾಕಿ ನಕ್ಕು ನಲಿದಾಡಿದರು!
ಇಸ್ಲಾಮಿಕ್ ಸ್ಮಾರಕ ಗಳನ್ನು ಕೂಡಾ ಪುಡಿಗೈದು ಧ್ವಂಸಗೊಳಿಸಿದರು.
ಪುಣ್ಯ ರಸೂಲ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಮನೆಯನ್ನು ಕೂಡಾ ಪುಡಿಗೈದರು!
ಇದೀಗ ಆ ಸ್ಥಳದಲ್ಲಿ ಮ್ಯೂಸಿಯಂ ನಿರ್ಮಾಣ ಮಾಡಿ ಪ್ಲಾಸ್ಟಿಕ್ ಗಳಿಂದ ನಿರ್ಮಾಣ ಮಾಡಿದ ಸ್ಮಾರಕಗಳು ಪ್ರತಿಷ್ಠಾನಗೊಳ್ಳುತ್ತಿದೆ.
ಎಲ್ಲವನ್ನು ಪುಡಿಗೈದು ಇದೀಗ ಪ್ಲಾಸ್ಟಿಕ್ ಸ್ಮಾರಕಗಳ ಮೊರೆಹೋಗುವ ಗತಿಕೇಡಿಗೆ ತಲುಪಿದ ಇತಿಹಾಸವಾಗಿದೆ ವಹ್ಹಾಬಿಸಂ ಭೀಕರ ಇತಿಹಾಸ.
ವಹ್ಹಾಬಿಸಂ ತಾಂಡವಾಡಿದ ಮಕ್ಕಾ ಮದೀನಾದಲ್ಲಿ ಮದೀನಾದ ಪತ್ರ ದರ್ಗಾ ರೀಫ್ ಪುಣ್ಯ ರಸೂಲರ ರೌಳದ ಮೇಲೆ ಇರುವ ಹಸಿರು ಖುಬ್ಬಾ ಮಾತ್ರ ಬಾಕಿಯಿದ್ದು ಬಾಕಿ ಎಲ್ಲವೂ ಗರ್ಭಗುಡಿಯೊಳಗೆ ಹೂತುಹೋಗಿದೆ!
ಇದೀಗ ಆಧುನಿಕ ಸಲಫಿ ಭಯೊತ್ಪಾದಕ ಸಂಘಟನೆಯಾದ ಐಸಿಎಸ್ ಕೂಡಾ,
ಗುರು ಮುಹಮ್ಮದ್ ಬಿನ್ ಅಬ್ದುಲ್ ವಹ್ಹಾಬಿನ ದರ್ಗಾ ಮಸೀದಿ ಪುಡಿಗೆಯ್ಯುವ ವಿಧ್ವಂಸಕ ಕೃತ್ಯವನ್ನು ಮುಂದುವರೆಸುತ್ತಾ ಇದೆ.
ಅದರ ಭಾಗವಾಗಿ ಈಗಾಗಲೇ ಯೂನಸ್ ನೆಬಿ ಮತ್ತು ದಾನಿಯಾಲ್ ನೆಬಿಯವರ ದರ್ಗಾಗಳನ್ನು ಅವರು ಪುಡಿಗೈದಾಯಿತು!.
ಶೈಖ್ ರಿಫಾಯಿ ಸಹಿತ ನೂರಾರು ಮಕ್ಬರಗಳನ್ನು ಬಾಂಬ್ ಹಾಕಿ ಸ್ಪೋಟಿಸಿದರು!
ದರ್ಗಾ ಸಮೀಪವಿರುವ ಮಸೀದಿಗಳನ್ನು ಕೂಡಾ JCB ಮೂಲಕ ಹೊಡೆದುರುಳಿಸಿದರು!
ಪಶ್ಚಿಮ ಮೀಡಿಯಾ ನ್ಯೂಸ್ ಚಾನೆಲುಗಳ ವಾರ್ತೆಗಳಲ್ಲಿ ಈಗಲೂ ಸದರಿ ವಿದ್ರಾವಕ ಘಟನೆಗಳ ಚಿತ್ರಗಳು ಬಾಕಿಯಿದೆ.
ನೆರೆರಾಜ್ಯವಾದ ಕೇರಳದಲ್ಲಿಯೂ ದರ್ಗಾಗಳನ್ನು ಪುಡಿಗೈದ ಘಟನೆಗಳು ವರದಿಯಾಗಿದೆ.
ಒಟ್ಟರೆಯಾಗಿ ISIS ಎಂದರೆ ವಹ್ಹಾಬಿ ನಾಯಕ ಇಬ್ನ್ ಅಬ್ದುಲ್ ವಹ್ಹಾಬ್ ಹುಟ್ಟುಹಾಕಿದ ಸಲಫಿ ಸಂಘಟನೆಯ ಆಧುನಿಕ ಮುಖ ಎಂಬುದರಲ್ಲಿ ಸಂಶಯವಿಲ್ಲ.
ಅದಕ್ಕಾಗಿ ಹಲವಾರು ಸಲಫಿ ಯುವಕರು ಕರಾವಳಿ ಭಾಗದಲ್ಲಿ ಕಾರ್ಯಚರಿಸುತ್ತಿದ್ದಾರೆಂಬ ಸ್ಫೋಟಕ ಮಾಹಿತಿಯನ್ನು ಮತ್ತೊಬ್ಬ ಸಲಫಿ ಮುಖಂಡ ಇಸ್ಮಾಈಲ್ ಶಾಫಿ ಬಹಿರಂಗಗೊಳಿಸಿದ್ದಾನೆ.
ಕೇರಳದಲ್ಲಿ ಈಗಾಗಲೇ ಇಂತಹ ಹಲವಾರು ಪ್ರಕರಣಗಳು ದಾಖಲಾಗಿದೆ.ಇದೀಗ ಕರಾವಳಿಯತ್ತ ಅವರು ಗುರಿ ಇಟ್ಟಿದ್ದಾರೆ. ಇಸ್ಮಾಈಲ್ ಶಾಫಿ ಹೇಳುವಂತೆ ಇಲ್ಲಿ ಇದರ ನಾಯಕನಾಗಿ,ತರಗತಿ ಕೊಡಲು ಬರುತ್ತಿರುವುದು ಕೇರಳದ ಝಕರಿಯ್ಯ ಸ್ವಲಾಹಿ ಎಂಬಾತ.
ಈ ಅಸಾಮಿ ಇಬ್ನ್ ಅಬ್ದುಲ್ ವಹ್ಹಾಬ್ ನ ಸೈನ್ಯ ಪುಡಿಗೆಯ್ಯದೆ ಬಾಕಿ ಇರಿಸಿದ ಮದೀನಾದ ಹಸಿರು ಖುಬ್ಬಾವನ್ನು ಕೂಡಾ ಪುಡಿಗೈದು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಪವಿತ್ರ ಕಬರನ್ನು ಮಸೀದಿಯಿಂದ ಹೊರಎಸೆಯಬೇಕೆಂದು ಹಠ ಹಿಡಿಯುವ ಮಹಾ ಭಯೋತ್ಪಾದಕ ಚಿಂತೆಯವನಾಗಿದ್ದಾನೆ.
ಎಲ್ಲಾ ಧರ್ಮೀಯರಲ್ಲಿ ವಿನಂತಿ ಮಾಡುತ್ತಿದ್ದೇನೆ ಸಲಫಿಸಂ(ವಹ್ಹಾಬಿಸಂ) ಇಸ್ಲಾಂ ಅಲ್ಲ.
ಅದರ ಹುಟ್ಟು ಭಯೋತ್ಪಾದನಾ ಕೃತ್ಯದ ಮೂಲಕವಾಗಿದೆಯೆಂಬುದಕ್ಕೆ ಸ್ಪಷ್ಟ ಚರಿತ್ರೆ ಇದೆ.
ದಯಮಾಡಿ ಸಲಫಿಸಂ (ವಹ್ಹಾಬಿಸಂ) ನಲ್ಲಿ ಯಾರೂ ಇಸ್ಲಾಮನ್ನು ದರ್ಶಿಸಬೇಡಿ🙏
- ಅಬೂಶಝ
(ಸುನ್ನೀ ಸಾಹಿತ್ಯ ಮಂಡಳಿ)
*ಸುಸಾಮ*
No comments:
Post a Comment