Saturday, October 14, 2017

*ಸಂಘಿ, ಕಾವಿ ಮೌಲಾನ ಟೈಟಲ್ ಗಳಿಂದ ಸಮುದಾಯವನ್ನು ರಕ್ಷಿಸುವವರು ಯಾರು?*
*---------------------*

*ಹೆಚ್ ವಿ* ಎಂಬ  ರೋಗ ಭಾದಿತನೊಬ್ಬ ಕರ್ನಾಟಕ ಸುನ್ನಿಗಳ ಕಣ್ಮನಿ ಮೌಲಾನಾ ಶಾಫಿ ಸ ಅದಿ ವಿರುದ್ದ ಮನಬಂದಂತೆ ಗೀಚಿದ್ದಾನೆ.
ನಿಜವಾಗಿಯೂ ಸದರಿ ಹೆಚ್ ವಿ ಬಾಧಿತ ತಾನೊಬ್ಬ ಕಾಂಗ್ರೆಸ್ ಬಂಟನೆಂಬ ರೀತಿಯಲ್ಲಿ ಪೋಸು ಕೊಟ್ಟು ಶಾಫಿ ಸ ಅದಿ ಉಸ್ತಾದರೊಂದಿಗಿನ ತನ್ನ ವೈಯುಕ್ತಿಕ ದ್ವೇಷವನ್ನು ಕಕ್ಕಿದ್ದಾನೆ.

ಶಾಫಿ ಸಅದಿ ಉಸ್ತಾದ್ ಕರ್ನಾಟಕ ಎಸ್ಸೆಸ್ಸೆಫ್ ನ ಸುಪ್ರಿಮ್ ನಾಯಕ!
ಅವರು ಒಮ್ಮಿಂದೊಮ್ಮಲೇ ನಾಯಕನಾಗಿ ಹೊರಹೊಮ್ಮಿದ್ದಲ್ಲ.
ಕೆಳಸ್ತರದಿಂದಲೇ ಹೋರಾಟಗಾರನಾಗಿ ಕರ್ನಾಟಕದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊಳಚೆಯ ಸ್ಲಮ್ ಮಕ್ಕಳನ್ನು ಹೆಕ್ಕಿತಂದು ವಿದ್ಯೆ ಮತ್ತು ಅನ್ನ ಕೊಟ್ಟು ಶಿಕ್ಷಣ ಕ್ರಾಂತಿ ಮಾಡಿದ ಕ್ರಾಂತಿ ಪುರುಷ!

ಅವರು ಕರ್ನಾಟಕ ಸರಕಾರದ ವಕ್ಫ್ ಬೋರ್ಡ್ ಗೆ ಆಯ್ಕೆಯಾದುದು ಅವರ ಸ್ವಂತ ಪರಿಶ್ರಮದಿಂದಲೇ ಹೊರತು ಈ  ಎಚ್ ವಿ ಪೀಡಿತನ ಒತ್ತಾಸೆಯಿಂದಲ್ಲ.

ಅವರು ವಕ್ಫ್ ಬೋರ್ಡ್ ಗೆ ಚುಣಾಯಿತನಾಗುವುದಕ್ಕಿಂತ ಮುಂಚೆ ಕರಾವಳಿ ಭಾಗದ ಯಾವನೇ ಒಬ್ಬ ಸುನ್ನಿ ಮೈಲಾರ್ ನೋಮಿನೆಟ್ ಆಗಿರಲಿಲ್ಲ.
ನಂತರವೂ ಆಗಲಿಲ್ಲ.
ಎಲ್ಲದಕ್ಕೂ ಕ್ಯಪಾಸಿಟಿ ಬೇಕು.
ದೂರ ನಿಂತು ಮತ್ಸರಪಟ್ಟು ಗೀಚಲು ಬಲು ಸುಲಭ.ಕಷ್ಟ ಪಟ್ಟು  ಸಮುದಾಯದ ಧ್ವನಿಯಾಗಲು ಬಹಳ ತ್ರಾಸದಾಯಕ ಮಾರ್ಗ ಸ್ವೀಕರಿಸಬೇಕಾಗುತ್ತದೆ.

ಮೌಲಾನಾ ಶಾಫಿ ಸಅದಿ ಉಸ್ತಾದ್ ಆಡಳಿತಾರೂಢ ಪಕ್ಷ ಕಾಂಗ್ರೆಸ್‌ ವಿರುದ್ದ ಗುಡುಗಿದ್ದು ಅವರ ಸಮುದಾಯ ಪರ ನಿಲುವು ಅಷ್ಟೊಂದು ಗಟ್ಟಿಯೆಂದು ಸ್ಪಷ್ಟ ಪಡಿಸುತ್ತದೆ.
ಸಲ್ಮಾನ್ ಖುರ್ಷಿದ್ ಎಂಬ ಕಾಂಗ್ರೆಸ್ ನ ಮುಸ್ಲಿಮ್ ರಾಜಕಾರಣಿ ತಲಾಕ್ ವಿಷಯದಲ್ಲಿ ಬೇಜಾವಬ್ದಾರಿ ಹೇಳಿಕೆ ಕೊಟ್ಟದ್ದನ್ನು ಖಡಾತುಂಡವಾಗಿ ಅವರು ವಿರೋಧಿಸಿದ್ದಾರೆ.

ಕೇಂದ್ರ ಸರಕಾರ ಬೀಫ್ ವಿರುದ್ದ ಸಮರ ಸಾರಿದಾಗ ಹೆಸರಿಗಾದರೂ ಪ್ರತಿಪಕ್ಷ ಸ್ಥಾನ ಅಲಂಕರಿಸುವ ಕಾಂಗ್ರೆಸ್ ಹೈಕಮಾಂಡ್ ಅದರ ವಿರುದ್ದ ತುಟಿಕ್ ಪಿಟಿಕ್ ಎನ್ನದೆ ಸುಮ್ಮನೆ ಕುಳಿತಿದೆ ಮಾತ್ರವಲ್ಲ ಕೇರಳದಲ್ಲಿ ಕೇಂದ್ರದ ಧಮನ ನೀತಿಯ ವಿರುದ್ದ ಬೀದಿಗಿಳಿದ ಯೂತ್ ಕಾಂಗ್ರೆಸ್ ನ ಕಾರ್ಯಕರ್ತರನ್ನು ಸಸ್ಪೆಂಡ್ ಮಾಡಿದೆ!

ಚುನಾವಣೆ ಗೆ ಮುಂಚೆ ತೊಡೆ ತಟ್ಟಿದ ಕರಾವಳಿಯ ಕಾಂಗ್ರೆಸ್ ಸಚಿವರು ಆ ವಿಷಯದಲ್ಲಿ ಬಾಯಿ ತೆರೆಯುವುದೇ ಇಲ್ಲ.
ಇಷ್ಟೆಲ್ಲಾ ಅವಮಾನ ಅನ್ಯಾಯವಾಗುವಾಗ ಮಾನ್ಯ ಶಾಫಿ ಸಅದಿ ಉಸ್ತಾದರು ಸಮುದಾಯದ ಧ್ವನಿಯಾಗುವ ನಿಟ್ಟಿನಲ್ಲಿ ಕಾಂಗ್ರೆಸ್ ನ ನಾಯಕರಿಗೆ ಬಿಸಿ ತಟ್ಟಿಸಿದ್ದು ತಪ್ಪೇ?

ಅಂದ್ರೆ ಕಾಂಗ್ರೆಸ್ ವಿರುದ್ದ ಮಾತೆತ್ತಲೇ ಬಾರದೆಂಬ ನಿಯಮವಿದೆಯೇ?

ಅಥವಾ ಕಾಂಗ್ರೆಸ್ ನ ಲೋಪದೋಷಗಳನ್ನು ಎತ್ತಿದ ಕೂಡಲೇ ಅವರನ್ನು ಸಂಘಿ ಚಡ್ಡಿ ಅಂತ ಕರೆದು ಬಾಯಿಮುಚ್ಚಿಸುವ ಹುನ್ನಾರವೇ?

ನಿಜವಾಗಿಯೂ ಕಾಂಗ್ರೆಸ್ ಪಕ್ಷ ಅಂದೂ ಇಂದೂ ಜಾತ್ಯಾತೀತ ಪಕ್ಷವಾಗಿಯೇ ಕಾರ್ಯಚರಿಸುತ್ತಿದೆ.ಆದರೂ ಎಲ್ಲದರಲ್ಲೂ ಕಲಬೆರಕೆ ಇರುವಂತೆ ಕಾಂಗ್ರೆಸ್ ನಲ್ಲಿಯೂ ಕೆಲವೊಂದು ಕಮ್ಯುನಲ್ ಮೈಂಡ್ ನ ಕಲಬೆರಕೆ ಇದೆ ಎಂಬುದು ಸುಳ್ಳಲ್ಲ.
ಅಂತಹ ನಕಲಿ ಜಾತಿವಾದಿ ದೊಣ್ಣೆ ನಾಯಕರ ವಿರುದ್ದ ಶಾಫಿ ಸಅದಿ ಉಸ್ತಾದ್ ದೊಣ್ಣೆ ಬೀಸಿದ್ದಾರೆಯೇ ಹೊರತು ಇಡೀ ಕಾಂಗ್ರೆಸ್ ಪಕ್ಷವೇ ಸರಿ ಇಲ್ಲ ಎಂಬ ಅರ್ಥದಲ್ಲಿ ಅಲ್ಲ.

ಕಾರಣ ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಅಲ್ಪಸಂಖ್ಯಾತರು ಈಗಲೂ ಭರವಸೆಯನ್ನಿಟ್ಟುಕೊಂಡಿದ್ದಾರೆ ಎಂಬುದು ಹಗಲಿನಷ್ಟೇ ಸ್ಪಷ್ಟ.
ಇಲ್ಲಿನ ಮುಸ್ಲಿಂ ಸಹಿತವಿರುವ ಅಲ್ಪಸಂಖ್ಯಾತರಿಗೆ ಆರ್ ಎಸ್ ಎಸ್ ಆಧಾರಿತ ಬಿಜೆಪಿ ಸರಕಾರದಿಂದ ನಿರಂತರ ಅನ್ಯಾಯವಾಗುತ್ತಿರುವಾಗ ಕಾಂಗ್ರೆಸ್ ಪಕ್ಷ ತಾವು ಈಗಲೂ ಅಲ್ಪಸಂಖ್ಯಾತರ ಪರ ಎಂಬ ಧೋರಣೆಯನ್ನು ಸ್ಪಷ್ಟ ಪಡಿಸುವಲ್ಲಿ ಒಂದೆಜ್ಜೆ ಮುಂದಿಡಬೇಕಾದ ಸದರಿ ಸಂಧರ್ಭದಲ್ಲಿ ಅದರ ನೀರವ ಮೌನ ನಿಜಕ್ಕೂ ಅಸಹನೀಯ ಎಂಬುದರಲ್ಲಿ ಸಂಶಯವಿಲ್ಲ.

ಇಂತಹ ಸಂದರ್ಭಗಳಲ್ಲಿ ಸಹಜವಾಗಿಯೇ ಸಮುದಾಯ ಧ್ವನಿಯಾಗಿರುವ ಮೌಲಾನಾ ಶಾಫಿ ಸಅದಿ ಯಂತಹ ದಿಗ್ಗಜ ನಾಯಕರು ಧ್ವನಿ ಎತ್ತಲೇ ಬೇಕಾಗುತ್ತದೆ.
ಅದು ನೈಜ ನಾಯಕನ ಕರ್ತವ್ಯ.
ಅವರು ಧ್ವನಿ ಎತ್ತದೆ ಇದ್ದರೆ ಆಡಳಿತಾರೂಢ ಪಕ್ಷದ ಎಂಜಲು ನಕ್ಕುವುದರಿಂದ ಶಾಫಿ ಸಅದಿ ಉಸ್ತಾದರು ಬಾಯಿ ಮುಚ್ಚಿದ್ದಾರೆಂಬ ಆರೋಪವು ಬರಬಹುದು.

ಅಲ್ಲದಿದ್ದರೂ ಅವರು ಎಸ್ಸೆಸ್ಸೆಫ್ ಎಂಬ ಧಾರ್ಮಿಕ ಸಂಘಟನೆಯ ಸುಪ್ರಿಮ್ ನಾಯಕರಲ್ಲೋರ್ವರಾಗಿರುವುದರಿಂದಲೇ ಅವರಿಗೆ ಯಾವುದೇ ಪಕ್ಷದ ಪರ/ವಿರೋಧ ಎಂಬ ವ್ಯತ್ಯಾಸ ವಿಲ್ಲದೆ ಎಲ್ಲರ ವಿರುದ್ದ ಚಾಟಿ ಬೀಸಲು ಸಾದ್ಯವಾಗುತ್ತದೆ.

ಕಾರಣ ಎಸ್ಸೆಸ್ಸೆಫ್ ಎಂಬ ಧಾರ್ಮಿಕ ಸಂಘಟನೆ ಯಾವುದೇ ರಾಜಕೀಯ ಪಕ್ಷದ ಪರವಾಗಿಯೋ ವಿರುದ್ದವಾಗಿಯೋ ಕಾರ್ಯಚರಿಸುವುದಿಲ್ಲ.
ಸಮುದಾಯಕ್ಕೆ ಸಮಾಜಕ್ಕೆ ಉಪಯುಕ್ತರಾದವರನ್ನು ಗುರುತಿಸಿ ಪಕ್ಷ ನೋಡದೆ ಆರಿಸುತ್ತದೆ.

ನನ್ನ ಪ್ರಕಾರ ಮೌಲಾನರವರು ಧಾರ್ಮಿಕ ನಾಯಕರಾಗಿ ನ್ಯಾಯವಾಗಿ ಅನ್ಯಾಯದ ವಿರುದ್ದ ಕಿಡಿಕಾರಿದ್ದಾರೆ.
ಅದರಲ್ಲಿ ಪಕ್ಷ/ಪಂಗಡ ಎಂಬ ವ್ಯತ್ಯಾಸ ಇಲ್ಲದೆ ಮಲಗಿರುವವರನ್ನು ಬಡಿದೆಬ್ಬಿಸಿದ್ದಾರೆ.ಎಡವಿದವರನ್ನು ತಿದ್ದಿದ್ದಾರೆ.

ಮೊನ್ನೆ ಮಂಗಳೂರು ಚಲೋ ಸಂದರ್ಭದಲ್ಲಿ ಕರಾವಳಿ ಕಾಂಗ್ರೆಸ್ ನ ಮುಸ್ಲಿಮ್ ಸಚಿವರೊಬ್ಬರನ್ನು ಕೆಲವರು ಅಗತ್ಯಕ್ಕಿಂತ ಮಿಗಿಲಾಗಿ ದೂಷಿಸಿದಾಗ ಅದರ ವಿರುದ್ದವೂ ಶಾಫಿ ಸಅದಿಯವರು  ಮಾತೆತ್ತಿದ್ದಾರೆ.
ಅದೊಬ್ಬ ಲೀಡರ್ ನ ಪಕ್ವತೆ.
ಒಳಿತನ್ನು ಮಾಡುವವರು ಕೆಲವೊಮ್ಮೆ ಎಡವಿದಾಗ,ಅವರನ್ನು ಎಚ್ಚರಿಸುವ ಹಾಗೂ ತನ್ನ ದೌತ್ಯವನ್ನೇ ಮೆರೆತು ಗಾಢನಿದ್ದೆಯಲ್ಲಿರುವವರನ್ನು ಬಡಿದೆಬ್ಬಸುವ ಕಾರ್ಯವನ್ನು ಇಲ್ಲಿನ ಧಾರ್ಮಿಕ ನಾಯಕರು ಮಾಡಬೇಕಾಗಿದೆ.ಅದನ್ನು ಮೌಲಾನಾ ಶಾಫಿ ಸಅದಿ ಉಸ್ತಾದರು ಮಾಡಿ ತೋರಿಸಿ ಮಾದರಿಯಾಗಿದ್ದಾರೆ.
ಆದರೆ ಏನೂ ಮಾಡಿದರೂ ಅದನ್ನು ಸಂಘಿ ಕಣ್ಣಿನಿಂದ ವೀಕ್ಷಿಸಿ,ಎಲ್ಲದಕ್ಕೂ 'ಕಾವಿಮೌಲಾನಾ' ಟೈಟಲ್ ಕೊಡುವವರಿಂದ ಈ ಸಮುದಾಯವನ್ನು ಸಂರಕ್ಷಿಸಲ್ಪಡುವುದು ಕಾಲದ ಬೇಡಿಕೆಯಾಗಿದೆ.
- ಅಬೂಶಝ

No comments:

Post a Comment