Saturday, October 14, 2017

ಅಲ್ಲಾರಿ... 73 ಪಂಗಡ ಗುರುತಿಸಿಯಾಗಿದೆ,ಒಂದು ಸ್ವರ್ಗಕ್ಕೆಂದು ಡಿಕ್ಲೇರು ಕೂಡಾ ಆಗಿದೆ.
ಎಲ್ಲವೂ ಸರಿಯಾ❓❓
————————————

ಅದೇನು ಅಂತ ಗೊತ್ತಿಲ್ಲ
ಕೆಲವರಿಗೆ ಸಮುದಾಯದ ಮಧ್ಯೆ ವಿತಂಡವಾದಗಳೊಂದಿಗೆ ವಕ್ಕರಿಸಿದ ಸಳಪಿ/ಜಮಾತ್ /ತಬ್ಲೀಗಾದಿಗಳನ್ನು ಟೀಕಿಸಿದರೆ ಅಷ್ಟೊಂದು ಪಥ್ಯ ಆಗಲ್ಲ!
ತಮ್ಮ ಜನರಲ್ ಸ್ಟೈಲ್'ನೊಂದಿಗೆ ಪ್ರತ್ಯಕ್ಷರಾಗುತ್ತಾರೆ!
ಅವನು ಯಾರಾದರೇನು ಮುಸ್ಲಿಮ್ ತಾನೇ
ಸಲಾಂ ಹೇಳಬೇಕು ಕೈ ಕೊಟ್ಟು ಮುಗುಳ್ನಗೆ ಬೀರಲೇ ಬೇಕು!
ಮಸೀದಿ ಸಳಪಿಯಾದರೇನು ಸುನ್ನಿಯಾದರೇನು?
 ಸಮಯವಾದಾಗ ನಮಾಝ್ ಮಾಡಿದರಾಯಿತು!
ಜುಮುಅ ಖುತುಬಾ ಅರಬಿಯಾದರೇನು ಅನರಬಿಯಾದರೇನು ಶುಕ್ರವಾರ ನಮಾಜ್ ಮಾಡಿದರಾಯಿತು!
ಮಗಳ ಗಂಡ ಬರುವಾಗ ತರಾವೀಹ್
 8 ರಕ್'ಅತ್!
ಕಾರಣ ಅವನು ಸಳಪಿ!
ಮತ್ತೊಬ್ಬ ಮದುಮಗ ಬರುವಾಗ ಇಪ್ಪತ್ತು!
ಕಾರಣ ಅವನು ಸುನ್ನಿ!
ಒಬ್ಬ ಪುತ್ರ ಸುನ್ನಿ ಸಂಸ್ಥೆಯಲ್ಲಿ ಮತ್ತೊಬ್ಬ ಜಮಾತ್'ನವರ ಸಂಸ್ಥೆಯಲ್ಲಿಯೂ,
ಜೊತೆಗೆ ವರಸೆ ಬೇರೆ ,
ಎಲ್ಲಿಯಾದರೇನು.?
ಕಲಿತರಾಯಿತು!
ಸುನ್ನಿ ಸಳಪಿ ಎಂಬ ರಂಪಾಟ ಬೇಡ
ಎಲ್ಲರೂ ಮುಸ್ಲಿಮರು ತಾನೇ...
ಈ ರೀತಿಯ ಜನರಲ್ ಮೈಂಡ್'ನ ಜನರು
ದಾರಾಳ ಬರುವರೆಂದು ಅದು ಕಿಯಾಮತ್'ನ ಲಕ್ಷಣವೆಂದೂ ಮುತ್ತು ನೆಬಿ ಪ್ರವಚಿಸಿದ್ದಾರೆ!
ಸಳಪಿಯ ವಿತಂಡವಾದಗಳಿಗೆ ಬಹಿರಂಗವಾಗಿ ಉತ್ತರ ಕೊಡುವುದನ್ನು ಅವರು ಇಷ್ಟಪಡುವುದಿಲ್ಲ.
ಅದಕ್ಕೆ ಅವರು ಹೇಳುವ ಕಾರಣ ನಮ್ಮ ಮುಸ್ಲಿಮರ ಅಭ್ಯಂತರ ಕಲಹ ಅನ್ಯಧರ್ಮೀಯರು ಕೇಳುವಂತಾಗಬಾರದು
ಅಂದರೆ ಸಳಪಿ /ಜಮಾತ್/ತಬ್ಲೀಗ್ ಆಗಿ ಈಮಾನ್ ನಷ್ಟ ಹೊಂದಿದರೂ ಪರವಾಗಿಲ್ಲ.
ದುನಿಯಾದ ಪ್ರತಿಷ್ಠೆಗಾಗಿ ಪ್ರತಿಕ್ರಿಯಿಸಬಾರದು!
ಅದಿರಲಿ....

ಒಂದು ಉದಾಹರಣೆ ಕೊಡುತ್ತೇನೆ
ಒಂದು ಇಡೀ ಕೋಳಿಯನ್ನು ಫ್ರೈ ಮಾಡಿ ತಟ್ಟೆಯಲ್ಲಿ ಹಾಕಿ ಮುಂದಿಟ್ಟಾಗ ಹಸಿವಿನಿಂದ ಕಂಗಲಾಗಿದ್ದ ಐದಾರು ಜನರು ಒಮ್ಮೆಲೆ ಮುಗಿ ಬಿದ್ದು ಒಬ್ಬೊಬ್ಬರು ಒಂದೊಂದು ಅಂಗಾಂಗಗಳನ್ನು ಎಳೆದು ಕೊಂಡು ಹೋಗುವಾಗ ಕೋಳಿ ಪ್ರತಿಕ್ರಯಿಸುವುದೇ ಇಲ್ಲ!
ನಿಮಿಷಾರ್ಧದಲ್ಲಿ ಬಟ್ಟಲು ಖಾಲಿ! ಖಾಲಿ!!

ಅದೇ ರೀತಿಯಾಗಿದೆ ಇಸ್ಲಾಮನ್ನು ಒಂದು ಕಡೆಯಿಂದ ಸಳಪಿ ಎಳೆದ,ಮತ್ತೊಂದು ಕಡೆಯಿಂದ ಮೌದೂದಿ ಎಳೆದುಕೊಂಡು ಹೋದ, ಮಗದೊಂದು ಭಾಗವನ್ನು ತಬ್ಲೀಗ್ ತಿಂದು ಮುಗಿಸಿದ. ಇನ್ನೊಂದು ಭಾಗ ಖಾದಿಯಾನಿಯ ಪಾಲಾಯಿತು.
ಆದಾಗಲೇ ಮೊದಲೇ ಕೆಲವರು ಆಜ್ಞಾಪಿಸಿ ಆಗಿತ್ತು. ಯಾರೂ ಎಳೆದು ಕೊಂಡು ಹೋದರೂ ಪ್ರತಿಕ್ರಯಿಸಬಾರದು!
ಅದು ಅನ್ಯಧರ್ಮಿಯರ ಮುಂದೆ ನಾಚಿಕೆಗೇಡು!
ಈ ರೀತಿ ಬಾಯಿಮುಚ್ಚಿ ಕೂತರೆ ಇಲ್ಲಿ ಇಸ್ಲಾಮಿಗೆ ವಿಳಾಸ ಇರಬಹುದಾ❓

ಆದ್ದರಿಂದಲೇ ನಮ್ಮ ಉಲಮಾಗಳು ತಾವು ಕಲಿತ ಸತ್ಯವನ್ನು ಯಾವ ಮುಲಾಜು ಇಲ್ಲದೆ ಬಹಿರಂಗ ಪಡಿಸುವುದು.
ವಿಪರ್ಯಾಸ ಏನೆಂದರೆ ಇದು ಕೆಲವರಿಗೆ ಪಥ್ಯವಾಗುದೇ ಇಲ್ಲ!
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಗೆ ಎಚ್ಚರಿಕೆ ನೀಡಿದ್ದಾರೆ.
ಒಂದು ಮೇಜಿನ ಸುತ್ತ ಇರುವ ಆಹಾರಪದಾರ್ಥಗಳನ್ನು ಸುತ್ತಲೂ ಕುಳಿತ ಹಸಿದು ಕಂಗಲಾದವರು ತಿಂದು ಮುಗಿಸುವಂತೆ ನನ್ನ ಸಮುದಾಯಕ್ಕೆ ನಾಶ ಬರಲಿದೆ!
ಸಹಾಬಿಗಳು ಕೇಳಿದರು ಅಂದು ಮುಸ್ಲಿಮರ ಸಂಖ್ಯೆ ಕಮ್ಮಿ ಇರಬಹುದಾ.?
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಉತ್ತರಿಸಿದರು
ಇಲ್ಲ ಅಂದು ಮುಸ್ಲಿಮರ ಸಂಖ್ಯೆ ದುಪ್ಪಟ್ಟು ಆಗಿರುತ್ತೆ!
ಆದರೆ ಅವರಿಂದ ಯಾವುದೇ ಪ್ರಯೋಜನ ಇಲ್ಲ!
 ಕ್ವಾಂಡಿಟಿ ಇದೆ ಕ್ವಾಲಿಟಿ ಇಲ್ಲ!

ಇದೇ ಹದೀಸ್ ಗೆ ಮತ್ತೊಂದು ಹದೀಸ್  ಫಿಟ್'ಮಾಡಿ ನೋಡಿ
ಆ ಹದೀಸ್ ಹೀಗಿದೆ....
"ನನ್ನ ಸಮುದಾಯ 73 ಪಂಗಡಗಳಾಗಿ ವಿಭಜನೆಯಾಗಲಿದೆ ಅದರಲ್ಲಿ ಒಂದು ವಿಭಾಗ ಹೊರತು ಪಡಿಸಿ 72 ಪಂಗಡಗಳು ನರಕದ ಹಕ್ಕುದಾರರು!!"
ಸ್ವರ್ಗದ ಹಕ್ಕುದಾರರು ಯಾರೆಂಬ ಪ್ರಶ್ನೆ ಬಂತು.
"ನಾನು ಮತ್ತು ನನ್ನ ಸಹಾಬಿಗಳನ್ನು ಅನುಸರಿಸಿದವರು"
ಇಲ್ಲಿ ಪ್ರತೇಕ ಗಮನಿಸಬೇಕಾದ ಅಂಶ ಮುತ್ತು ನೆಬಿಯವರು ನರಕದ ಹಕ್ಕುದಾರರನ್ನಾಗಿ ಬೊಟ್ಟುಮಾಡಿದ 72 ಪಂಗಡಗಳು ಮುಸ್ಲಿಮರೇ!
ಅನ್ಯಧರ್ಮಿಯರ ಹೆಸರೇ ಇಲ್ಲ!
ಅಂದರೆ ಇಸ್ಲಾಮಿನ ನಾಶ ಮುಸ್ಲಿಮರಿಂದಲೇ ಎಂಬುದು ವ್ಯಕ್ತ!
ಅಂತಹ ಮುಸ್ಲಿಮರ ವಿರುದ್ಧ ಮಾತೆತ್ತಬಾರದು ಎಂದು ಫತ್ವ ಕೊಡುವವನು ಇಸ್ಲಾಮಿನ ಶತ್ರು ಅಲ್ಲದಿದ್ದರೆ ಮತ್ತಾರು ಇಸ್ಲಾಮಿನ ಶತ್ರು❓

ಅಲ್ಲಾಹು ಹೇಳುತ್ತಾನೆ
"ನಿನ್ನಲ್ಲಿ ಈಮಾನ್ ಎಂಬ ವಜ್ರಾಯುಧ ಇರುವ ತನಕ ಟೆನ್ಶನ್ ಆಗುವ  ಅಗತ್ಯ ಇಲ್ಲ"
ಆದರೆ ನಮ್ಮಲ್ಲಿರುವ ಕೊರತೆ ಅದುವೇ.
ಕೇವಲ ಆವೇಶದಿಂದ ಯಾವುದೇ ಪ್ರಯೋಜನ ಇಲ್ಲ.

ಪರಲೋಕದಲ್ಲಿ ಅಲ್ಲಾಹು ಸಳಪಿಯನ್ನು ಕರೆದು ಕೇಳುವನು
ನೀನು ತರಾವೀಹ್ ಎಷ್ಟು ನಿರ್ಹಿಸಿದ್ದಿ?
ಆಗ ಸಳಪಿಯ ಉತ್ತರ 8
ಏಂಟಾ.??
ಅಲ್ಲ.....ಅಲ್ಲ... 8+3=11
ಯಾರು ಕಲಿಸಿದ್ದು? ?
ನಮ್ಮ ಸಳಪಿ ಪಂಡಿತರು.
ಆಗ ಅಲ್ಲಾಹನು ಕೇಳುವನು ನಿನ್ನ ಮುದಿ ಸಳಪಿ ಇಪ್ಪತ್ತು ರಕಾತ್ ಅಂತ ಬರೆದಿದ್ದಾನೆ.
ಹೌದು ಮುದಿ ಸಳಪಿಗೆ ಅಂದು ಇಪ್ಪತ್ತು ಇತ್ತು ಆದರೆ ಮರಿಸಳಪಿಗಳಾದ ನಮಗೆ ಎಂಟಾಯಿತು!
ಹಾಗಾದರೆ ನಿನ್ನ ಮಕ್ಕಳ ಕಾಲದಲ್ಲಿ ನಾಲ್ಕು ರಕಾತ್ ಆಗಿರಬಹುದಲ್ಲ!
ಇಲ್ಲ ಅದಕ್ಕಿಂತ ಮುಂಚೆಯೇ ತರಾವೀಹ್ ಎಂಬ ನಮಾಜೇ ಇಲ್ಲ ಎಂದು ಹೇಳಿ ಡೆಲಿಟ್ ಮಾಡಲಾಗಿದೆ!

ಹಾಗಾದರೆ ಇಪ್ಪತ್ತು ರಕಾತ್ ನಿರ್ವಹಿಸಿದ ಸಹಾಬಿಯಾದ ಉಮರ್(ರ)ರವರ ನೈಜ ಹಾದಿಯಿಂದ  ಹಿಂದೆ ಸರಿದವನಾಗಿದ್ದು ನೀನು ನರಕಕ್ಕೆ ಹೋಗು ಎಂದು ಆಜ್ಞಾಪಿಸುವುದು ನಿಶ್ಚಿತ!

ನಂತರ ಜಮಾತೇ ಇಸ್ಲಾಮಿ ಯನ್ನು ಕರೆಯಲಾಗುತ್ತೆ.
ನೀನು ಮುಸ್ಲಿಮರ ಸಬಲೀಕರಣಕ್ಕಾಗಿ ವೆಲ್'ಫೇರ್ ಎಂಬ ರಾಜಕೀಯ ಪಾರ್ಟಿ ಮಾಡಿ ಮುಸ್ಲಿಮ್ ಮಹಿಳೆಯರನ್ನು ಬೀದಿಗೆ ತರಲಿಲ್ಲವೇ..??
ಹೌದು ತಂದಿದ್ದೇನೆ ಮೌದೂದಿಯ ಉತ್ತರ.
ಆಗ ಅಲ್ಲಾಹು ಹೇಳುವನು
ನಾನು ಜನರ ಸಬಲೀಕರಣಕ್ಕಾಗಿ ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರ ಪ್ರವಾದಿಗಳನ್ನು ಕಳುಹಿಸಿ ಕೊಟ್ಟಿದ್ದೇನೆ
ಅವರಲ್ಲಿ ಒಂದೇ ಒಂದು ಮಹಿಳೆ ಇತ್ತಾ.??
ಮೌದೂದಿಯ ಉತ್ತರ  ಇಲ್ಲ..
ಆಗ ಅಲ್ಲಾಹನು ಪುನಃ ಕೇಳುವನು
ನಿಮ್ಮ ಶೂರಾ ಕೌನ್ಸಿಲ್ ಗೆ ಮಹಿಳೆಯ ನೇತ್ರತ್ವ ಇದೆ ತಾನೇ.??
ಮೌದೂದಿ ಹೌದೆಂದು ಉತ್ತರಿಸುತ್ತಾನೆ.
ಹಾಗಾದರೆ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಪ್ರಿಯಪತ್ನಿಯರಲ್ಲಿ ಯಾರಾದರೂ ಒಬ್ಬರೂ ಶೂರಾ ಕೌನ್ಸಿಲ್ ರಚಿಸಿದ್ದಾರಾ.??
ಹೋಗಲಿ ಕೂಗಳತೆಯ ಹತ್ತಿರವಿದ್ದು ಮದೀನಾ ಮಸೀದಿಗೆಅವರಲ್ಲಿ ಯಾರಾದರೊಬ್ಬರೂ ಜುಮಾ ಜಮಾತ್'ಗೆ ಹೋಗಿದ್ದಾರಾ..??
ಮೌದೂದಿ ಉತ್ತರವಿಲ್ಲದೆ ಕಂಗಲಾಗುವಾಗ
ಅವನನ್ನು ನರಕಕ್ಕೆ ಹೋಗಲು ಆಜ್ಞಾಪಿಸಲಾಗುವುದು ಗ್ಯಾರಂಟಿ!
ನಂತರ ಕಾದಿಯಾನಿ/ಚೇಗನ್ನೂರು ಅದೆಲ್ಲಾ ಒಂದೇ
ತದನಂತರ ತಬ್ಲೀಗ್ ನಲ್ಲಿ ಕೇಳಲಾಗುತ್ತೆ
"ನಮಾಜಿನ ಅತ್ತಹುಯ್ಯಾತ್'ನಲ್ಲಿ ನೆಬಿಯವರಿಗೆ ಡೈರಕ್ಟ್ ಸಲಾಮ್ ಹೇಳುವಾಗ ಎತ್ತುಗಳನ್ನು ನೆನೆಸಿದರೂ ಪ್ರವಾದಿಯವರನ್ನು ನೆನಸಬಾರದೆಂದು ಹೇಳಿ ಮುತ್ತು ನೆಬಿಯವರನ್ನು ನಿಂದಿಸಿದ ನಿನ್ನ ಸ್ಥಳ ನರಕವಾಗಿದೆ ಎಂದು ಹೇಳುವುದು ಖಂಡಿತ!
ಕೊನೆಯದಾಗಿ ನಮ್ಮ ಜನರಲ್ ಮುಸ್ಲಿಮನನ್ನು ಕರೆಯಲಾಗುತ್ತೆ.
ಅಲ್ಲಾಹು ಅವನಲ್ಲಿ ಕೇಳುತ್ತಾನೆ.
ನಿನ್ನ ಅವಸ್ಥೆ ಏನು.??
"ಇಲ್ಲ ನನಗೆ ಹಾಗೇನಿಲ್ಲ ಸುನ್ನಿ /ಸಳಪಿ /ತಬ್ಲೀಗ್ ಎಲ್ಲರೂ ಸಮ
ಎಲ್ಲಿಯಾದರೇನು ನಮಾಜು ಮಾಡಿದರಾಯಿತು.
ಯಾರದರೇನು ಸಲಾಂ ಹೇಳಿದರಾಯಿತು
ಯಾವ ಸಂಸ್ಥೆಯಾದರೇನು ಕಲಿತರಾಯಿತು!
ಈ ರೀತಿಯ ಜನರಲ್ ಇಸ್ಲಾಮನ್ನು ಪರಿಚಯ ಪಡಿಸಿದಾಗ ಅಲ್ಲಾಹು ಹೇಳುವನು
ನೀನು ನರಕಕ್ಕೆ ಹೋಗು ಎಂದು
ಆವಾಗ ಜನರಲ್ ಮುಸ್ಲಿಮ್ ತಾನು ನರಕಕ್ಕೆ ಹೋಗುವುದಿಲ್ಲ ಎಂದು ಬೊಬ್ಬಿಡಲು ಶುರುಮಾಡುತ್ತಾನೆ
ಆಗ ಅಲ್ಲಾಹನ ಜನರಲ್ ಸ್ಟೈಲ್'ನ ಖಡಕ್ಕ್ ಉತ್ತರ ಬರುತ್ತೆ
"ಎಲ್ಲಿಯಾದರೇನು ಹೋಗಿ ಮಲಗಿದರಾಯಿತು!!"
ಅಷ್ಟರಲ್ಲೇ ಜನರಲ್ ಮುಸ್ಲಿಮನನ್ನು ಮಲಕ್'ಗಳು ಬಂಧಿಸಿ ನರಕಕ್ಕೆ ಎಸೆದು ಆಗಿತ್ತು!

➡ಇದು ಯಾರನ್ನೂ ಕೀಳಾಗಿಸಲು ಬರೆದದ್ದಲ್ಲ
ಅದ್ಯಾವನೋ ಒಬ್ಬ ಪರಲೋಕದಲ್ಲಿ ಸಳಪಿ/ ಜಮಾತ್ / ತಬ್ಲೀಗ್ ಅಂತ ಬೇರೆ ಬೇರೆ ಪಂಗಡ ಇಲ್ಲ ಎರಡೇ ವಿಭಾಗ ಇರುವುದು ಒಂದು ನರಕಕ್ಕೆ ಮತ್ತೊಂದು ಸ್ವರ್ಗಕ್ಕೆಂದು ಗೀಚಿದ್ದ.
 ಅದರೆ ಮುತ್ತುನೆಬಿ 73 ಪಂಗಡಗಳನ್ನು ಗುರುತಿಸಿದ್ದಾರೆ 72 ನರಕಕ್ಕೆ ಎಂದು ಡಿಸೈಡ್ ಮಾಡಿ , ಅವರೆಲ್ಲರೂ ಮುಸ್ಲಿಮರೆಂದು ಡಿಕ್ಲೆರ್ ಕೂಡಾ ಮಾಡಿದ್ದಾರೆ!
ಹಾಗಾಗಿ..
ಅಪಾರ್ಥ ಮಾಡದೆ ಅರ್ಥ ಮಾಡಲಿಕ್ಕಾಗಿ ಉದಾಹರಣೆ ಸಹಿತ ಗೀಚಿದೆ
ಅಲ್ಲಾಹು ಸ್ವೀಕರಿಸಲಿ ಆಮೀನ್

✒  ಅಬೂಶಝ

No comments:

Post a Comment