ನಿಜವಾಗಿ ಇಂತಹ ಅಂತೆಕಂತೆ ಪುಕ್ಕಟೆ ಆರೋಪಗಳಿಗೆ ಉತ್ತರ ಕೊಡುವ ಜಾಯಮಾನ ನಮ್ಮದಲ್ಲ.
ಆದರೂ ಇಂತಹ ಆದಾರ ರಹಿತ ಬರಹಗಳಿಂದ ಪುಕ್ಕಟೆ ಮನರಂಜನೆ ಪಡೆಯುವವರಿಗೆ ಸಣ್ಣದೊಂದು ಟಾಂಗ್ ಕೊಡುವ ಅಂತ ಮನಸ್ಸಾಯಿತು ಹಾಗಾಗಿ ಬರೆಯುತ್ತಿದ್ದೇನೆ.
👉ಎಸ್ಸೆಸ್ಸೆಫ್ ನವರು DJ ಮ್ಯುಸಿಕ್ ಉರೂಸ್ ಹಾಡುಗಳನ್ನು ಹಲಾಲ್ ಗೊಳಿಸಿದ್ದಾರೆಂದು ಒಬ್ಬನ ಆರೋಪ.
ಆದರೆ ಇದು ಅವನ ಶುದ್ದ ಸುಳ್ಳು ಆರೋಪ
ಯಾರೋ ದೀನಿನ ಗಂಧಗಾಳಿ ಇಲ್ಲದ ಸಂಗೀತಗಾರರು ಮ್ಯುಸಿಕ್ ಹಾಕಿ ಉರೂಸ್ ಹಾಡುಗಳಿಂದ ಹಣ ಮಾಡುವ ದಂದೆಗಿಳಿದರೆ ಅದನ್ನು ಎಸ್ಸೆಸ್ಸೆಫ್ ನವರ ತಲೆಗೆ ಕಟ್ಟಿಹಾಕುವುದು ಎಷ್ಟು ಸರಿ..??
👉ಹೌದು...
ಕರ್ನಾಟಕ ಸರಕಾರದ ಗ್ರಹ ಮಂತ್ರಿ ಸತ್ತಾಗ ಸರಕಾರದ ಉನ್ನತ ಮಟ್ಟದೊಂದು ಬೋರ್ಡ್ ಸದಸ್ಯರಾಗಿದ್ದರಿಂದ ಆ ಗ್ರಹ ಮಂತ್ರಿಯ ಫೋಟೋಕ್ಕೆ ಹಾರಹಾಕಬೇಕಾಗಿ ಬಂತು
ನಿಜವಾಗಿ ಅದೊಂದು ಅನಿರೀಕ್ಷಿತ ಘಟನೆಯಾಗಿತ್ತು.
ಆದರೂ ನಮ್ಮ ಸುನ್ನಿ ಜಂ - ಇಯ್ಯತುಲ್ ಉಲಮಾ ಸಂಘಟನೆಯ ಬೇಕಲ ಉಸ್ತಾದರಂತಹ ಘಟಾನುಘಟಿ ಉಲಮಾಗಳು ಕೂಡಲೇ ಅವರನ್ನು ಕರೆದು ಎಚ್ಚರಿಕೆ ಕೊಟ್ಟದ್ದು ಅಂದಿನ ವಾರ್ತಾಭಾರತಿ ವರದಿ ಮಾಡಿದೆ.
ನಂತರ ಅಂತಹ ಪ್ರಮಾದಗಳು ಅವರಿಂದ ಮರುಕಳಿಸಲಿಲ್ಲ.
ತಪ್ಪು ಸಂಭವಿಸುವುದು ಮನುಷ್ಯ ಸಹಜ.
ಅದನ್ನು ಮತ್ತೊಮ್ಮೆ ಮರುಕಳಿಸಿದಂತೆ ತಿದ್ದಿ ನಡೆಯುವವನೆ ನಿಜವಾದ ಮುಸ್ಲಿಂ
👉ಪ್ರಮಾದ ಸಂಭವಿಸಿದ ಆ ವ್ಯಕ್ತಿ ಅಲ್ಲಾಹನಲ್ಲಿ ತೌಬ ಮಾಡಿ ಜನರಲ್ಲಿಯೂ ಕ್ಷಮೆ ಬೇಡಿದ ನಂತರ ಅವರು ಪರಿಶುದ್ದರು.
ಅಂತಹ ಶುದ್ದ ವ್ಯಕ್ತಿತ್ವದ ಮೇಲೆ ಮತ್ತೂ ಆ ಹಳೆಯ ಆರೋಪ ಹೊರಿಸುವವನ ಅವಸ್ಥೆ ಪರಲೋಕದಲ್ಲಿ ಏನಾಗಿರಬಹುದು...??
👉ಬೇರೆ ಸಂಘಟನೆಗಳಲ್ಲಿ ನ್ಯಾಯಕ್ಕಾಗಿ ಹೆಂಗಸರು ಪ್ರತಿಭಟಿಸಿದರೆ ಟೀಕಿಸುವುದು,
ಉರೂಸ್ ಸಲಾತ್ ಕಾರ್ಯಕ್ರಮದಲ್ಲಿ ಹೆಂಗಸರು ಪಾಲ್ಗೊಳ್ಳಬಹುದು
ಇದು ಎಸ್ಸೆಸ್ಸೆಫ್ ನ ಧ್ವಂದ ನೀತಿ ಎಂದು ಅವನ ಮತ್ತೊಂದು ಆರೋಪ.
ಈ ಆರೋಪವನ್ನು ಎಸ್ಸೆಸ್ಸೆಫ್ ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತೆ. ಕಾರಣ
ಪ್ರವಾದಿ ಪತ್ನಿಯಾದ ಆಯಿಶಾ(ರ)ರಂತವರು
ದರ್ಗಾ ಝಿಯಾರತ್ ಮಾಡಿದ್ದಾರೆ.
ಮುತ್ತು ನೆಬಿಯವರ ಕಬರ್ ಶರೀಫ್,ಅಬೂಬಕರ್ (ರ) ಕಬರ್ ಝಿಯಾರತ್ ಆಯಿಶಾ (ರ) ಮಾಡುತ್ತಿದ್ದರು.ಆವಾಗಲೆಲ್ಲಾ ಬುರ್ಖಾ ಹಾಕಿ ಹೋಗುತ್ತಿರಲಿಲ್ಲ ಕಾರಣ ಒಂದು ಪತಿ ಮತ್ತೊಂದು ತಂದೆ.
ಆದರೆ ಉಮರ್ (ರ)ರವರನ್ನು ದಫನ್ ಮಾಡಿದ ನಂತರ ಆಯಿಶಾ(ರ) ಪೂರ್ಣವಾಗಿ ಔರತ್ ಮುಚ್ಚಿ ಝಿಯಾರತಿಗೆ ಹೋಗುತ್ತಿದ್ದರು.
ಆದೆರೆ ..
ಈ ರೀತಿ ದರ್ಗಾ ಝಿಯಾರತ್ ಗೆ ಹೋಗುತ್ತಿದ್ದ ಆಯಿಶಾ(ರ) ತನ್ನ ಪಕ್ಕದಲ್ಲೇ ಇರುವ ಮಸೀದಿಗೆ ನಮಾಜು ಮಾಡಲು ಹೋಗುತ್ತಿರಲಿಲ್ಲ.
ಮುತ್ತು ನೆಬಿ ಕಲಿಸಿದ ಹಾಗೆ,
"ಮಹಿಳೆಗೆ ಮಸೀದಿಗಿಂತ ಮನೆಯೇ ಉತ್ತಮ" ಎಂಬ
ವಚನವನ್ನು ಪಾಲಿಸಿ ಮನೆಯಲ್ಲಿಯೇ ನಮಾಜು ನಿರ್ವಹಿಸುತ್ತಿದ್ದರು.
ಅದೇ ರೀತಿ ಪ್ರತಿಭಟನೆ ಮಾಡಲು ಬೀದಿಬದಿಗೆ ಆಯಿಶಾ (ರ) ಹೋಗಿರಲಿಲ್ಲ.
ಅತೀ ಪ್ರಮುಖರ ಬೇಡಿಕೆಯನ್ನು ಅನುಸರಿಸಿ ಮುಸ್ಲಿಮರ ಮಧ್ಯೆ ಚಿಕ್ಕದಾದ ಸಂಘರ್ಷ ಉಂಟಾದಾಗ ಜಮಲ್ ಯುದ್ಧದಲ್ಲಿ ಐಕ್ಯತೆ ಮತ್ತು ಮಸ್ಲಹತ್ ಮಾತುಕತೆಗೆ ಬೇಕಾಗಿ ಆಯಿಶಾ (ರ) ಹೋಗಿದ್ದು ಸರಿ,
ಆದರೆ...
👉"ಸ್ತ್ರಿಯರೇನೀವು ನಿಮ್ಮ ಮನೆಯಲ್ಲಿಯೇ ಭದ್ರವಾಗಿ ನೆಲೆಯೂರಿ"
ಎಂಬ ಅಹ್ಝಾಬ್ ನ 33ನೇ ಆಯತ್ ಪಾರಾಯಣಗೆಯ್ಯುವಾಗ ಬೀವಿಯವರ ಮುಖಕವಚ(ಮಕ್ಕನೆ) ಕಣ್ಣೀರಿನಿಂದ ಒದ್ದೆಯಾಗುವ ರೀತಿಯಲ್ಲಿ ಅಳುತ್ತಿದ್ದರು
ಇದರ ಕಾರಣ ಅಂದು ಅವರು 'ಜಮಲ್'
ಯುದ್ಧದಲ್ಲಿ ಭಾಗವಹಿಸಿದ್ದಾಗಿತ್ತು..!!
ಈ ವಾಸ್ತವಿಕತೆಯನ್ನು ಇಮಾಮ್ ಖುರ್ತುಬಿ
ತನ್ನ ಅಲ್ ಜಾಮಿಉ -ಲಿ- ಅಹ್ಕಾಮಿಲ್ ಕುರಾನ್ ಎಂಬ ಗ್ರಂಥದ. 14/-117-118
ಪುಟಗಳಲ್ಲಿ ವಿವರಿಸಿದ್ದಾರೆ.
ಅಂದರೆ ಎಸ್ಸೆಸ್ಸೆಫ್ ನವರು ಯಾವುದೇ ಕಾರ್ಯವನ್ನು ಸುಮ್ಮನೆ ಹೇಳುವುದಿಲ್ಲ
ಅವರಿಗೆ ಮಾದರಿ ಸಹಾಬಿ ವನಿತೆಯರಾದ ಆಯಿಶಾ (ರ) ರಂತವರ ಆದರ್ಶ.
ಕಾರಣ ಆಯಿಶಾ(ರ) ಪ್ರತಿಭಟನೆಗೋ,ಮಸೀದಿಗೋ ಹೋಗಲಿಲ್ಲ
ಆದರೆ ದರ್ಗಾ ಝಿಯಾರತ್ ಗೆ ಹೋಗಿದ್ದರು.
👉ಮಂಗಳೂರು ಖಾಝಿಯವರನ್ನು ಯಾರೂ ವ್ಯಕ್ತಿಗತವಾಗಿ ನಿಂದಿಸಲಿಲ್ಲ.
ಆದರೆ ಅವರು ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರ ತಿರುಕೇಶವನ್ನು ಯಾವುದೋ ಬೀಕಾರಿ ಹೆಣ್ಣಿನ ಕೂದಲೆಂದು ಅಪಹಾಸ್ಯ ಮಾಡುತ್ತಾರೆ.
ಉಳ್ಳಾಲದಲ್ಲಿ ಖಾಝಿಯಾಗಿ ತಾಜುಲ್ ಉಲಮಾ ಇರುವಾಗಲೇ ಅನಧಿಕ್ರತವಾಗಿ ಅಲ್ಲಿ ಪ್ರವೇಶಿಸಿ ಜುಮಾ ಸ್ಥಾಪಿಸಿ ಫಿತ್ನ ಮಾಡುತ್ತಾರೆ.
ಆ ಜುಮಾ ಅಸಿಂಧುವೆಂದು ಕರ್ಮಶಾಸ್ತ್ರ ಪ್ರಕಾರ ಎಸ್ಸೆಸ್ಸೆಫ್ ನ ಉಲಮಾಗಳು ಹೇಳುತ್ತಾರೆ ಮಾತ್ರವಲ್ಲ ಆ ವಿಷಯದಲ್ಲಿ ಬಹಿರಂಗ ಸಂವಾದಕ್ಕೆ ಆಹ್ವಾನ ನೀಡುತ್ತಾರೆ.
ಅಂದರೆ ಬಹಿರಂಗವಾಗಿ ಈ ರೀತಿಯ ಪ್ರಮಾದಗಳನ್ನು ನಿರಂತರ ಮಾಡುತ್ತಲೇ ಇರುವಾಗ ಅವರ ಈ ನಿಲುವನ್ನು ಪ್ರಶ್ನಿಸಿದ್ದು ತಪ್ಪಾ..??
ಎಸ್ಸೆಸ್ಸೆಫ್ ಮಾಡುವ ಪ್ರತಿಯೊಂದು ಕಾರ್ಯಕ್ಕೂ ದೀನಿನಲ್ಲಿ ಆದಾರ ಇದೆ.
ಆದರೆ ಬುರ್ದಾ ಡ್ಯಾನ್ಸ್, DJಉರೂಸ್,ಗ್ರಾಮೀಣ ಪ್ರದೇಶಗಳ ಜನರನ್ನು ಕುರಾನ್ ದುರ್ವ್ಯಖ್ಯಾನ ಹೇಳಿ ವಂಚಿಸುವುದು ಇಂತಹ ತಲೆಬುರುಡೆ ಇಲ್ಲದ
ಆರೋಪಗಳಿಗೆ ಎಸ್ಸೆಸ್ಸೆಫ್ ಯಾವತ್ತೂ ಉತ್ತರಿಸಲ್ಲ
ಕಾರಣ ಅಂತಹ ಜಾಯಮಾನದವರಲ್ಲ ಎಸ್ಸೆಸ್ಸೆಫ್ ನವರು.
ಅವರಿಗೆ ನೇತ್ರತ್ವ ನೀಡುತ್ತಿರುವವರು ಪ್ರವಾದಿಗಳ ಉತ್ತರಾಧಿಕಾರಿಗಳು.
ಅದೇ ಘನವೆತ್ತ, ಸತ್ಯಕ್ಕೆ ಎದುರಾದ ಯಾವ ಆಕ್ಷೇಪವನ್ನು ಲೆಕ್ಕಿಸದೆ ಸತ್ಯವನ್ನು ಸತ್ಯವಾಗಿ ಹೇಳುವ ವಿಧ್ವಾಂಸರಾಗಿದ್ದಾರೆ.
ಅಲ್ಲದೆ ನಾಲ್ಕು ಕನ್ನಡದ ಭಾಷಾಂತರ ಓದಿ
ಭಾಷಣ ಬಿಗಿಯುವ ಟೋಪಿ ಧರಿಸದ
ಪ್ಯಾಂಟ್ ದಾರಿ ಜಾಹಿಲ್ ಗಳಲ್ಲ ನೆನಪಿರಲಿ..!!
👉ಅಬೂಶಝ ಪುತ್ತೂರು
No comments:
Post a Comment