ಮುಸ್ಲಿಮ್ ಯುವಕರನ್ನು ಕೋಮುವಾದಿಗಳನ್ನಾಗಿ ಮಾರ್ಪಡಿಸುವಲ್ಲಿ ಸಂಘಿಗಳಷ್ಟೇ ಪಾತ್ರ ಕಾಂಗ್ರೆಸ್ ಗೂ ಇದೆಯೆಂದೂ ಹೇಳಿದರೆ ತಪ್ಪಾಗುತ್ತಾ?
*-----------------------------*
1992 ಡಿಸೆಂಬರ್ 06 ರ ನಂತರ ಮುಸ್ಲಿಮರು ಕಾಂಗ್ರೆಸ್ ಪಕ್ಷದೊಂದಿಗಿನ ವಿಶ್ವಾಸವನ್ನು ಬಹುತೇಕ ಕಳಕೊಂಡಿದ್ದರು.
ಆದರೂ ಅಜ್ಜ ನೆಟ್ಟ ಆಲದ ಮರವೆಂಬ ನಿಟ್ಟಿನಲ್ಲಿ ಕೆಲವು ಮುಸ್ಲಿಮರು ಈಗಲೂ ನೇತಾಡುವುದರಿಂದ ಬದುಕಿದೆಯಾ ಬಡಜೀವವೆಂಬ ರೀತಿಯಲ್ಲಿ ಅದು ಉಸಿರಾಡುತ್ತಿದೆ.
ಆದರೆ ಸಾಮಾನ್ಯ ಹಿಂದು ಕೂಡಾ ಕೋಮುವಾದಿಯಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಕಾಂಗ್ರೆಸ್ ತನ್ನ ಮೃದು ಹಿಂದುತ್ವದಿಂದ ಹಿಂದೆ ಸರಿಯುತ್ತಾ, ಒಂದಿಷ್ಟು ಹಾರ್ಡ್ ಹಿಂದುತ್ವದತ್ತ ಗಮನಹರಿಸುತ್ತಿದೆ ಎಂಬ ಗುಮಾನಿ ಸುಳ್ಳಲ್ಲ.
ಮಾಜಿ ಕೇಂದ್ರ ಸಚಿವ ಕೇರಳದ ಅ್ಯಾಂಟನಿ ಹೇಳಿದಂತೆ ಕಾಂಗ್ರೆಸ್ ನಾಯಕರು ಹಗಲು ಖಾದಿ ಧರಿಸುವರು ರಾತ್ರಿ ಸಂಘಿಗಳಾಗುವರೆಂಬ ಮಾತು ಅಕ್ಷರಶಃ ನಿಜವಾಗುತ್ತಿದೆ.
ಕಾಂಗ್ರೆಸ್ ನಲ್ಲಿ ಬೆಳೆದು ಬರುವ ಯುವ ನಾಯಕರು ಬೇರೆ ಬೇರೆ ಕಾರಣಗಳಿಂದ ಹತ್ಯೆಯಾಗುತ್ತಿರುವಾಗ ಕಾಂಗ್ರೆಸ್ ಮುಸ್ಲಿಮ್ ನಾಯಕರನ್ನು ಬೆಳೆಯಲು ಬಿಡುತ್ತಿಲ್ಲವೆಂಬ ಆರೋಪಕ್ಕೆ ಪುಷ್ಟಿ ಬರುತ್ತದೆ.
ಹಾಡಹಗಲೇ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನನ್ನು ಬರ್ಬರವಾಗಿ ಕೊಚ್ಚಿಕೊಲೆಗೆಯ್ಯಲು ದುಷ್ಕರ್ಮಿಗಳಿಗೆ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದ ಕರಾವಳಿಯಲ್ಲಿ ಸಾದ್ಯವಾಗುತ್ತಿದೆಯೆಂದರೆ ಅದು ಇಲ್ಲಿನ ಉಸ್ತುವಾರಿ ಮಂತ್ರಿಯ ಅಧಪತನವೆಂದೇ ಹೇಳಬೇಕು.
ಕೊಲೆ ಮಾಡಿದ ದುಷ್ಕರ್ಮಿಗಳು ಪುತ್ತೂರು ಸಮೀಪದ ಸವಣೂರಿನ ಹತ್ತೊಂಬತ್ತು, ಇಪ್ಪತ್ತು ವಯಸ್ಸಿನ ಎಳೆಯ ಯುವಕರು!
ಇಲ್ಲಿನ ಇಂಟಲಿಜೆನ್ಸ್ ಬ್ಯೂರೋ ಸಕ್ರಿಯವಾಗಿದ್ದು ಕೂಡಾ ಇಂತಹ ಬರ್ಬರ ಹತ್ಯೆ ಕುರಿತು ಮಾಹಿತಿ ಸಂಗ್ರಹಿಸಲು ಸಾದ್ಯವಾಗಿಲ್ಲ ಅಂದ್ರೆ ಜಿಲ್ಲೆಯ ಸಾಮಾನ್ಯ ಜನರ ಬದುಕಿನ ಭದ್ರತೆಗೆ ಎಲ್ಲಿಯ ರಕ್ಷಣೆ ಎಂಬುದು ಕೇಳುವಂತಾಗಿದೆ.
ಸ್ವಾತಂತ್ರ್ಯ ಪೂರ್ವ ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ,ಗ್ರಾಮ ಪಂಚಾಯತ್ ಉಪಾಧ್ಯಕ್ಷನಾಗಿ ಆಯ್ಕೆಯಾದ ಜನಪ್ರತಿನಿಧಿಗೆ ಇಲ್ಲಿ ರಕ್ಷೆ ಇಲ್ಲ ಎಂದಾದರೆ ಇಲ್ಲಿನ ಸಾಮಾನ್ಯ ಪ್ರಜೆಯ ಅವಸ್ಥೆ ಹೇಗಿರಬೇಡ?
ಇದರಿಂದಲೇ ಇಲ್ಲಿನ ರಕ್ಷಣಾ ವಿಭಾಗ ಎಷ್ಟೊಂದು ದುರ್ಬಲವಾಗಿದೆಯೆಂದು ಊಹಿಸಬಹುದು.
ಬಿಹಾರ್, ಗುಜರಾತ್,ರಾಜಸ್ಥಾನದ ಲ್ಲಿ ದಿನನಿತ್ಯ ನಡೆಯುವ ಅಕ್ರಮ ದೊಂಭಿಗಳನ್ನು ಪತ್ರಿಕೆಗಳಲ್ಲಿ ನೋಡಿ ಹುಬ್ಬೇರಿಸುವ ಕರಾವಳಿಗರಿಗೆ ತಮ್ಮ ಮೂಗಿನ ನೇರ ನಡೆಯುತ್ತಿರುವ ಕೊಲೆ, ಅಕ್ರಮಗಳು ಆತಂಕವನ್ನು ಸೃಷ್ಟಿಸಿದೆ.
ಚುಣಾಯಿತ ಸರಕಾರವೊಂದು ಪ್ರಜೆಗಳಿಗೆ ಶಾಂತಿಯ ವಾತವಾರಣ ಸೃಷ್ಟಿಸುವುದಿಲ್ಲವೆಂದರೆ ಸದರಿ ಸರಕಾರವನ್ನು ಬದಲಿಸಲು ಅವರು ಚಿಂತಿಸುವುದರಲ್ಲಿ ತಪ್ಪೇನಿದೆ?
ಉಸ್ತುವಾರಿ ಹೊತ್ತುಕೊಂಡವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುವುದಿಲ್ಲವೆಂದಾದರೆ ಅವರನ್ನು ಬದಲಿಸದ ಸರಕಾರದ ವಿರುದ್ದ ಜನತೆ ಬಂಡಾಯವೇಳುವುದರಲ್ಲಿ ತಪ್ಪೇನಿದೆ?
ನಿರಂತರವಾಗಿ ಮುಸ್ಲಿಮರ ವಿರುದ್ದ ಅಕ್ರಮಗಳು ಹಾಗೂ ಹತ್ಯೆಗಳು ನಡೆಯುತ್ತಿರುವುದರಿಂದ ಮುಸ್ಲಿಮರಲ್ಲಿ ಅಭದ್ರತೆ ಕಾಡಿದೆ.ಮುಸ್ಲಿಮ್ ಯುವಕರಲ್ಲಿ ಪ್ರತಿಕಾರದ ವಾಂಛೆ ಸೃಷ್ಟಿಯಾಗಿ ಅವರು ಅವಿವೇಕವಾಗಿ ಕಾರ್ಯಚರಿಸಿದರೆ ಅದಕ್ಕೆ ಹೊಣೆ ಯಾರು?
ಅವರನ್ನು ಕೋಮುವಾದಿಗಳಾಗಿ ಬಿಂಬಿಸಿ ಮೂಲೆಗುಂಪು ಮಾಡುವುದರಿಂದ ಸಮಸ್ಯೆಗೆ ಪರಿಹಾರವಾಗುತ್ತದಾ?
ಕಾಂಗ್ರೆಸ್ ನ ನಿಷ್ಟಾವಂತ ಕಾರ್ಯಕರ್ತರೂ ಕೂಡಾ ಪಕ್ಷವನ್ನು ಸಂಶಯದ ನೆರಳಲ್ಲಿ ವೀಕ್ಷಿಸಲು ಆರಂಭಿಸಿದ್ದಾರೆಂದರೆ ಅದು ತನ್ನ ತಪ್ಪನ್ನು ತಿದ್ದಲು ತಯ್ಯಾರಗಲೇ ಬೇಕಾಗಿದೆ.
ಸರಕಾರ ಬದಲಾಗುತ್ತಿದ್ದರೂ ಕರಾವಳಿಯ ಪೋಲಿಸ್ ಇಲಾಖೆಯಲ್ಲಿ ನುಸುಳಿಕೊಂಡು ಕೊರೆಯುತ್ತಿರುವ ಕೆಲವೊಂದು ಸಂಘಿ ಪೋಲಿಸರನ್ನು ವರ್ಷಾನುಗಟ್ಟಲೆ ಇಲ್ಲಿಯೇ ಉಳಿಸುಕೊಂಡು ಬರುವಲ್ಲಿಯೇ ಸರಕಾರ ಮುತುವರ್ಜಿ ತೋರಿಸುತ್ತಿದ್ದರೆ ಕರಾವಳಿ ಮತ್ತೊಂದು ಬಿಹಾರವಾಗುವುದರಲ್ಲಿ ಸಂಶಯವಿಲ್ಲ.
ಸರಕಾರದ ಮೊದಲ ಆದ್ಯತೆ ಭದ್ರತೆಗೆ ಮೀಸಲಾಗಿಡಬೇಕು.
ಅಭದ್ರತೆಯಲ್ಲಿ ಬದುಕುವ ಒಂದು ಸಮೂಹಕ್ಕೆ ಅನ್ನ ಭಾಗ್ಯ ಕ್ಷೀರಭಾಗ್ಯ ,ಶಾದಿ ಭಾಗ್ಯ ದಂತಹ ಅನೇಕಾರು ಭಾಗ್ಯ ಬಂದೂ ಫಲ ಏನು?
ಎಲ್ಲವನ್ನು ಭಯ ಮತ್ತು ಆತಂಕದ ವಾತವರಣದಲ್ಲಿ ಅನುಭವಿಸಬೇಕಾಗುತ್ತದೆ.
ಅಭದ್ರತೆಯಲ್ಲಿ ಬದುಕುವ ಸಮೂಹಕ್ಕೆ ಮೊತ್ತಮೊದಲಾಗಿ ನೀಡಬೇಕಾದುದು ಭದ್ರತೆ ಭಾಗ್ಯವನ್ನಾಗಿದೆ.
ಕರಾವಳಿ ಬದಲಾಗಬೇಕು ಆತಂಕ ದೂರವಾಗಬೇಕು ಶಾಂತಿಯ ಬದುಕು ಸಾಗಬೇಕು ಈ ನಿಟ್ಟಿನಲ್ಲಿ ಸರಕಾರ ತನ್ನ ಕಾರ್ಯಕ್ಷಮತೆಯನ್ನು ಗಟ್ಟಿಗೊಳಿಸಬೇಕು.
ಜಗತ್ತಿನಾದ್ಯಾಂತ ಮುಸ್ಲಿಮರ ವಿರುದ್ದ ಅಕ್ರಮ ,ಕೊಲೆ ,ದೊಂಬಿಗಳನ್ನು ಸೃಷ್ಟಿಸಿ,ಎಳೆಯ ಕಂದಮ್ಮಗಳ ಮೇಲೆ ಬಾಂಬ್ ಸುರಿಸಿ ಸೇಡಿನ ಸನ್ನಿವೇಶವನ್ನು ಉಂಟುಮಾಡಿ ಮುಸ್ಲಿಮ್ ಯುವಕರನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಪ್ರೇರಿಪಿಸುವಂತೆ ಮಾಡಿ ಇಸ್ಲಾಮನ್ನು ಭಯೋತ್ಪಾದಕ ಧರ್ಮವಾಗಿ ಚಿತ್ರೀಕರಿಸುವ ಹಿಡೆನ್ ಅಜೆಂಡಾವನ್ನು ಇಸ್ರೇಲ್ ಸಹಿತ ಪಾಶ್ಚಾತ್ಯ ರಾಷ್ಟ್ರಗಳು ಮಾಡುತ್ತಿದ್ದು ಭಾರತದಲ್ಲಿ ಸಂಘಪರಿವಾರ ಇದೇ ಅಜೆಂಡಾವನ್ನು ಮುಸ್ಲಿಮರ ಮೇಲೆ ಹೇರುತ್ತಿದೆ.
ಅದರ ಭಾಗವಾಗಿ ಗೋರಕ್ಷಾ ಸಂಘಗಳು ಅಲ್ಲಲ್ಲಿ ದಾಳಿ ಮಾಡಿ ಮುಸ್ಲಿಮರನ್ನು ಕೊಂದು ಮುಸ್ಲಿಮ್ ಯುವಕರಲ್ಲಿ ಸೇಡಿನ ಮನೋಭಾವವನ್ನು ಸೃಷ್ಟಿಸುತ್ತಿದೆ.
ಕೋಮುವಾದಿ ಪಕ್ಷವಾದ ಬಿಜೆಪಿಯಂತೆ ಕಾಂಗ್ರೆಸ್ ಪಕ್ಷ ಕೂಡಾ ಇದಕ್ಕೆ ಪರೋಕ್ಷ ಕುಮ್ಮಕ್ಕು ನೀಡುತ್ತಿದೆಯೆಂಬ ಆರೋಪವಿದೆ.
ಎಸ್ಸೆಮ್ ಕೃಷ್ಣರಂತಹ ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿಗಳು ಬಿಜೆಪಿ ಸೇರುತ್ತಿರುವುದು ಆರೋಪಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತಿದೆ.
ಕಾಂಗ್ರೆಸ್ ಪಕ್ಷ ಪೂರ್ಣ ಜಾತ್ಯಾತೀತ ಪರಂಪರೆಗೆ ಮರಳಿ ಅಲ್ಪಸಂಖ್ಯಾತ ರಲ್ಲಿ ಭರವಸೆ ಮೂಡಿಸಬೇಕಾದುದು ದೇಶದ ಸುರಕ್ಷೆ ಮತ್ತು ಶಾಂತಿಯ ಸನ್ನಿವೇಶಕ್ಕೆ ಅನಿವಾರ್ಯವಾಗಿದೆ.
ಅದೇ ರೀತಿ ಭಾರತ ಸಹಿತ ಜಗತ್ತಿನ ಜಗತ್ತಿನಾದ್ಯಂತ ಮುಸ್ಲಿಮರ ವಿರುದ್ದ ಅಕ್ರಮ ಹರಿದು ಬಿಟ್ಟು ಅವರನ್ನು ಭಯೋತ್ಪದಕರಾಗಿ ಕೋಮುವಾದಿಗಳಾಗಿ ಮಾರ್ಪಡಿಸುವ ಸಂಘಿಗಳ ಸಹಿತ ಪಾಶ್ಚಾತ್ಯರ ಕುತಂತ್ರಕ್ಕೆ ಬಲಿಯಾಗದೆ ಮುಸ್ಲಿಂ ಯುವಕರು ಪಕ್ವತೆಯಿಂದ ಕಾರ್ಯಚರಿಸುವುದು ಕಾಲಘಟ್ಟದ ಅನಿವಾರ್ಯತೆಯಾಗಿದೆ.
- ಅಬೂಶಝ
No comments:
Post a Comment