Saturday, October 14, 2017

ಅಬ್ಬಾಬ್ಬಾ...
ಇವರ ಚರ್ಮದ ಗಟ್ಟಿಯನ್ನು ಮೆಚ್ಚಲೇ ಬೇಕು.
ಫಿತ್ನ ಎಂಬುದೇ ಇವರ ಟ್ರೇಡ್ ಮಾರ್ಕ್ ಅಂತ ಮತ್ತೊಮ್ಮೆ ಜಗ್ಗಜಾಹೀರಾಯಿತು.
ಹೌದು 'ಸಮಸ್ತ' ಮದರಸದಲ್ಲಿ ಭಯೋತ್ಪಾದನೆ ಕಲಿಸಲಾಗುತ್ತಿದೆ ಎಂದು ಎಪಿ ಉಸ್ತಾದರ ಮೇಲೆ ಆರೋಪ ಹಾಕಿ ಪುಂಗಿ ಬಿಟ್ಟ ಫಿತ್ನ ಸಂಘ,
ಇಂದು ವಿಕಾಸ ಸೌದದಲ್ಲಿ ನಡೆದ ಚರ್ಚೆಯ ಕುರಿತು ಕೂಡಾ ಫಿತ್ನ ಮಾಡಿ ಮುಖ ಭಂಗ ಅನುಭವಿಸಿದೆ.
ಪಾಪ ಈ ಫಿತ್ನ ಸಂಘಕ್ಕೆ ಸರಕಾರದ ಅಧೀನ ಸಕ್ರೇಟರಿ ಯಾರು ಪ್ರಿನ್ಸಿಪಾಲ್ ಸಕ್ರೇಟರಿ ಯಾರು ಅಂತ ಗೊತ್ತಿಲ್ಲ.
ಆ ಬಗ್ಗೆ ಕೂಡಾ ಮಾಹಿತಿ ಇಲ್ಲದ ಈ ಸಂಘ
ಫಿತ್ನ ಹರಡುವುದರಲ್ಲಿ ಮಾತ್ರ ಎತ್ತಿದ ಕೈ.
ನಿಜವಾಗಿ ಈ ಚರ್ಚೆಗೆ ನೇತ್ರತ್ವ ಕೊಟ್ಟದ್ದು
ಸರಕಾರದ ಪ್ರಧಾನ ಕಾರ್ಯದರ್ಶಿ ಅಲ್ಪಸಂಖ್ಯಾತ ಘಟಕದ ಸಲೀಂ ಅದಾನಿ ಎಂಬವರಾಗಿದ್ದರು.
ಅಲ್ಲದೆ ಈ ಫಿತ್ನ ಸಂಘ ಹೇಳುವಂತೆ ಅವರು ಅಧೀನ ಕಾರ್ಯದರ್ಶಿ ಅಲ್ಲ.
ಅದಿರಲಿ.
ಅಂತೂ ಇಂತೂ ಚರ್ಚೆ ಆರಂಭವಾದಗಲೇ
ಕುಕ್ಕಿಲ ದಾರಿಮಿ, ಮೌಲಾನ ಶಾಫಿ ಸಹದಿ ಯನ್ನು, ಎಪಿ ವಿಭಾಗದವ, ಹಾಗೆ ಹೀಗೆ ಎಂದು ಕರಾವಳಿಯ ಗೀಬತ್ ಸಮ್ಮೇಳನ ಸ್ಟೈಲಲ್ಲಿ attack ಮಾಡಿದಾಗ,
ಇದನ್ನು ಕೇಳಿ ಗರಂ ಆದ ಪ್ರಿನ್ಸಿಪಲ್ ಸಕ್ರೇಟರಿ ಅಷ್ಟೇ ರಭಸದಲ್ಲಿ ಛೀಮಾರಿ ಹಾಕಿ ಕುಳಿತು ಕೊಳ್ಳುವಂತೆ ತಾಕೀತು ಮಾಡಿದರು.
ನಂತರ ಸಕ್ರೇಟರಿ ಮುಂದುವರಿದು ಮೌಲಾನ ಶಾಫಿ ಸಹದಿ ಯನ್ನು ನಾವು ಸರಕಾರದ ಪರವಾಗಿ ಆಹ್ವಾನ ನೀಡಿದ್ದು
ಅವರು ಎಪಿ ವಿಭಾಗದ ಪರ ವಾದಿಸಲಿಕ್ಕೆ ಬಂದವರಲ್ಲ
ಅವರನ್ನು ನಾವು ತುಂಬಾ ವರ್ಷದಿಂದ ನೋಡುತ್ತಾ ಇದ್ದೇವೆ.
ಅವರನ್ನು ನಾವು ಗೌರವಿಸುತ್ತಾ ಇದ್ದೇವೆ.
ನೀವೆಲ್ಲ ನಮಗೆ ಹೊಸ ಮುಖ
ನಿಮ್ಮ ಕಲ್ಚರ್ ಏನೆಂದು ನಿಮ್ಮ ಪ್ರಥಮ ವರ್ತನೆಯಲ್ಲೇ ತಿಳಿಯಿತು ಎಂದು ಕಾರ್ಯದರ್ಶಿಯಿಂದ ಸಕತ್ತ್ ಛೀಮಾರಿ ಹಾಕಿಸಿಕೊಂಡು, ಬೆಂಗಳೂರಿಗೆ ಹೊಸಬರಾದ
ಕುಕ್ಕಿಲ,ಪಟ್ಟೋರಿ, ಮೆಟ್ರೋಗೆ ಪ್ರಥಮ ಚುಂಭನಂ ದಂತ ಭಗ್ನಂ ಎಂಬ ಅನುಭವವಾಯಿತು.
ಇಂತಹ ಕಲ್ಚರ್ ಇಲ್ಲದ ಅಪ್ರಾಪ್ತ ಜನರೊಂದಿಗೆ ಚರ್ಚೆ ಮಾಡಿ ಯಾವುದೇ ಪ್ರಯೋಜನ ವಿಲ್ಲ ವೆಂದು ಮನಗಂಡ ಸರಕಾರಿ ಅಧಿಕಾರಿಗಳು ಚರ್ಚೆ ಕೈಬಿಟ್ಟದ್ದರಿಂದ ಸಭೆ ಯಾವುದೇ ತೀರ್ಮಾನವಾಗದೆ ಮುಗಿಯುವಂತಾಯಿತು.
ಕೊನೆಗೆ ಹೊರಗೆ ಬಂದು,
 ಈ ವಿಷಯವನ್ನು
ಹೇಗಾದರು ಮಾಡಿ ಇತ್ಯರ್ಥ ಮಾಡಬೇಕೆಂದು ಶಾಫಿ ಸಹದಿಯವರಲ್ಲಿ
ದಾರಿಮಿ ಮತ್ತು ಮೆಟ್ರೋ ಹಾಜಿ ಪರಿಪರಿಯಾಗಿ ಬೇಡಿಕೊಂಡ ದೃಶ್ಯಕ್ಕೆ ಸೇರಿದ ಎಲ್ಲರೂ ಸಾಕ್ಷಿಯಾದರು.
ವಿಶಾಲ ಹೃದಯದ ಶಾಫಿ ಸಹದಿ 'ನೋಡುವ' ಎಂಬ ಮುಗ್ಳನಗೆಯ ಕಮಂಟ್ಸ್ ನೊಂದಿಗೆ ಹೊರನಡೆದರು.
ಚರ್ಚಾಕೂಟ ದಲ್ಲಿ ನಡೆದ A to Z ರೆಕಾರ್ಡ್ ನಮ್ಮ ಕೈಯಲ್ಲಿ ಭದ್ರವಿದೆ
ಸಮಯ ಸಂದರ್ಭ ಬಂದರೆ ರವಾನಿಸುತ್ತೇವೆ ಎಂಬ ಭರವಸೆಯೊಂದಿಗೆ.
ಅಬೂಶಝ

No comments:

Post a Comment