*ಭಾಗ 07*
*ಶಂಸುಲ್ ಉಲಮಾ 'ಸಮಸ್ತ' ಇಭ್ಭಾಗವಾಗುವ ಮುಂಚೆ ಮತ್ತು ನಂತರ*
————————————
✒✒ ವಿಳಯೂರು ಮುಸ್ತಫ ದಾರಿಮಿ ಬರೆಯುತ್ತಾರೆ ✒✒
------------ -----------
'ಮಾಪಿಳ್ಳನಾಡ್' ಶಂಸುಲ್ ಉಲಮಾ ರವರ ವಿರುದ್ಧ ಅಸಭ್ಯ ಗೀಚುತ್ತಿದ್ದ ಕಾಲ.
ಅದೇ ಸಮಯದಲ್ಲಾಗಿತ್ತು 'ಅರಿಕಾಡ್ ಪಳ್ಳಿ'
ವಿವಾದಕ್ಕೆ ಕಿಡಿ ಹತ್ತಿಸಿದ್ದು...
ಕಾಂತಪುರಂ ಎಪಿ ಉಸ್ತಾದ್ ಮತ್ತು ವಿ.ಪಿ.ಎಂ ಫೈಝಿ ವಿಳ್ಯಪಳ್ಳಿ ಗಲ್ಫ್ ಪರ್ಯಟನೆಯಲ್ಲಿರುವ ಸಮಯದಲ್ಲಾಗಿತ್ತು 'ಮಾಪಿಳ್ಳನಾಡ್' ಮತ್ತೊಂದು ಬಾಂಬ್ ಸಿಡಿಸಿತು.
"ಕಾಂತಪುರಂ ಅರಿಕ್ಕಾಡ್ ಪಳ್ಳಿಯುಡೆ ಪಣಂ ಅಮುಕಿ!"
ಇದಾಗಿತ್ತು :ಮಾಪಿಳ್ಳನಾಡ್' ಪತ್ರಿಕೆಯ ವಾರ್ತೆ!
ಅಬ್ದುಲ್ಲಾ ಕುಲೈಬಿ ಎಂಬ ಅರಬಿಯನ್ನು ಅರೀಕ್ಕಾಡ್ ಪಳ್ಳಿ ಜಮಾತ್ ಕಮಿಟಿಯವರು
ಮೊದಲೇ ಭೇಟಿ ಮಾಡಿದ್ದರಂತೆ....
ಸಹಾಯ ನೀಡುವೆ ಎಂದು ಕುಲೈಬ್ ವಾಗ್ದಾನ ನೀಡಿದ್ದಾರಂತೆ.....
ನಂತರ ಲೀಗ್ ಬೆಂಬಲಿಗ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದ ಕೆ.ಕೆ ಅಬೂಬಕರ್ ಹಝ್ರತ್ ಅರೊಕ್ಕೋಡ್ ಜನತೆಯ ಪ್ರತಿನಿಧಿಯಾಗಿ ಕುಲೈಬಿ ಯನ್ನು ಸಂದರ್ಶಿಸಿದಾಗ " ಕುಲ್ಲುನ್ ಇಂದ ಶೈಖ್ ಅಬೂಬಕರ್" (ಎಲ್ಲವೂ ಶೈಖ್ ಅಬೂಬಕರ್ ರವರ ಹತ್ತಿರವಿದೆ)
ಎಂಬ ಅರಬಿಯ ಮಾತಿನಿಂದ ವಿವಾದ ಕ್ರಿಯೇಟ್ ಮಾಡಲಾಯಿತು.
ಮರ್ಕಝ್ ನ 'ಮಸ್ಚಿದುಲ್ ಹಾಮಿಲಿ' ಕೂಡಾ ತನ್ನ ತಾಯಿಯ ಹೆಸರಲ್ಲಿ ಕುಲೈಬಿ ನಿರ್ಮಿಸಿದ್ದಾಗಿದೆ.ಈ ರೀತಿ ದಾರಾಳ ಸೇವೆ ಮರಣದವರೆಗೂ ಕಾಂತಪುರಂ ಉಸ್ತಾದರ ಮೂಲಕ ಕುಲೈಬಿ ನಿರ್ವಹಿಸುತ್ತಿದ್ದರು.
ವಿವಾದದ ಕಿಡಿ ಹೊತ್ತು ಉರಿಯತೊಡಗಿತ್ತು.
(ನಂತರ ಸ್ವತಃ 'ಕುಲೈಬಿ' ಕೇರಳಕ್ಕೆ ಬಂದು ಎಪಿ ಉಸ್ತಾದರ ಮೇಲಿರುವ ಆರೋಪವನ್ನು ಅಲ್ಲೆಗೆಳೆದದ್ದು ಇತಿಹಾಸ! )
ಸಮಸ್ತದ ಪಂಡಿತರೊಬ್ಬರ ವಿರುದ್ಧ ಇಂತಹ ಆರೋಪ ಮಾಡುವುದರ ರಹಸ್ಯ ಏನೆಂದು ಸುನ್ನೀ ಸಮೂಹಕ್ಕೆ ತಿಳಿದಿತ್ತು.
(ಶಂಸುಲ್ ಉಲಮಾ ಸಹಿತ ಘಟಾನುಘಟಿ ಆಲಿಂಗಳು ಎಪಿ ಉಸ್ತಾದರ ಬೆಂಬಲಕ್ಕಿದ್ದರು). ಹಾಗಾಗಿ ಗಲ್ಫ್ ಪರ್ಯಟನೆ ಮುಗಿದು ಊರಿಗೆ ಮರಳುತ್ತಿರುವ ಕಾಂತಪುರಂ ಎಪಿ ಉಸ್ತಾದರನ್ನು ಬರಮಾಡಿಕೊಂಡು ಸ್ವೀಕಾರ ನೀಡಲು ಸಮಸ್ತದ ಉನ್ನತ ಪಂಡಿತರು ತೀರ್ಮಾನಿಸಿದರು.
ಹಿರಿಯ ಆಲಿಂಗಳಲ್ಲಿ ಯಾರಿಗೂ ಪ್ರತೇಕ ಆಹ್ವಾನ ನೀಡಿರಲಿಲ್ಲ.
ಮಂಗಳೂರು ಮಾರ್ಗವಾಗಿ ಬಂದು ಕ್ಯಾಲಿಕಟ್ ನಲ್ಲಿ ಎಪಿ ಉಸ್ತಾದ್ ಇಳಿಯುವುದೆಂದು ಅರಿತ ಕಾರ್ಯಕರ್ತರಿಂದ ರೈಲ್ವೇಸ್ಟೇಷನ್ ತುಂಬಿತ್ತು!
ಈ ಮಧ್ಯೆ ಶಂಸುಲ್ ಉಲಮಾ ಖುದ್ದಾಗಿ ಎಪಿ ಉಸ್ತಾದರನ್ನು ಸ್ವೀಕರಿಸಿಲು ರೈಲ್ವೇ ಸ್ಟೇಷನ್ ಆಗಮಿಸಿದಾಗ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು.ಆವೇಶ ಭರಿತರಾದ ಕಾರ್ಯಕರ್ತರು ತಕ್ಬೀರ್ ಮೊಳಗಿಸಿದರು.
ತಡವಾಗಿ ಬಂದ ರೈಲಿನಿಂದ ಇಳಿದ ಕಾಂತಪುರಂ ಉಸ್ತಾದರನ್ನು ಶಂಸುಲ್ ಉಲಮಾ ಆತ್ಮಿಯತೆಯೊಂದಿಗೆ ಬರಮಾಡಿಕೊಂಡರು.
(ಮುಂದುವರೆಯುವುದು)
No comments:
Post a Comment